ಪಂಜೀರಿ ಪಾಕಿಸ್ತಾನ ಮತ್ತು ಭಾರತದ ಪಂಜಾಬ್ ಪ್ರದೇಶದ ಒಂದು ಮುಖ್ಯ ಆಹಾರವಾಗಿದೆ.[] ಇದನ್ನು ಪೋಷಕ ಪೂರಕ ಆಹಾರವಾಗಿ ಬಳಸಲಾಗುತ್ತದೆ. ಗೋಧಿ ಹಿಟ್ಟನ್ನು ಸಕ್ಕರೆ ಮತ್ತು ತುಪ್ಪದ ಮಿಶ್ರಣದಲ್ಲಿ ಕರಿದು, ಜೊತೆಗೆ ಬಹಳವಾಗಿ ಒಣಫಲಗಳನ್ನು ಹಾಗೂ ಮೂಲಿಕೆ ಅಂಟುಗಳನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಚಳಿಗಾಲದಲ್ಲಿ ಚಳಿಯನ್ನು ಓಡಿಸಲು ತಿನ್ನಲಾಗುತ್ತದೆ. ಇದನ್ನು ಸಿಕ್ಖರು ೫೦೦ ವರ್ಷಕ್ಕಿಂತ ಹೆಚ್ಚು ಕಾಲದಿಂದ ಬಳಸಿದ್ದಾರೆ. ಇದರ ಬಳಕೆಯು ಸಾಕಷ್ಟು ಮತಾಚರಣೆಯುಳ್ಳ ಮತ್ತು ಅರ್ಥಪೂರ್ಣವಾಗಿದೆ.

ಬಳಸಲಾಗುವ ಪದಾರ್ಥಗಳು

ಬದಲಾಯಿಸಿ
  • ಗೋಧಿಹಿಟ್ಟು ಅಥವಾ ರವೆಯನ್ನು ಕೂಡ ಬಳಸಬಹುದು
  • ತುಪ್ಪ
  • ಕರ್ಬೂಜ ಬೀಜಗಳು
  • ಸಕ್ಕರೆ
  • ಬಾದಾಮಿ
  • ಪುಡಿಮಾಡಿದ ತಿನ್ನಬಲ್ಲ ಅಂಟಿನ ಚೂರು
  • ಪಲಾಶದ ಬೀಜಗಳು
  • ಸೊಂಪು
  • ಉಬ್ಬಿಸಿದ ಕಮಲದ ಬೀಜಗಳು
  • ಅಜವಾನ
  • ಏಲಕ್ಕಿ ಪುಡಿ
  • ಒಣಶುಂಠಿ ಪುಡಿ
  • ಅಕ್ರೋಟು
  • ಅಂಜೂರ
  • ಪಿಸ್ತಾ
  • ಪುಡಿಸಕ್ಕರೆ

ಉಲ್ಲೇಖಗಳು

ಬದಲಾಯಿಸಿ


"https://kn.wikipedia.org/w/index.php?title=ಪಂಜೀರಿ&oldid=1012765" ಇಂದ ಪಡೆಯಲ್ಪಟ್ಟಿದೆ