[ನ್ಯಾಯದೇವತೆ ನ್ಯಾಯದ ಪ್ರತೀಕ. ಕೈಯಲ್ಲಿ ಹಿಡಿದಿರುವ ಕತ್ತಿ ನ್ಯಾಯಾಲಯದ ಪ್ರಶ್ನಾತೀತ ಅಧಿಕಾರವನ್ನು ಸೂಚಿಸಿದರೆ, ತಕ್ಕಡಿಯು ವಸ್ತುನಿಷ್ಠತೆಯನ್ನು ಮತ್ತು ಕಣ್ಣಿಗೆ ಕಟ್ಟಿದ ಬಟ್ಟೆ ನ್ಯಾಯದ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಸೂಚಿಸುತ್ತದೆ.</ref>
  • ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್- "ಕಾನೂನಿನ ಆಡಳಿತವು ಒಬ್ಬ ಮನುಷ್ಯನ ಆಡಳಿತಕ್ಕಿಂತ ಉತ್ತಮ" ಎಂದು ಹೇಳಿದ್ದಾನೆ. ಆದುದರಿಂದ ನಿಯಮಗಳ ಕ್ರಮಬದ್ಧ ಜೋಡಣೆಯೇ ಕಾನೂನು ಎನ್ನಲಾಗಿದೆ. ಕಾನೂನಿಗೆ ನ್ಯಾಯದೇವತೆ[೧][೨]ಯೇ ಅಧಿದೇವತೆ. ಕುಟುಂಬದಲ್ಲಿ ತಾಯಿಯೊಬ್ಬಳು ನಿರ್ವಹಿಸುವ ಪಾತ್ರವನ್ನು, ಸಮಾಜದ ನ್ಯಾಯಾಂಗದಲ್ಲಿ ನ್ಯಾಯದೇವತೆ[೩][೪] ನಿರ್ವಹಿಸುತ್ತಾಳೆ. ನ್ಯಾಯದ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಯಾರೂ ಮೇಲಲ್ಲ, ಯಾರೂ ಕೀಳಲ್ಲ. ತಪ್ಪು ಮಾಡಿದವನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ.
  • ಕುವೆಂಪು ಅವರು ಹೇಳಿರುವ ಪಂಚಮಂತ್ರ ಸೂತ್ರಗಳಾದ- ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ-ನ್ಯಾಯಾಲಯದಲ್ಲಿ ಅಳವಡಿಸಲ್ಪಟ್ಟಿವೆ. ಅಂದರೆ ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; "ಮನುಜಮತ". ಆ ಪಥ ಈ ಪಥ ಅಲ್ಲ; "ವಿಶ್ವಪಥ". ಆ ಒಬ್ಬರ ಈ ಒಬ್ಬರ ಉದ್ದಾರ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದ್ದಾರ ಅದುವೇ, "ಸರ್ವೋದಯ". ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; "ಸಮನ್ವಯ"ಗೊಳ್ಳುವುದು. ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ "ಪೂರ್ಣದೃಷ್ಟಿ".
  • ನ್ಯಾಯದೇವತೆ ಕುಳಿತಿರುವ ಭಂಗಿ ಆತ್ಮವಿಶ್ವಾಸ ಪ್ರತೀಕವಾಗಿದೆ. ಕೈಯಲ್ಲಿ ಹಿಡಿದಿರುವ ಕತ್ತಿ ನ್ಯಾಯಾಲಯದ ಪ್ರಶ್ನಾತೀತ ಅಧಿಕಾರವನ್ನು ಸೂಚಿಸುವುದರೊಂದಿಗೆ, ಎಚ್ಚರಿಕೆ ಮತ್ತು ರಕ್ಷಣೆಯನ್ನು ನೀಡುವಂತಿದೆ[೫]. ಕೈಯಲ್ಲಿ ಹಿಡಿದಿರುವ ತಕ್ಕಡಿಯು ವಸ್ತುನಿಷ್ಠತೆಯೊಂದಿಗೆ ನ್ಯಾಯಾಲಯದ ಸಮತೋಲನವನ್ನು ಕಾಯ್ದುಕೊಳ್ಳಲು ಉಪಕ್ರಮಿಸಿದೆ. ಕಣ್ಣಿಗೆ ಕಟ್ಟಿದ ಬಟ್ಟೆ ನ್ಯಾಯದ ಮುಂದೆ ಎಲ್ಲರೂ ಸಮಾನರು, ಯಾರ ಮರ್ಜಿ, ವಶೀಲಿಗೂ ತಾನೂ ಮರುಳಾಗುವವಳಲ್ಲ ಎಂಬುದನ್ನು ಧೃಡಪಡಿಸುತ್ತಿದೆ.
  • ನ್ಯಾಯದೇವತೆಯ ಪರಿಕಲ್ಪನೆ ವಿಶಿಷ್ಟವಾದುದಾಗಿದೆ. ತಪ್ಪು ಮಾಡಿದವರು ಯಾರೇ ಆಗಲಿ ನನ್ನ ಬಳಿ ಬಂದರೆ ಅವರ ತಲೆ ಕಾಯ್ದು ರಕ್ಷಿಸುವ, ಸಂತೈಸುವ ಮನಃಸ್ಥಿತಿ ತಾಯಿಯಾದವಳಿಗೆ ಮಾತ್ರ ಸಾಧ್ಯವಾಗುವಂತಹುದು. ಹಾಗಾಗಿ ನ್ಯಾಯದೇವತೆ ಮಾತೃಸ್ವರೂಪಿಣಿಯಾಗಿ ಇಲ್ಲಿ ಕಾಣಸಿಗುತ್ತಾಳೆ. ಸಾಕ್ಷಿಗಳ ಆಧಾರದ ಮೇಲೆ ಈಗೀಗ ತೀರ್ಪು ಹೊರಬೀಳುತ್ತಿರುವುದರಿಂದ, ನ್ಯಾಯ ಸಿಗದವರು ನ್ಯಾಯದೇವತೆಗೆ ಅಂಧತ್ವ ಪ್ರಾಪ್ತವಾಗಿದೆಯೆಂದು ಹೇಳುತ್ತಾರೆ.

ಸತ್ಯವನ್ನು ಅಸತ್ಯ ಮಾಡುವ ನ್ಯಾಯವಾದಿಗಳು ಬದಲಾಯಿಸಿ

ನ್ಯಾಯಾಧೀಶರು ಮತ್ತು ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿರುವ ನ್ಯಾಯದೇವತೆ ! ಭಾರತೀಯ ಪರಂಪರೆಗನುಸಾರ ಯಾರೇ ಒಬ್ಬ ದಾರಿ ತಪ್ಪಿದ ವ್ಯಕ್ತಿ ಸಮಾಜ ಭಯದಿಂದ ಕೆಲವು ಸಮಯದ ನಂತರ ವಾದರೂ ಸರಿ ದಾರಿಗೆ ಬಂದಾನು; ಏಕೆಂದರೆ ಕೊನೆಗೆ ಮನುಷ್ಯ ಅಂದರೆ ಒಂದು ಸಾಮಾಜಿಕ ಪ್ರಾಣಿಯಾಗಿದೆ. ಈ ಮನುಷ್ಯರಿಗಾಗಿ ದಂಡವಿಧಾನ (ಕಾನೂನು) ಬಂದರೆ ಅದರಲ್ಲಿ ಉಪಯೋಗಿಸಿದ ಶಬ್ದಗಳಿಗೆ ಮಹತ್ವ ಬರುತ್ತದೆ. ಆಮೇಲೆ ಆ ಶಬ್ದಗಳ ಅರ್ಥವನ್ನು ವಿವರಿಸಿ ಹೇಳಲು ನ್ಯಾಯವಾದಿಗಳ ಅವಶ್ಯಕತೆಯಿದೆ. ಅವರು ನ್ಯಾಯಾಧೀಶರ ಮುಂದೆ ತಮಗೆ ಬೇಕಾಗಿರುವ ಹಾಗೂ ಅಷ್ಟೇ ಪುರಾವೆಗಳನ್ನು ಮಂಡಿಸಬಹುದು ಹಾಗೂ ನ್ಯಾಯದೇವತೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿರುವುದರಿಂದ ಕುರುಡಿಯಾಗಿರುತ್ತಾಳೆ. ಆ ಕೃತಕ ಕುರುಡಿಗೆ ಇತರ ಯಾವುದೇ ವಿಷಯಗಳ ವಿಚಾರ ಮಾಡಲು ಬರುವುದಿಲ್ಲ. ಕೊನೆಗೆ ನ್ಯಾಯ ವಾದಿಗಳು ತನ್ನ ಕಕ್ಷಿದಾರನನ್ನು ಮುಕ್ತಗೊಳಿಸುವ ಕಾರ್ಯವನ್ನು ಅವನಿಂದ ದೊಡ್ಡ ಮೊತ್ತದ ಶುಲ್ಕವನ್ನು ಪಡೆದು ಪ್ರಾಮಾಣಿಕತೆಯಿಂದ ಮಾಡುತ್ತಾರೆ. ಇಲ್ಲಿ ವಾಸ್ತವವು ಕಣ್ಮುಂದೆ ಇದ್ದರೂ ಅದಕ್ಕೆ ಏನೂ ಬೆಲೆ ಇರುವುದಿಲ್ಲ. ಸ್ವಾತಂತ್ರ್ಯಾನಂತರ ಹೀಗೆಯೇ ನಡೆಯುತ್ತಿದೆ.

ಅಂತರ್ಮನಸ್ಸಿನಿಂದ ತೀರ್ಪು ಬದಲಾಯಿಸಿ

ಅಂತರ್ಮನಸ್ಸಿನಿಂದ ತೀರ್ಪು ತೆಗೆದುಕೊಳ್ಳುವುದು ನ್ಯಾಯದೇವತೆಯ ಸತ್ಯ ರೂಪವಾಗಿರುವುದು !ವಾಸ್ತವದಲ್ಲಿ ನೋಡುವಾಗ ನ್ಯಾಯ ದೇವತೆ ಕುರುಡಿಯಾಗಿರುವುದರಿಂದ ಅವಳು ಆರೋಪಿಯ ಸಾಮಾಜಿಕ, ಆರ್ಥಿಕ ಅಥವಾ ಇತರ ಯಾವುದೇ ಸ್ಥಾನವನ್ನು ನೋಡದೆ ಸತ್ಯವನ್ನು ಶೋಧಿಸಿ ಅಪರಾಧಿಗೆ ಮಾಡಿದ ಅಪರಾಧಕ್ಕೆ ಸಂಬಂಧಿಸಿ ನಿರ್ಣಯ ನೀಡಬೇಕಾಗುತ್ತದೆ. ಆದ್ದರಿಂದ ಅವಳ ಮುಂದೆ ಬಂದಿರುವ ಪುರಾವೆಗಳಿಗಿಂತಲೂ ತನ್ನ ಶುದ್ಧ ಮನಸ್ಸಿನ, ಅಂದರೆ ಅಂತರ್ಮನಸ್ಸಿನ ನಿರ್ಣಯ ಏನು ಸಿಗುತ್ತದೆಯೋ, ಅದಕ್ಕಾಗಿ ಅವಳು ಎಲ್ಲ ಇಂದ್ರಿಯಗಳನ್ನು ಮುಚ್ಚಿಟ್ಟು ತನ್ನ ಮನಸ್ಸಿನಲ್ಲಿ ಯಾವುದೇ ತಪ್ಪು ವಿಚಾರಗಳು ಬರದಂತೆ ನೋಡಲಿಕ್ಕಿರುತ್ತದೆ[೬].

ಉಲ್ಲೇಖ ಬದಲಾಯಿಸಿ

<ref>Luban, Law's Blindfold, 23

  1. >> ವಿಶೇಷ› ಅಂತರಾಳ
  2. "ಆರ್ಕೈವ್ ನಕಲು". Archived from the original on 2015-04-18. Retrieved 2015-06-20.
  3. ದೊಡ್ಡ ಮನೆಯ ನ್ಯಾಯದೇವತೆ ಕಣ್ಣು ತೆರೆದು ನೋಡಿಯಾಳೇ Read more at: http://kannada.oneindia.com/column/ravibelagere/2003/010903justice.html
  4. http://kannada.oneindia.com/column/ravibelagere/2003/010903justice.html
  5. http://avadhimag.com/2013/05/14/%E0%B2%95%E0%B3%87%E0%B2%B6%E0%B2%B5-%E0%B2%B0%E0%B3%86%E0%B2%A1%E0%B3%8D%E0%B2%A1%E0%B2%BF-%E0%B2%B9%E0%B2%82%E0%B2%A6%E0%B3%8D%E0%B2%B0%E0%B2%BE%E0%B2%B3-%E0%B2%85%E0%B2%B5%E0%B2%B0-%E0%B2%95/
  6. https://ml-in.facebook.com/MANJULA.HINDU/posts/308841412606579