ಪರಿವ್ಯಯ ಲೆಕ್ಕಶಾಸ್ತ್ರ
ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಸದಾಗಿ ವಿಕಿಪೀಡಿಯ ಕಲಿಯುತ್ತಿರುವವರಿಂದ ತಯಾರಾದ ಲೇಖನವಿದು. ವಿಕಿಪೀಡಿಯದ ಉತ್ತಮ ಲೇಖನದ ಎಲ್ಲ ಗುಣಮಟ್ಟಗಳನ್ನು ಇದು ಒಳಗೊಂಡಿಲ್ಲದಿರಬಹುದು. ಸಮುದಾಯದವರು ಈ ಲೇಖನವನ್ನು ಉತ್ತಮ ಲೇಖನವನ್ನಾಗಿಸಬಹುದು. ಹಾಗೆ ಮಾಡುವುದರಿಂದ ಲೇಖನ ತಯಾರಿಸಿದ ಹೊಸ ಸಂಪಾದಕರಿಗೆ ಉತ್ತಮ ಲೇಖನ ಹೇಗಿರಬೇಕು ಎಂಬ ಮಾಹಿತಿಯೂ ದೊರೆಯುತ್ತದೆ. |
ಪರಿವ್ಯಯ ಲೆಕ್ಕಶಾಸ್ತ್ರವು ವಿವಿಧ ಪರ್ಯಾಯ ಮಾರ್ಗವನ್ನು ಸಂಗ್ರಹಿಸುವ, ವಿಶ್ಲೇಸಿಸುವ, ಮಾಪಿಸುವ ಹಾಗೂ ವಿವರಿಸುವ ಒಂದು ಕ್ರಿಯೆ. ಇದರ ಮುಖ್ಯ ಉದ್ದೇಶವೇನೆಂದರೆ ಒಂದು ಸಂಸ್ಥೆಗೆ ವೆಚ್ಚದಕ್ಷತೆ ಹಾಗೂ ಸಾಮರ್ಥ್ಯದ ಆದಾರದ ಮೇಲೆ ಸೂಕ್ತ ಪರ್ಯಾಯ ಮಾರ್ಗವನ್ನು ಸೂಚಿಸುವುದು. ಒಂದು ಸಂಸ್ಥೆಯ ಪ್ರಸ್ತುತ ಕಾರ್ಯಾಚರಣೆಯನ್ನು ನಿಯಂತ್ರಿಸುವುದಕ್ಕೆ ಹಾಗೂ ಭವಿಶ್ಯದ ಯೋಜನೆಗೆ ಪರಿವ್ಯಯ ಲೆಕ್ಕಶಾಸ್ತ್ರವು ಸೂಕ್ತ ವೆಚ್ಚದ ಮಾಹಿತಿಯನ್ನು ನೀಡುತ್ತದೆ. ಸಾಮಾನ್ಯವಾಗಿ ಇದರ ಮಹಿತಿಯನ್ನು ಹಣಕಾಸು ಲೆಕ್ಕಶಾಸ್ತ್ರದಲ್ಲಿ ಬಳಸಲಾಗುತ್ತದೆ, ಆದರೆ ಪ್ರಾಥಮಿಕ ಕಾರ್ಯ ನಿರ್ಧಾರಳನ್ನು ಸುಲಭಗೊಳಿಸಲು ಸಹ ನಿರ್ವಾಹಕರು ಬಳಸುತ್ತಾರೆ.[೧]
ಇತರ ಲೆಕ್ಕಶಾಸ್ತ್ರ ವ್ಯವಸ್ತ್ಥೆಯ ಹಣಕಾಸು ವರದಿಗಳಂತೆ, ಪರಿವ್ಯಯ ಲೆಕ್ಕಶಾಸ್ತ್ರದ ವರದಿಗಳು ಗ್ಯಾಪ್(GAAP) ನಿರ್ಬಂದನೆಗೆ ಒಳಗಾಗುವುದಿಲ್ಲ. ಇದರ ಪರಿಣಾಮವಾಗಿ ಅನೇಖ ಕಂಪನಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವ್ಯಯ ಲೆಕ್ಕಶಾಸ್ತ್ರದ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.
ಮೂಲ
ಬದಲಾಯಿಸಿಕೈಗಾರಿಕ ಯುಗದಲ್ಲಿ, ವ್ಯಾಪರದಿಂದ ಉಂಟಾಗುವ ವೆಚ್ಚವನ್ನು ಆಧುನಿಕ ಲೆಕ್ಕಿಗರು "ಅನಿರ್ಧಿಷ್ಟ ವೆಚ್ಚ" ಎಂದು ಕರೆಯುತ್ತಾರೆ. ಏಕೆಂದರೆ ಅವು ನೇರವಾಗಿ ಉತ್ಪಾದನೆಯ ಪ್ರಮಾಣದೊಂದಿಗೆ ಬದಲಾಗುತಿತ್ತು. ಹಣವು ನೇರವಾಗಿ ಕಚ್ಚಾ ಸಾಮಾಗ್ರಿಗಳಿಗೆ, ವಿದ್ಯುತ್ ಹಾಗೂ ಕಾರ್ಖನೆ ನಡೆಸುವುದಕ್ಕೆ ಖರ್ಚಾಗುತಿತ್ತು. ನಿರ್ವಹಕರು ಉತ್ಪನ್ನದ ಬೆಲೆ ನಿರ್ಧರಿಸುವಾಗ ಕೇವಲ ಈ ಖರ್ಚನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಿದ್ದರು. ಸ್ಥಿರ ವೆಚ್ಚಗಳಾದ ಸವಕಳಿ, ಎಂಜಿನಿಯರಿಂಗ್, ಸಾಧಾರಣ ಸಲಕರಣೆಗಳು, ಉತ್ಪನ್ನ ನಿಯಂತ್ರಣ, ಗುಣಮಟ್ಟ ನಿಯಂತ್ರಣ, ಇವೆಲ್ಲವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಲೋಪದೋಶವನ್ನು ನಿರ್ವಹಕರಿಂದ ತೊಲಗಿಸಲು ಪರಿವ್ಯಯ ಲೆಕ್ಕಶಾಸ್ತ್ರ ಬೆಳಕಿಗೆ ಬಂತು. ಎಲ್ಲಾ ನಿರ್ವಾಹಕರಿಗೂ ವೆಚ್ಚವನ್ನು ಅರ್ಥ ಮಾಡಿಕೊಂಡು ಉದ್ಯಮವನ್ನು ನಡೆಸಲು ಇದು ಉಪಯುಕ್ತವಾಗಿದೆ.
ಪರಿವ್ಯಯ ಲೆಕ್ಕಶಾಸ್ತ್ರದ ವಿಧಗಳು
ಬದಲಾಯಿಸಿ- ಸ್ಟಾಂಡರ್ಡ್ ಪರಿವ್ಯಯ ಲೆಕ್ಕಶಾಸ್ತ್ರ
- ನೇರ ಪರಿವ್ಯಯ ಲೆಕ್ಕಶಾಸ್ತ್ರ
- ಚಟುವಟಿಕೆ-ಆಧಾರಿತ ಲೆಕ್ಕಶಾಸ್ತ್ರ
- ಸಂಪನ್ಮೂಲ ಬಳಕೆ ಪರಿವ್ಯಯ ಲೆಕ್ಕಶಾಸ್ತ್ರ
- ಲೆಕ್ಕಪತ್ರ ಪರಿಸರದ ಗುರಿಯ ಲೆಕ್ಕಶಾಸ್ತ್ರ
ಚಟುವಟಿಕೆ-ಆಧಾರಿತ ಲೆಕ್ಕಶಾಸ್ತ್ರ
ಬದಲಾಯಿಸಿಚಟುವಟಿಕೆ-ಆಧಾರಿತ ಲೆಕ್ಕಶಾಸ್ತ್ರ ಒಂದು ಉತ್ಪನ್ನಕ್ಕೆ ಬೇಕಾಗುವ ಚಟುವಟಿಕೆಗೆ ಅನುಗುಣವಾಗಿ ಬೆಲೆಯನ್ನು ನಿಯೋಜಿಸುವ ಒಂದು ಕ್ರಿಯೆ.
ಉದಾ: ಸರಕು ಪಟ್ಟಿಯ ಪ್ರಶ್ನೆಗಳ ಬಗ್ಗೆ ಗ್ರಾಹಕರ ಬಳಿ ಮಾತನಾಡುವುದು.
ನೇರ ಪರಿವ್ಯಯ ಲೆಕ್ಕಶಾಸ್ತ್ರ
ಬದಲಾಯಿಸಿಇತ್ತೀಚಿನ ದಿನಗಳಲ್ಲಿ ನೇರ ಉತ್ಪಾದನೆಯ ಲೆಕ್ಕ ಪರಿಶೋಧನೆ, ನಿಯಂತ್ರಣ ಹಾಗೂ ಮಾಪನದ ಸಲಹೆ ನೀಡಲು ನೇರ ಲೆಕ್ಕಶಾಸ್ತ್ರ ರೂಪಿತವಾಗಿದೆ. ಇದು ನಿರ್ಮಾಣ, ಆರೋಗ್ಯ ಕೇಂದ್ರ, ಶಿಕ್ಷಣ, ವಿಮೆ, ಸರ್ಕಾರ, ಬ್ಯಾಂಕಿಂಗ್, ಕಾರ್ಖನೆ ಮುಂತಾದ ಜಾಗದಲ್ಲಿ ಬಳಕೆಯಲ್ಲಿದೆ.[೨]
ವೆಚ್ಚದ ವರ್ಗೀಕರಣ
ಬದಲಾಯಿಸಿವೆಚ್ಚದ ವರ್ಗೀಕರಣ ಎಂದರೆ ತಮ್ಮ ಸಾಮಾನ್ಯ ಗುಣ ಲಕ್ಷಣಗಳ ಪ್ರಕಾರ ಅದನ್ನು ಗುಂಪಿಸುವುದು. ಇದರ ಪ್ರಮುಖ ವಿಧಾನಗಳೆಂದರೆ..
- ಅಂಶಗಳ ಆಧಾರದ ಮೇಲೆ (ವಸ್ತು, ಕಾರ್ಮಿಕರು ಮತ್ತು ಖರ್ಚು)
- ಕಾರ್ಯಗಳ ಆಧಾರ ( ಆಡಳಿತ ಮಾರಟ ಮತ್ತು ವಿತರಣೆ)
- ವರ್ತನೆಯ ಆಧಾರ (ಸ್ಥಿರ, ಅನಿರ್ದಿಷ್ಟ ವೆಚ್ಚ, ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯ ಪ್ರಮಣ)
- ನಿಯಂತ್ರಣ ಸಾಮರ್ಥ್ಯದ ಆಧಾರ( ನಿಯಂತ್ರಿಸುವ ಹಾಗೂ ನಿಯಂತ್ರಿಸಲಾಗದ ವೆಚ್ಚ)
- ಯಥಾಸ್ಥಿತಿಯ ಆಧಾರ ( ಸಾಧಾರಣ ಹಾಗೂ ಅಸಾಧಾರಣ ವೆಚ್ಚ)
- ಸಮಯದ ಆಧಾರ (ಪೂರ್ವ ನಿರ್ಧರಿತ ಹಾಗೂ ಐತಿಹಾಸಿಕ ವೆಚ್ಚ)
- ಅವಕಾಶ ವೆಚ್ಚ
- ಸಂಬುಧಿತ ವೆಚ್ಚ
- ಸಾಮರ್ಥ್ಯ ವೆಚ್ಚ
- ಗುಳಿಬಿದ್ದ ವೆಚ್ಚ
ಪರಿವ್ಯಯ ಲೆಕ್ಕಶಾಸ್ತ್ರ v/s ಹಣಕಾಸು ಲೆಕ್ಕಶಾಸ್ತ್ರ
ಬದಲಾಯಿಸಿ- ಹಣಕಾಸು ಲೆಕ್ಕಶಾಸ್ತ್ರದ ಗುರಿ ಏನೆಂದರೆ ಪ್ರಸ್ತುತ ಲೆಕ್ಕ ಪರಿಶೂಧಕ ವರ್ಷದ ಲಾಭ ಮತ್ತು ನಷ್ಟ ಹಾಗೂ ಬ್ಯಾಲೆನ್ಸ್ ಶೀಟ್ ಸಹಾಯದಿಂದ ಕಂಡು ಹಿಡಿಯುತ್ತದೆ.
ಪರಿವ್ಯಯ ಲೆಕ್ಕಶಾಸ್ತ್ರದ ಗುರಿ ಏನೆಂದರೆ ಒಂದು ವೈಗ್ನಾನಿಕ ರೀತಿಯಲ್ಲಿ ನಿರ್ಮಾಣ/ ಸೇವೆಯ ವೆಚ್ಚವನ್ನು ಲೆಕ್ಕಿಸುವುದು.
- ಹಣಕಾಸು ಲೆಕ್ಕಶಾಸ್ತ್ರ ಫಲಿತಾಂಶ ಹಾಗೂ ಉದ್ಯಮದ ಸ್ಥಿತಿಗತಿಗಳ ಬಗ್ಗೆ ಸರ್ಕಾರಕ್ಕೆ, ಸಾಲದಾತರಿಗೆ, ಹೂಡಿಕೆದಾರರಿಗೆ ಮತ್ತು ಬಾಹ್ಯ ಪಕ್ಷಗಳಿಗೆ ಮಾಹಿತಿ ನೀಡುತ್ತದೆ.
ಪರಿವ್ಯಯ ಲೆಕ್ಕಶಾಸ್ತ್ರವು ಸಂಸ್ಥೆಯ ಸ್ವಂತ ನಿರ್ವಹಣೆ ಮಾಡುವುದಕ್ಕೆ ಒಂದು ಆಂತರಿಕ ವರದಿ ವ್ಯವಸ್ಥೆ.
- ಹಣಕಾಸು ಲೆಕ್ಕಶಾಸ್ತ್ರದಲ್ಲಿ ವ್ಯವಹಾರದ ರೀತಿಯ ಮೇಲೆ ವೆಚ್ಚದ ವರ್ಗೀಕರಣವಾಗುತ್ತದೆ. ಉದಾ: ಸಂಬಳ, ರಿಪೇರಿ, ವಿಮೆ...
ಪರಿವ್ಯಯ ಲೆಕ್ಕಶಾಸ್ತ್ರದಲ್ಲಿ ಚಟುವಟಿಕೆ, ಕಾರ್ಯ, ಉತ್ಪನ್ನ ಮತ್ತು ಆಂತರಿಕ ಯೋಜನೆಯ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ.
- ಹಣಕಾಸು ಲೆಕ್ಕಶಾಸ್ತ್ರ "ನ್ಯಾಯ ಮತ್ತು ನಿಯೂಜಿತ" ನೋಟದಲ್ಲಿ ವಹಿವಾಟು, ಲಾಭ ನಷ್ಟ, ಆರ್ಥಿಕ ಸ್ಥಿತಿಯ ಪಟ್ಟಿಯನ್ನು ಪ್ರದರ್ಶಿಸುತ್ತದೆ.
ಪರಿವ್ಯಯ ಲೆಕ್ಕಶಾಸ್ತ್ರ "ನ್ಯಾಯ ಮತ್ತು ನಿಯೂಜಿತ" ನೋಟದಲ್ಲಿ ಸಂಸ್ಥೆ ಕೊಡುವ ಉತ್ಪನ್ನ/ ಸೇವೆಗಳ ವೆಚ್ಚವನ್ನು ಪ್ರದರ್ಶಿಸುತ್ತದೆ.
ವೆಚ್ಚದ ಪರಿವಿಡಿ
ಬದಲಾಯಿಸಿ- ಕಚ್ಚಾ ಪದಾರ್ಥಗಳು
- ಕಾರ್ಮಿಕರ ವೆಚ್ಚಗಳು
- ಪದಾರ್ಥಗಳು ( ನೇರ ಪದಾರ್ಥಗಳು, ಪರೋಕ್ಷ ಪದಾರ್ಥಗಳು)
- ಖರ್ಚುಗಳು (ಅನಿರ್ಧಿಷ್ಟ ವೆಚ್ಚ, ಸ್ಥಿರ ವೆಚ್ಚ)
- ಆಡಳಿತ ವೆಚ್ಚ
- ಕಛೇರಿ ಸಿಬ್ಬಂದಿ ವೆಚ್ಚ
- ಮಾರಟ ವೆಚ್ಚ (ವಿಷಯ ಪಟ್ಟಿಗಳು, ಜಾಹೀರಾತು, ಪ್ರದರ್ಶನಗಳು, ಮಾರಾಟ ಸಿಬ್ಬಂಧಿ ವೆಚ್ಚಗಳು)
- ಹಂಚಿಕೆ ಹಾಗೂ ಪೂರೈಕೆ ವೆಚ್ಚಗಳು
- ಉಪಯುಕ್ತ, ಅನಿಲ, ವಿದ್ಯುತ್, ನೀರಿನ ವೆಚ್ಚಗಳು.
- ಸಂಬಗಳ ವೆಚ್ಚ ( ವೇತನದಾರರು, ಕೂಲಿ, ಪಿಂಚಣಿ)
- ಬಾಡಿಗೆಯ ವೆಚ್ಚ
- ಸವಕಳಿ ವೆಚ್ಚ ( ಯಂತ್ರೋಪಕರಣ, ಸಲಕರಣೆ)
ಮುಂತಾದವು..
ಹೊರಗಿನ ಕೊಂಡಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ