ಪರ್ಜಿ ಭಾಷೆ
ಪರ್ಜಿ ಭಾಷೆ : ಮಧ್ಯ ದ್ರಾವಿಡ ಭಾಷೆಯನ್ನಾಡುವ ಒಂದು ಸಣ್ಣ ಬುಡಕಟ್ಟಿಗೆ ಸೇರಿದ ಪರ್ಜಿಗಳ ಭಾಷೆ. ಇವರನ್ನು ಧ್ರುವರೆಂದೂ ಕರೆಯುತ್ತಾರೆ. ಇವರು ಮುಖ್ಯವಾಗಿ ಮಧ್ಯಪ್ರದೇಶದಲ್ಲಿ ಬಸ್ತಾರ್ ಜಿಲ್ಲೆಯಲ್ಲಿ ಜಗದಲ್ಪುರದ ದಕ್ಷಿಣಕ್ಕೆ ಚಾಚಿಕೊಂಡಿರುವ ಪ್ರದೇಶದಲ್ಲಿ ಹಾಗೂ ಭಾಗಶಃ ಜಯಪುರದ ನೆರೆಯ ಪ್ರದೇಶಗಳಲ್ಲಿ ವಾಸಮಾಡುತ್ತಿದ್ದಾರೆ. ದ್ರಾವಿಡ ಭಾಷೆಗಳ ತೌಲನಿಕ ಅಧ್ಯಯನದ ದೃಷ್ಟಿಯಿಂದ ಮುಖ್ಯವಾಗಿರುವ ಈ ಭಾಷೆ ಹಲವು ಉಪಭಾಷೆಗಳನ್ನು ಹೊಂದಿದೆ.
Duruwa ପରଜି दुरुवा | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಭಾರತ | |
ಒಟ್ಟು ಮಾತನಾಡುವವರು: |
೫೧,೦೦೦ | |
ಭಾಷಾ ಕುಟುಂಬ: | ಮಧ್ಯ ದ್ರಾವಿಡ ಪರ್ಜಿ–ಗದಬ Duruwa | |
ಬರವಣಿಗೆ: | ಒಡಿಯಾ ಲಿಪಿ, ದೇವನಾಗರಿ ಲಿಪಿ | |
ಭಾಷೆಯ ಸಂಕೇತಗಳು | ||
ISO 639-1: | ಯಾವುದೂ ಇಲ್ಲ | |
ISO 639-2: | ಸೇರಿಸಬೇಕು
| |
ISO/FDIS 639-3: | pci
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಪರ್ಜಿ ಭಾಷಾ ಲಕ್ಷಣ
ಬದಲಾಯಿಸಿಭಾರತೀಯ ಆರ್ಯ ಭಾಷೆಗಳ ಪ್ರಭಾವಕ್ಕೆ ಪರ್ಜಿ ಒಳಗಾಗಿದೆಯಾದರೂ ಇಂದಿಗೂ ತನ್ನ ದ್ರಾವಿಡ ಲಕ್ಷಣಗಳನ್ನು ಅದು ಚೆನ್ನಾಗಿ ಉಳಿಸಿಕೊಂಡಿದೆ. ಇದು ಸ್ಪಷ್ಟವಾಗಿ ಗುರುತಿಸಬಹುದಾಗಿರುವ ದ್ರಾವಿಡಭಾಷಾವರ್ಗದ ಉಪವರ್ಗವೊಂದಕ್ಕೆ ಸೇರಿದೆ. ಗದಬ (ಒಲ್ಲಾರಿ), ಕೊಲಾಮಿ ಮತ್ತು ನಾಯ್ಕಿಯಂಥ ದ್ರಾವಿಡಭಾಷೆಗಳೂ ಇದೇ ವರ್ಗಕ್ಕೆ ಸೇರಿವೆ. ಬಹುವಚನ ಪ್ರತ್ಯಯಗಳ ಸಂಕೀರ್ಣ ವ್ಯವಸ್ಥೆ ಈ ಉಪವರ್ಗದ ವಿಶೇಷ ಲಕ್ಷಣ.
ವ್ಯಾಕರಣ ವಿವರ
ಬದಲಾಯಿಸಿ-ಲ್(-ಉಲ್), -ಕುಲ್, -ಚಿಲ್, -ತಿಲ್, ಎರ್, ಮತ್ತು -ಒವ್ (-ಎವ್) _ ಈ ಭಾಷೆಯ ಬಹುವಚನ ಪ್ರತ್ಯಯಗಳು. ಮೂಲ ವತ್ಸ್ರ್ಯದ ಬಳಕೆ ಧ್ವನಿ ಶಾಸ್ತ್ರದ ದೃಷ್ಟಿಯಿಂದ ಕುತೂಹಲಕಾರಿಯಾಗಿದೆ. ಸಾಮಾನ್ಯವಾಗಿ ಅದು-ದ್-ಎಂಬಂತೆ ಕಾಣಿಸಿಕೊಳ್ಳುತ್ತದೆ. (ಆದರೆ ಈಶಾನ್ಯ ಉಪಭಾಷೆಯಲ್ಲಿ ಇದು-ಡ್-ಆಗುತ್ತದೆ), ಕೊಲಾಮಿ ಮತ್ತು ನಾಯ್ಕಿ ಭಾಷೆಗಳಲ್ಲಿ ಇದಕ್ಕೆ ಸಮಾನಾಂತರವಾದ ರೂಪ ದೊರೆಯುತ್ತದೆ. (ನೀದ್,-ಬೂದಿ,ನಾಯಕಿ-ಈಡ್). ಇತರ ಲಕ್ಷಣಗಳೆಂದರೆ ದ್ರಾವಿಡ ಚ ಕಾರವನ್ನು ಉಳಿಸಿಕೊಂಡಿರುವುದು (ಚುಪ್-ಉಪ್ಪು,ಚೀ-ಕೊಡು) ಹಾಗೂ ಆ ಕಾರ ಎ ಕಾರವಾಗಿ ಬದಲಾಗುವುವು. (ಕೆಲ್-ಕಲ್ಲು, ಕೇಲ್-ಕಾಲು). ಪುಲ್ಲಿಂಗ ಮತ್ತು ಪುಲ್ಲಿಂಗೇತರ ಎಂದು ಈ ಭಾಷೆಯಲ್ಲಿ ಎರಡು ಲಿಂಗಗಳ ವ್ಯವಸ್ಥೆ ಇದೆ. ಆದರೆ ಸಂಖ್ಯಾವಾಚಕಗಳಲ್ಲಿ ಸ್ತ್ರೀಲಿಂಗದ ಲಕ್ಷಣಗಳು ಗೋಚರಿಸುತ್ತವೆ. (ಮುವಿರ್-ಪುಲ್ಲಿಂಗ, ಮುಯಲ್-ಸ್ತ್ರೀಲಿಂಗ, ಮುಂದು (ಮೂರು) ನಪುಂಸಕಲಿಂಗ).
ವರ್ಗೀಕರಣ
ಬದಲಾಯಿಸಿದುರುವ ಮಧ್ಯದ್ರಾವಿಡ ಭಾಷೆಯ ಸದಸ್ಯ ವರ್ಗ.[೧], [೨] ದುರುವಾ ಮಾತನಾಡುವ ಭಾಷೆಯಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಬರೆಯಲಾಗಿಲ್ಲ. ಇದು ಬರೆಯಲ್ಪಟ್ಟಾಗ, ಕೊರಾಪುಟ್ ಜಿಲ್ಲೆಯಲ್ಲಿ ಒಡಿಯ ಲಿಪಿಯಲ್ಲೂ ಮತ್ತು ಬಾದಾರ್ ಜಿಲ್ಲೆಯಲ್ಲಿ ದೇವನಾಗರಿ ಲಿಪಿಯಲ್ಲೂ ಬಳಕೆಯಾಗುತ್ತದೆ.
ಉಪಭಾಷೆಗಳು
ಬದಲಾಯಿಸಿಪರ್ಜಿ ಭಾಷೆಯೊಂದಿಗೆ ನಾಲ್ಕು ಉಪಭಾಷೆಗಳು ಇವೆ: ತಿರಿಯಾ, ನೆಥನಾರ್, ಧರ್ಬಾ ಮತ್ತು ಕುಕನಾರ್. ಅವುಗಳನ್ನು ಪರಸ್ಪರ ಗ್ರಹಿಸಲು ಸಾಧ್ಯ.
ಉಲ್ಲೇಖ
ಬದಲಾಯಿಸಿ- ↑ cite book |last=Fairservis |first=Walter Ashlin |title=The Harappan Civilization and Its Writing: A Model for the Decipherment of the Indus Script |publisher=Brill Academic Publishers |series = Asian Studies |year=1997 |isbn=978-90-04-09066-8 |page=78
- ↑ cite book |last=Stassen |first=Leon |title=Intransitive Predication |publisher=Oxford University Press |series = Oxford Studies in Typology and Linguistic Theory |year=1997 |isbn=978-0-19-925893-2 |page=335