ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಪೂಜ್ಯರು ದಿನಾಂಕ- ೦೪-೦೯-೧೯೫೧ ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ತಂದೆ ನಾಗಯ್ಯ ತಾಯಿ ಶಿವನಮ್ಮನ ಮಗನಾಗಿ ಜನನ.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ | |
---|---|
ಜನನ | ಸೆಪ್ಟೆಂಬರ್ ೦೪, ೧೯೫೧ ಹೆಡಿಯಾಲ, ರಾಣೆಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ |
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮೈಸೂರು ವಿಶ್ವವಿದ್ಯಾನಿಲಯ |
ಕಾಲ | 20ನೆಯ ಶತಮಾನ |
ಪ್ರಕಾರ/ಶೈಲಿ | ಕವಿತೆ, ನಾಟಕ, ವಿಮರ್ಶೆ, ಆತ್ಮಕಥೆ, ಜೀವನ ಚರಿತ್ರೆ |
ವಿಷಯ | ಶರಣ ಸಾಹಿತ್ಯ, ಪ್ರಕೃತಿ, ಅಧ್ಯಾತ್ಮ ವಿಚಾರ. |
ಪ್ರಮುಖ ಪ್ರಶಸ್ತಿ(ಗಳು) | ಪಾಲ್ ಹ್ಯಾರಿಸ್ ಪ್ರಶಸ್ತಿ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ , ಕರ್ನಾಟಕ ನಾಟಕ ಅಕಾಡೆಮಿ ಗೌರವ ಫೆಲೋಶಿಪ್
ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ |
www |
ಶಿಕ್ಷಣ
ಬದಲಾಯಿಸಿಪ್ರಾಥಮಿಕ ಶಿಕ್ಷಣ ಹೆಡಿಯಾಲದಲ್ಲಿ, ಪ್ರೌಢ ಶಿಕ್ಷಣ ಸುಣಕಲ್ಲಬಿದರಿಯಲ್ಲಿ, ಸಿರಿಗೆರೆಯಲ್ಲಿ ತತ್ತ್ವಶಾಸ್ತ್ರ ವಿಷಯದಲ್ಲಿ ಪಿಯುಸಿ ಮತ್ತು ಬಿಎ ಕಾಲೇಜು ಶಿಕ್ಷಣದಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ. ೧೯೭೪ ರಲ್ಲಿ ತತ್ತ್ವಶಾಸ್ತ್ರ ವಿಷಯದಲ್ಲಿಯೆ ಸ್ನಾತಕೋತ್ತರ ಪದವಿ ಮೈಸೂರು ವಿಶ್ವವಿದ್ಯಾಲಯ ಮೈಸೂರಿನಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ..
ಶ್ರೀಗಳ ರಂಗಾಸಕ್ತಿ
ಬದಲಾಯಿಸಿಶಾಲಾ ಕಾಲೇಜುಗಳಲ್ಲಿ ರಂಗಭೂಮಿ ಆಸಕ್ತಿ ಬೆಳೆಸಿಕೊಂಡಿದ್ದ ಪಂಡಿತಾರಾಧ್ಯ ಶ್ರೀಗಳು ,ಅವರ ರಂಗಾಸಕ್ತಿಯ ಮೂಲ ಹೆಜ್ಜೆ ಸವಾಲನ್ನು ೧೯೮೭ ರಲ್ಲಿ ಶಿವಕುಮಾರ ಕಲಾ ಸಂಘ ಸ್ಥಾಪನೆ. ದಶಕದ ನಂತರ ೧೯೯೭ ರಲ್ಲಿ ಒಳಗಡೆ ಶಿವಸಂಚಾರ (ರೆಪರ್ಟರಿ) ಆರಂಭ ರಂಗಕರ್ಮಿ ಸಿ.ಜಿ ಕೃಷ್ಣಸ್ವಾಮಿ (ಸಿಜಿಕೆ) ಅವರ ಆಸಕ್ತಿಯಿಂದ ೨೦೦೩ ರಲ್ಲಿ ೫೦೦೦ ಆಸನಗಳ ಸಾಮರ್ಥ್ಯದ ಗ್ರೀಕ್ ಮಾದರಿಯ ಸುಸಜ್ಜಿತ ಬಯಲು ರಂಗಮಂದಿರ ನಿರ್ಮಾಣ.
. ಶಿವಕುಮಾರ ಕಲಾಸಂಘ ಶಿವಸಂಚಾರದ ಮೂಲಕ ವರ್ಷಕ್ಕೆ ಮೂರು ನಾಟಕ, ೧೫೦ ಪ್ರದರ್ಶನ ನೀಡುತ್ತಾ ಸಾಹಿತ್ಯ, ಸಂಸ್ಕೃತಿ, ಕಲೆ, ಶರಣತತ್ವ ಮತ್ತು ಸಾಮಾಜಿಕ ಪರಿವರ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ.
. ೧೯೯೭ ರಲ್ಲಿ ಶಿವಸಂಚಾರ ಶುರುವಾಯಿತು. ಎರಡು ವರ್ಷದ ಸಂಚಾರದ ಯಶಸ್ಸು ಎಲ್ಲರನ್ನು ಬೆರಗುಗೊಳಿಸಿತು.
ಶಿವಸಂಚಾರ ಕರ್ನಾಟಕದಲ್ಲಿ ಮನೆಮಾತಾಯಿತು. ಅನೇಕ ಮಠಾಧೀಶರು ನಾಟಕಗಳನ್ನು ನೋಡಲು ಆರಂಭಿಸಿದರು. ಇವೆಲ್ಲ ಟೀಕೆಗಳನ್ನು ತೊಡೆದು ಹಾಕಿದವು ಎನ್ನುತ್ತಾ, ಆರಂಭದ ದಿನಗಳ ಸವಾಲನ್ನು ಪಂಡಿತಾರಾಧ್ಯ ಸ್ವಾಮೀಜಿ ನೆನಪಿಸಿಕೊಳ್ಳುತ್ತಾರೆ. ರಂಗಭೂಮಿ ಬೆಳೆಸುವ ಜತೆಗೆ ಕಲಾವಿದರನ್ನು ಪ್ರೋತ್ಸಾಹಿಸುವ ಶಿವಕುಮಾರ ಕಲಾಸಂಘ ಹನ್ನೆರಡು ವರ್ಷಗಳಿಂದ ಶ್ರೀ ಶಿವಕುಮಾರ ರಂಗ ಪ್ರಶಸ್ತಿ ನೀಡುತ್ತಿದೆ.
"ಆಧ್ಯಾತ್ಮ ಮತ್ತು ಸಮಾಜವನ್ನು ಒಂದೇ ನಾಣ್ಯದ ಎರಡು ಮುಖಗಳೆಂದು ಭಾವಿಸುತ್ತಾರೆ. ಸಮಾಜ ಸುಧಾರಣೆಗೆ ಧರ್ಮ ಬೇಕು, ಧರ್ಮವನ್ನು ಹೇಳಲು ಒಂದು ಮಾರ್ಗ ಬೇಕು, ಅದು ಎರಡೂ ರಂಗಭೂಮಿಯಲ್ಲಿದೆ. ಈ ೨೫ ವರ್ಷಗಳಲ್ಲಿ ನಾಟಕಗಳ ಮೂಲಕ ಸಾಮಾಜಿಕ ಪರಿವರ್ತನೆ ಗುರುತಿಸಿದ್ದೇವೆ" ಎಂದು ಹಲವು ಉದಾಹರಣೆ ಸಹಿತ ಉಲ್ಲೇಖಿಸುತ್ತಾರೆ ೨೦೦೭ ರಲ್ಲಿ 'ಭಾರತ ಸಂಚಾರ' ಹಾಗೂ ಎರಡು ಸಾರಿ 'ಶಿವದೇಶ ಸಂಚಾರ'ದ ಮೂಲಕ ಭಾರತಾದ್ಯಂತ ಪರ್ಯಟನೆ ಮಾಡಿ, ೨೧ ರಾಜ್ಯಗಳಲ್ಲಿ 'ಮರಣವೇ ಮಹಾನವಮಿ', 'ಶರಣಸತಿ ಲಿಂಗಪತಿ', 'ಜಂಗಮದೆಡೆಗೆ' ಸೇರಿದಂತೆ ಶರಣ ತತ್ವ ಪ್ರತಿಪಾದಿಸುವ 10 ನಾಟಕಗಳನ್ನು ಹಿಂದಿ ಅವತರಣಿಕೆಯಲ್ಲಿ ಪ್ರದರ್ಶಿಸಿತು.
ಎರಡೂವರೆ ದಶಕಗಳ ದಣಿವರಿಯದ ಪಯಣ
ಬದಲಾಯಿಸಿಎರಡು ದಶಕಗಳಿಂದ ನಡೆಯುತ್ತಿರುವ ಶಿವಸಂಚಾರ ನಾಟಕ ರಾಷ್ಟ್ರೀಯ ನಾಟಕೋತ್ಸವ ಯಾವ ವರ್ಷವೂ ಸ್ಥಗಿತಗೊಂಡಿಲ್ಲ, ಬದಲಿಗೆ ಆಸಕ್ತರ ಬೇಡಿಕೆಯನ್ನು ಪೂರೈಸಲಾಗುತ್ತಿಲ್ಲ. ಇಲ್ಲಿಯವರೆಗೂ ೨೦೦೦ ಕ್ಕಿಂತ ಹೆಚ್ಚು ನಾಟಕಗಳ ಪ್ರಯೋಗಗಳು ನಡೆದಿವೆ.
ವರ್ಷಪೂರ್ತಿ ಶಿವಸಂಚಾರ ಪ್ರತಿ ವರ್ಷ ನವೆಂಬರ್ ತಿಂಗಳ ಮೊದಲ ವಾರದಲ್ಲಿ "ರಾಷ್ಟ್ರೀಯ ನಾಟಕೋತ್ಸವ" ನಡೆಯುತ್ತದೆ. ಹೊರ ರಾಜ್ಯದ ಕಲಾವಿದರು ನಾಟಕ ಪ್ರದರ್ಶನ ನೀಡುತ್ತಾರೆ. ನೇಪಾಳ, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಕಲಾವಿದರು ಈ ರಂಗಮಂಚದಲ್ಲಿ ಕಲಾ ಪ್ರದರ್ಶನ ನೀಡಿದ್ದಾರೆ.
ನಾಟಕ ಪ್ರದರ್ಶನಗಳ ಜೊತೆಗೆ ಇಲ್ಲಿ ರಂಗತರಬೇತಿ ನಡೆಯುತ್ತದೆ. ವರ್ಷಕ್ಕೆ ಹದಿನೈದು ವಿದ್ಯಾರ್ಥಿಗಳಂತೆ ಇನ್ನೂರೈವತ್ತಕ್ಕೂ ಹೆಚ್ಚು ನುರಿತ ಕಲಾವಿದರು ರಂಗಕರ್ಮಿಗಳು ಈ ಕಲಾಸಂಘದಿಂದ ಹೊರಹೊಮ್ಮಿದ್ದಾರೆ. ಹತ್ತಾರು ಕಲಾವಿದರು ಕಿರುತೆರೆ, ಹಿರಿತೆರೆಗಳಲ್ಲಿ ಹೆಸರು ಮಾಡಿದ್ದಾರೆ ಮತ್ತು ಸ್ವತಂತ್ರ ನಿರ್ದೇಶನ ಮಾಡುತ್ತಿದ್ದಾರೆ.
ಸ್ವತಂತ್ರ ವೈಚಾರಿಕ ಕೃತಿಗಳು
ಬದಲಾಯಿಸಿ- ಜೀವನ ದರ್ಶನ (1985)
- ಕೈದೀವಿಗೆ (1988)
- ಬದುಕು (1990)
- ಹುಟ್ಟು ಸಾವುಗಳ ಮಧ್ಯೆ (1990)
- ಸಮಾಧಿಯ ಮೇಲೆ (1991)
- ಸಮರಸ (1992)
- ಸಮಕಾಲೀನತೆ ಮತ್ತು ವಚನ ಸಾಹಿತ್ಯ (1992)
- ಮರುಭೂಮಿ (1993)
- ಕಾಯಕ ದಾಸೋಹ (1994)
- ಹುತ್ತ ಮತ್ತು ಹಾವು (1994)
- ಆದರ್ಶ ವಾಸ್ತವ (1995)
- ಜಾಗೃತ ವಾಣಿ (1996)
- ಪ್ರಳಯ! ಮುಂದೇನು? (1998)
- ಬದುಕು ಹೀಗೇಕೆ? (1999)
- ಜ್ಞಾನ ಪುಷ್ಪ (1999)
- ಸುಖ ಎಲ್ಲಿದೆ? (2000)
- ಧರ್ಮಗುರು (2000)
- ಕನ್ನಡಿ (2001)
- ಸುಜ್ಞಾನ (2001)
- ಮನಸು ಮಲ್ಲಿಗೆಯಾಗಲಿ (2002)
- ಅಂತರಾಳ (2005)
- ಶಿವಬೆಳಗು (2005)
- ಬಾಳ ಬುತ್ತಿ (2006)
- ಜೇಡರ ದಾಸೀಮಯ್ಯ (2007)
- ಮಾದರ ಚೆನ್ನಯ್ಯ (2008)
- ರೊಟ್ಟಿ ಬುತ್ತಿ (2008)
- ವಚನ ವೈಭವ (2009)
- ಬಸವಧರ್ಮ (2009)
- ಪ್ರಸ್ತುತ (2010)
- ವ್ಯಕ್ತಿತ್ವ (2011)
- ಕಲ್ಯಾಣ (2012)
- ದಿಟ್ಟ ಹೆಜ್ಜೆಯ ಧೀರ ಪ್ರಭು (2012)
- ಮನದನಿ (2012)
- ಸಂಪತ್ತು (2013)
- ನೋಯದವರೆತ್ತ ಬಲ್ಲರು? (2014)
- ಶರಣ ಸಂಕುಲ (2015)
- ಆತ್ಮ ವಿಕಾಸದ ಮಾರ್ಗ (2015)
- ನಡೆನುಡಿ ಸಿದ್ಧಾಂತ (2017)
- ಲಿಂಗಾಯತ ಧರ್ಮ (2017)
- ವಚನಕಾರರ ಬದ್ಧತೆ (2018)
- ಮನದ ಮಾತು (2018)
- ಧರ್ಮಜ್ಯೋತಿ (2018)
- ಸಮಸಮಾಜದ ಕನಸು (2019)
- ಮತ್ತೆ ಕಲ್ಯಾಣದೆಡೆಗೆ (2019)
- ಶರಣಸಂದೇಶ. (2020)
ಪೂಜ್ಯರ ನಾಟಕಗಳು
ಬದಲಾಯಿಸಿ- ಅಂತರಂಗ-ಬಹಿರಂಗ (2000)
- ಸ್ವಾಮಿ ವಿವೇಕಾನಂದ (2002)
- ಜಂಗಮದೆಡೆಗೆ (2003)
- ಅಂಕುಶ (2008)
- ಮೋಳಿಗೆ ಮಾರಯ್ಯ (2017)
- ಗುರುಮಾತೆ ಅಕ್ಕ ನಾಗಲಾಂಬಿಕೆ (2019)
ಪ್ರವಾಸ ಕಥನ
ಬದಲಾಯಿಸಿ- ಶಿವಾನುಭವ ಪ್ರವಾಸ (1997)
ವಚನಗಳು
ಬದಲಾಯಿಸಿಒಳಗೆ ಮಡಿಯಾಗದೆ ಹೊರಗೆ ಮಿಂದರೇನಯ್ಯ
- ಒಲಿದಂತೆ ಹಾಡುವೆ (1996)
- ಅಮೃತ ಬಿಂದು (2012)
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2019-09-17. Retrieved 2020-09-29.
- ↑ http://sanehalli.blogspot.com/2013/02/sri-panditharadhy-shivacharya-swamiji.html
- ↑ http://shivasanchara.in/?page_id=333