ನಂದಿತಾ

ಭಾರತೀಯ ಹಿನ್ನೆಲೆಗಾಯಕಿ
(ನ೦ದಿತಾ ಇಂದ ಪುನರ್ನಿರ್ದೇಶಿತ)

ನಂದಿತಾ ರವರು ಜನಿಸಿದ್ದು ಫೆಬ್ರವರಿ ೨೮, ೧೯೭೮ ರಂದು. ನಂದಿತಾ ರವರು ಭಾರತೀಯ ಪ್ರಸಿದ್ಧ ಗಾಯಕಿ. ಕನ್ನಡ ಚಲನಚಿತ್ರೋದ್ಯಮದಲ್ಲಿ ಹಿನ್ನೆಲೆ ಗಾಯಕಿಯಾಗಿ ಹೆಸರುವಾಸಿಯಾಗಿದ್ದ ನಂದಿತಾ ಅವರ ತಮಿಳು ಹಾಗೂ ತೆಲುಗು ಭಾಷೆಗಳಂತಹ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಹಬ್ಬ (೧೯೯೮) ಚಲನಚಿತ್ರದಿಂದ ನಂದಿತಾ ಅವರು ತಮ್ಮ ಹಿನ್ನೆಲೆ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈಕ ಹಾಡಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ನಂದಿತಾ
ಹಿನ್ನೆಲೆ ಮಾಹಿತಿ
ಜನನ (1978-02-28) ೨೮ ಫೆಬ್ರವರಿ ೧೯೭೮ (ವಯಸ್ಸು ೪೬)[]
ಮೂಲಸ್ಥಳಚನ್ನಾರಾಯಪಟ್ಟಣ, ಕರ್ನಾಟಕ, ಭಾರತ
ಸಂಗೀತ ಶೈಲಿಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ
ವೃತ್ತಿಗಾಯಕಿ
ವಾದ್ಯಗಳುಸಿಂಗರ್ ವಾಡಿಯಾಸ್ ವೋಕಲ್ಸ್, ವೀಣಾ
ಸಕ್ರಿಯ ವರ್ಷಗಳು1998–ಪ್ರಸ್ತುತ

ಆರಂಭಿಕ ಜೀವನ

ಬದಲಾಯಿಸಿ

ನಂದಿತಾ ಬೆಂಗಳೂರಿನಲ್ಲಿ ತನ್ನ ಬಿ.ಇ.ಯನ್ನು ಆರ್. ವಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಲ್ಲಿ ಮುಗಿಸಿದರು. ನಂತರ ಯಸಿಸ್ಕೊ ​​ವ್ಯವಸ್ಥೆಗಳೊಂದಿಗೆ ಸಾಫ್ಟ್ವೇರ್ ಇಂಜಿನಿಯರ್ ಆಗಿ ವೃತ್ತಿಯನ್ನು ಕಾರ್ಯನಿರ್ವಹಿಸಿದರು. ಆದರೆ, ಅವರಿಗೆ ಸಂಗೀತದ ಆಪಾರ ಪ್ರೀತಿಯಿಂದಾಗಿ ಅವರು ತನ್ನ ಮಾಹಿತಿ ತಂತ್ರಜ್ಞಾನ ವೃತ್ತಿಯನ್ನು ಬಿಟ್ಟುಕೊಟ್ಟರು. ನಂದಿತಾ ರವರು ವೀಣೆಯನ್ನು ನುಡಿಸುವುದರಲ್ಲಿ ಯು ಕೂಡ ಪ್ರವಿಣರು ಹಾಗೂ ವೀಣೆ ವಿಧಿವತ್ ಪರೀಕ್ಷೆಯನ್ನು ಕೂಡ ಬರೆದು ಉತ್ತಿರ್ಣರಾಗಿದ್ದಾರೆ.

ವೃತ್ತಿಜೀವನ

ಬದಲಾಯಿಸಿ

ನಂದಿತಾ ಇಳಯರಾಜ, ಮನೋಮೂರ್ತಿ, ಹಂಸಲೇಖಾ, ವಿ. ಮನೋಹರ್, ರಾಜೇಶ್ ರಾಮನಾಥ್ ಹಾಗೂ ಹಲವು ಸಂಗೀತದ ಉದ್ಯಮದಲ್ಲಿ ಅನೇಕ ದೊಡ್ಡ ಹೆಸರುಗಳೊಂದಿಗೆ ಕೆಲಸ ಮಾಡಿದ್ದಾರೆ. ಸತತ ಮೂರು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದುಕೊ೦ಡಿದ್ದಾರೆ. ಅವರು ಸ್ವತಃ ಕಲಾವಿದರಾಗಿ ಡಬ್ಬಿಂಗ್ ಮಾಡಿದ್ದಾರೆ. ನನ್ನ ಪ್ರೀತಿಯ ಹುಡುಗಿ, ಪ್ಯಾರಿಸ್ ಪ್ರಣಯ ನಂತರ ಹಲವು ಯಶಸ್ವೀ ಚಿತ್ರಗಳಿಗಾಗಿ ಅವರು ಡಬ್ಬಿಂಗ್ ಮಾಡಿದ್ದಾರೆ.

ಗಮನಾರ್ಹ ಹಾಡುಗಳು

ಬದಲಾಯಿಸಿ

ಅವರ ಕೆಲವು ಹಾಡುಗಳು

  • "ಮೂಡಲ್ ಕುಣಿಗಲ್ ಕೆರೆ" (ನನ್ನ ಪ್ರೀತಿಯ ಹುಡುಗಿ)
  • "ಜೆರ್ಜಿಂಬೆ ಜೀರ್ಜಿಂಬೆ" (ಮನಸೆಲ್ಲಾ ನೀನೇ)
  • "ಅಕಾಶಕೆ ಒಬ್ಬಾ ಸೂರ್ಯ" (ಜೋಗುಳ)
  • "ಎದೆ ತುಂಬಿ ಹಾಡಿದೆನು" (ಪ್ಯಾರಿಸ್ ಪ್ರಣಯ)
  • "ಮೊದ ಮೊದಲು" (ಯಶ್ವಂತ)
  • "ಅಕ್ಕ" (ಕಲ್ಲರಳಿ ಹೂವಾಗಿ)
  • "ಸಿಹಿ ಗಾಳಿ" (ಆ ದಿನಗಳು)
  • "ಕರಿಯಾ ಐ ಲವ್ ಯು" (ದುನಿಯಾ)
  • " ಓ ಕನಸಾ ಜೋಕಾಲಿ" (ಇಂತಿ ನಿನ್ನ ಪ್ರೀತಿಯ)
  • "ಬಾರಾ ಸನಿಹಕೆ ಬಾರಾ" (ಆಪ್ತಮಿತ್ರ)

ಪ್ರಶಸ್ತಿಗಳು

ಬದಲಾಯಿಸಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು

  • ೨೦೦೨: ಗಂಧದ ಗೊಂಬೆಯಿಂದ ಚಲನಚಿತ್ರದಿಂದ "ಬಿಳಿ ಬಣ್ಣದ ಗಿಣಿ" ಗಾಗಿ ಅತ್ಯುತ್ತಮ ಗಾಯನಕ್ಕಾಗಿ ಮಹಿಳಾ ಹಿನ್ನೆಲೆ ಗಾಯಕಿ ಎಂಬ ಪ್ರಶಸ್ತಿ.
  • ೨೦೦೩: ಪ್ಯಾರಿಸ್ ಪ್ರಣಯ ಚಲನಚಿತ್ರದಿಂದ " ಎದೆ ತುಂಬಿ ಹಾಡಿದೆನು"ಗಾಯನಕ್ಕಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಎಂಬ ಪ್ರಶಸ್ತಿ.
  • ೨೦೦೪: ಜೋಗುಳ ಚಲನಚಿತ್ರದಿಂದ "ಆಕಾಶ್ಕೆ ಒಬ್ಬಾ" ಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಎಂಬ ಪ್ರಶಸ್ತಿ.
  • ೨೦೦೮: ಎಸ್.ಎಪ್.ಎಮ್ ಕಲಾ ಅವಾರ್ಡ್ಸ್ನಲ್ಲಿ ಮೆಚ್ಚಿನ ಸಿಂಗರ್.[]

ಉಲ್ಲೇಖಗಳು

ಬದಲಾಯಿಸಿ
  1. http://www.bharatstudent.com/. "Happy Birthday Nanditha!!! - Sandalwood News & Gossips". Bharatstudent. Archived from %5bhttps://web.archive.org/web/20181112060948/http://www.bharatstudent.com/cafebharat/view_news-Kannada-News_and_Gossips-5,41199.php Archived%5d 2018-11-12 %5b%5bವೇಬ್ಯಾಕ್ ಮೆಷಿನ್%5d%5d ನಲ್ಲಿ.%5b%5bವರ್ಗ:ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು%5d%5d the original on 2018-11-12. Retrieved 2018-09-22. {{cite web}}: Check |url= value (help); External link in |last= (help)
  2. http://www.radioandmusic.com/content/editorial/news/raghu-dixit-nandita-win-sfm-kalaa-awards


http://www.bharatstudent.com/cafebharat/view_news-Kannada-News_and_Gossips-5,41199.php Archived 2018-11-12 ವೇಬ್ಯಾಕ್ ಮೆಷಿನ್ ನಲ್ಲಿ.

"https://kn.wikipedia.org/w/index.php?title=ನಂದಿತಾ&oldid=1251028" ಇಂದ ಪಡೆಯಲ್ಪಟ್ಟಿದೆ