ಪರಾವಲಂಬಿ ಜೀವಿಶಾಸ್ತ್ರ(ಪ್ಯಾರಸೈಟಾಲಜಿ)
ಪರಾವಲಂಬಿ ಜೀವಿಶಾಸ್ತ್ರ(ಪ್ಯಾರಸೈಟಾಲಜಿ) ಎಂದರೆ ಪರಾವಲಂಬಿ ಜೀವಿಗಳ ಕುರಿತು, ಅವುಗಳು ಅವಲಂಬಿಸುವ ಪೋಷಕ ಜೀವಿಗಳು ಹಾಗೂ ಅವುಗಳ ನಡುವೆ ಇರುವಂಥ ಸಂಬಂಧದ ಕುರಿತಾಗಿರುವ ಅಧ್ಯಯನ.
ಪರಾವಲಂಬಿ ಜೀವಿ
ಬದಲಾಯಿಸಿಪರಾವಲಂಬಿ ಜೀವಿ ಎಂದರೆ ಬೇರಂದು ಜೀವಿಯ(ಪೋಷಕ ಜೀವಿ) ಮೇಲೆ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ವಾಸಿಸುವ ಜೀವಿಯಾಗಿದೆ. ಇವುಗಳು ದೈಹಿಕವಾಗಿ ಅಥವಾ ಶಾರೀರಿಕವಾಗಿ ಅತಿಥಿ ಜೀವಿಗಳ ಮೇಲೆ ಅವಲಂಬಿತವಾಗಿರುತ್ತವೆ.[೧]
ಪರಾವಲಂಬಿ ಜೀವಿಗಳ ಸ್ವರೂಪ
ಬದಲಾಯಿಸಿಏಕಕೋಶೀಯ ಜೀವಿ, ಹುಳಗಳು, ಸಂಧಿಪದಿಗಳು- ಇವುಗಳು ಪರಾವಲಂಬಿ ಜೀವಿಗಳು
ವೈದ್ಯಕೀಯ ಪ್ಯಾರಸೈಟಾಲಜಿ ಎಂದರೆ ಮನುಷ್ಯರ ಮೇಲೆ ರೋಗ ಉಂಟುಮಾಡುವ ಪರಾವಲಂಬಿಗಳ ಕುರಿತಾಗಿರುವ ಅಧ್ಯಯನ.
ಪರಾವಲಂಬಿ ಜೀವಿಗಳ ಹಾಗೂ ಅತಿಥಿ ಜೀವಿಗಳ ನಡುವಿನ ಸಂಬಂಧದ ರೀತಿಗಳು
ಬದಲಾಯಿಸಿಮ್ಯುಚುವಲಿಸಂ
ಬದಲಾಯಿಸಿಪರಸ್ಪರ ಲಾಭ ದೊರೆಯುವಂಥ ಸಂಬಂಧವು ಪರಾವಲಂಬಿ ಜೀವಿ ಹಾಗೂ ಪೋಷಕ ಜೀವಿಯ ನಡುವೆ ಇರುತ್ತದೆ.
ಸಹಜೀವನ (ಸಿಂಬಯೋಸಿಸ್)
ಬದಲಾಯಿಸಿಪರಾವಲಂಬಿ ಜೀವಿ ಹಾಗೂ ಪೋಷಕ ಜೀವಿಯ ನಡುವೆ ಶಾಶ್ವತ ಸಂಬಂಧ ಇರುತ್ತದೆ. ಇವುಗಳು ಪರಸ್ಪರ ಅವಲಂಬಿತವಾಗಿರುವ ಕಾರಣ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕಲು ಸಾಧ್ಯವಿರುವುದಿಲ್ಲ.
ಸಹಜೀವಿತ್ವ (ಕಮೆಂಸಾಲಿಸಮ್)
ಬದಲಾಯಿಸಿಪರಾವಲಂಬಿ ಜೀವಿಗೆ ಪೋಷಕ ಜೀವಿಯಿಂದ ಲಾಭ ಸಿಗುತ್ತದೆ. ಆದರೆ ಪೋಷಕ ಜೀವಿಗೆ ಪರಾವಲಂಬಿ ಜೀವಿಯಿಂದ ಲಾಭ ಅಥವಾ ಹಾನಿ ಇರುವುದಿಲ್ಲ.
ಪರಾವಲಂಬಿಕೆ (ಪ್ಯಾರಸೈಟಿಸಮ್)
ಬದಲಾಯಿಸಿಒಂದು ಜೀವಿಯು ಇನ್ನೊಂದು ಜೀವಿಯ ವೆಚ್ಚದಲ್ಲಿ ವಾಸಿಸುತ್ತದೆ. ನಂತರ ಆ ಇನ್ನೊಂದು ಜೀವಿವು ಈ ಸಂಬಂಧದಿಂದಾಗಿ ನರಳುತ್ತದೆ. ಅಂದರೆ ಅದು ನಷ್ಟವನ್ನು ಅನುಭವಿಸುತ್ತದೆ.
ಪರಾವಲಂಬಿ ಜೀವಿಗಳ ವರ್ಗೀಕರಣ
ಬದಲಾಯಿಸಿವಾಸಸ್ಥಾನದ ಆಧಾರದ ಮೇಲೆ ವರ್ಗೀಕರಣ
ಬದಲಾಯಿಸಿಇವುಗಳು ಪೋಷಕ ಜೀವಿಯ ಚರ್ಮದ ಮೇಲೆ ವಾಸಿಸುವ ಅಥವಾ ಮೇಲ್ಮೈನಲ್ಲಿರುವ ಜೀವಕೋಶದ ಮೇಲೆ ಪರಿಣಾಮ ತೋರಿಸುವಂತಹ ಪರಾವಲಂಬಿ ಜೀವಿಗಳು. ಉದಾಹರಣೆ: ಹೇನುಗಳು
ಇವುಗಳು ಪೋಷಕ ಜೀವಿಯ ದೇಹದ ಒಳಗೆ ವಾಸಿಸುವಂಥ ಪರಾವಲಂಬಿ ಜೀವಿಗಳು.
ಪೋಷಕ ಜೀವಿಯ ಮೇಲೆ ಅವಲಂಬಿವಾಗಿರುವ ಆಧಾರದ ಮೇಲೆ ವರ್ಗೀಕರಣ
ಬದಲಾಯಿಸಿ- ತಾತ್ಕಾಲಿಕ (ಐಚ್ಚಿಕ) ಪರಾವಲಂಬಿಗಳು (ಟೆಂಪೊರರಿ ಪ್ಯಾರಸೈಟ್ಸ್)
ಪರಾವಲಂಬಿ ಜೀವನದ ಜೊತೆಗೆ ಸ್ವತಂತ್ರ ಅಸ್ತಿತ್ವವನ್ನು ಹೊಂದಿರುವಂಥ ಸಾಮರ್ಥ್ಯ ಇರುವ ಪರಾವಲಂಬಿ ಜೀವಿಗಳು.[೨]
- ಶಾಶ್ವತ (ನಿರ್ಬಂಧಕ) ಪರಾವಲಂಬಿಗಳು (ಪರ್ಮನೆಂಟ್ ಪ್ಯಾರಸೈಟ್ಸ್)
ಪರಾವಲಂಬಿ ಜೀವಿಯು ಸಂಪೂರ್ಣವಾಗಿ ತನ್ನ ಚಯಾಪಚಯ ಕ್ರಿಯೆಗಾಗಿ , ಆಶ್ರಯಕ್ಕಾಗಿ, ಮತ್ತು ಸಾರಿಗೆ ವ್ಯವಸ್ಥೆಗಾಗಿ ಪೋಷಕ ಜೀವಿಯ ಮೇಲೆ ಅವಲಂಬಿತವಾಗಿದೆ. ಪರಾವಲಂಬಿ ಜೀವಿಯು ಪೋಷಕ ಜೀವಿಯ ದೇಹದ ಹೊರಗೆ ಬದುಕಲು ಸಾಧ್ಯವಿಲ್ಲ. ಉದಾ: ಪ್ಲಾಸ್ಮೋಡಿಯಂಜಾತಿಯ ಸೂಕ್ಷ್ಮ ಜೀವಿಗಳು.
ತಮ್ಮ ರೋಗಕಾರಕತೆಯ ಆಧಾರದ ಮೇಲೆ ವರ್ಗೀಕರಣ
ಬದಲಾಯಿಸಿ- ರೋಗಕಾರಕ ಪರಾವಲಂಬಿಗಳು (ಪ್ಯಾತೋಜನಿಕ್ ಪ್ಯಾರಸೈಟ್ಸ್)
ಇವು ಪೋಷಕ ಜೀವಿಗೆ ಕಾಯಿಲೆಯನ್ನು ಉಂಟುಮಾಡುತ್ತವೆ. ಉದಾಹರಣೆ: ಎಂಟಮೀಬ ಹಿಸ್ಟೋಲಿಟಿಕ
- ರೋಗಕಾರಕವಲ್ಲದ (ಸಹಜೀವಿ) ಪರಾವಲಂಬಿಗಳು (ನಾನ್-ಪ್ಯಾತೋಜನಿಕ್ ಪ್ಯಾರಸೈಟ್ಸ್)
ಪರಾವಲಂಬಿ ಜೀವಿಯು ಪೋಷಕ ಜೀವಿಗೆ ಯಾವುದೇ ಹಾನಿ ಮಾಡದೆ ಪೋಷಕ ಜೀವಿಯಿಂದ ಆಹಾರ ಮತ್ತು ರಕ್ಷಣೆ ಪಡೆಯುತ್ತದೆ. ಉದಾಹರಣೆ: ಎಸ್ಚಿರೀಶಿಯಾ ಕೊಲೈ
- ಅವಕಾಶವಾದಿ ಪರಾವಲಂಬಿಗಳು (ಒಪರ್ಚುನಿಸ್ಟಿಕ್ ಪ್ಯಾರಸೈಟ್ಸ್)
ಇಂತಹ ಪರಾವಲಂಬಿ ಜೀವಿಗಳು ಆರೋಗ್ಯವಂತ ನಿರೋಧಕ ಶಕ್ತಿಯುಳ್ಳ ವ್ಯಕ್ತಿಗಳಲ್ಲಿ ತೀವ್ರ ಕಾಯಿಲೆ/ಬೇನೆ ಉಂಟುಮಾಡದೆ, ನಿರೋಧಕ ಶಕ್ತಿ ಕೊರತೆಯುಳ್ಳ ವ್ಯಕ್ತಿಗಳಲ್ಲಿ ತೀವ್ರ ಕಾಯಿಲೆ ಉಂಟುಮಾಡುತ್ತವೆ.
ಉದಾಹರಣೆ: ನ್ಯುಮೋನಿಯಾ ಕಾರ್ನೀ