ಪಂಚತಂತ್ರ ಆನ್ ಲ್ವೆನ್ ತಂತ್ರಾಂಶ್
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
'ಪಂಚತಂತ್ರ ಆನ್ ಲೈನ್ ತಂತ್ರಾಂಶ''''
ಗ್ರಾಮ ಪಂಚಾಯ್ತಿಯ ವ್ಯವಹಾರಗಳು ಹಾಗೂ ಭೂ ದಾಖಲೆಗಳ ನಿರ್ವಹಣೆಗೆ ಸಂಭಂದಿಸಿದಂತೆ ನಡೆಯುವ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಪಂಚತಂತ್ರ ಎಂಬ ಹೊಸ ಸಾಫ್ಟ್ ವೇರ್ ಅನ್ನು ಪರಿಚಯಿಸಿದೆ. ಪಂಚಾಯತ್ ರಾಜ್ ಇಲಾಖೆ ಹಾಗೂ ರಾಷ್ರೀಯ ಮಾಹಿತಿ ಕೇಂದ್ರ(NIC) ಇವರು ಜಂಟಿಯಾಗಿ ಅಭಿವೃದ್ದಿ ಪಡಿಸಿರುವ ಈ ಸಾಫ್ಟ್ವೇರ್ http://stg1.kar.nic.in/panchatantra Archived 2010-08-19 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬ URL ನಲ್ಲಿ ಲಭ್ಯವಿದ್ದು ಗ್ರಾಮ ಪಂಚಾಯ್ತಿಯ ವ್ಯವಹಾರಗಳ ಸಮಗ್ರ ಮಾಹಿತಿ, ಟೆಂಡರ್ ಪ್ರಕ್ರಿಯೆ, ಭೂ ದಾಖಲೆಗಳು, ಹಿಡುವಳಿದಾರರ ವಿವರಗಳು, ಸ್ವಾಧೀನತೆ ಕುರಿತಾದ ಹತ್ತು ಹಲವಾರು ಮಾಹಿತಿಗಳನ್ನು ಒಳಗೊಂಡಿದೆ. ಇದರಿಂದಾಗಿ ಅಂತರ್ಜಾಲದ ಮೂಲಕ ವಿದ್ಯಾವಂತರಿಗೆ ಭೂ ದಾಖಲೆಗಳ ಪರಿಶೀಲನೆ, ಮಾಹಿತಿ ಪಡೆಯುವಿಕೆ ಮುಂತಾದವುಗಳು ಸುಲಭವಾಗಲಿದೆ. ಮಾತ್ರವಲ್ಲ ಆನ್ ಲೈನ್ ಮುಖಾಂತರ ಕಂದಾಯ ಪಾವತಿಸುವ ಸೌಲಭ್ಯವು ಕೂಡ ಈ ವೆಬ್ ಸೈಟ್ ನಲ್ಲಿ ದೊರೆಯಲಿದೆ.
ಈಗಾಗಲೇ ಒಂದು ವರ್ಶದ ಹಿಂದೆಯೇ ಉಡುಪಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪಂಚತಂತ್ರ ವನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಇದೀಗ ಪ್ರಯೋಗ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ. ಇದೀಗ ರಾಜ್ಯಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ಗಣಕೀಕೃತಗೊಳಿಸಿ, ಪಾರದರ್ಶಕತೆಯನ್ನು ಅನ್ವಯಿಸಲು ಪಂಚತಂತ್ರ ಆನ್ ಲೈನ್ ತಂತ್ರಾಂಶವನ್ನು ಅನುಷ್ಟಾನಗೊಳಿಸಲಾಗಿದೆ.
ಸದ್ಯ ಗ್ರಾ.ಪಂ.ಗಳಿಗೆ ಚುನಾವಣೆ ನಡೆದು ನೂತನ ಸಮಿತಿ ಆಸ್ತಿತ್ವಕ್ಕೆ ಬಂದಿರುವುದು ಮಾತ್ರವಲ್ಲದೇ, ಗ್ರಾ.ಪಂ.ಗಳಿಗೆ ನೂತನವಾಗಿ ಪಂಚಾಯಿತಿ ಅಭಿವೃದ್ಡಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಈ ಸಂದರ್ಭದಲ್ಲಿ ಪಂಚತಂತ್ರ ಆನ್ ಲೈನ್ ತಂತ್ರಾಂಶದಿಂದ ಗ್ರಾ.ಪಂ.ಗಳ ಶೇ.೧೦೦ಕ್ಕೆ ೧೦೦ರಷ್ಟು ಪಾರದರ್ಶಕ ಆಡಳಿತವನ್ನು ತಳಮಟ್ಟದಲ್ಲಿ ನೀಡುತ್ತದೆ ಎಂಬುದು ಸರ್ಕಾರದ ಉದ್ದೇಶವಾಗಿದೆ.
ಪಂಚತಂತ್ರ ಆನ್ ಲೈನ್ ತಂತ್ರಾಂಶದಿಂದ ಗ್ರಾ.ಪಂ.ಗಳ ಸಂಪೂರ್ಣ ಮಾಹಿತಿ ದೊರೆಯಲಿದೆ. ಇದಕ್ಕಾಗಿ ನೀವು http://stg1.kar.nic.in/panchatantra Archived 2010-08-19 ವೇಬ್ಯಾಕ್ ಮೆಷಿನ್ ನಲ್ಲಿ. ತಾಣವನ್ನು ಸಂಪರ್ಕಿಸಬಹುದು.
ಪಂಚತಂತ್ರ ಎಂಬ ಕನ್ನಡ ಆಂಡ್ರಾಯ್ಡ್ ತಂತ್ರಾಂಶ ಲಭ್ಯವಿದ್ದು ಆಸಕ್ತರು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಉಪಯೋಗಿಸಬಹುದು. https://play.google.com/store/apps/details?id=ap290684.xrj