ಪಾಪುಅ ನ್ಯೂ ಗಿನಿ

(ಪಪುವಾ ನ್ಯೂಗಿನಿ ಇಂದ ಪುನರ್ನಿರ್ದೇಶಿತ)

ಪಾಪುಅ ನ್ಯೂ ಗಿನಿ ಒಷ್ಯಾನಿಯದ ಒಂದು ದೇಶ. ಇದು ನ್ಯೂ ಗಿನಿ ದ್ವೀಪದ ಪೂರ್ವ ಭಾಗವನ್ನು ಮತ್ತು ಇತರ ಹಲವು ಸಣ್ಣ ದ್ವೀಪಗಳನ್ನು ಒಳಗೊಂಡಿದೆ. ನ್ಯೂ ಗಿನಿ ದ್ವೀಪದ ಪಶ್ಚಿಮ ಭಾಗವು ಇಂಡೋನೇಷ್ಯಾದ ಒಂದು ಪ್ರಾಂತ್ಯ. ಪಾಪುಅ ನ್ಯೂ ಗಿನಿ ನೈಋತ್ಯ ಶಾಂತ ಮಹಾಸಾಗರದಲ್ಲಿನ ಮೆಲಾನೇಷ್ಯಾದ ಒಂದು ರಾಷ್ಟ್ರ. ಈ ರಾಷ್ಟ್ರವು ಕೌತುಕಕಾರಿಯೆನಿಸುವಷ್ಟು ವಿಭಿನ್ನತೆ ಹೊಂದಿದೆ. ಸುಮಾರು ೬೦ ಲಕ್ಷ ಜನಸಂಖ್ಯೆಯುಳ್ಳ ಈ ದೇಶದಲ್ಲಿ ನುಡಿಯಲ್ಪಡುವ ಭಾಷೆಗಳ ಸಂಖ್ಯೆ ೮೫೦. ಅತಿ ಹೆಚ್ಚಿನ ಪ್ರಮಾಣದಲ್ಲಿ ಸಸ್ಯ ವೈವಿಧ್ಯ ಮತ್ತು ಪ್ರಾಣಿ ವೈವಿಧ್ಯ ಹೊಂದಿರುವ ವಿಷುವದ್ರೇಖೆಯ ಮೇಲಿನ ಈ ದೇಶ ಜಗತ್ತಿನ ಅದ್ಭುತ ಪ್ರದೇಶಗಳಲ್ಲಿ ಒಂದು.

ಸ್ವತಂತ್ರ ಪಾಪುಅ ನ್ಯೂಗಿನಿ ರಾಜ್ಯ
ಪಾಪುಅ ನ್ಯೂಗಿನಿ
Flag of ಪಾಪುಅ ನ್ಯೂಗಿನಿ
Flag
Motto: ಅನೇಕತೆಯಲ್ಲಿ ಏಕತೆ
Anthem: ಓ ಅರೈಸ್, ಆಲ್ ಯೂ ಸನ್ಸ್
Location of ಪಾಪುಅ ನ್ಯೂಗಿನಿ
Capitalಪೋರ್ಟ್ ಮೋರ್ಸ್‌ಬಿ
Largest cityರಾಜಧಾನಿ
Official languagesಇಂಗ್ಲಿಷ್, ಟೋಕ್ ಪಿಸಿನ್, ಹಿರಿ ಮೋಟು
Governmentಸಾಂವಿಧಾನಿಕ ಅರಸೊತ್ತಿಗೆ
• ರಾಣಿ
ರಾಣಿ ಎಲಿಜಬೆತ್ - ೨
ಪೌಲಿಯಾಸ್ ಮಟಾನೆ
ಮೈಕೇಲ್ ಸೊಮಾರೆ
ಸ್ವಾತಂತ್ರ್ಯ 
• ಸ್ವಯಮಾಡಳಿತ
ಡಿಸೆಂಬರ್ 1 1973
ಸೆಪ್ಟೆಂಬರ್ 16 1975
• Water (%)
2
Population
• ಜುಲೈ 2005 estimate
5,887,000 (104ನೆಯದು)
GDP (PPP)2005 estimate
• Total
$14.363 ಬಿಲಿಯನ್ (126ನೆಯದು)
• Per capita
$2,418 (131ನೆಯದು)
Gini (1996)50.9
high
HDI (2007)Increase 0.530
Error: Invalid HDI value · 145ನೆಯದು
Currencyಕಿನಾ (ಪಿಜಿಕೆ)
Time zoneUTC+10 (ಆಸ್ಟ್ರೇಲಿಯನ್ ಈಸ್ಟರ್ನ್ ಸ್ಟ್ಯಾಂಡರ್ಡ್ ಟೈಮ್)
• Summer (DST)
UTC+10 (ಪರಿಗಣನೆಯಲ್ಲಿಲ್ಲ)
Calling code675

ಆಸ್ಟ್ರೇಲಿಯ ಖಂಡದ ಉತ್ತರದಲ್ಲಿರುವ ಪೆಸಿಫಿಕ್ ಸಾಗರದ್ವೀಪವಾದ ನ್ಯೂಗಿನಿಯ ಪೂರ್ವ ಭಾಗ ಮತ್ತು ಸಮೀಪದ ದ್ವೀಪಗಳು ಸೇರಿ ಪಾಪ್ಯವ ನ್ಯೂಗಿನಿ ಆಗಿದೆ. ನ್ಯೂ ಗಿನಿ ದ್ವೀಪದ ಪಶ್ಚಿಮ ಭಾಗ ಇಂಡೊನೇಷ್ಯಕ್ಕೆ ಸೇರಿದ ಇರೀಯಾನ್ ಬಾರಾತ್ (ಪಶ್ಚಿಮ ಇರೀಯಾನ್) ಅದಕ್ಕೂ ಪಾಪುಅ ನ್ಯೂಗಿನಿಗೂ ನಡುವೆ 141ನೆಯ ಪೂರ್ವ ರೇಖಾಂಶ ಗಡಿರೇಖೆಯಾಗಿದೆ. ನೆರೆಯ ಸಮುದ್ರಗಳಲ್ಲಿ ಪೂ.ರೇ. 54º 14' ವರೆಗೂ ದ.ಅ 8º-12º ನಡುವೆಯೂ ಇರುವ ಆಡ್ಮಿರಾಲ್ಟಿ, ನ್ಯೂ ಐರ್ಲೆಂಡ್, ನ್ಯೂ ಬ್ರಿಟನ್, ಬೂಗನ್‍ವಿಲ್ ಮತ್ತು ಬೂಕ ದ್ವೀಪಗಳೂ ಟ್ರೋಬ್ರಿಯಾಂಡ್, ವುಡ್‍ಲಾರ್ಕ್, ಲಾಫ್ಲಾನ್, ದಾಂತ್ರಕಾಸ್ತೋ, ಕಾನ್‍ಫ್ಲಿಕ್, ಲುಯಿಸೇಡ್ ಮತ್ತು ಸಾಮರಾಯ್ ದ್ವೀಪಗಳೂ ಪಾಪುಅ ನ್ಯೂ ಗಿನಿಗೆ ಸೇರಿವೆ. ಇದರ ಒಟ್ಟು ವಿಸ್ತೀರ್ಣ 1,61,700 ಕಿಮೀ ಜನಸಂಖ್ಯೆ ಸುಮಾರು 28 ಲಕ್ಷ (1976 ಅಂ.) ರಾಜಧಾನಿ ಪೋರ್ಟ್ ಮೋರ್ಸ್‍ಬೀ.

ಇತಿಹಾಸ

ಬದಲಾಯಿಸಿ

ಪಾಪುಅ ನ್ಯೂ ಗಿನಿಯ ಉತ್ತರಾರ್ಧ ಮತ್ತು ಅದಕ್ಕೆ ಸೇರಿದ ದ್ವೀಪಗಳು ಸೇರಿ ನ್ಯೂ ಗಿನಿ ವಿನ್ಯಾಸಪ್ರದೇಶವಾಗಿತ್ತು; ದಕ್ಷಿಣಾರ್ಧ ಮತ್ತು ಅದಕ್ಕೆ ಹೊಂದಿದ ದ್ವೀಪಗಳ ಪ್ರದೇಶ ಪಾಪ್ಯವ ಎನಿಸಿಕೊಂಡಿತ್ತು. ಮೊದಲಿನದು ಒಂದನೆಯ ಮಹಾಯುದ್ಧದ ವರೆಗೆ ಜರ್ಮನಿಯ ಸ್ವಾಮ್ಯದಲ್ಲಿದ್ದು ಅನಂತರ ಆಸ್ಟ್ರೇಲಿಯದ ಮೇಲ್ವಿಚಾರಣೆಯಲ್ಲಿ ರಾಷ್ಟ್ರಗಳ ಸಂಘದ ಅದಿಷ್ಟ ವಸಾಹತಾಗಿ, ಎರಡನೆಯ ಮಹಾಯುದ್ಧದ ಬಳಿಕ ವಿಶ್ವಸಂಸ್ಥೆಯ ನ್ಯಾಸ ಪ್ರದೇಶವಾಗಿದ್ದು, ಆಸ್ಟ್ರೇಲಿಯದ ಆಡಳಿತಕ್ಕೆ ಒಳಪಟ್ಟಿತ್ತು. ಪಾಪುಅ ಪ್ರದೇಶ ಬ್ರಿಟಿಷ್ ಒಡೆತನದ್ದಾಗಿದ್ದು, 1906ರಿಂದ ಆಸ್ಟ್ರೇಲಿಯದ ದ್ವೀಪಾಂತರ ಪ್ರಾಂತ್ಯವಾಗಿತ್ತು. ವಿಶ್ವಸಂಸ್ಥೆಯಲ್ಲಿ ಬಂದ ಒತ್ತಡದಿಂದ 1970ರಲ್ಲಿ ಈ ಎರಡೂ ಪ್ರದೇಶಗಳ ಅಬಾಧಿತಸ್ವಯಂ ನಿರ್ಣಯಾಧಿಕಾರವನ್ನು ಎತ್ತಿಹಿಡಿಯಲಾಯಿತು. 1971ರಲ್ಲಿ ಎರಡೂ ಪ್ರದೇಶಗಳನ್ನು ಸಮಾವೇಶಗೊಳಿಸಿ ಪಾಪುಅ ನ್ಯೂ ಗಿನಿಯೆಂಬ ಅವಿಭಕ್ತದೇಶವಾಗಿ ಘೋಷಿಸಲಾಯಿತು. 1973ರ ಡಿಸೆಂಬರ್ 1 ರಂದು ಪಾಪುಅ ನ್ಯೂ ಗಿನಿಗೆ ಸ್ವಾಯತ್ತತೆ ನೀಡಲಾಯಿತು. 1975ರ ಸೆಪ್ಟೆಂಬರ್ 16ರಂದು ಇದು ಸ್ವತಂತ್ರವಾಯಿತು.

ಭೌತ ಭೂವಿವರಣೆ

ಬದಲಾಯಿಸಿ

ಉನ್ನತ ಪರ್ವತ ಶ್ರೇಣಿಗಳು, ಕಡಿದೂ ಆಳವೂ ಆದ ಕಣಿವೆಗಳು, ವೇಗವಾಗಿ ಹರಿಯುವ ನದಿಗಳು ಮತ್ತು ಅವುಗಳ ಕೊಳಚೆ ಬಯಲುಗಳಿಂದ ಕೂಡಿದ ಈ ದೇಶದಲ್ಲಿ ಆಗಾಗ್ಗೆ ಭೂಕಂಪ ಮತ್ತು ಒಮ್ಮೊಮ್ಮೆ ಉರಿದೇಳುವ ಜ್ವಾಲಾಮುಖಿಗಳಿಂದಾಗಿ ಇದರ ಭೂಗರ್ಭ ಸ್ವರೂಪ ಅಸ್ಥಿರವಾಗಿದೆ ಎಂಬುದು ವ್ಯಕ್ತವಾಗುತ್ತದೆ. ಸುತ್ತಲ ದ್ವೀಪಗಳು ಹವಳದ ದಂಡೆಳಿಂದಾದ ಕರಾವಳಿಯಿಂದಲೂ ಜ್ವಾಲಾಮುಖಿಯಿಂದ ನಿರ್ಮಿತವಾದ ಪರ್ವತಗಳಿಂದಲೂ ಕೂಡಿದ್ದು, ಸಾಗರಗರ್ಭದಿಂದ ಎದ್ದ ಪರ್ವತಶ್ರೇಣಿಗಳ ಶಿಖರಗಳಾಗಿವೆ. ಈ ಪ್ರದೇಶ ಭೂಮಧ್ಯರೇಖೆಗೆ ತೀರ ಹತ್ತಿರ ಇರುವುದರಿಂದ 3,962 ಮೀ.ಗಿಂತ ಎತ್ತರವಾದ ಕೆಲವು ಶಿಖರಗಳ ಮೇಲೆ ಶಾಶ್ವತ ಹಿಮವಿರಬಹುದಾದರೂ ಉಳಿದ ಪ್ರದೇಶದಲ್ಲಿ ಉಷ್ಣತೆ 20ಲಿ ಸೆ.-32ಲಿ ಸೆ ಇದ್ದು, ವಾತಾವರಣ ಆದ್ರ್ರವಾಗಿರುತ್ತದೆ. ಡಿಸೆಂಬರ್-ಮಾರ್ಚ್ ಮಳೆಗಾಲ. 2,000 ಮಿಮೀ.ಮಳೆ ಸಾಮಾನ್ಯ. ಕೆಲವೆಡೆ 5,000 ಮೀ ವರೆಗೂ ಮಳೆ ಬೀಳುತ್ತದೆ. ಹೆಚ್ಚಿನ ಪ್ರದೇಶ ನಿಬಿಡಾರಣ್ಯಮಯವಾಗಿದ್ದರೂ ಧಾವಿಸುವ ಹೊಳೆಹಳ್ಳಗಳು ಮೇಲ್ಮಣ್ಣನ್ನು ಕೊಚ್ಚಿಹಾಕಿರುವುದರಿಂದ ಭೂಮಿ ಸಾರರಹಿತವಾಗಿದೆ. ಪಾಪ್ಯವ ಪ್ರದೇಶದಲ್ಲಿ ಫ್ಲೈ ಮತ್ತು ದಿಗುಲ್ ನದಿಗಳೂ ಉತ್ತರ ಕರಾವಳಿಯಲ್ಲಿ ಸಿಪಿರ್ ಮತ್ತು ರಾಮು ನದಿಗಳೂ ಮಳೆಗಾಲದಲ್ಲಿ ನೆರೆನೀರಿನಿಂದ ವಿಶಾಲ ಪ್ರದೇಶಗಳನ್ನು ಮುಳುಗಿಸುತ್ತವೆ. ಕೆಲವೇ ಉನ್ನತ ಕಣಿವೆಗಳು, ಮತ್ತು ಜ್ವಾಲಾಮುಖಿ ಭಸ್ಮ ಕೂಡಿಬಿದ್ದ ಪ್ರದೇಶಗಳು ಮಾತ್ರ ಫಲವತ್ತಾಗಿವೆ. ಇವು ಕೋಕೋ, ಕಾಫಿ, ರಬ್ಬರ್ ಮೊದಲಾದ ಹಣಬೆಳೆಗಳಿಗೆ ಅನುಕೂಲವಾಗಿವೆ. ಇವನ್ನು ರೂಢಿಸಿದವರು ವಿಶೇಷವಾಗಿ ಯೂರೋಪಿಯನರು.

ಮಲಯ್ ಭಾಷೆಯಲ್ಲಿ ಪಾಪ್ಯವ ಎಂದರೆ ಉಣ್ಣೆಕೂದಲು ಎಂದು ಅರ್ಥ. ಪಶ್ಚಿಮಭಾಗದಲ್ಲೂ ಒಳನಾಡಿನಲ್ಲೂ ಮುಖ್ಯವಾಗಿ ಉಣ್ಣೆ ಕೂದಲಿನ ಪಾಪ್ಯವನರು ವಾಸವಾಗಿದ್ದಾರೆ. ಪೂರ್ವ ಕರಾವಳಿ ಮತ್ತು ದ್ವೀಪಗಳಲ್ಲಿ ಕಪ್ಪುಬಣ್ಣದ ಮಲನೇಷಿಯನರು ಪ್ರಧಾನವಾಗಿದ್ದಾರೆ. ತೀರ ದೂರ ಪ್ರದೇಶಗಳಲ್ಲಿ ಸೆಗ್ರಿಟೋ ಮೂಲದ ಶಿಲಾಯುಗಾವಸ್ಥೆಯಲ್ಲಿರುವ ಜನರಿದ್ದಾರೆ. ಅವರಲ್ಲಿ ತಲೆಬೇಟೆ, ನರಮಾಂಸ ಭಕ್ಷಣೆ ಮುಂತಾದ ಅನಾಗರಿಕ ರೂಢಿಗಳು ಇನ್ನೂ ಇರಬಹುದು. ಯೂರೋಪಿಯನರು ತೀರ ಅಲ್ಪ ಸಂಖ್ಯಾತರು. ಹೆಚ್ಚಿನ ಸ್ಥಳೀಯ ಜನರು ಪರಸ್ಪರ ಸಂಪರ್ಕವಿಲ್ಲದ, ಪರಸ್ಪರ ಅರ್ಥವಾಗದ ನೂರಾರು ಭಾಷೆಗಳನ್ನಾಡುವ ಚಿಕ್ಕಚಿಕ್ಕ ಕುಗ್ರಾಮಗಳಲ್ಲಿ ವಾಸಿಸುತ್ತಾರೆ.

ಪಾಪ್ಯವ ನ್ಯೂ ಗಿನಿಯ ಸೇಕಡ 90 ಜನ ಕ್ರೈಸ್ತರೆಂದು ಹೇಳಿಕೊಳ್ಳುತ್ತದ್ದರೂ ಆಚರಣೆಯಲ್ಲಿ ಮದ್ದು, ಮಾಟ, ಮಂತ್ರಗಳ ಆದಿಮ ರೂಢಿಗಳು ಧರ್ಮದೊಡನೆ ಬೆರೆತಿವೆ.

ಮಲೆಜ್ವರ, ಆಮಶಂಕೆ, ಕೊಕ್ಕೆಹುಳು ಮೊದಲಾದ ಉಷ್ಣವಲಯ ರೋಗಗಳಿಂದಾಗಿ ಈ ಜನ 50 ವರ್ಷ ಮೀರಿ ಬದುಕುವುದು ಅಪರೂಪ. ಆಧುನಿಕ ಪಾಶ್ಚಾತ್ಯ ವೈದ್ಯಪದ್ಧತಿ ಈಗೀಗ ಜನರಿಗೆ ಗ್ರಾಹ್ಯವಾಗುತ್ತಿದೆ.

ಆರ್ಥಿಕತೆ

ಬದಲಾಯಿಸಿ

ಅಧಿಕತರ ಜನರಿಗೆ ಕೃಷಿಯೇ-ಅದೂ ಕುಮರಿ ಬೇಸಾಯ-ಮುಖ್ಯ ಜೀವನೋಪಾಯ. ಸಾಬಕ್ಕಿ, ಮರ ಗೆಣಸು, ಟಾರೋಗಡ್ಡೆ, ಬಾಳೆ ಮೊದಲಾದವು ಮುಖ್ಯ ಆಹಾರ ಬೆಳೆಗಳು. ಹಂದಿ ಸಾಕುವುದು ಪ್ರತಿಷ್ಠೆಯ ಕುರುಹು. ಕರಾವಳಿ ಮತ್ತು ದ್ವೀಪಗಳಲ್ಲಿ ಹೇರಳವಾಗಿ ತೆಂಗಿನ ತೋಟಗಳಿವೆ. ದೇಶದ ಮುಖ್ಯ ರಫ್ತು ಬೆಳೆ ಕೊಬ್ಬರಿ. ಕಾಫಿ, ಕೋಕೋ, ರಬ್ಬರ್, ಮೀನು ಮುಂತಾದುವೂ ರಫ್ತಾಗುತ್ತವೆ. ಈಚೆಗೆ ಅಲ್ಲಲ್ಲಿ ಅಕ್ಕಿ, ಶುಂಠಿ, ನೆಲಗಡಲೆ, ಪರಂಗಿಹಣ್ಣು ಬೆಳೆಸುತ್ತಿದ್ದಾರೆ. ಸ್ಟಾರ್ ಪರ್ವತಗಳಲ್ಲಿ ಅಮೂಲ್ಯ ನಾಟಿನ ಮರಗಳೂ ಬೇರೆಡೆ ತಾಮ್ರ ಮೊದಲಾದ ಖನಿಜಗಳೂ ಧಾರಾಳವಾಗಿದ್ದರೂ ಆ ಪ್ರದೇಶದ ದುರ್ಗಮತೆಯಿಂದಾಗಿ ಅವುಗಳ ಪ್ರಯೋಜನ ಪಡೆಯುವುದು ಕಷ್ಟವಾಗಿದೆ.

ತಾಮ್ರ, ಬಂಗಾರ ಸ್ವಲ್ಪಮಟ್ಟಿಗೆ ಉತ್ಪಾದನೆಯಾಗುತ್ತವೆ. ಈಚೆಗೆ ಖನಿಜ ತೈಲ ಮತ್ತು ನೈಸರ್ಗಿಕ ಅನಿಲಶೋಧ ಆಶಾದಾಯಕ ಫಲ ನೀಡಿದೆ. ವಿಪುಲ ಖನಿಜ ನಿಕ್ಷೇಪಗಳುಂಟೆಂದು ನಂಬಲಾದ ಟೋರ್ಸ್ ಸಮುದ್ರದ ಬೊಯಿಗು, ತಾವನ್ ಮತ್ತು ಸಾಯಿಬಾಯಿ ದ್ವೀಪಗಳು ತನಗೆ ನ್ಯಾಯವಾಗಿ ಸೇರಬೇಕೆಂಬ ಬೇಡಿಕೆಯನ್ನು ಪಾಪ್ಯವ ನ್ಯೂ ಗಿನಿ ಸರ್ಕಾರ ಆಸ್ಟ್ರೇಲಿಯದ ಮುಂದಿಟ್ಟಿದೆ. ಕ್ಷಿಪ್ರಗಾಮಿ ನದಿಗಳು ಜಲವಿದ್ಯುತ್ ಉತ್ಪಾದನೆಗೆ ಅವಕಾಶ ನೀಡುತ್ತವೆ. ದೇಶದಲ್ಲಿ ಉತ್ಪಾದನೆಯಾಗುವ ವಿದ್ಯುತ್ತಿನಲ್ಲಿ ಗಮನಾರ್ಹ ಭಾಗ ಜಲವಿದ್ಯುತ್.

ರಸ್ತೆ ಸೌಲಭ್ಯ ಫೋರ್ಟ್ ಮೋರ್ಸ್‍ಬಿ ಮೊದಲಾದ ಕೆಲವೇ ಪಟ್ಟಣಗಳಿಗೆ ಸೀಮಿತವಾಗಿದೆ. ದೇಶದಲ್ಲಿ 16,458 ಕಿಮೀ ಉದ್ದದ ಮುಖ್ಯ ರಸ್ತೆಗಳಿವೆ. 47 ವಿಮಾನ ನಿಲ್ದಾಣಗಳೂ 12 ಬಂದುರುಗಳೂ ಇವೆ. ದುರ್ಗಮ ಭಾಗಗಳಿಗೆ ವಿಮಾನಗಳೇ ಮುಖ್ಯ ಸಾರಿಗೆ ಸಾಧನ.

ಶಿಕ್ಷಣ, ಆಡಳಿತ

ಬದಲಾಯಿಸಿ

1970ರಷ್ಟು ಹೊತ್ತಿಗೆ ಇಂಗ್ಲಿಷ್ ಕಲಿಸುವ 850 ಶಾಲೆಗಳಿದ್ದು, ಶೇಕಡ 50ರಷ್ಟು ಶಾಲಾವಯಸ್ಸಿನ ಮಕ್ಕಳಿಗೆ ಶಾಲಾಸೌಲಭ್ಯ ಲಭ್ಯವಾಗಿತ್ತು. 15 ವಯಸ್ಸು ಮೀರಿದವರಲ್ಲಿ ಶೇಕಡ 32 ಮಂದಿ ಸಾಕ್ಷರರಿದ್ದರು. 1965ರಲ್ಲಿ ಬೊರೋಕದಲ್ಲಿ ಸ್ಥಾಪಿಸಲಾದ ಪಾಪುಅ ನ್ಯೂ ಗಿನಿ ವಿಶ್ವವಿದ್ಯಾಲಯ ಉಚ್ಚ ಶಿಕ್ಷಣಕ್ಕೆ ಮಾರ್ಗ ಮಾಡಿಕೊಟ್ಟಿತು.

1906ರಲ್ಲಿ ಜಿಲ್ಲಾ ಆಡಳಿತವನ್ನು ವಿಸ್ತರಿಸುವ ನೀತಿಯನ್ನು ಆಸ್ಟ್ರೇಲಿಯ ತಳೆದು ಆಧುನೀಕರಣವನ್ನು ಆರಂಭಿಸಿತು. 1949ರಲ್ಲಿ ಆಸ್ಟ್ರೇಲಿಯದಲ್ಲಿ ಲೇಬರ್ ಸರ್ಕಾರ ಬಂದು ತನ್ನ ಸಾಮಾಜಿಕ ನ್ಯಾಯದ ಧೋರಣೆಯನ್ನು ನ್ಯೂ ಗಿನಿಗೆ ಅನ್ವಯಿಸಿತು. 1951ರಲ್ಲಿ ಪ್ರಜಾಸತ್ತೆಗೆ ಪೂರ್ವಭಾವಿಯಾಗಿ ವಿಧಾನ ಪರಿಷತ್ ಮತ್ತು 1964ರಲ್ಲಿ ಸುಮಾರಾಗಿ ಸಾರ್ವತ್ರಿಕ ಮತದಾನದಿಂದ ಚುನಾಯಿಸಿದ ವಿಧಾನ ಸಭೆ ಬಂದವು. 1968ರ ಸಂವಿಧಾನದ ಪ್ರಕಾರ 84 ಚುನಾಯಿತ ಮತ್ತು 4 ಅಧಿಕಾರಿ ಸದಸ್ಯರುಳ್ಳ ಅಸೆಂಬ್ಲಿ ಅಸ್ತಿತ್ವಕ್ಕೆ ಬಂದು, 1972ರಲ್ಲಿ ನ್ಯೂ ಗಿನಿಯನರೇ ಆದ ಮೈಕೇಲ್ ಸೋಮೇರ್ ಪ್ರಧಾನ ಮಂತ್ರಿಯಾದರು. ಪಾಪುಅ ನ್ಯೂ ಗಿನಿಗೆ ತನ್ನದೇ ಉಚ್ಚನ್ಯಾಯಲಯವೂ ಇದೆ. ಕಾಮನ್‍ವೆಲ್ತಿಗೆ ಸೇರಿರುವ ಈ ದೇಶದ ಮುಖ್ಯರು ಬ್ರಿಟನ್ನಿನ ರಾಣಿ. ಗವರ್ನರ್ ಜನರಲ್ ಸರ್ ಜಾನ್ ಗೈಸ್.

ಉಲ್ಲೇಖಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: