ಪಂಜಾಬಿ ವಿಕಿಪೀಡಿಯ
ಪಂಜಾಬಿ ವಿಕಿಪೀಡಿಯ ( ಪಂಜಾಬಿ:ਪੰਜਾਬੀ ਵਿਕੀਪੀਡੀਆ ) ಉಚಿತ ವಿಶ್ವಕೋಶವಾದ ವಿಕಿಪೀಡಿಯಾದ ಪಂಜಾಬಿ ಭಾಷೆಯ ಆವೃತ್ತಿಯಾಗಿದೆ. [೧] [೨] ಎರಡು ಪಂಜಾಬಿ ವಿಕಿಪೀಡಿಯಾ ಆವೃತ್ತಿಗಳಿವೆ. ಪೂರ್ವ ಪಂಜಾಬಿ ವಿಕಿಪೀಡಿಯಾ ( ಗುರುಮುಖಿ ಲಿಪಿಯಲ್ಲಿ) ಮತ್ತು ಪಶ್ಚಿಮ ಪಂಜಾಬಿ ವಿಕಿಪೀಡಿಯ ( ಶಹಮುಖಿ ಲಿಪಿಯಲ್ಲಿ).
| |
ಜಾಲತಾಣದ ವಿಳಾಸ | pa pnb |
---|---|
ವಾಣಿಜ್ಯ ತಾಣ | No |
ತಾಣದ ಪ್ರಕಾರ | Internet encyclopedia project |
ನೊಂದಾವಣಿ | Optional |
ಲಭ್ಯವಿರುವ ಭಾಷೆ | Punjabi |
ಬಳಕೆದಾರರು(ನೊಂದಾಯಿತರೂ ಸೇರಿ) | Western: ಟೆಂಪ್ಲೇಟು:NUMBEROF Eastern: ಟೆಂಪ್ಲೇಟು:NUMBEROF |
ವಿಷಯದ ಪರವಾನಗಿ | Creative Commons Attribution-ShareAlike 3.0 and GFDL, Media licensing varies |
ಒಡೆಯ | Wikimedia Foundation |
ಪ್ರಾರಂಭಿಸಿದ್ದು | ಅಕ್ಟೋಬರ್ 24, 2008 ಜೂನ್ 3, 2002 (Eastern Punjabi) | (Western Punjabi)
ಸಧ್ಯದ ಸ್ಥಿತಿ | Active |
ಪೂರ್ವ ಪಂಜಾಬಿ ಆವೃತ್ತಿ
ಬದಲಾಯಿಸಿಪೂರ್ವ ಪಂಜಾಬಿ ಆವೃತ್ತಿಯ ಡೊಮೇನ್ ಜೂನ್ 3, 2002 ರಂದು ಅಸ್ತಿತ್ವಕ್ಕೆ ಬಂದಿತು [೨] [೩] ಆದರೆ ಮೊದಲ ಮೂರು ಲೇಖನಗಳನ್ನು ಆಗಸ್ಟ್ 2004 ರಲ್ಲಿ ಮಾತ್ರ ಬರೆಯಲಾಗಿದೆ [೪] ಜುಲೈ 2012 ರಲ್ಲಿ, ಇದು 2,400 ಲೇಖನಗಳನ್ನು ತಲುಪಿದೆ.
ಆಗಸ್ಟ್ 2012 ರಿಂದ, ಇದು ಪ್ರಪಂಚದಾದ್ಯಂತ ಸುಮಾರು 2.6 ಕೋಟಿ ಓದುಗರನ್ನು ಹೊಂದಿದೆ. [೫]
ಮೊದಲ ಪಂಜಾಬಿ ವಿಕಿಪೀಡಿಯ ಕಾರ್ಯಾಗಾರವನ್ನು ಜುಲೈ 28, 2012 ರಂದು ಲುಧಿಯಾನದಲ್ಲಿ ಆಯೋಜಿಸಲಾಯಿತು. [೧] ನಂತರ ಆಗಸ್ಟ್ 16, 2012 ರಂದು ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಲ್ಲಿ [೬] ವಿಕಿ ಸಂಪಾದಿಸುವುದು ಮತ್ತು ಸೇರಿಸುವುದು ಹೇಗೆ ಎಂದು ಜನರಿಗೆ ತಿಳಿಸಲು ಅಭಿಯಾನವೊಂದನ್ನು ಕೈಗೊಳ್ಳಲಾಗಿತ್ತು.
ಈ ವಿಕಿಪೀಡಿಯವನ್ನು ಸುಧಾರಿಸಲು ಮತ್ತು ಸಂಪಾದಕರ ಸಂಖ್ಯೆಯನ್ನು ಹೆಚ್ಚಿಸಲು ವಿಕಿ-ಘಟನೆಗಳು ಮತ್ತು ಕಾರ್ಯಾಗಾರಗಳನ್ನು ನಿಯಮಿತವಾಗಿ ನಡೆಸಲಾಗುತ್ತದೆ. ಅಕ್ಟೋಬರ್ 2015 ರಲ್ಲಿ ಅಮೃತಸರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೆಮಿನಾರ್ ಆಯೋಜಿಸಲಾಗಿದ್ದು, 17 ಶಾಲೆಗಳ 148 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಲ್ಲಿ ವಿಕಿಪೀಡಿಯ ಬಗ್ಗೆ ಜಾಗೃತಿ ಮೂಡಿಸುವ ವಿಚಾರ ಸಂಕಿರಣದ ಗುರಿ. [೭]
ಗುರುಮುಖಿ ಪಂಜಾಬಿ ವಿಕಿಪೀಡಿಯಾದಲ್ಲಿ ಪ್ರಸ್ತುತ 34,505 ಲೇಖನಗಳಿವೆ.
ಪಶ್ಚಿಮ ಪಂಜಾಬಿ ಆವೃತ್ತಿ
ಬದಲಾಯಿಸಿಪಶ್ಚಿಮ ಪಂಜಾಬಿ ಆವೃತ್ತಿಯನ್ನು 24 ಅಕ್ಟೋಬರ್ 2008 ರಂದು ವಿಕಿಮೀಡಿಯ ಇನ್ಕ್ಯುಬೇಟರ್ ಮೂಲಕ ಪ್ರಾರಂಭಿಸಲಾಯಿತು, ಮತ್ತು ಅದರ ಡೊಮೇನ್ ಆಗಸ್ಟ್ 13, 2009 ರಂದು ಅಸ್ತಿತ್ವಕ್ಕೆ ಬಂದಿತು. ಈ ಯೋಜನೆಗೆ ಇಸ್ಲಾಮಾಬಾದ್‌ನ ಕಾಲೇಜು ಪ್ರಾಧ್ಯಾಪಕ ಖಾಲಿದ್ ಮಹಮೂದ್ ಪ್ರವರ್ತಕನಾಗಿದ್ದ. [೮] ಇದನ್ನು ಅನ್ವರ್ ಮಸೂದ್ ಪ್ರಾರಂಭಿಸಿದರು
ಪಶ್ಚಿಮ ಪಂಜಾಬಿ ವಿಕಿಪೀಡಿಯಾದಲ್ಲಿ ಪ್ರಸ್ತುತ 53,508 ಲೇಖನಗಳಿವೆ.
ಇವನ್ನೂ ನೋಡಿ
ಬದಲಾಯಿಸಿ- ಹಿಂದಿ ವಿಕಿಪೀಡಿಯ
- ಉರ್ದು ವಿಕಿಪೀಡಿಯ
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "Punjabi Wikipedia workshop in Delhi on 27th, Ludhiana on 28th of July". July 27, 2012. [YesPunjab.com]. Archived from the original on August 28, 2012. Retrieved October 14, 2012.
- ↑ ೨.೦ ೨.೧ "Contribute to Wikipedia Punjabi, says representative". Tribune India. Ludhiana. July 29, 2012. Retrieved October 10, 2012.
- ↑ pa:Special:Permalink/1
- ↑ Wikipedia:Multilingual statistics (2004)
- ↑ "Articles can be compiled in the Punjabi Version of Wikipedia". News. [PunjabNewsExpress]. August 18, 2012. Archived from the original on October 16, 2012. Retrieved October 14, 2012.
- ↑ "Punjabi Wikipedia Workshop at Punjabi University, Patiala". News. [CIS-India.org]. September 28, 2012. Retrieved October 14, 2012.
- ↑ "148 students attend Maa Boli Mela". Archived from the original on 3 ಸೆಪ್ಟೆಂಬರ್ 2019. Retrieved 24 July 2016.
- ↑ Erhart, Ed (31 October 2016). "Remembering Khalid Mahmood". Wikimedia Blog. Retrieved 8 January 2016.