ಪಂಜಾಬ್ ಜಾನಪದ ನೃತ್ಯಗಳು
ಭಾರತ ಮತ್ತು ಪಾಕಿಸ್ತಾನ ದೇಶಗಳ ಪಂಜಾಬ್ ಪ್ರಾಂತ್ಯದ ಪಂಜಾಬಿ ಜನರಲ್ಲಿ ಪ್ರಚಲಿತವಿರುವ ಜಾನಪದ ಮತ್ತು ಧಾರ್ಮಿಕ ನೃತ್ಯಗಳೇ ಪಂಜಾಬಿ ನೃತ್ಯಗಳು[೧]. ಪಂಜಾಬಿ ನೃತ್ಯಗಳಲ್ಲಿ ತಾರಕ ಶೈಲಿಯ ನೃತ್ಯಗಳಿಂದ ಹಿಡಿದು ನಿಧಾನಗತಿಯ ನೃತ್ಯಗಳವರೆಗೆ ಅನೇಕ ಪ್ರಕಾರಗಳಿದ್ದು ಗಂಡಸರು ಮತ್ತು ಹೆಂಗಸರಿಗೆ ಪ್ರತ್ಯೇಕ ಶೈಲಿಗಳಿರುತ್ತವೆ. ಕೆಲವು ನೃತ್ಯಪ್ರಕಾರಗಳು ಧಾರ್ಮಿಕ ಹಿನ್ನೆಲೆಯಲ್ಲಿ ಪ್ರಸ್ತುತಪಡಿಸಲ್ಪಟ್ಟರೆ, ಇನ್ನೂ ಹಲವು ಧಾರ್ಮಿಕವಲ್ಲದ್ದಾಗಿರುತ್ತವೆ. ಸಾಮಾನ್ಯವಾಗಿ ಆಚರಣೆ, ಸುಗ್ಗಿ, ಮದುವೆಗಳು, ಉತ್ಸವಗಳ ಸಮಯದಲ್ಲಿ ನೃತ್ಯಗಳನ್ನು ಮಾಡಲಾಗುತ್ತದೆ. ಲೋಹ್ರಿ, ಜಶನ್-ಎ-ಬರಹಾನ್ (ಸುಗ್ಗಿ ಹಬ್ಬ) ಕೆಲವು ಉದಾಹರಣೆಗಳು. ಇದರಲ್ಲಿ ಎಲ್ಲರೂ ಕುಣಿಯುವಂತೆ ಪ್ರೋತ್ಸಾಹಿಸಲಾಗುತ್ತದೆ. ವಿವಾಹಿತ ಪಂಜಾಬಿ ಜೋಡಿಗಳು ನರ್ತನ ಮಾಡುವುದು ಸಾಮಾನ್ಯ. ಗಂಡು ಎರಡೂ ಕೈಗಳನ್ನು ಎತ್ತಿಕೊಂಡು ಪಂಜಾಬಿ ಶೈಲಿಯಲ್ಲಿ ಕುಣಿದರೆ, ಹೆಂಡತಿ ಸ್ತ್ರೀಶೈಲಿಯಲ್ಲಿ ಕುಣಿಯುತ್ತಾಳೆ.
ಗಂಡಸರು ಮಾಡುವ ಪಂಜಾಬಿ ನೃತ್ಯಕ್ಕೆ ಭಾಂಗ್ಡಾ ಅಥವಾ ಭಾಂಗ್ರಾ ಎನ್ನಲಾಗುತ್ತದೆ ಮತ್ತು ಹೆಂಗಸರ ನೃತ್ಯಕ್ಕೆ ಗಿದ್ದಾ ಎನ್ನಲಾಗುತ್ತದೆ.
ಪಂಜಾಬಿ ಹೆಂಗಸರ ನೃತ್ಯಗಳು
ಬದಲಾಯಿಸಿ- ಸಮ್ಮಿ
- ಗಿದ್ದಾ
- ಜಾಗೊ
- ಕಿಕ್ಲಿ
- ಲುದ್ದಿ
- ಧಮಾಲ್ ಡ್ಯಾನ್ಸ್
- ಭಾಂಗ್ರಾ
- ಮಲ್ವಾಯಿ ಗಿದ್ದಾ
- ಝುಮರ್
- ಲುದ್ದಿ
- ಜಲ್ಲಿ
- ಮಿರ್ಜಾ
- ಸಿಯಾಲ್ ಕೋಟಿ
- ಜುಗ್ನಿ
- ಖಿಚಾನ್
- ಧಮಾಲ್
- ದಂಕರಾ
- ಖಟ್ಕಾ (ಖಡ್ಗ ನೃತ್ಯ)
ಪಂಜಾಬಿ ಗಂಡು ಹೆಣ್ಣಿನ ನೃತ್ಯಗಳು
ಬದಲಾಯಿಸಿ- ಭಾಂಗ್ರಾ
- ಕರ್ತಿ
- ಜಿನ್ದುವಾ
- ದಂಡಾಸ್
ಉಲ್ಲೇಖಗಳು
ಬದಲಾಯಿಸಿ- ↑ "Folk Dances of Punjab". Archived from the original on 2017-01-10. Retrieved 2016-07-10.
- ↑ Dances Of Punjab, Punjabiculture.com
ಹೊರಕೊಂಡಿಗಳು
ಬದಲಾಯಿಸಿ- Glossary of different Punjabi Folk Dances Archived 2016-07-30 ವೇಬ್ಯಾಕ್ ಮೆಷಿನ್ ನಲ್ಲಿ.
- Folk dances of Punjab Archived 2012-04-19 ವೇಬ್ಯಾಕ್ ಮೆಷಿನ್ ನಲ್ಲಿ.
- Activities in Lahore and Folk Dances
- Folk Dances in Punjab Archived 2013-01-23 ವೇಬ್ಯಾಕ್ ಮೆಷಿನ್ ನಲ್ಲಿ.
- Gatka Archived 2013-04-01 ವೇಬ್ಯಾಕ್ ಮೆಷಿನ್ ನಲ್ಲಿ.
- Punjabi Dances, Bharathonline.com