ನ್ಯೂ ಮೆರೀನ್ ಲೈನ್ಸ್, ಮುಂಬೈ

ದಕ್ಷಿಣ ಬೊಂಬಾಯಿನ ಅತಿ ಹೆಚ್ಚು ಜನಸಂದಣೆಯ ಹಾಗೂ ವ್ಯವಸ್ಥಿತವಾದ, ಅಚ್ಚುಕಟ್ಟಾದ ಸುಂದರ ಸ್ಥಳಗಳಲ್ಲಿ ಇದೊಂದು. ಇದೇ ಹೆಸರಿನ ಒಂದು ರೈಲ್ವೆ ನಿಲ್ದಾಣವೂ ಇದೆ. ಇದು 'ಪಶ್ಚಿಮ ರೈಲ್ವೆ'ಗೆ ಸೇರಿದೆ. ಸನ್. ೧೮೦೦ ರಲ್ಲಿ 'ಮೆರಿನ್ ಬ್ಯಟಾಲಿಯನ್ ರೈಲ್ವೆ 'ಎಂಬ ಮಿಲಿಟರಿ ಸಂಘಟನೆ ನಿರ್ಮಾಣ ಕಾರ್ಯವನ್ನು ಕಗೆತ್ತಿಕೊಂಡಿತು. ಕಾಲಾಂತರದಲ್ಲಿ ಈ ಮೆರೀನ್ ಬ್ಯಟಾಲಿಯನ್ ಲಿನ್ಸ್ ಮಿಲಿಟಾರಿ ಎಸ್ಟಾಬ್ಲಿಶ್ ಮೆಂಟ್ ರೆಸಿಡೆನ್ಷಿಯಲ್ ಕ್ವಾರ್ಟರ್ಸ್ ಆಗಿಪರಿವರ್ತನೆ ಗೊಂಡಿತು. (ಮೆಟ್ರೋ ಅಡ್ ಲ್ಯಾಬ್ಸ್) ಈಗಿನ ಮೆಟ್ರೋ ಟಾಕೀಸ್ ನಹತ್ತಿರದಿಂದ ದಕ್ಷಿಣಕ್ಕೆ ಮೆರೀನ್ ಲೈನ್ಸ್ ನ ವರೆಗೆ ಲೋಕಲ್ ಟ್ರೇನ್ ಗಳು ಚಲಿಸುತ್ತವೆ.

  • ಬಾಂಬೆ ಹಾಸ್ಪಿಟಲ್,
  • ಲಬರ್ಟಿ ಸಿನಿಮಾಗಳಿವೆ.

ಈಗ ಈ ರಸ್ತೆಯನ್ನು 'ವಿ. ಥಾಕರ್ಸೆ ರೋಡ್ 'ಎಂದು ಕರೆಯುತ್ತಾರೆ. ಸ್ಟೇಷನ್ ಬಳಿ 'ಹೆಸರಾಂತ ಪ್ರೊಮೆನೇಡ್ 'ಇದೆ.

ಅತಿ ಕಿಕ್ಕಿರಿದ ಜನಸಂದಣೆಯ ಭಾಗ

ಬದಲಾಯಿಸಿ

ಮೆರಿನ್ ಲೈನ್ಸ್ ನ ಪೂರ್ವಭಾಗದಲ್ಲಿ ಹೆಚ್ಚು ವಸತಿಗೃಹಗಳಿಲ್ಲ. ಆದರೆ ಇಲ್ಲಿಗೆ ಬಂದು ಹೋಗುವರ ಜನಸಂಖೆ ಅಪಾರ. ಆಫೀನಲ್ಲಿ ದುಡಿಯುವ ಕೆಲಸಗಾರರು, ಟ್ರೇಡರ್ಸ್ ಗಳು, ಶಾಪ್ ಕೀಪರ್ ಗಳು, ಈ ಜಾಗದಲ್ಲಿ ಕಿಕ್ಕಿರಿದು ಎಲ್ಲೆಡೆ ತುಂಬಿರುತ್ತಾರೆ. ವಿಶ್ವದ ಯಾವುದೇ ಅತಿ ಹೆಚ್ಚು ಕಿಕ್ಕಿರಿದ ಜನವಸತಿಯ ಕೇಂದ್ರಗಳಲ್ಲೊಂದು ಎಂದು ಗುರುತಿಸಲಾಗಿದೆ. ಒಂದು ಚದರ ಮೈಲಿಯಲ್ಲಿ ೨೯೧,೯೮೧ ಜನ ವಾಸಿಸುತ್ತಾರೆ. 'ನ್ಯೂ ಮೆರೀನ್ ಲೈನ್ಸ್,' ಎಂದು ಕರೆಯಲಾಗುವ ಭೋರ್ಗರೆಯುವ ಕಡಲು ಗುಂಟದ ರಸ್ತೆಯ ಎದುರಿಗೆ ಕಾಣುವ 'ಕ್ವೀನ್ ನೆಕ್ಲೇಸ್' ನ ಒಂದು ಭಾಗ ನಾಗರಿಕರಿಗೆ ಕಾಣಿಸುತ್ತದೆ. ಆಗಿನ ಕಾಲದಲ್ಲಿ ಸುಪ್ರಸಿದ್ಧವಾಗಿದ್ದ 'ಆರ್ಟ್ ಡೆಕೊ ವಾಸದ ಮನೆಗಳು' ಅರಬ್ಬೀ ಸಮುದ್ರದ ಎದುರಿಗೇ ನಿರ್ಮಿಸಲ್ಪಟ್ಟಿವೆ.

ಮ್ಯುನಿಸಿಪಲ್ ಕ್ರೆಮೆಟೋರಿಯಂ

ಬದಲಾಯಿಸಿ

ರೈಲ್ವೆ ನಿಲ್ದಾಣದ ಹತ್ತಿರವೇ 'ಮುಸಲ್ಮಾನರ ಸಿಮೆಟ್ರಿ' ಸಹ ಇದೆ. 'ಮುನಿಸಿಪಾಲಿಟಿ ಕ್ರೆಮೆಟೋರಿಯಮ್,' 'ಚಂದನ್ ವಾಡಿ' ಮೆರಿನ್ ಡ್ರೈವ್ ಫ್ಲೈ ಒವರ್ ಹತ್ತಿರವಿದೆ. ನ್ಯೂ ಮೆರಿನ್ ಲೈನ್ಸ್ ದಕ್ಷಿಣ ಮುಂಬಯಿನಲ್ಲಿದೆ. ಚರ್ಚ್ ಸ್ಟೇಷನ್ ಹತ್ತಿರದ ಕಚೇರಿಗಳು :

  • ಯು.ಟಿ. ಐ.
  • .ಆರ್. ಒ. ಸಿ.
  • ರೆಜಿಸ್ಟರ್ಡ್ ಕಂಪೆನಿಗಳು
  • ಕಸ್ಟಮ್ಸ್, ಮರಿನ್ ಮತ್ತು ಪ್ರೆವೆನ್ಶನ್ ವಿಂಗ್
  • ಇನ್ಕಮ್ ಟ್ಯಾಕ್ಸ್, ಆಪೀಸ್,
  • ಗವರ್ನ್ಮೆಂಟ್ ಕಚೇರಿಗಳು
  • ಏಜೆನ್ಸಿ ಗಳಿವೆ.

ದೂರದೂರದ ತಾಣಗಳಿಗೆ ರೈಲುಸಂಚಾರ

ಬದಲಾಯಿಸಿ

ಚರ್ಚ್ ಗೇಟ್ ರೈಲ್ವೆ ನಿಲ್ದಾಣದಿಂದ ಉತ್ತರ ಮುಂಬಯಿ ಕಡೆಗೆ ೪ ರೈಲ್ವೆ ಕಂಬಿಗಳ ಟ್ರಾಕ್ ಇದೆ. ಎರಡು ವೇಗವಾಗಿ, ಮತ್ತು ಎರಡು ಕಡಿಮೆ ವೇಗದಲ್ಲಿ ಹೋಗುವ ಲೋಕಲ್; ರೈಲ್ ಗಳಿವೆ. ಬಾಂದ್ರ, ಅಂಧೇರಿ, ಕಾಂದಿವಲಿ, ಬೋರಿವಲಿ, ವಲ್ಸಾಡ್, ಮೊದಲಾದ ದೂರದ ಸಬರ್ಬ್ ಗಳಿಗೆ ಲೋಕಲ್ ರೈಲುಗಳು ಪ್ರವಹಿಸುತ್ತವೆ.