ಪರಮಾಣು ಶಕ್ತ್ತಿ ಮತ್ತು ವಿಕಿರಣ



ಬಹಳ ಹಿಂದಿನಿಂದಲೂ ಜನರು ತಮ್ಮ ಸುತ್ತಮುತ್ತ ಇರುವ ಎಲ್ಲಾ ವಸ್ತುಗಳು ಮೂಲಭೂತವಾಗಿ ಯಾವುದರಿಂದ ಮಾಡಲ್ಪಟ್ಟಿವೆಯೆಂಬ ಕುತೂಹಲವನ್ನು ಹೊಂದಿದ್ದರು.ವೈಜ್ನಾನಿಕವಾಗಿ, ಎಲ್ಲ ವಸ್ತುಗಳು ಅಣು, ಪರಮಾಣುಗಳಿಂದ ಮಾಡಲ್ಪಟ್ಟಿವೆ.ಪರಮಾಣು ಎಷ್ಟು ಚಿಕ್ಕದಾಗಿದೆ ಎಂದರೆ ಸುಮಾರು ಹತ್ತು ಕೋಟಿ ಪರಮಾಣುಗಳನ್ನು ಒಂದಕ್ಕೊಂದು ತಾಗುವಂತೆ ಉದ್ದಕ್ಕೆ ಜೋಡಿಸಿದಾಗ ಅದು ಕೇವಲ ಒಂದು ಸೆಂಟಿಮೀಟರ್ನಷ್ಟು ಉದ್ದ ಹೊಂದಿರುತ್ತದೆ.ಪರಮಾಣುವಿನ ಕೇಂದ್ರ ಬಿಂದುವನ್ನು 'ನ್ಯೂಕ್ಲಿಯಸ್' ಎಂದು ಕರೆಯುತ್ತೇವೆ.ನ್ಯೂಕ್ಲಿಯಸ್ ನಲ್ಲಿ ಪ್ರೊಟಾನ್ ಮತ್ತು ನ್ಯೂಟ್ರಾನ್ ಗಳು ಬಂಧಕ ಶಕ್ತಿಯಿಂದ ಬಂಧಿಸಲ್ಪಟ್ಟಿರುತ್ತದೆ. ಎಲೆಕ್ಟ್ರಾನ್ ಗಳು ನ್ಯೂಕ್ಲಿಯಸ್ ನ ಸುತ್ತ ಸುತ್ತುತ್ತಿರುತ್ತದೆ.ಪರಮಾಣು ಅಗಾಧ ಶಕ್ತಿಯನ್ನು ಹೊಂದಿದೆ ಎಂದು ತಿಳಿದದ್ದು ೧೯೩೯ ರಲ್ಲಿ.ಪರಮಾಣುವಿನಲ್ಲಿರುವ ಶಕ್ತಿಗೆ ಸರಿಸಮಾನವಾದುದು ಯಾವುದೂ ಇಲ್ಲ.ನಂತರದ ದಿನಗಳಲ್ಲಿ ಈ ಶಕ್ತಿಯನ್ನುಬಳಸಿಕೊಂದು ಪರಮಾಣು ಬಾಂಬ್ ಗಳನ್ನು ತಯಾರಿಸಲಾಯಿತು.ಪರಮಾಣು ಸ್ಥಾವರಗಳ ಮೂಲಕ ವಿದ್ಯುತ್ತನ್ನು ತಯಾರಿಸುವ ವಿಧಾನವನ್ನು ಕಂಡುಹಿಡಿಯಲಾಯಿತು.ಪರಮಾಣುವಿನ ಶಕ್ತಿ ಏನೆಂಬುದನ್ನು ತಿಳಿಯಲು ಜಪಾನ್ ನ ದುರಂತವೇ ಸಾಕ್ಷಿ. ೧೯೪೫ ರ ಆಗಸ್ಟ್ ೬ ರಂದು ಜಪಾನ್ ಎರಡು ಪರಮಾಣು ಬಾಂಬ್ ಗಳ ಹೊಡೆತಕ್ಕೆ ಒಳಗಾಯಿತು.ಇದರಿಂದ ಸಾವಿರಾರು ಜನರು ತಮ್ಮ ಜೀವ ಕಳೆದುಕೊಂಡರು.ಈಪರಮಾಣು ಬಾಂಬಿನಿಂದಾಗಿ ಜಪಾನ್ ತೀವ್ರ ಸಂಕಷ್ಟಕ್ಕೆ ಸಿಲುಕಿತು.ಪರಮಾಣುವಿನ ಪರಿಣಾಮ ಇಂದಿಗೂವಾಗಿ ಜಪಾನಿನಲ್ಲಿ ಜನರು ನಾನಾ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.ಅಲ್ಲಿ ಹುಟ್ಟುವ ಮಕ್ಕಳು ಇಂದಿಗೂ ಅಂಗವಿಕಲರಾಗಿಯೇ ಹುಟ್ಟುತ್ತಿದ್ದಾರೆ. ಪರಮಾಣು ಸ್ಥಾವರಗಳು ಜಗತ್ತಿನ ಅತಿ ಮುಖ್ಯವಾದ ಶಕ್ತಿಯ ಮೂಲಗಳಾಗಿವೆ.ದೇಶದ ಒಟ್ಟು ಶಕ್ತಿಯ ಅಗತ್ಯದ ೨.೯% ರಷ್ಟು ನೀ ಸ್ಥಾವರಗಳಿಂದಲೇ ಉತ್ಪಾದಿಸಲಾಗುತ್ತದೆ.ಒಂದು ಪರಮಾಣು ಸ್ಥಾವರ ಸುಮಾರು ೩೦-೪೦ ವರ್ಷ ನಿರಂತರವಾಗಿ ಶಕ್ತಿಯ ಉತ್ಪಾದನೆಯನ್ನು ಮಾಡುತ್ತಿರುತ್ತದೆ.ಅದರ ಅವಧಿ ಮುಗಿದ ನಂತರ ಉಳಿಯುವ ವಸ್ತುಗಳು ವಿಕಿರಣವನ್ನು ಹೊರಸೂಸುವುದರಿಂದ ಅದನ್ನು ಸುರಕ್ಷಿತವಾಗಿ ಬಹಳ ಆಳದಲ್ಲಿ ಹೂತಿರುತ್ತಾರೆ.ಪರಮಾಣು