ಪತಿರಿ
ಪತಿರಿ ಅಕ್ಕಿಹಿಟ್ಟಿನಿಂದ ತಯಾರಿಸಲಾದ ದೋಸೆಯಂಥ ಖಾದ್ಯವಾಗಿದೆ. ಇದು ಕೇರಳ ರಾಜ್ಯದಲ್ಲಿ ಉತ್ತರ ಮಲಬಾರ್ ಹಾಗೂ ಮಲಬಾರ್‌ನ ಮಾಪಿಳ್ಳರ ಸ್ಥಳೀಯ ಪಾಕಪದ್ಧತಿಯ ಭಾಗವಾಗಿದೆ.ಪುಡಿಮಾಡಿದ ಅಕ್ಕಿಯನ್ನು ಬಿಳಿ ಕಣಕವಾಗಿ ತಯಾರಿಸಿ ಬಾಣಲೆಗಳ ಮೇಲೆ ಬೇಯಿಸಲಾಗುತ್ತದೆ.ತಯಾರಿಕೆಯ ನಂತರ ಇದನ್ನು ಮೃದುವಾಗಿಡಲು ಮತ್ತು ರುಚಿಯನ್ನು ಸುಧಾರಿಸಲು ಕೆಲವೊಮ್ಮೆ ತೆಂಗಿನ ಹಾಲಿನಲ್ಲಿ ನೆನೆಸಲಾಗುತ್ತದೆ.
ಇಂದು,ಪತಿರಿ ಈಗಲೂ ಕೇರಳದ ಮುಸ್ಲಿಮರಲ್ಲಿ ಜನಪ್ರಿಯ ಖಾದ್ಯವಾಗಿದೆ.[೧] ಇದನ್ನು ಸಾಮಾನ್ಯವಾಗಿ ರಾತ್ರಿ ಊಟಕ್ಕೆ ತಯಾರಿಸಿ ಮಾಂಸ ಅಥವಾ ಮೀನಿನೊಡನೆ ಬಡಿಸಲಾಗುತ್ತದೆ.ಕೆಲವು ಪ್ರದೇಶಗಳಲ್ಲಿ, ಪತಿರಿಯನ್ನು ಮುಸ್ಲಿಮರ ಉಪವಾಸದ ತಿಂಗಳಾದ ರಂಜಾನ್‍ನಲ್ಲಿ ಇಫ಼್ತಾರ್‌ನ ವೇಳೆ ನಿಯತವಾಗಿ ಬಡಿಸಲಾಗುತ್ತದೆ.
ಪತಿರಿಯ ಬಗೆಗಳಲ್ಲಿ ನೇಯ್‍ಪತಿರಿ (ತುಪ್ಪದಿಂದ ತಯಾರಿಸಿದ್ದು), ಪೊರಿಚಾ ಪತಿರಿ (ಬೇಯಿಸುವ ಬದಲು ಕರಿಯಲ್ಪಡುತ್ತದೆ), ಮೀನ್ ಪತಿರಿ (ಮೀನಿನ ಹೂರಣವಿರುವ), ಮತ್ತು ಇರಚಿ ಪತಿರಿ (ಗೋಮಾಂಸದ ಹೂರಣವಿರುವ) ಸೇರಿವೆ.
ಉಲ್ಲೇಖಗಳು
ಬದಲಾಯಿಸಿ- ↑ Moideen, Cini P. (12 June 2015). "Rice pathiri, Ari pathiri, Kerala Malabar pathiri". CheenaChatti. Retrieved 9 July 2015.