ನ್ಯಾನೊತಂತ್ರಜ್ಞಾನದ ಬಳಕೆಗಳ ಪಟ್ಟಿ
ನ್ಯಾನೊ ತಂತ್ರಜ್ಞಾನವು ದೊಡ್ಡ ಪ್ರಮಾಣದ ವಸ್ತುಗಳ ಸಮೂಹದ ಒಂದು ಸಾಮಾನ್ಯ ಅಂಶವಾಗಿದೆ. ಸಮೂಹ ಮತ್ತು ಅಭಿವೃದ್ಧಿಪಡಿಸಿದ ಉತ್ಪನ್ನಗಳು ಅವಲಂಬಿಸುವ ಒಂದು ವಸ್ತುವಿನ ಭೌತಿಕ ಗುಣಲಕ್ಷಣಗಳನ್ನು ಅತ್ಯಂತ ಕಡಿಮೆ ಗಾತ್ರಕ್ಕೆ ಇಳಿಸುವ ಪ್ರಕ್ರಿಯೆ ಇದಾಗಿದೆ.ಸುಮಾರು ಒಂದು ನೂರು ನ್ಯಾನೊ ಮೀಟರಿಗಿಂತ ಕಡಿಮೆ ಇರುವ ಸಣ್ಣ ವಸ್ತುಗಳು ನ್ಯಾನೊ ತಂತ್ರಜ್ಞಾನದ ಸಂಯುಕ್ತಕ್ಕೆ ಸೇರಿವೆ. ನ್ಯಾನೊ ಕಣಗಳು ತಾವು ಆಕ್ರಮಿಸಿಕೊಳ್ಳುವ ಸ್ಥಳದ ಬಗ್ಗೆ ಹೆಚ್ಚು ಗಮನ ವಹಿಸುವ ಗಾತ್ರದ ಅನುಪಾತದೊಂದಿಗೆ ಆ ಜಾಗೆಯಲ್ಲಿ ತಮ್ಮನ್ನು ತಾವು ಪ್ರತಿಷ್ಟಾಪಿಸಿ ಕೊಳ್ಳುವ ಗುಣಲಕ್ಷಣ ಹೊಂದಿವೆ. ನ್ಯಾನೊ ಎಂಬುದೇ ಅತ್ಯಂತ ಚಿಕ್ಕಭಾಗ ಅದರ ಕಣ ನ್ಯಾನೊ ಪರ್ಟಿಕಲ್ಸ್ ವ್ಯಾಪ್ತಿಗೆ ಸೇರುತ್ತದೆ. ಅವುಗಳ ದೃಷ್ಟಿಗೋಚರ ಲಕ್ಷಣಗಳೆಂದರೆ, ಉದಾಹರಣೆಗಾಗಿ ಅವುಗಳ ಪ್ರಕಾಶಮಾನದ ಶಕ್ತಿ ಅಥವಾ ಪ್ರದೀಪ್ತತೆಯು ಆ ಕಣಗಳ ವ್ಯಾಸವನ್ನು ಸೂಚಿಸುತ್ತವೆ. ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ತಂದಾಗ ನ್ಯಾನೊಕಣಗಳು ಆ ವಸ್ತುಗಳ ಯಾಂತ್ರಿಕ ಮತ್ತು ಭೌತಿಕ ಲಕ್ಷಣಗಳ ಮೇಲೆ ಪ್ರಬಲ ಪ್ರಭಾವ ಬೀರುತ್ತವೆ.ಅಂದರೆ ಆ ವಸ್ತುಗಳಲ್ಲಿ ಗಡಸುತನ ಅಥವಾ ಸ್ಥಿತಿಸ್ಥಾಪಕತ್ವ ಉಂಟಾಗುತ್ತದೆ. ಉದಾಹರಣೆಗೆ ಸಾಂಪ್ರದಾಯಕ ಪೊಲಿಮರ್ (ಸಣ್ಣ ಅಣುಗಳಿಂದ ಸಿದ್ದಪಡಿಸಿದ ದೊಡ್ಡ ವಸ್ತು)ಗಳನ್ನು ನ್ಯಾನೊಪರ್ಟಿಕಲ್ ಗಳ ಮೂಲಕ ಅಭಿವೃದ್ಧಿಪಡಿಸಿ ಅವುಗಳನ್ನು ಭಾರದ ಲೋಹದ ವಸ್ತುಗಳಿಗೆ ಬದಲಾಗಿ ಹಗುರ ವಸ್ತುಗಳಾಗಿ ಬಳಸಬಹುದಾಗಿದೆ. ಆದ್ದರಿಂದ ಇಂತಹ ಸಾಮಾಜಿಕ ಅನುಕೂಲಸಿಂಧುಗಳನ್ನು ಒದಗಿಸಲು ನ್ಯಾನೊಪರ್ಟಿಕಲ್ಸ್ ಉತ್ತಮ ನಿರೀಕ್ಷೆಗಳಾಗಿವೆ ಎಂದು ಹೇಳಬಹುದು. ಇಂತಹ ನ್ಯಾನೊತಂತ್ರಗಾರಿಕೆಯಿಂದ ಸಿದ್ದಪಡಿಸಿದ ವಸ್ತುಗಳು ಕಡಿಮೆ ತೂಕದ್ದಲ್ಲದೇ ಹೆಚ್ಚಿನ ಸ್ಥಿರತೆ ಮತ್ತು ಸುಧಾರಿತ ಕಾರ್ಯನಿರ್ವಹಣೆಗೂ ಅನುಕೂಲ ಒದಗಿಸುತ್ತವೆ. ನ್ಯಾನೊ ತಂತ್ರಗಾರಿಕೆ ಬಳಕೆ ಹಲವಾರು ವಸ್ತುಗಳ ಅಭಿವೃದ್ಧಿಯಲ್ಲಿ ಕಂಡು ಬರುತ್ತದೆ,ಅದರಲ್ಲಿ ಕೆಲವನ್ನು ಇಲ್ಲಿ ಕಾಣಿಸಲಾಗಿದೆ.
ಔಷಧದಲ್ಲಿನ ಬಳಕೆ
ಬದಲಾಯಿಸಿ- ನ್ಯಾನೊವಸ್ತುಗಳ ಅಳವಡಿಕೆಯನ್ನು ಜೈವಿಕ ಮತ್ತು ವೈದ್ಯಕೀಯ ಸಂಶೋಧನಾ ಸಮೂದಾಯಗಳು ವಿಭಿನ್ನ ಮತ್ತು ಅಪರೂಪದ(ಅಪೂರ್ವ) ಕ್ಷೇತ್ರಗಳಿಗಾಗಿ ಬಳಕೆ ಮಾಡಿಕೊಳ್ಳುತ್ತಿವೆ.(ಉದಾಹರಣೆಗೆ: ಜೀವಕೋಶಗಳ ವೈಪರಿತ್ಯಗಳ ಪ್ರತಿಬಿಂಬ ಕಂಡುಕೊಳ್ಳಲು ಮತ್ತು ಅರ್ಬುದ ರೋಗದ ಚಿಕಿತ್ಸೆಗಾಗಿ ನ್ಯಾನೊತಂತ್ರಜ್ಣಾನ ಉಪಯೋಗವಾಗುತ್ತಿದೆ.) ಸಾಮಾನ್ಯವಾಗಿ ಬಳಕೆಯಲ್ಲಿರುವ ತಾಂತ್ರಿಕ ಪದಗಳೆಂದರೆ,ಜೈವಿಕವೈದ್ಯಕೀಯ ನ್ಯಾನೊತಂತ್ರಜ್ಞಾನ ,ಜೈವಿಕನ್ಯಾನೊತಂತ್ರಜ್ಞಾನ ಮತ್ತು ನ್ಯಾನೊಔಷಧಿ ಇತ್ಯಾದಿ.
- ಇಲ್ಲಿನ ಅಭಿವೃದ್ಧಿಪರ ತಳಿಯನ್ನು ಈ ಕ್ಷೇತ್ರದ ವರ್ಣನೆಗಾಗಿ ಬಳಸಲಾಗುತ್ತದೆ. ಸಣ್ಣ ಅಥವಾ ನ್ಯಾನೊವಸ್ತುಗಳಿಗೆ ಕಾರ್ಯ ಕ್ಷಮತೆಗಾಗಿ ಜೈವಿಕ ಕಣಗಳು ಅಥವಾ ವಿಭಿನ್ನ ರಚನೆಯನ್ನು ಸೇರಿಸಬಹದಾಗಿದೆ. ನ್ಯಾನೊವಸ್ತುಗಳು ಗಾತ್ರವು ಬಹುತೇಕ ಜೈವಿಕ ಅಣು ಮತ್ತು ಅವುಗಳ ರಚನೆಯನ್ನು ಹೋಲುತ್ತದೆ.ಆದ್ದರಿಂದ ನ್ಯಾನೊವಸ್ತುಗಳು ಜೈವಿಕವೈದ್ಯಕೀಯ ಸಂಶೋಧನೆ ಮತ್ತು ಅಳವಡಿಕೆಗೆ ಎರಡೂ ತೆರನಾಗಿ ನೆರವಾಗುತ್ತದೆ.
- ಈ ಪ್ರಕಾರ ನ್ಯಾನೊವಸ್ತುಗಳನ್ನು ಜೈವಿಕಶಾಸ್ತ್ರದೊಂದಿಗೆ ಸಮ್ಮಿಲನಗೊಳಿಸಿ ವಿವಿಧ ಪ್ರಕಾರದ ರೋಗ ಪತ್ತೆಯ ಉಪಕರಣಗಳನ್ನು ಅಭಿವೃದ್ಧಿಪಡಿಸಲಾಗಿದೆ.ವೈಪರಿತ್ಯದ ಪತ್ತೆ ಮಾಡುವ ಪರಿಣಾಮಕಾರಿ ವಸ್ತು ಅಂಶಗಳು,ವಿಶ್ಲೇಷಣಾತ್ಮಕ ಉಪಕರಣಗಳು(ಸಲಕರಣೆಗಳು),ಶರೀರ ಚಿಕಿತ್ಸಾ ಅಳವಡಿಕೆಗಳು,ಮತ್ತು ಔಷಧಿಗಳ ವಿತರಣಾ ವಾಹಕಗಳು ಇದರಲ್ಲಿ ಒಳಗೊಂಡಿವೆ.
ರೋಗನಿದಾನದ ಪತ್ತೆ ಮತ್ತು ಚಿಕಿತ್ಸೆಯಂತೆ ಮದ್ದು
ಬದಲಾಯಿಸಿ- ಲ್ಯಾಬ್-ಆನ್-ಎ-ಚಿಪ್ ತಂತ್ರಜ್ಞಾನವು ನ್ಯಾನೊತಂತ್ರಜ್ಞಾನದ ಚಿಪ್ ಆನ್ ಎ ಚಿಪ್ ಮೇಲೆ ತನ್ನ ದೃಷ್ಟಿಕೋನವನ್ನು ನೆಟ್ಟು ವಿವಿಧೆಡೆ ಚಾಚಿದೆ.ಆಧುನಿಕ ಕಂಪ್ಯೂಟರ್ ತಂತ್ರಜ್ಞಾನವು ಇಂದು ಚಿಪ್ ಗಳ ನೆರವಿನಿಂದ ಅಪಾರ ಮಾಹಿತಿ ಸಂಗ್ರಹಣೆಗೆ ಅನುಕೂಲ ಒದಗಿಸಿದೆ. ಸೂಕ್ತ ರೋಗ ನಿರೋಧಕಗಳಲ್ಲಿನ ವಿಶೇಷ ರಚನೆ ಮತ್ತು ಅಣುಗಳ ಸಂಯುಕ್ತಗಳಿಗೆ ಬೇಕಾಗುವ ಆಯಸ್ಕಾಂತೀಯ ನ್ಯಾನೊಪರ್ಟಿಕಲ್ಸ್(ಅಣುಗಳನ್ನುಅಥವಾ ಸಂಯುಕ್ತಾಣು) ಗಳನ್ನು ಇಲ್ಲಿ ಉಪಯೋಗಿಸಲಾಗುತ್ತದೆ.
- ಚಿನ್ನಮಿಶ್ರಿತ ನ್ಯಾನೊಅಣುಗಳುDNAದ ವಿಭಜನೆಗಳನ್ನು ಬಳಸಿ ಮಾದರಿಯಲ್ಲಿರುವ ಅನುವಂಶೀಯ ಸರಣಿ ಅನುಕ್ರಮಗಳ ಪತ್ತೆಗೆ ನೆರವಾಗುತ್ತವೆ. ಪಾಲಿಮರ್ ನಲ್ಲಿನ ಅತ್ಯಂತ ಸಣ್ಣ ಕಣಗಳ ಕ್ವಾಂಟಮ್ ಡಾಟ್ಸ್ (ಪರಿಮಾಣದ ಗುರುತಿಸುವಿಕೆ)ಗಾಗಿ ಜೈವಿಕ ವಿಶ್ಲೇಷಣೆಯನ್ನು ಬಹುವರ್ಣದ ದೃಷ್ಟಿಕೋನದ ಕಾರ್ಯಕ್ಕೆ ಬಳಸಲಾಗುತ್ತದೆ.
- ಇದರಿಂದ ವಿವಿಧ ಗಾತ್ರದ ವಸ್ತು ವಿನ್ಯಾಸ ಮತ್ತು ಅದರೊಳಗಿನ ಸಂಯುಕ್ತಗಳನ್ನು ಪತ್ತೆಹಚ್ಚಲಾಗುತ್ತದೆ ನ್ಯಾನೊಪೋರ್ ತಂತ್ರಜ್ಞಾನವು ಪರಮಾಣು ಕ್ಷಾರಗಳನ್ನು ಎಲಾಕ್ಟ್ರಾನಿಕ್ ಗಳಾಗಿ ಪರಿವರ್ತಿಸುವ ಒಂದು ಮಾಧ್ಯಮ ಮತ್ತು ವಿಶ್ಲೇಷಿಸುವ ಅಳವಡಿಕೆಯಾಗಿದೆ.ಪರಮಾಣು ಅಣುಗಳು ನೇರವಾಗಿ ಸಂಯುಕ್ತಗಳಾಗಿ ಪರಿವರ್ತಿತವಾಗುವುದು ಇದರ ಪ್ರಮುಖ ಕಾರ್ಯಚಟುವಟಿಕೆಯಾಗಿದೆ.
ಔಷಧಿ ಹಂಚಿಕೆ ಸಂಯುಕ್ತಗಳ ಯುಕ್ತ ವಿತರಣೆ
ಬದಲಾಯಿಸಿ- ರೋಗಿಯ ರೋಗದ ಮೂಲ ಸ್ಥಾನ ಗುರುತಿಸಿ ಅಲ್ಲಿ ಸಕ್ರಿಯ ರೋಗನಿರೋಧಕ ಅಂಶವನ್ನು ಸೇರಿಸುವ ಮೂಲಕ ಒಟ್ಟಾರೆ ಔಷಧಿಯ ಬಳಕೆ ಮತ್ತು ಅಡ್ಡ ಪರಿಣಾಮಗಳ ಪತ್ತೆಗಾಗಿ ಈ ವಿಧಾನ ಚಾಲ್ತಿಯಲ್ಲಿದೆ.ಯಾವ ಪ್ರಮಾಣದ ಔಷಧಿಯನ್ನು ಹೇಗೆ ನೀಡಬೇಕೆಂಬುದೇ ಇಲ್ಲಿನ ಉದ್ದೇಶ ವಾಗಿದೆ. ಇಲ್ಲಿನ ಉನ್ನತ ಆಯ್ಕೆಯ ಸ್ವರೂಪ ಮತ್ತು ಖರ್ಚು ವೆಚ್ಚಗಳನ್ನು ತಗ್ಗಿಸಿ ಮಾನವ ಶ್ರಮವನ್ನು ಕಡಿಮೆಗೊಳಿಸುತ್ತದೆ.
- ಅರ್ಬುದ ರೋಗದ ಚಿಕಿತ್ಸೆಗಾಗಿ ಬಳಸುವ ಒಂದು ವೈಜ್ಣಾನಿಕ ತಂತ್ರಜ್ಞಾನದ ಪದ್ದತಿ ಡೆಂಡ್ರೀಮರ್ಸ್ ಮತ್ತು ನ್ಯಾನೊಪೋರಸ್ ಸಂಯುಕ್ತ ವಸ್ತುಗಳು ಇದಕ್ಕೆ ಉದಾಹರಣೆಯಾಗಿದೆ. ಈ ಅಣುಗಳು ಸಣ್ಣ ಪ್ರಮಾಣದ ಔಷಧಿ ಕಣಗಳನ್ನು ಹಿಡಿದಿಟ್ಟುಕೊಂಡು ಅವುಗಳು ನಿಶ್ಚಿತ ಸ್ಥಳಕ್ಕೆ ತಲುಪುವಂತೆ ಮಾಡುತ್ತದೆ. ಈ ನಿಟ್ಟಿನಲ್ಲಿ ಇನ್ನೊಂದು ಕನಸೆಂದರೆ ವಿದ್ಯುತ್ ಯಾಂತ್ರಿಕ ಪದ್ದತಿಗಳು; NEMSಗಳನ್ನು ಕ್ರಿಯಾಶೀಲ ಔಷಧಿ ಬಿಡುಗಡೆಗೆ ಬಳಸಿ ಸೂಕ್ತ ಪರಿಮಾಣದಲ್ಲಿ ಇವುಗಳನ್ನು ಸಂಶೋಧಿಸಲಾಗುತ್ತಿದೆ.
- ಇನ್ನು ಕೆಲವು ಸಮರ್ಥ ಅಳವಡಿಕೆಗೆ ಕಬ್ಬಿಣ ಅಥವಾ ಚಿನ್ನದ ಲೋಹದ ನ್ಯಾನೊಪರ್ಟಿಕಲ್ಸ್ ನ್ನು ಅರ್ಬುದ ರೋಗದ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತದೆ. ಪರಿಣಾಮಕಾರಿ ಗುರಿಯ ಅಥವಾ ವೈಯಕ್ತಿಕ ಔಷಧಿಗಳ ಬಳಕೆಯನ್ನು ಕಡಿಮೆಗೊಳಿಸುವದರೊಂದಿಗೆ ಚಿಕಿತ್ಸಾ ವೆಚ್ಚ ತಗ್ಗಿಸಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ನೆರವಾಗುತ್ತದೆ.ಇದು ಸಾರ್ವಜನಿಕ ಆರೋಗ್ಯ ಸುರಕ್ಷಣಾ ಪದ್ದತಿಗೂ ಬೆಂಬಲವಾಗಿ ನಿಲ್ಲುತ್ತದೆ.
- ಮಾನವ ಅಂಗ ಮತ್ತು ಅಂಗಾಂಶ ಕಸಿ ವಿಧಾನದಲ್ಲೂ ನ್ಯಾನೊತಂತ್ರಜ್ಞಾನ ಹೊಸ ಅವಕಾಶಗಳನ್ನು ತೆರೆದಿಟ್ಟಿದೆ. ಚುಚ್ಚುಮದ್ದು ಮೂಲಕ ಔಷಧಿಗಳನ್ನು ರಕ್ತದೊಳಕ್ಕೆ ಸೇರಿಸಿ ಒತ್ತಡ ಸ್ವರೂಪಗಳನ್ನು ಗಮನಿಸಲೂ ಸಹ ಇದು ಸಹಕಾರಿಯೆನಿಸಿದೆ. (ರಕ್ತದ ಸಂಚಯ ವೇಗವಾಗಿ ಮೇಲೆ ಹೋಗಬಹುದು ಅಥವಾ ಇಳಿಕೆಯ ಗತಿ ತೋರಿಸಬಹುದು). ಈ ತೆರನಾದ ವೇಗದ ಹೆಚ್ಚಳ ವಿಷಯುಕ್ತ ರಸಾಯನಿಕಗಳಿಂದಾಗಿ ತೊಂದರೆಯನ್ನುಂಟು ಮಾಡಬಹುದು. ಹಾಗೆಯೇ ಔಷಧಿ ಸೂಚಿತ ಸಾಮರ್ಥ್ಯಕ್ಕಿಂತ ಕೆಳಕ್ಕಿಳಿದರೆ ಅದು ತನ್ನ ಫಲಿತಾಂಶಗಳಲ್ಲಿ ಕ್ಷಮತೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಅಂಗಾಂಶದ ರಚನಾ ಎಂಜಿನಿಯರಿಂಗ್
ಬದಲಾಯಿಸಿ- ಅಂಗಾಂಶಗಳ ಮರುಅಭಿವೃದ್ಧಿ ಅಥವಾ ಹಾನಿಗೊಳಗಾದ ಅಂಗಾಂಶಗಳ(ಕೋಶಗಳ) ದುರಸ್ತಿಗೆ ನ್ಯಾನೊತಂತ್ರಜ್ಞಾನ ನೆರವಾಗುತ್ತದೆ. "ಅಂಗಾಂಶ ಎಂಜಿನಿಯರಿಂಗ್"ನ್ನು ಕೃತಕವಾಗಿ ಅಭಿವೃದ್ಧಿಪಡಿಸಿದ ಜೀವಕೋಶಗಳನ್ನು ಸೂಕ್ತವಾಗಿ ಬಂಧಿಸಲು ಮತ್ತು ಅವುಗಳ ಬೆಳವಣಿಗೆಯಲ್ಲಿ ನ್ಯಾನೊ ವಸ್ತುಗಳ ಮೂಲಕ ನಿರ್ಮಿತ ಕೋಶಗಳನ್ನು ಬಳಸಲಾಗುತ್ತದೆ. ಅಂಗಾಂಶ ಎಂಜಿನಿಯರಿಂಗ್ ಇಂದಿನ ಕ್ಲಿಷ್ಟ ಚಿಕಿತ್ಸೆಗಳಾದ ಅಂಗಾಂಗ ಕಸಿ ಅಥವಾ ಜೋಡಣೆಗಳು ಅಥವಾ ಕೃತಕ ಅಂಗಾಂಶಗಳ ಜೋಡಣಾ ಅಳವಡಿಕೆಗೆ ಪೂರಕ ಮತ್ತು ಸುಲಭದಲ್ಲಿ ಕಾರ್ಯನಿರ್ವಹಿಸುತ್ತದೆ. *ಜೋಡಣಾ ಮುಂದುವರೆದ ಅಂಗಾಂಶ ಎಂಜಿನಿಯರಿಂಗ್ ಇಂದು (ಆಯುಷ್ಯ)ಜೀವಿತಾವಧಿಯನ್ನು ಹೆಚ್ಚಿಸಲು ಕಾರಣವಾಗುತ್ತಿದೆ. ಆದರೆ ಜೀವಕೋಶಗಳ ಸಂಪೂರ್ಣ ಅಂತ್ಯಾವಸ್ಥೆಗೆ ಬಂದ ರೋಗಿಗೆ ಆರೋಗ್ಯಕರ ಕೋಶಗಳನ್ನು ಅಳವಡಿಸಿ(ಎಕ್ಸ್ಟ್ರಾ ಸೆಲ್ಲ್ಯುಲರ್ ಮ್ಯಾಟ್ರಿಕ್ಸ್ )ಹೆಚ್ಚು ಕಾಲದ ಜೀವದಾನದ ವ್ಯವಸ್ಥೆ ಮಾಡಬಹುದಾಗಿದೆ. ಈ ಸಂದರ್ಭದಲ್ಲಿ ಸಂಪೂರ್ಣ ಸುಧಾರಿತ ಕೋಶಗಳ ಕಸಿ ಅಗತ್ಯವಿದೆ. ಈ ಕೋಶಗಳ ಸಂಪನ್ಮೂಲವೆಂದರೆiPS (ಸಮರ್ಥ ಸಮಗ್ರ ಕೋಶಗಳ ವಿನ್ಯಾಸ);
- ಇವು ಸಾಮಾನ್ಯವಾಗಿ ರೋಗಿಯ ಶರೀರದ ಅಂಗಾಂಶಗಳೇ ಇವುಗಳನ್ನೇ ಮರುಆಯೋಜನಗೊಳಿಸಿ ದೇಹದ ರೋಗಪೀಡಿತ ಭಾಗಕ್ಕೆ ತಿರಸ್ಕೃತವಾಗದ ರೀತಿಯಲ್ಲಿ ಅಳವಡಿಸಲಾಗುತ್ತದೆ.(ಇಂತಹ ಚಿಕಿತ್ಸಾ ವಿಧಾನಗಳಲ್ಲಿ ರೋಗನಿರೋಧಕಹೆಮ್ಮೆಟ್ಟಿಸುವ ಮತ್ತು ಪ್ರಾಣಾಂತಿಕ ಭಯದ ಕ್ಲಿಷ್ಟತೆಗಳು ಉದ್ಭವಿಸುತ್ತವೆ). ಇನ್ನೊಂದು ಈ ಅಂಗಾಂಶಗಳ ಸಂಪನ್ಮೂಲವೆಂದರೆ ಭ್ರೂಣಾವಸ್ಥೆಯಲ್ಲಿರುವ ಪ್ರಾಣಿಯ ಜೀವಕೋಶಗಳ ಅಂಗಾಂಶ ಕೃಷಿ ಆದರೆ ಇಲ್ಲಿ ಎರಡು ಅನಾನುಕೂಲಗಳು ಉಂಟಾಗುವ ಸಾಧ್ಯತೆ ಇದೆ.
- ಇಲ್ಲಿ ತದ್ರೂಪ ಪ್ರಕ್ರಿಯೆಯ ಸಮಸ್ಯೆಯನ್ನು ನಾವು ಅರಿತುಕೊಳ್ಳಬೇಕಾಗುತ್ತದೆ.ಆದರೆ ಇದು ತಾಂತ್ರಿಕವಾಗಿ ಬಹು ತೊಂದರೆದಾಯಕವಾಗಿದೆ.(ಸಾಮಾನ್ಯ ಆಸಹಜತೆಗಳನ್ನು ಮುಖ್ಯವಾಗಿ ನಿರ್ಭಂದಿಸಬೇಕಾಗುತ್ತದೆ). ಇಲ್ಲಿ ಪ್ರಾಣಿಗಳ ಭ್ರೂಣದ ಅಂಗಾಂಶಗಳ ಬಹುದೊಡ್ಡ ಕಣಜದ ಅಗತ್ಯ ಇರುತ್ತದೆ. ನಾವೂ ಕೂಡಾ ಪ್ರತಿಯೊಬ್ಬರೂ ಶೈಶಾವಸ್ಥೆಯ ಅಂಗಾಂಶಗಳನ್ನು ಹೊಂದಿದವರಾಗಿದ್ದೇವೆ.ಹೀಗಾಗಿ ಇದು ನೈತಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ರಸಾಯನಿಕ ಶಾಸ್ತ್ರ ಮತ್ತು ಪರಿಸರ
ಬದಲಾಯಿಸಿ- ರಸಾಯನಿಕಗಳ ಅಣು ವಿಭಜನೆ ಮತ್ತು ಶುದ್ಧೀಕರಣದ ತಂತ್ರಜ್ಞಾನದಲ್ಲಿ ನ್ಯಾನೊತಂತ್ರಜ್ಞಾನ ಈಗಾಗಲೇ ಪ್ರಮುಖ ಪಾತ್ರ ವಹಿಸಿದೆ. ಈ ಅಣು ವಿಭಜನೆಯು ಅಂತರ್ ನಿರ್ಮಿತ ಗುಣಲಕ್ಷಣ ಮತ್ತು ರಸಾಯನಿಕ ಅಂಶಗಳ ಸ್ವಭಾವ ಗುಣಗಳನ್ನು ತೆರೆದಿಡುತ್ತವೆ.ಉದಾಹರಣೆಗೆ ನ್ಯಾನೊಪರ್ಟಿಕಲ್ಸ್ ವಿಶಿಷ್ಟ ರಸಾಯನಿಕ ಅಣುಗಳನ್ನು ಸುತ್ತುವರೆದಿದ್ದು(ಲಿಗ್ಯಾಂಡ್ಸ್ ಅಂದರೆ ಅಣುವಿಗೆ ಸಂಭಂದಿಸಿದ ರಸಾಯನಿಕಶಾಸ್ತ್ರ)ಅಥವಾ ಗೋಚರ ದೃಷ್ಟಿ ಲಕ್ಷಣಗಳನ್ನು ಗುರುತಿಸಲು ಸಮರ್ಥವಾಗಿದೆ).
- ಈ ಪ್ರಕರಣದಲ್ಲಿ ರಸಾಯನಿಕ ಶಾಸ್ತ್ರವು ನೈಜವಾಗಿ ಮೂಲ ನ್ಯಾನೊವಿಜ್ಞಾನದ ತಳಹದಿಯಾಗಿದೆ. ಅಲ್ಪಾವಧಿಯ ಬೆಳವಣಿಗೆಯಲ್ಲಿ ರಸಾಯನಿಕಶಾಸ್ತ್ರವು "ನೂತನ ನ್ಯಾನೊವಸ್ತುಗಳನ್ನು" (ಸಂಯುಕ್ತಗಳನ್ನು)ಒದಗಿಸಿ,ಸುದೀರ್ಘಾವಧಿಯ ಈ ಪ್ರಕ್ರಿಯೆಯಲ್ಲಿ "ಸ್ವಯಂ ಅಂಗಾಶ ಜೋಡಣೆಗೆ"ಅವಕಾಶ ನೀಡಿ ವೇಳೆ ಉಳಿತಾಯ ಮತ್ತು ನಿಭಂದನೆಗಳನ್ನು ರೂಪಿಸಲು ಸಹಕಾರಿಯಾಗುತ್ತದೆ.
- ಎಲ್ಲಾ ರಸಾಯನಿಕ ವಿಶ್ಲೇಷಣೆಗಳನ್ನು ನ್ಯಾನೊತಂತ್ರಜ್ಞಾನದ ಮೂಲಕ ತಿಳಿದುಕೊಳ್ಳಬೇಕಾಗಿದೆ.ಯಾಕೆಂದರೆ ಈ ತಂತ್ರಜ್ಞಾನಕ್ಕೆ ನಿಶ್ಚಿತ ಅಂಗಾಂಶ ಕಣಗಳನ್ನು ಉತ್ಪಾದಿಸುವ ಸಾಮರ್ಥ್ಯವಿದೆ. ಹೀಗೆ ರಸಾಯನಿಕಶಾಸ್ತ್ರವು ನ್ಯಾನೊತಂತ್ರಗಾರಿಕೆಯ ಮೂಲ ನಿರ್ಮಿತ ಕಣಗಳು,ಪಾಲಿಮರ್ ಗಳು ಇತ್ಯಾದಿ ಅಲ್ಲದೇ ಗಣಾಂಶಗಳು ಮತ್ತು ನ್ಯಾನೊಪರ್ಟಿಕಲ್ಸ್ ಒಳಗೊಂಡಿದೆ.
ರಸಾಯನಿಕಶಾಸ್ತ್ರದ ಪರಿವರ್ತನ ಸ್ಥಿತಿ
ಬದಲಾಯಿಸಿ- ರಸಾಯನಿಕ ಅಂಶಗಳ ಪರಿವರ್ತನಾ ಸ್ಥಿತಿಯು ನ್ಯಾನೊಪರ್ಟಿಕಲ್ಸ್ ನಿಂದ ಹೆಚ್ಚು ಲಾಭ ಪಡೆಯುತ್ತದೆ.ಯಾಕೆಂದರೆ ವಸ್ತು ಸ್ಥಿತಿಯ ಗಾತ್ರದ ಅನುಪಾತದ ಮೇಲೆ ಇದರ ಕ್ರಿಯೆ ಅವಲಂಬಿಸಿದೆ. ನ್ಯಾನೊಪರ್ಟಿಕಲ್ಸ್ ನ ಸಾಮರ್ಥ್ಯದ ಅಳವಡಿಕೆಯಿಂದ ರಸಾಯನಿಕ ಪ್ರಕ್ರಿಯೆಯು ಶಕ್ತಿಮೂಲದ ಕೋಶದಿಂದ ಅಣುವಿಭಜನಾ ವಿಶ್ಲೇಷಣೆವರೆಗೂ ನ್ಯಾನೊಪರ್ಟಿಕಲ್ಸ್ ನ ಸಂಯುಕ್ತ ವಿಧಾನಗಳನ್ನು ಅನ್ವಯಿಸಬಹುದಾಗಿದೆ. ರಸಾಯನಿಕ ಅಂಶಗಳ ವೇಗವರ್ಧಕ ಕೂಡಾ ರಸಾಯನಿಕಗಳ ಉತ್ಪಾದನೆಯಲ್ಲಿ ಮಹತ್ವದ್ದಾಗಿದೆ.
- ಪ್ಲಾಟಿನಮ್ ಗಳಲ್ಲಿ ಬಳಸಲಾಗುತ್ತಿರುವ ನ್ಯಾನೊಪರ್ಟಿಕಲ್ಸ್ ಮುಂಬರುವ ಪೀಳಿಗೆಗೆ ಬೇಕಾಗುವ ಮೋಟಾರು ವಾಹನ ಕ್ಷೇತ್ರದಲ್ಲಿ ಉಪಯೋಗವಾಗಲಿದೆ.ಈ ನ್ಯಾನೊಅಣುಗಳು ಅತ್ಯಂತ ಕಡಿಮೆ ಜಾಗ ಆಕ್ರಮಿಸಿ ಅಗತ್ಯವಿರುವ ಪ್ಲಾಟಿನಮ್ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.ಇಲ್ಲಿ ರಸಾಯನಿಕ ಅಂಶಗಳು ಹೆಚ್ಚು ಜಾಗೆಯನ್ನು ಆಕ್ರಮಿಸುವುದನ್ನು ನ್ಯಾನೊಪರ್ಟಿಕಲ್ಸ್ [೧]ತಡೆಯುತ್ತದೆ.
- ಈ ಕುರಿತಂತೆ ನಡೆದ ಕೆಲವು ಪ್ರಯೋಗಗಳಿಂದಾಗಿ ಇದು ಸಹಜವಾಗಿ ಮೆಥೇನ್ ಒಡಗೂಡಿ ಹೆಚ್ಚು ಹೊಗೆಯುಗುಳಿ ಸುತ್ತಲಿನ ವಾತಾವರಣ ಕೆಡಿಸುವ ಸಾಧ್ಯತೆ ಬಗ್ಗೆ ಹಲವರು ತಮ್ಮ ಅಪಸ್ವರ [೨]ಎತ್ತಿದ್ದಾರೆ. ಫ್ರಾನ್ಸಿನ ಸೆಂಟರ್ ನ್ಯಾಶನಲ್ ಡೆ ಲಾ ರೆಚೆರ್ಚೆ ಸೈಂಟಿಫಿಕ್ಯೂ(CNRS) ಸಂಸ್ಥೆಯಲ್ಲಿ ನಡೆಯುತ್ತಿರುವ ಸಂಶೋಧನೆಯು ಅಣುವಿಭಜನೆಯ ಅಳವಡಿಕೆಯ ಪ್ರಯೋಜನಗಳನ್ನು ಕಂಡುಹಿಡಿಯಲು [೩]ಯತ್ನಿಸುತ್ತದೆ. ನ್ಯಾನೊಶುದ್ಧೀಕರಣ ಕೂಡಾ ಒಂದು ಮಹತ್ವದ ಅನ್ವಯಿಕೆಯಾಗಿದೆ.ಹೇಗೇ ಆಗಲಿ ಮುಂಬರುವ ಸಂಶೋಧನೆಗಳು ಸಂಭವನೀಯ ವಿಷಕಾರಕಗಳ ಬಗ್ಗೆ [೪]ಕಾಳಜಿವಹಿಸಬೇಕಾಗುತ್ತದೆ.
ಸೋಸುವಿಕೆ ಅಥವಾ ಶೋಧನಾ ಪ್ರಕ್ರಿಯೆ
ಬದಲಾಯಿಸಿ- ತ್ಯಾಜ್ಯ-ನೀರು ಶೋಧಿಸುವಿಕೆ ಅಥವಾ ಸಂಸ್ಕರಣ,ವಾಯು ಶುದ್ದೀಕರಣ ಮತ್ತು ಇಂಧನ ಸಂಗ್ರಹ ವಿಧಾನಗಳಲ್ಲಿ ಇನ್ನು ಮುಂದೆ ನ್ಯಾನೊರಸಾಯನಿಕ ಶಾಸ್ತ್ರದ ಹೆಚ್ಚು ಪ್ರಭಾವದ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ. ಯಾಂತ್ರಿಕ ಅಥವಾ ರಸಾಯನಿಕ ವಿಧಾನಗಳನ್ನು ಸೋಸುವಿಕೆಯ ತಂತ್ರಜ್ಞಾನದಲ್ಲಿ ಬಳಕೆ ಮಾಡಲಾಗುತ್ತದೆ. ಒಂದು ವರ್ಗದ ಸಂಸ್ಕರಣಾ ತಂತ್ರಜ್ಞಾನವು ಸೂಕ್ತ ಗುಂಡಿಯ ಆಕಾರದ ಮೇಲೆ ಅವಲಂಬಿಸಿದೆ.ಅಂದರೆ ದ್ರವವನ್ನು ಕೊಳವೆಯ ಮೂಲಕ ಸಮಪ್ರಮಾಣದ ಒತ್ತಡದ ಮೇಲೆ ಸಂಸ್ಕರಣೆಗೆ ಒಳಪಡಿಸಲಾಗುತ್ತದೆ.
- ಯಾಂತ್ರಿಕ ಸಂಸ್ಕರಣೆಯು ನ್ಯಾನೊಪೋರಸ್ ಅಂಗಾಶಗಳ ಮೂಲಕ ಅಥವಾ ಆ ವಿಭಾಗದ ಕಾರ್ಯಾಚರಣೆ ಮೇರೆಗೆ ನಡೆಸಲಾಗುತ್ತದೆ.ಅಂದರೆ ಸಣ್ಣ ಗುಂಡಿ ಅಥವಾ ಚಿಕ್ಕ ಅಂದರೆ10 nmಗಿಂತ ಕಡಿಮೆ ಗಾತ್ರದ("ನ್ಯಾನೊಫಿಲ್ಟ್ ರೇಶನ") ನ್ಯಾನೊ ಟ್ಯೂಬಗಳ ನಿರ್ಮಿಸಿ ಉಪಯೋಗಿಸಲಾಗುತ್ತದೆ. ದ್ರವ ತ್ಯಾಜ್ಯದಲ್ಲಿರುವ ಕಶ್ಮಲಗಳ ಹೊರಹಾಕಲು ಅಥವಾ ವಿವಿಧ ದ್ರವಗಳನ್ನು ಬೇರ್ಪಡಿಸುವ ಪ್ರಕ್ರಿಯೆಯಲ್ಲಿ ನ್ಯಾನೊಫಿಲ್ಟರೇಶನ್ ಪ್ರಮುಖವಾಗಿ ಬಳಸಲಾಗುತ್ತದೆ.
- ದೊಡ್ಡ ಪ್ರಮಾಣದ ಸಂಸ್ಕರಣಾ ಪ್ರಕ್ರಿಯೆಯನ್ನು ಅಲ್ಟ್ರಾಫಿಲ್ಟ್ರೇಶನ್ (ತ್ವರಿತ ಮತ್ತು ನಿಖರ ಶುದ್ಧೀಕರಣ) ಎಂದು ಕರೆಯಲಾಗುತ್ತದೆ.ಇಂತಹ ಅಂಗಾಶ ಆಧಾರಿತ ಸಂಸ್ಕರಣವು ಸುಮಾರು 10 ಮತ್ತು 100nm(ನ್ತ್ಯಾನೊ ಮೀಟರ್ )ಮಾಪಕದಲ್ಲಿ ಕಾರ್ಯ ನಿರ್ವಹಿಸುತ್ತದೆ. ಅತಿ ಮುಖ್ಯವಾಗಿ ಈ ಅಲ್ಟ್ರಾಫಿಲ್ಟ್ರೇಶನ್ ವಿಧಾನವನ್ನು ವೈದ್ಯಕೀಯ ಅಂದರೆ ಮೂತ್ರಕೋಶದ ಕಾರ್ಯ ಚುರುಕಿಗೆ ಆ ಭಾಗದಲ್ಲಿ ಶುದ್ಧ ರಕ್ತ ಹರಿಯುವಂತೆ ಮಾಡುವದರಲ್ಲಿ ಇದನ್ನು ಕಾಣಬಹುದು.
- ತ್ಯಾಜ್ಯ ನೀರಿನಲ್ಲಿನ ಭಾರದ ಲೋಹದ ಅಂಶ ಮತ್ತು ಕಶ್ಮಲ ತೆಗೆಯಲು ಆಯಸ್ಕಾಂತೀಯ ನ್ಯಾನೊಪರ್ಟಿಕಲ್ಸ್ ತಂತ್ರ ಉಪಯೋಗಿಸುತ್ತಾರೆ,ಇದರಿಂದ ಪರಿಣಾಮಕಾರಿಯಾಗಿ ಮತ್ತು ನಿಖರವಾಗಿ ಆಯಸ್ಕಾಂತೀಯ ತಂತ್ರಗಳನ್ನು ಬಳಸಬಹುದಾಗಿದೆ. ನ್ಯಾನೊಸ್ಕೇಲ್ (ನ್ಯಾನೊ ಮಾಪಕದ ಸಣ್ಣ ಕಣ)ಪರ್ಟಿಕಲ್ಸ್ ಬಳಸುವದರಿಂದ ನೀರಿನಲ್ಲಿನ ಕಲ್ಮಶಗಳನ್ನು ಪರಿಣಾಮಕಾರಿಯಾಗಿ ತೆಗೆಯಲು ಸಹಾಯವಾಗುತ್ತದೆ.ಸಾಂಪ್ರದಾಯಿಕ ಮತ್ತು ಆತುರದ ಶುದ್ಧೀಕರಣದ ಫಿಲ್ಟ್ರೇಶನ್ ಹೆಚ್ಚು ವೆಚ್ಚದಾಯಕವಾಗಿದ್ದನ್ನು ಗಮನಿಸಿದರೆ ಇದು ಅತ್ಯುತ್ತಮ ವಿಧಾನ ಎನ್ನಬಹುದು.
- ಕೆಲವು ನ್ಯಾನೊ ತಂತ್ರಜ್ಞಾನ ಬಳಸಿ ನೀರು ಸಂಸ್ಕರಣಾ ಸಾಧನೆ-ಸಲಕರಣೆಗಳು ಸುಧಾರಿತ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿವೆ. ಕಡಿಮೆ ವೆಚ್ಚದ ನ್ಯಾನೊಸ್ಟ್ರಕ್ಚರ್ಡ್ (ನ್ಯಾನೊಕಣನಿರ್ಮಿತ) ಪದ್ದತಿಯಿಂದ ನೀರಿನಲ್ಲಿನ ಸಂಯುಕ್ತ ಅಂಶಗಳನ್ನು ಬೇರ್ಪಡಿಸುವ ಕ್ರಿಯೆಯು ಇಂದು ಬಹುತೇಕ ಯಶಸ್ವಿಯಾಗುತ್ತಿದ್ದು ಇದರ ಇನ್ನಷ್ಟು ಅಧ್ಯಯನಕ್ಕೆ ಒತ್ತು [೫]ನೀಡಲಾಗುತ್ತದೆ.
ಶಕ್ತಿಮೂಲ ಇಂಧನ
ಬದಲಾಯಿಸಿಶಕ್ತಿಮೂಲ ಅಥವಾ ಇಂಧನ ಸಂಭಂದಿತ ಅತ್ಯಾಧುನಿಕ ನ್ಯಾನೊತಂತ್ರಜ್ಞಾನ ಒಳಗೊಂಡ ಯೋಜನೆಗಳು: ಸಂಗ್ರಹಣೆ,ಪರಿವರ್ತನೆ,ಕಚ್ಚಾ ವಸ್ತುಗಳ ಮತ್ತು ಸಂಸ್ಕರಣಾ ವೆಚ್ಚಗಳ ಕಡಿತದ ಮೂಲಕ ಉತ್ಪಾದನೆ,ಇಂಧನ ಉಳಿತಾಯ(ಉದಾಹರಣೆಗೆ ಶಾಖೋತ್ಪನ್ನ ವಿದ್ಯುತ್ ರಕ್ಷಾ ಕವಚ ಅಳವಡಿಕೆ)ಮತ್ತು ಪುನರ್ನವೀಕರಣದ ಇಂಧನ ಮೂಲಗಳ ಪುನರುಜ್ಜೀವನ.
ಇಂಧನ ಬಳಕೆಯಲ್ಲಿನ ಕಡಿತ
ಬದಲಾಯಿಸಿ- ಉತ್ತಮ ಪ್ರಮಾಣದ ಇಂಧನ ಉಳಿತಾಯಕ್ಕೆ ಅತ್ಯುತ್ತಮವಾದ ಸಂಯೋಜನಾ ಅಥವಾ ಬೇರ್ಪಡಿಸುವ ಪದ್ದತಿಗಳ ಅಗತ್ಯವಿದೆ.ಪರಿಣಾಮಕಾರಿ ಬೆಳಕಿನ ವ್ಯವಸ್ಱೆ ಅಥವಾ ದಹನಕಾರಿ ಪದ್ದತಿಗಳು ಅಲ್ಲದೇ ಸಾಗಾಟದಲ್ಲಿ ಹಗುರ ಮತ್ತು ಬಲಿಷ್ಟ ವಸ್ತುಗಳನ್ನು ಬಳಸುವದರಿಂದ ಇಂಧನ ಉಳಿತಾಯ ಸಾಧ್ಯವಾಗಲಿದೆ.
- ಸದ್ಯ ಉಪಯೋಗಿಸುತ್ತಿರುವ ಲೈಟ್ ಬಲ್ಬ್ ಗಳು ಗರಿಷ್ಟ 5%ರಷ್ಟರ ವಿದ್ಯುತ್ ಶಕ್ತಿಯನ್ನು ಮಾತ್ರ ಬೆಳಕಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿವೆ. ನ್ಯಾನೊತಂತ್ರಜ್ಞಾನದ ಅಳವಡಿಕೆಗಳೆಂದರೆ ಬೆಳಕನ್ನು ಪ್ರತಿಫಲಿಸುವ ಉಷ್ಣವಾಹಕಗಳು(LEDs)ಅಥವಾ ಅಣುಗಳ ಒಟ್ಟು ರಾಶಿಯ ಮೊತ್ತ(QCAs)ಇವುಗಳು ಬೆಳಕಿನ ವ್ಯವಸ್ಥೆಹಾಗು ವಿದ್ಯುತ್ ದೀಪಾಲಂಕಾರಗಳಲ್ಲಿ ಇಂಧನ ಬಳಕೆಯನ್ನು ಕಡಿಮೆಗೊಳಿಸುತ್ತವೆ.
ಇಂಧನ ಉತ್ಪಾದನೆಯ ಪರಿಣಾಮಕಾರಿ ಹೆಚ್ಚಳ
ಬದಲಾಯಿಸಿ- ಇಂದಿನ ಸೌರ ಕೋಶಗಳ ಮೂಲದ ಇಂಧನ ಶಕ್ತಿಗಳು ವಿಭಿನ್ನ ಸೆಮಿಕಂಡಕ್ಟರ್ (ಅರೆವಿದ್ಯುತ ವಾಹಕ)ಗಳನ್ನು ಒಳಗೊಂಡಿವೆ.ಇವುಗಳ ಒಟ್ಟುಗೂಡುವಿಕೆಯು ವಿವಿಧ ಇಂಧನ ಮಟ್ಟವನ್ನು ತೋರಿಸುತ್ತದೆ.ಸದ್ಯ ಕೇವಲ40%ರಷ್ಟು ಮಾತ್ರ ಸೌರ ವಿದ್ಯುತ್ ಮಾತ್ರ ಬಳಕೆಯಾ ಗುತ್ತಿದೆ. ವಾಣಿಜ್ಯಿಕವಾಗಿ ದೊರೆಯುವ ಸೌರ ಕೋಶಗಳು ಕಡಿಮೆ ಪ್ರಮಾಣದ ಸಾಮರ್ಥ್ಯ (15-20%)ಹೊಂದಿವೆ ನ್ಯಾನೊತಂತ್ರಜ್ಞಾನವು ನ್ಯಾನೊನಿರ್ಮಿತ ಸಂಯುಕ್ತಗಳ ನಿರಂತರ ಬ್ಯಾಂಡ್ ಗ್ಯಾಪ್ ಗಳೊಂದಿಗೆ ದೀಪಾಲಂಕಾರದಲ್ಲಿ ಬಳಸುವದರಿಂದ ಅವುಗಳ ದೈದೀಪ್ತತೆ (ಪ್ರಕಾಶ)ಯನ್ನು ಹೆಚ್ಚಿಸುತ್ತವೆ.
- ಎಂಜಿನ್ ನ ಆಂತರಿಕ ದಹನ ಶಕ್ತಿಯ ಮಟ್ಟವು ಸುಮಾರು30-40%ರಷ್ಟಾಗಿರುತ್ತದೆ. ಬೆಳಕಿನ ವ್ಯವಸ್ಥೆಯಲ್ಲಿನ ಉರಿಯುವ ಶಕ್ತಿಯನ್ನು ನ್ಯಾನೊತಂತ್ರಜ್ಞಾನದ ಮೂಲಕ ಸುಧಾರಿಸಲು ವಿಶೇಷ ಅಣುಶಕ್ತಿಯನ್ನು ಅದರ ವ್ಯಾಪ್ತಿಯಲ್ಲಿ ಹೆಚ್ಚಳ ಮಾಡಬಹುದಾಗಿದೆ. ಟೊರೊಂಟೊ ವಿಶ್ವ ವಿದ್ಯಾಲಯದ ವಿಜ್ಞಾನಿಗಳು 2005ರಲ್ಲಿ ಸಿಂಪರಣಾ ನ್ಯಾನೊಪರ್ಟಿಕಲ್ಸ್ ಅಭಿವೃದ್ದಿಪಡಿಸಿದ್ದು ಇದನ್ನು ಬೆಳಕಿನ ವ್ಯವಸ್ಥೆಯಡಿ ಸಿಂಪಡಿಸಿದಾಗ ಇದು ಅದೇ ಕ್ಷಣದಲ್ಲಿ ಸೌರ ಶಕ್ತಿಯ ಸಂಗ್ರಾಹಕನಾಗಿ ಕೆಲಸ nationalgeographic. com/news/2005/01 /0114_050114_solarplastic.html Archived 2013-07-11 ವೇಬ್ಯಾಕ್ ಮೆಷಿನ್ ನಲ್ಲಿ..
ಪರಿಸರ ಸ್ನೇಹಿ ಶಕ್ತಿಮೂಲ ಪದ್ದತಿಗಳ ಹೆಚ್ಚು ವಿನಿಯೋಗ
ಬದಲಾಯಿಸಿ- ಜಲಜನಕದ ಶಕ್ತಿ ತುಂಬಿದ ಉರವಲು(ಫ್ಯೂಲ್ )ಕೋಶಗಳ ಬಳಕೆಯಿಂದ ಪರಿಸರ ಸ್ನೇಹಿ ರೂಪದ ಇಂಧವನ್ನು ಸೃಷ್ಟಿಸಿ ಅದನ್ನು ಪುನರ್ನವೀಕರಣಕ್ಕೆ ಬಳಸಬಹುದಾಗಿದೆ. ನ್ಯಾನೊನಿರ್ಮಿತ ವಸ್ತುಗಳಲ್ಲಿನ ಕೋಶಗಳು ವಿಭಜಿತ ಕಣಗಳನ್ನು ಇಂಗಾಲದ ಒಟ್ಟುಗೂಡುವ ಬೆಂಬಲದೊಂದಿಗೆ ಲೋಹದ 1-5 nm.(ನ್ಯಾನೊ ಮೀಟರ್) ವ್ಯಾಸದ ಕಣಗಳನ್ನು ಸಂಯುಕ್ತಗೊಳಿಸಿ(ಸಂಯೋಜಿಸಿ) ಪರಿಸರ ಸ್ನೇಹಿ ಇಂಧನ ಬಳಕೆಗೆ ನೆರವಾಗಬಹುದು. ಜಲಜನಿಕದ ಸಂಗ್ರಹದ ಸೂಕ್ತ ವಸ್ತುಗಳು ಸಣ್ಣ ನ್ಯಾನೊಗಾತ್ರದ ರಂಧ್ರಗಳುಳ್ಳದ್ದಾಗಿರುತ್ತದೆ.
- ಆದ್ದರಿಂದ ನ್ಯಾನೊನಿರ್ಮಿತ ವಸ್ತುಗಳಾದ ನ್ಯಾನೊಟ್ಯೂಬ್ಸ್ ,ಝಿಯೊಲೈಟ್ಸ್ ,ಅಥವಾ ಅಲಾನೇಟ್ಸ್ ಸಂಯುಕ್ತಗಳು ಸದ್ಯ ಅನ್ವೇಷಣಾ ಹಂತದಲ್ಲಿವೆ. ನ್ಯಾನೊತಂತ್ರಜ್ಞಾನವು ಎಂಜಿನ್ ಗಳಲ್ಲಿನ ದಹನಶಕ್ತಿಯಲ್ಲಿ ಬಿಡುಗಡೆಯಾಗುವ ಮಾಲಿನ್ಯದ ಕಣಗಳನ್ನು ನ್ಯಾನೊಸಣ್ಣ ರಂಧ್ರದ ಕೊಳವೆ ಮೂಲಕ ಶುದ್ಧೀಕರಿಸಲು ಈ ತಂತ್ರಜ್ಞಾನವು ಬಳಕೆಯಾಗುತ್ತಿದೆ.
- ಇದು ಕೊಳವೆಯ ಇಂಗಾಲ ಮಾರ್ಗವನ್ನು ಸ್ವಚ್ಛಗೊಳಿಸುವುದಲ್ಲದೇ ನ್ಯಾನೊಪರ್ಟಿಕಲ್ಸ್ ನ ಕಣಗಳ ವಿಭಜನೆ ಮೂಲಕ ಸಿಲಿಂಡರ್ ಗೆ ಲೇಪಿತ ನ್ಯಾನೊಪರ್ಟಿಕಲ್ಸ್ ಗಳ ಕಾರ್ಯವನ್ನು ಗಮನಿಸುತ್ತದೆ.ಇದರಲ್ಲಿ ಪರಿಸರಸ್ನೇಹಿ ಶಕ್ತಿಮೂಲಗಳನ್ನು ಸೂಕ್ತ ಪ್ರಮಾಣದಲ್ಲಿ ಅಳವಡಿಸಬಹುದಾಗಿದೆ.
ಬ್ಯಾಟರಿಗಳ ಮರುಬಳಕೆ
ಬದಲಾಯಿಸಿ- ಬ್ಯಾಟರಿಗಳಲ್ಲಿನ ಸಾಮರ್ಥ್ಯ ಗಾತ್ರ ಪ್ರಮಾಣವು ಅತ್ಯಂತ ಕಡಿಮೆ ಇರುವುದರಿಂದ ಇವುಗಳ ಜೀವಿತಾವಧಿಯು ಕೂಡಾ ಕಡಿಮೆ ಇರುತ್ತದೆ. ಇಂತಹ ಮಿತಿಯನ್ನು ನೀಗಿಸಲು ಪುನ:ಶ್ಚೇತನ (ರಿಚಾರ್ಜ್ )ಇಲ್ಲವೇ ಬದಲಿಸಬೇಕಾಗುತ್ತದೆ. ದೊಡ್ಡಪ್ರಮಾಣದಲ್ಲಿ ಬಳಸಿದ ಬ್ಯಾಟರಿಗಳ ವಿಲೆವಾರಿ ಅಥವಾ ಅವುಗಳ ಒಟ್ಟುಗೂಡುಸುವಿಕೆಯು ಒಂದು ಸಮಸ್ಯೆಯನ್ನು ತಂದೊಡ್ಡಿದೆ.
- ಹೆಚ್ಚು ಪ್ರಮಾಣದ ಶಕ್ತಿ ಹೊಂದಿದ ಅಥವಾ ಪುನ:ಶ್ಚೇತನದ ಇಲ್ಲವೇ ಅತ್ಯುನ್ನತ ಕ್ಷಮತೆಯ ಬ್ಯಾಟರಿಗಳ ಬಳಕೆಯು ವಿಲೇವಾರಿ ಸಮಸ್ಯೆಯನ್ನು ಕಡಿಮೆ ಮಾಡಬಹುದು.ಇಲ್ಲಿ ನ್ಯಾನೊವಸ್ತುಗಳ ಬಳಕೆಯಿಂದ ಕೂಡಾ ನಿರುಪಯುಕ್ತವಾದವುಗಳನ್ನು ಮರುಬಳಕೆಗೆ ವಿನಿಯೋಗಿಸಬಹುದು.
ಮಾಹಿತಿ ಮತ್ತು ಸಂವಹನ ಅಥವಾ ಸಂಪರ್ಕ
ಬದಲಾಯಿಸಿಸದ್ಯದ ಉನ್ನತ ತಂತ್ರಜ್ಞಾನದಲ್ಲಿನ ಪ್ರಕ್ರಿಯೆಗಳು ಸಾಂಪ್ರದಾಯಿಕ ನೀತಿ-ನಿಯಮಗಳನ್ನು ಒಳಗೊಂಡಿವೆ. ಆದರೆ ಸುಧಾರಿತ ನ್ಯಾನೊತಂತ್ರಜ್ಞಾನವು ಸದ್ದಿಲ್ಲದೇ ಈ ಕ್ಷೇತ್ರದಲ್ಲಿ ಕಾಲಿಡುತ್ತಿದೆ. ಈಗಾಗಲೇ ಸಮೂಹ ಸರ್ಕ್ಯುಟ್ ಗಳು ನ್ಯಾನೊಸ್ಕೇಲ್ (50 nm ಮತ್ತು ಕೆಳಗೆ)ಇದ್ದು ಇವುಗಳ ಕಾರ್ಯಚಟುವಟಿಕೆ ಕೂಡಾCPUಗಳು ಅಥವಾDRAMಉಪಕರಣಗಳಲ್ಲಿ ಕಾರ್ಯಪ್ರವೃತ್ತವಾಗಿದೆ.
ಮೆಮರಿ ಸಂಗ್ರಹ
ಬದಲಾಯಿಸಿ- ಈ ಹಿಂದೆ ಟ್ರಾನ್ಸಿಸ್ಟರ್ ಗಳಲ್ಲಿ ಎಲೆಕ್ಟ್ರಾನಿಕ್ ಮೆಮರಿಗಳನ್ನು ಬಳಸಲಾಗುತಿತ್ತು.ಇಂತಹ ಮೆಮರಿ ವಿನ್ಯಾಸಗಳು ಇವುಗಳ ರಚನೆಯನ್ನು ಅವಲಂಬಿಸಿದ್ದವು. ಎಲೆಕ್ಟ್ರಾನಿಕ್ ಮೂಲದ ಕ್ರಾಸ್ ಬಾರ್ ಸ್ವಿಚ್ ನಲ್ಲಿನ ಇತ್ತೀಚಿನ ಸಂಶೋಧನೆಯಿಂದಾಗಿ ಬದಲಿ ಅಂತರ ಸಂಪರ್ಕ ಸಮೂಹ ಕ್ಕೆ ಒಂದು ವರದಾನವೆನಿಸಿದೆ.ಅಲ್ಟ್ರಾ ಹೈಡೆನ್ಸಿಟಿ ಮೆಮರಿಗಳನ್ನು ಸೂಕ್ತ ವಯರ್ ಗಳ ಮೂಲಕ ಹೊಸ ಸಂವಹನದ ಸೌಲಭ್ಯವನ್ನು ಅಳವಡಿಸಬಹುದಾಗಿದೆ.
- ಈ ಕ್ಷೇತ್ರದಲ್ಲಿ ಎರಡು ಉತ್ಪಾದಕರು ಪ್ರಮುಖರಾಗಿದ್ದಾರೆ;ನ್ಯಾನ್ ಟೆರೊ ಇದು ಇಂಗಾಲದ ನ್ಯಾನ್ ಟ್ಯೂಬ್ ಮೂಲದನ್ಯಾನೊ-ರಾಮ್ನ್ನು ಕ್ರಾಸ್ ಬಾರ್ ಮೆಮರಿಯ ಹೊಸ ಆವಿಷ್ಕಾರಕ್ಕೆ ಒತ್ತು ನೀಡಿತು.ಹೆಲ್ವೆಟ್ -ಪ್ಯಾಕೇರ್ಡ್ ಕಂಪನಿಯು ಫ್ಲ್ಯಾಶ್ ಮೆಮರಿಯ ಬದಲಾಗಿ ಮೆಮ್ರಿಸ್ಟರ್ ಎಂಬುದನ್ನು ಅಭಿವೃದ್ಧಿಪಡಿಸಿದೆ.
ನೂತನ ಸೆಮಿಕಂಡಕ್ಟರ್ ಸಲಕರಣೆಗಳು-ಸಾಧನೆಗಳು
ಬದಲಾಯಿಸಿ- ಸ್ಪಿಂಟ್ರೊನಿಕ್ಸ್ ಆಧಾರದ ಮೇಲೆ ಇತ್ತೀಚಿಗೆ ಅಭಿವೃದ್ದಿಪಡಿಸಿದ ನೂತನ ಸಲಕರಣೆಯನ್ನು ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ. ವಸ್ತುವೊಂದರ ಸ್ಥಿರತೆಯು(ಎಲೆಕ್ಟ್ರಾನ್ ಗಳ ಗಿರಕಿ ಹೊಡೆಯುವಿಕೆ) ಹೊರವಲಯದ ಕ್ಷೇತ್ರ ಅವಲಂಬನೆಯನ್ನು ಮ್ಯಾಗ್ನೆಟೊರೆಸಿಸ್ಟನ್ಸ್ ಎಂದು ಕರೆಯಲಾಗುತ್ತದೆ. ಇದರ ಪರಿಣಾಮವನ್ನು ಸಮರ್ಪಕವಾಗಿ ಬಳಸಬಹುದಾಗಿದೆ.(GMR - ಜೈಂಟ್ ಮ್ಯಾಗ್ನೆಟೊ-ರೆಸಿಸ್ಟನ್ಸ್)
- ನ್ಯಾನೊಗಾತ್ರದ ವಸ್ತುಗಳಿಗಾಗಿ ಉದಾಹರಣೆಗಾಗಿ ಎರಡು ಫೆರ್ರೊಮ್ಯಾಗ್ನೆಟಿಕ್ ಕಣಗಳನ್ನು ನಾನ್ ಮ್ಯಾಗ್ನೆಟಿಕ್ ಪದರಿನಿಂದ ಅಲ್ಲಿರುವ ನ್ಯಾನೊಮೀಟರ್ಸ್ ದಪ್ಪ (ಉದಾ:Co-Cu-Co)ಕಣಗಳನ್ನು ಬೇರ್ಪಡಿಸಲು ಈ ತಂತ್ರಜ್ಞಾನದ ಪ್ರಯೋಜನವಾಗಿದೆ. ಈ GMR ಪರಿಣಾಮವು ಅಂಕಿಅಂಶಗಳ ಸಂಗ್ರಹಕ್ಕೆ ಹಾರ್ಡ್ ಡಿಸ್ಕ್ ನಲ್ಲಿ ಹೆಚ್ಚು ಅವಕಾಶ ಕಲ್ಪಿಸುತ್ತದೆ. ಅದು ಅಲ್ಲದೇ ವಿವಿಧ ಶ್ರೇಣಿಗಳಲ್ಲಿ ಕಾರ್ಯಾನುಕೂಲ ಮಾಡಿಕೊಡುತ್ತದೆ. ಟನ್ನೆಲ್ಲಿಂಗ್ ಮ್ಯಾಗ್ನೆಟೊರೆಸಿಸ್ಟನ್ಸ್(TMR)ಎಂದು ಕರೆಯಿಸಿಕೊಳ್ಳುವ ಇದುGMR ಗೆ ಸಮೀಪವಾಗಿದೆ.
- ಅಂದರೆ ಟನ್ನೆಲ್ ನಲ್ಲಿರುವ ಎಲೆಕ್ಟ್ರಾನಿಕ್ ಗಳ ಗಿರಿಕಿ ಹೊಡೆಯಲು ಅದಕ್ಕೆ ಹೊಂದಿಕೊಂಡ ಫೆರ್ರೊಮ್ಯಾಗ್ನೆಟಿಕ್ ಪದರುಗಳಿಗೆ ಅಂಟಿಕೊಂಡಿರುತ್ತದೆ. ಎರಡೂ GMR ಮತ್ತು TMR ಗಳನ್ನು ಕಂಪ್ಯುಟರ್ ಗಳಲ್ಲಿ ದೃಢ ಮತ್ತು ನಿಶ್ಚಿತ ಮೆಮರಿಯ ಸಂಗ್ರಹಣೆಗೆ ಬಳಕೆ ಮಾಡಲಾಗುತ್ತದೆ.ಆದ್ದರಿಂದ ಇದನ್ನು ಮ್ಯಾಗ್ನೆಟಿಕ್ ರಾಂಡಮ್ ಎಕ್ಸೆಸ್ ಮೆಮರಿ ಅಥವಾ MRAMಎಂದೂ ಕರೆಯಲಾಗುತ್ತದೆ.
- ಫ್ರಾನ್ಸ್ ನ ಗ್ರೆನೊಬಲ್ ನಲ್ಲಿರುವ ಎಲೆಕ್ಟ್ರಾನಿಕ್ಸ್ ಮತ್ತು ಇನ್ ಫಾರ್ಮೇಶನ್ ಟೆಕ್ನಾಲಜಿ ಪ್ರಯೋಗಾಲಯದಲ್ಲಿ 1999ರಲ್ಲಿ ಟ್ರಾನ್ಸಿಸ್ಟರ್ ಅಭಿವೃದ್ಧಿಪಡಿಸಿದ ಪರಿಣತರು MOSFET ಟ್ರಾನ್ಸಿಸ್ಟರ್ ನ ಪ್ರಮುಖ ಪರಿಮಿತಿಗಳನ್ನು 18 nm ನ ವ್ಯಾಸದ ಕಣಗಳ ಮೊತ್ತದ ಅಳವಡಿಕೆ ಮೂಲಕ ಗಮನಿಸಿದರು.(ಅಂದಾಜು ಇದರಲ್ಲಿ 70 ಪರಮಾಣುಗಳನ್ನು ಒಂದರ ಪಕ್ಕ ಇನ್ನೊಂದನ್ನು ಜೋಡಿಸಲಾಗಿತ್ತು.) ಇದು 2003ರಲ್ಲಿ ನಿರ್ಮಿಸಿದ ಕೈಗಾರಿಕಾ ಟ್ರಾನ್ಸಿಸ್ಟರ್ ನ ಹತ್ತನೆಯ ಒಂದು ಭಾಗದಷ್ಟಿತ್ತು. ( 2003ರಲ್ಲಿ 130nm,2004ರಲ್ಲಿ 90nm,2005ರಲ್ಲಿ 65nmಮತ್ತು 2007ರಲ್ಲಿ 45nm ರಷ್ಟಿತ್ತು). ಇದು €1 coin ಮೇಲಿರುವ ಏಳು ಬಿಲಿಯನ್ ಜಂಕ್ಷನ್ ಗಳನ್ನು ಕ್ರೋಡಿಕರಿಸಿದೆ.
- CMOS ಟ್ರಾನ್ಸಿಸ್ಟರ್, ಕೇವಲ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳಲು ಸರಳ ಮತ್ತು ಸುಲಭದ ಸಂಶೋಧನೆಯೆನಿಸಿಲ್ಲ. ಒಂದು ರಸಾಯನಿಕ ಕಣ ಇದರಲ್ಲಿ ಪರಿವರ್ತನೆಯನ್ನು ಹೇಗೆ ತೋರಿಸುತ್ತದೆ ಎಂಬುದು ಇಲ್ಲಿ ಪ್ರಮುಖ ಅಂಶವಾಗಿದೆ. ಇಂದು ಸರ್ಕ್ಯುಟ್ ಮೇಲೆ ದೊಡ್ಡ ಪ್ರಮಾಣದ ಸಹಭಾಗಿತ್ವದ ಟ್ರಾನ್ಸಿಸ್ಟರಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ.ಅದೂ ಅಲ್ಲದೇ ಕೈಗಾರಿಕಾ ಮಟ್ಟದಲ್ಲಿ ಇದನ್ನು ರಚನೆ ಮಾಡುವುದು ಅಸಾಧ್ಯವಾದ [೬]ಮಾತು.
ಎಲೆಕ್ಟ್ರಾನಿಕ್ ಅಧ್ಯಯನ ಮತ್ತು ವಿಧಾನಗಳ ಪತ್ತೆಯ ನೂತನ ಉಪಕರಣಗಳು
ಬದಲಾಯಿಸಿ- ಆಧುನಿಕ ಸಂಪರ್ಕ ತಂತ್ರಜ್ಞಾನದಲ್ಲಿ ಹಳೆಯಕಾಲದ ಎನಲಾಗ್ ಎಲಿಕ್ಟ್ರಿಕಲ್ ಉಪಕರಣಗಳು ಈಗ ಸಾಮರ್ಥ್ಯ ಮತ್ತು ಅವುಗಳ ಸುದೀರ್ಘ ಕಾರ್ಯವಿಧಾನದಿಂದಾಗಿ ಆಪ್ಟೊಎಲೆಕ್ಟ್ರಾನಿಕ್ ಸಾಧನಗಳು ತಮಗೆ ಜಾಗ ಮಾಡಿಕೊಂಡಿವೆ.ಅವುಗಳಿಗಿರುವ ಅತ್ಯದ್ಭುತ ಸಾಮರ್ಥ್ಯ ಮತ್ತು ಬ್ಯಾಂಡ್ ವಿಡ್ತ್ ವೈಶಾಲ್ಯವೇ ಕಾರಣವಾಗಿದೆ. ಎರಡು ಭರವಸೆ ಹುಟ್ಟಿಸುವ ಉದಾಹರಣೆಗಳೆಂದರೆ: ಫೊಟೊನಿಕ್ ಕ್ರಿಸ್ಟಲ್ಸ್ ಮತ್ತು ಕ್ವಾಂಟಮ್ ಡಾಟ್ಸ್
- ಫೊಟೊನಿಕ್ ಕ್ರಿಸ್ಟಲ್ಸ್ ಗಳು ಕಾಲಕಾಲಕ್ಕೆ ಬದಲಾಗುವ ಬೆಳಕಿನ ವಕ್ರೀಭವನದ ಸೂಚ್ಯಂಕವನ್ನು ಬೆಳಕಿನ ವ್ಯವಸ್ಥೆ ರೂಪಿಸುತ್ತವೆ. ಅದರ ತರಂಗಾಂತರದ ವಿದ್ಯುತ್ ಕಾಂತೀಯ ಎಲೆಕ್ಟ್ರಾನಿಕ್ ನ ಅರ್ಧದಷ್ಟನ್ನು ಇಲ್ಲಿ ಉಪಯೋಗಿಸಲು ಅವಕಾಶ ಒದಗಿಸುತ್ತವೆ. ನಿಶ್ಚಿತ ಎಲೆಕ್ಟ್ರಾನಿಕ್ ತರಂಗಾಂತರದ ಬ್ಯಾಂಡ್ ಗ್ಯಾಪ್ ನಲ್ಲಿ ಬೆಳಕಿನ ಪ್ರಸರಣಕ್ಕೆ ಅನುಕೂಲವಾಗುವುದಲ್ಲದೇ ಇದು ಸೆಮಿಕಂಡಕ್ಟರ್ ಗಳನ್ನು ಹೋಲುತ್ತಿದ್ದರೂ ಎಲೆಕ್ಟ್ರಾನಿಕ್ಸ್ ಬದಲಾಗಿ ಫೊಟೊನ್ಸ್ ಗಳನ್ನು ಹೊಂದುತ್ತದೆ.
ಬೃಹತ್ ಉದ್ಯಮ
ಬದಲಾಯಿಸಿನ್ಯಾನೊತಂತ್ರಜ್ಞಾನದ ಬಳಕೆ ಬೃಹತ್ ಉದ್ಯಮಗಳಲ್ಲಿ ಅನಿವಾರ್ಯವೆನಿಸಿದೆ.
ಅಂತರಿಕ್ಷ
ಬದಲಾಯಿಸಿ- ಹಗುರ ಮತ್ತು ಬಲಿಷ್ಠ ಸಾಮಗ್ರಿಗಳು ವಿಮಾನಗಳಿಗೆ ಅತ್ಯಂತ ಅವಶ್ಯವಿದೆ, ಇದರಿಂದ ಇವುಗಳ ಉಡಾವಣಾ ಸಾಮರ್ಥ್ಯವೂ ಹೆಚ್ಚುತ್ತದೆ. ಅಂತರಿಕ್ಷ ನೌಕೆಗಳಿಗೂ ಹಗುರ ಸಾಮಗ್ರಿಗಳ ಬಳಕೆ ಪ್ರಮುಖ ಲಾಭವಾಗಿದೆ. ನ್ಯಾನೊತಂತ್ರಜ್ಞಾನವು ಉಪಕರಣಗಳ ಗಾತ್ರ ಮತ್ತು ಅದರ ಮೂಲಕ ಇಂಧನ ಬಳಕೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಸಹಕಾರಿಯಾಗುತ್ತದೆ.
- ನ್ಯಾನೊ ತಾಂತ್ರಿಕ ವಸ್ತುಗಳನ್ನು ಬಳಸಿ ಹ್ಯಾಂಗ್ ಗ್ಲೈಡರ್ ನಲ್ಲಿನ ಅರ್ಧದಷ್ಟು ತೂಕ ಕಡಿಮೆ ಮಾಡಲು ಮತ್ತು ಅದರ ಬಲ ಹಾಗು ಗಡಸುತನ ಹೆಚ್ಚಳಕ್ಕೆ ಇದು ನೆರವಾಗುತ್ತದೆ. ಹ್ಯಾಂಗ್ ಗ್ಲೈಡರ್ ಗಳಲ್ಲಿನ ಸೂಪರ್ ಕೆಪ್ಯಾಸಿಟರ್ ಗಳಿಗೆ ಹಾಗು ಪೂರಕ ಎಲೆಕ್ಟ್ರಿಕಲ್ ಮೋಟಾರಿಗೆ ಆಯಾ ಹವಾಮಾನದಲ್ಲಿ ತಕ್ಕಂತೆ ಬದಲಾವಣೆಯಾಗಲು ಸಹಕಾರಿಯಾಗುತ್ತದೆ.ಅಕ್ಷಾಂಶಗಳಲ್ಲಿನ ಏರುಪೇರುಗಳ ಮೇಲೆ ಸತತ ನಿಗಾ ಇಡಲು ಸಹ ಈ ತಂತ್ರಜ್ಞಾನ ಸಹಾಯ ನೀಡುತ್ತದೆ.
ನಿರ್ಮಾಣ-ರಚನೆ
ಬದಲಾಯಿಸಿನ್ಯಾನೊತಂತ್ರಜ್ಞಾನವು ಕಟ್ಟಡ ನಿರ್ಮಾಣವನ್ನು ವೇಗವಾಗಿ,ಅಗ್ಗದರದಲ್ಲಿ,ಸುರಕ್ಷಿತ ಮತ್ತು ವಿಭಿನ್ನವಾಗಿ ಮಾಡಲು ನೆರವಾಗುತ್ತದೆ. ನ್ಯಾನೊತಂತ್ರಜ್ಞಾನದ ಸ್ವಯಂ ಅಳವಡಿಕೆಯು ಗೃಹನಿರ್ಮಾಣದಿಂದ ಹಿಡಿದು ಗಗನಚುಂಬಿ ಕಟ್ಟಡಗಳ ವರೆಗೂ ಆಧುನಿಕ ನಿರ್ಮಾಣದ ಸೃಷ್ಟಿ,ತ್ವರಿತಗತಿ ಕೆಲಸ ಮತ್ತು ಮಿತವ್ಯಯವನ್ನು ಒದಗಿಸುತ್ತದೆ.
ಸಂಸ್ಕರಣಾಗರಗಳು
ಬದಲಾಯಿಸಿಉಕ್ಕು ಮತ್ತು ಅಲ್ಯುಮಿನಿಯಮ್ ಉತ್ಪಾದನೆಗಳಲ್ಲಿ ನ್ಯಾನೊತಂತ್ರ ಬಳಸುವದರಿಂದ ದೋಷಪೂರಿತ ವಸ್ತುಗಳ ಉತ್ಪಾದನೆಯನ್ನು ತಡೆಗಟ್ಟಬಹುದಾಗಿದೆ.
ವಾಹನ ತಯಾರಕರು
ಬದಲಾಯಿಸಿಅಂತರಿಕ್ಷ ನೌಕೆಗಳಂತೆ ಇಲ್ಲವೆ ವಿಮಾನಗಳಲ್ಲಿ ಹಗುರ ಮತ್ತು ಬಲಯುತ ವಸ್ತುಗಳ ಬಳಸಿದಂತೆ ಇತರ ವಾಹನಗಳಲ್ಲೂ ಇಂತಹ ತೂಕರಹಿತ ಸಾಮಗ್ರಿಗಳ ಬಳಕೆಯು ಅವುಗಳ ವೇಗ ಮತ್ತು ಸುರಕ್ಷತೆಗೆ ಕಾರಣವಾಗುತ್ತದೆ. ಕಂಬ್ಯೂಶನ್ ಎಂಜಿನ್ ಗಳು ತಮ್ಮ ಬಿಡಿಭಾಗಗಳು ಮತ್ತು ಶಾಖ ತಡೆಯುವ ಉತ್ತಮ ಸಾಮರ್ಥ್ಯ ಹೊಂದುತ್ತವೆ.
ಉಪಭೋಗದಾರರ(ಬಳಕೆದಾರರ) ವಸ್ತುಗಳು
ಬದಲಾಯಿಸಿ- ಈಗಾಗಲೇ ಗ್ರಾಹಕರ ಬಳಕೆವಸ್ತುಗಳ ಸುಲಭ ಸ್ವಚ್ಚತೆಗೆ ಅನುಕೂಲದಿಂದ ಹಿಡಿದು ಸ್ಕ್ರಾಚ್ ತಡೆಯಲು ಬೇಕಾಗುವ ಎಲ್ಲಾ ತರಹದ ಉತ್ಪನ್ನಗಳಿಗೆ ನ್ಯಾನೊತಂತ್ರಜ್ಞಾನ ನೂತನ ವಿಧಾನಗಳಿಗೆ ಹಾದಿ ಮಾಡಿಕೊಟ್ಟಿದೆ ಆಧುನಿಕ ಜವಳಿ ಉದ್ಯಮಗಳಲ್ಲಿ ಮಡಿಕೆ-ರಹಿತ,ಕಲೆರಹಿತ ಬಟ್ಟೆಗಳ ಉತ್ಪಾದನೆಯಲ್ಲಿ ಇದು ಮಹತ್ತರ ಪಾತ್ರ ವಹಿಸುತ್ತಿದೆ.
- ಇದರಿಂದಾಗಿ "ಅದು ಹೊಂದಿದ ಎಲೆಕ್ಟ್ರಾನಿಕ್ "ಗಳನ್ನೊಳಗೊಂಡಂತೆ "ಸ್ಮಾರ್ಟ" ಎಂಬ ಮಧ್ಯಕಾಲೀನ ಉದ್ಯಮಕ್ಕೆ ಪ್ರೋತ್ಸಾಹ ನೀಡುತ್ತದೆ. ಈಗಾಗಲೇ ವಿವಿಧ ನ್ಯಾನೊಪರ್ಟಿಕಲ್ಸ್ ಸುಧಾರಿತ ಉತ್ಪನ್ನಗಳು ಬಳಕೆಯಲ್ಲಿವೆ. ಪ್ರಮುಖವಾಗಿ ಪ್ರಸಾದನ ಕ್ಷೇತ್ರದಲ್ಲಿ ನವೀನ ಉತ್ಪನ್ನಗಳು ಭರವಸೆ ಮೂಡಿಸಿವೆ.
ಆಹಾರ ಸಾಮಗ್ರಿ
ಬದಲಾಯಿಸಿ- ಆಹಾರ ಮತ್ತು ಜೈವಿಕ ಸಂಸ್ಕರಣಾ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಸವಾಲುಗಳಿಂದಾಗಿ ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಆಹಾರ ತಯಾರಿಕೆಯಲ್ಲಿ ನ್ಯಾನೊತಂತ್ರಗಾರಿಕೆಯು ತನ್ನ ದಕ್ಷತೆ ಸಾಮರ್ಥ್ಯದ ಮೂಲಕ ನೆರವಾಗುತ್ತಿದೆ. ಬ್ಯಾಕ್ಟೀರಿಯಾಗಳ ಪತ್ತೆ ಮತ್ತು ಆಹಾರ ಗುಣಮಟ್ಟದ ಉಸ್ತುವಾರಿ ನಿರ್ವಹಣೆಗಳನ್ನು ಜೈವಿಕ ಸಂವೇದಕಗಳ ಬಳಸಿ ಗ್ರಹಿಸಬಹುದಾಗಿದೆ.
- ಬುದ್ದಿಮತ್ತೆಯ ಕುಶಲ,ಕ್ರಿಯಾಶೀಲ ಮತ್ತು ಸರಳ ಪ್ಯಾಕೇಜಿಂಗ್ ವಿಧಾನಗಳು ಇತ್ಯಾದಿ ನ್ಯಾನೊಎನ್ ಕ್ಯಾಪ್ಸುಲೇಶನ್ ಮೂಲಕ ಮಾದರಿಗಳ ಸಂಗ್ರಹಿಸಿ ಉದ್ಯಮದ ವಿವಿಧ ಹಂತಗಳಲ್ಲಿ ನ್ಯಾನೊತಂತ್ರಜ್ಞಾನ ಬಳಸ [೭]ಬಹುದಾಗಿದೆ.
- ಆಹಾರ ಉತ್ಪಾದನೆ, ಸಂಸ್ಕರಣೆ,ಸುರಕ್ಷತೆ ಮತ್ತು ಪ್ಯಾಕೇಜಿಂಗ್ ವಲಯದಲ್ಲಿ ಯಶಸ್ವಿಯಾಗಿ ಬಳಸಲಾಗುತ್ತದೆ. ಆಹಾರ ಪ್ಯಾಕೇಂಜಿಂಗನಲ್ಲಿ ಬಳಸುವ ನ್ಯಾನೊಕಾಂಪೊಜಿಟ್ ಲೇಪನವು ಆಹಾರದ ಹೊರಭಾಗದಲ್ಲಿ ಯಾವ್ವುದೇ ಬ್ಯಾಕ್ಟೀರಿಯಾ ಇರದಂತೆ ಎಚ್ಚರವಹಿಸುವ ತಂತ್ರಗಾರಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ.
- ನ್ಯಾನೊಕಾಂಪೊಜಿಟ್ ಗಳು ಉತ್ಪಾದನಾ ಪ್ಯಾಕ್ ನಲ್ಲಿನ ಅನಿಲ ಪ್ರಮಾಣದ ಹೆಚ್ಚಳ ಅಥವಾ ಕಡಿಮೆ ನಿಖರ ಉತ್ಪಾದನೆಗಳನ್ನು ಅವಲಂಬಿಸಿದೆ. .ಇವು ತಾಂತ್ರಿಕ ಮತ್ತು ಶಾಖ ತಡೆಯ ಅಂಶಗಳನ್ನೂ ಹೊಂದಿ ಆಮ್ಲಜನಕದ ಸಂವಹನದ ಮಟ್ಟ ಕುಗ್ಗಿಸುತ್ತವೆ. ಆಹಾರಗಳಲ್ಲಿನ ಪ್ರತಿಕ್ರಿಯಾತ್ಮಕ ಸಂವೇದನೆಗಳನ್ನು ಪತ್ತೆ ಹಚ್ಚಲು ಈಗಾಗಲೇ ಸಂಶೋಧನೆ ನಡೆಯುತ್ತಿದ್ದು ಅಲ್ಲಿನ ರಸಾಯನಿಕ ಮತ್ತು ಜೀವಶಾಸ್ತ್ರದ ಅಂಶಗಳನ್ನು ನ್ಯಾನೊತಂತ್ರಜ್ಞಾನದ ಮೂಲಕ ವಿಷಯಗಳನ್ನು ಹೊರಗೆಡುವಲಾಗುತ್ತದೆ.
ನ್ಯಾನೊಅಹಾರಗಳು
ಬದಲಾಯಿಸಿ- ನೂತನ ಬಳಕೆದಾರರ ಉತ್ಪನ್ನಗಳು ನ್ಯಾನೊತಂತ್ರಜ್ಞಾನಗಳನ್ನು (PEN)ಮೂಲಾಧಾರವಾಗಿಟ್ಟು ಸುಮಾರು 609 ಉತ್ಪಾದನೆಗಳನ್ನು ನ್ಯಾನೊ ಪಟ್ಟಿಗೆ ಸೇರಿಸಲಾಗಿದೆ. PEN ನ ಪಟ್ಟಿಯಲ್ಲಿರುವ ಮೂರು ಆಹಾರೋತ್ಪನ್ನಗಳೆಂದರೆ ಕ್ಯಾನೊಲಾ ಬ್ರಾಂಡಿನ ಖಾದ್ಯ ತೈಲ ಕ್ಯಾನೊಲಾ ಆಕ್ಟಿವ್ ಆಯಿಲ,ನ್ಯಾನೊ ಟೀ ಎಂಬ ಚಹಾ ಮತ್ತು ಒಂದು ಚಾಕ್ ಲೇಟ್ ನ್ಯಾನೊಸೆಯುಟಿಕಲ್ಸ್ ಸ್ಲಿಮ್ ಕೇಕ್ ಚಾಕ್ ಲೇಟ್ ಮುಖ್ಯವಾದವುಗಳು.
- PEN ನ ವೆಬ್ ಸೈಟಿನಲ್ಲಿ ಕಂಪನಿ ನೀಡಿದ ಜಾಹಿರಾತಿನಂತೆ,ಕ್ಯಾನೊಲಾ ಆಯಿಲ್ ಇಸ್ರೇಲ್ ದೇಶದ ಶೆಮೇನ್ ಇಂಡಸ್ಟ್ರೀಸ್ ಕಂಪನಿಯ ಉತ್ಪಾದನೆ. ಇದು ನ್ಯಾನೊಡ್ರಾಪ್ ಎಂಬ ಸಂಯೋಜಕವನ್ನು ವಾಸನೆ,ರುಚಿಗೆ ತಕ್ಕಂತೆ ಹೊಂದಿದೆ.ಇದರಲ್ಲಿ ವಿಟಾಮಿನ್ ಗಳು,ಖನಿಜಗಳು ಮತ್ತು ಸಸ್ಯಜನ್ಯ ವಸ್ತುಗಳನ್ನು ಬಳಸಿ ಪಚನ ಕ್ರಿಯೆಗೆ ಅನುಕೂಲ ಮಾಡಲು ಸಂಯೋಜಕ ಮತ್ತು ಯೂರಿಯಾ(ಸಸ್ತನಿಗಳಲ್ಲಿನ ನೈಟ್ರೊಜನ್ ಸಂಯುಕ್ತಗಳ ಒಟ್ಟು ಪ್ರಮಾಣ) ಸೇರ್ಪಡೆ ಮಾಡಲಾಗಿರುತ್ತದೆ.
- U.S.ನ RBC ಲೈಫ್ ಸೈನ್ಸ್ ಇನ್ ಕಾ, ಕಂಪನಿಯ ಶೇಕ್ ನಲ್ಲಿ ನ್ಯಾನೊಕ್ಲಸ್ಟರ್ಸ್ ಗಳನ್ನು ಬಳಸಿ ಕೋಕೋದ ರುಚಿ ಮತ್ತು ಸವಿಯನ್ನು ಸಕ್ಕರೆ ಸೇರಿಸದೇ ಹೆಚ್ಚಿಸಲಾಗುತ್ತದೆ.ಈ ಕೋಕೋದಲ್ಲಿ ಆರೋಗ್ಯದ ಲಾಭ ದೊರೆಯುವಂತೆ ಮಾಡಲು ಕೆಲವು ರಸಾಯನಿಕ ಸಂಯೋಜನೆಗಳನ್ನು [೮]ಬಳಸಲಾಗಿದೆ.
ಮನೆಯಲ್ಲಿ ನೀರಿನ ಬಳಕೆ
ಬದಲಾಯಿಸಿಗೃಹೋಪಗಳಲ್ಲಿ ನ್ಯಾನೊತಂತ್ರಜ್ಞಾನದ ಅತ್ಯಂತ ಪ್ರಮುಖ ಅಳವಡಿಕೆಯೆಂದರೆ ಪಿಂಗಾಣಿ ಪಾತ್ರೆ, ವಸ್ತುಗಳು ಮತ್ತು ಗಾಜುನಿರ್ಮಿತ ವಸ್ತುಗಳ ಸ್ವಯಂ-ಸ್ವಚ್ಚತೆ ಮತ್ತು "ಸುಲಭ-ಶುದ್ದೀಕರಣ". ನ್ಯಾನೊಸೆರಾಮಿಕ್ ಪರ್ಟಿಕಲ್ಸ್ ಗೃಹಬಳಕೆಯ ಸಾಮಾನ್ಯ ವಸ್ತುಗಳ ಮೃದುತ್ವ ಮತ್ತು ಉಷ್ಣ ತಡೆಯುವ ಶಕ್ತಿಯನ್ನು ಒದಗಿಸುತ್ತದೆ.ಉದಾಹರಣೆಗೆ ಫ್ಲಾಟ್ ಐರ್ನ್ (ಸಮಪಾತಳಿಯ ಇಸ್ತ್ರಿ ಪೆಟ್ಟಿಗೆ).
ವಿಕಿರಣ ವಿಜ್ಞಾನ
ಬದಲಾಯಿಸಿಸೂರ್ಯನ ಪ್ರಖರ ಕಿರಣಗಳ ತಡೆಯುವ ಮತ್ತು ಪ್ರಖರ ಪ್ರತಿಫಲನ ತಡೆಯುವ ಅಲ್ಟ್ರಾಥಿನ್ ಪಾಲಿಮರ್ ಕೋಟಿಂಗ್ ಯುಳ್ಳ ಸನ್ ಗ್ಲಾಸ್ ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಕನ್ನಡಕ ಅಥವಾ ಗಾಜು ಮೂಲದ ವಸ್ತುಗಳು ಗೀರುವಿಕೆಯಿಂದ ಉಳಿಯಲು ವಿಶೇಷ ಲೇಪನ ನೀಡಲು ನ್ಯಾನೊತಂತ್ರಜ್ಞಾನ ನೆರವಾಗಿದೆ. ನ್ಯಾನೊಆಪ್ಟಿಕ್ಸ್ ಮೂಲಕ ಕಣ್ಣುಪೊರೆ ನಿವಾರಣೆ ಮತ್ತು ಕಣ್ಣಿನ ಲೇಸರ್ ಶಸ್ತ್ರಚಿಕಿತ್ಸೆಯಲ್ಲಿ ಇದು ಸಹಕಾರಿಯಾಗಿದೆ.
ಜವಳಿ ಉದ್ಯಮಗಳು
ಬದಲಾಯಿಸಿ- ಬಟ್ಟೆ ಉತ್ಪಾದನೆಗಳಲ್ಲಿ ಈಗಾಗಲೇ ಬಳಸಲಾಗುವ ನ್ಯಾನೊಫೈಬರ್ಸ್ ಉಡುಪುಗಳಲ್ಲಿ ನೀರಿನಾಂಶ ಮತ್ತು ಕೊಳೆಯನ್ನು ವೇಗವಾಗಿ ಹೊಡೆದು ಹಾಕುವಲ್ಲಿ ಹಾಗು ಬಟ್ಟೆಗಳ ಮಡಿಕೆ ಬೀಳದಂತೆ ನಿಗಾವಹಿಸಲು ನೆರವಾಗಿದೆ. ನ್ಯಾನೊತಂತ್ರಜ್ಞಾನದ ಮೂಲಕ ಪರಿಷ್ಕರಿಸಿದ ಜವಳಿ ಉತ್ಪನ್ನಗಳು ಪದೇ ಪದೇ ತೊಳೆಯುವ ಅಗತ್ಯವಿರುವದಿಲ್ಲ ಅವುಗಳಿಗೆ ಕಡಿಮೆ ಉಷ್ಣತೆ ಇದ್ದರೂ ಸಾಕು.
- ನ್ಯಾನೊತಂತ್ರಜ್ಞಾನದ ಮೂಲಕ ಸಣ್ಣ ಕಾರ್ಬನ್ ಕಣಗಳನ್ನು ಒಟ್ಟುಗೂಡಿಸುವ ಪ್ರಕ್ರಿಯು ಬಟ್ಟೆಯ ಎಲೆಕ್ಟ್ರೊಸ್ಟೆಡ್ (ಅಂದರೆ ಬಟ್ಟೆ ಧರಿಸಿದಾಗ ಅದು ದೇಹದ ಶಾಖದ)ಪರಿಣಾಮ ತಡೆಯುತ್ತದೆ. ಕೊರ್ನೆಲ್ಲ್ ವಿಶ್ವ ವಿದ್ಯಾಲಯದ ಟೆಕ್ಸ್ ಟೈಲ್ಸ್ ನ್ಯಾನೊಟೆಕ್ನಾಲಜಿ ಲ್ಯಾಬೊರೇಟರಿಯಲ್ಲಿ ಇನ್ನೂ ಹಲವಾರು ಅಳವಡಿಕೆಗಳನ್ನು ಬಳಸುವ ಕುರಿತ ಮತ್ತು ಸಂಶೋಧನೆ ಕುರಿತ ಅಧ್ಯಯನ ನಡೆಯುತ್ತಿವೆ.
ಪ್ರಸಾದನಗಳು (ಅಂಗ ಕಾಂತಿವರ್ಧಕಗಳು)
ಬದಲಾಯಿಸಿಸೂರ್ಯ ಕಿರಣದ ಪ್ರಭೆ ಪ್ರತಿಫಲನ ತಡೆಯುವ ಸನ್ ಸ್ಕ್ರ್ರೀನ್ ಗಳು ಈ ಕ್ಷೇತ್ರಕ್ಕೆ ಸೇರಿವೆ. ರಸಾಯನಿಕ UV (ಅಲ್ಟ್ರಾವೈಲೆಟ್ ) ರಕ್ಷಕಗಳು ಸಾಂಪ್ರದಾಯಿಕ ಪದ್ದತಿಗಳಿಂದಾಗಿ ನಿರಂತರ ಸ್ಥಿರತೆಯ ಕೊರತೆಯಿಂದ ಬಳಲುತ್ತಿವೆ. ಖನಿಜಯುಕ್ತ ನ್ಯಾನೊಪರ್ಟಿಕಲ್ಸ್ ನ ಸನ್ ಸ್ಕ್ರೀನ್ ನಲ್ಲಿ ಬಳಸುವ ಟಿಟಾನಿಯಮ್ ಡೈಆಕ್ಸೈಡ್ ಹಲವಾರು ಉಪಯೋಗಗಳನ್ನು ನೀಡುತ್ತದೆ. ಟಿಟಾನಿಯಮ್ ಆಕ್ಸೈಡ್ ಒಳಗೊಂಡ ನ್ಯಾನೊಪರ್ಟಿಕಲ್ಸ್ UV ರಕ್ಷಣಾಕವಚವು ಬಹಳಮಟ್ಟಿಗೆ ತನ್ನ ಲಕ್ಷಣಗಳಿಂದಾಗಿ ತನ್ನ ಗಾತ್ರ ಮತ್ತು ಆಕಾರಗಳನ್ನು ಸಾಂದರ್ಭಿಕವಾಗಿ ಬದಲಿಸಿಕೊಳ್ಳುತ್ತದೆ.
ಕೃಷಿ
ಬದಲಾಯಿಸಿ- ಕೃಷಿ ಕುರಿತು ಹೇಳುವುದಾದರೆ ಇದು ವ್ಯವಸಾಯದ ಮೂಲಕ ಆಹಾರ ಮತ್ತು ಸರಕನ್ನು ಉತ್ಪಾದಿಸುವದು. ನಾಗರೀಕತೆಯ ಬೆಳವಣಿಗೆಯಲ್ಲಿ ಕೃಷಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಕು ಪ್ರಾಣಿಗಳ ಸಾಕಾಣಿಕೆ ಮತ್ತು ಆಹಾರ ಉತ್ಪಾದನಾ ಹೆಚ್ಚಳ ನಾಗರೀಕತೆಯ ಬೆಳವಣಿಗೆಗೆ ಕಾರಣವಾಗುತ್ತದೆ. ಅಧುನಿಕ ಸಮಾಜದಲ್ಲಿ ಕೃಷಿಯ ಅಧ್ಯಯನವನ್ನು ಕೃಷಿ ವಿಜ್ಞಾನ ಎನ್ನುತ್ತಾರೆ. ಕೃಷಿ ವಿಶಾಲ ವೈವಿದ್ಯತೆ ಒಳಗೊಂಡಿದೆ. ಸೌಲಭ್ಯ ಮತ್ತು ತಂತ್ರಜ್ಞಾನ ಕೃಷಿ ವಲಯ ವಿಸ್ತರಿಸಿದೆ.
- ಅಧುನಿಕ ಉಳುಮೆ ಯಂತ್ರ, ನಿರಾವರಿ ಸೌಲಭ್ಯ ಗಳ ಮೂಲಕ ವ್ಯವಸಾಯ ಯೋಗ್ಯ ಭೂಮಿಯನ್ನಾಗಿ ಮಾಡಲಾಗುತ್ತದೆ. ಕೃಷಿಯನ್ನೇ ಜೀವನಾಧಾರ ಮಾಡಿಕೊಂಡು ಜನರು ಜೀವಿಸುತ್ತಿದ್ದರು. ಹಿಂದಿನ ಕಾಲದ ಜನರು ಕೃಷಿ ಉತ್ಪಾದನೆಯಲ್ಲಿ ಗುಣಮಟ್ಟ, ವೈವಿಧ್ಯತೆ ಕಾಯ್ದುಕೊಳ್ಳುತ್ತಿದ್ದರು. ಅಧುನಿಕ ಜಗತ್ತಿನಲ್ಲಿ ಕೃಷಿಯನ್ನು ಸಾವಯವ ಕೃಷಿ ಮತ್ತು ಕೈಗಾರಿಕಾ ಕೃಷಿ ಎಂದು ವಿಂಗಡಿಸಲಾಗಿದೆ. ಅಧುನಿಕ ಕೃಷಿಯಲ್ಲಿ ಅಭಿವೃದ್ದಿ ತಳಿ, ಕೀಟನಾಶಕ, ರಸಗೊಬ್ಬರ ಮತ್ತು ತಾಂತ್ರಿಕ ಬೆಳವಣಿಗೆ ಕೃಷಿ ಉತ್ಪಾದನೆಯನ್ನು ಹೆಚ್ಚಿಸಿದೆ. ಇದೇ ಸಮಯದಲ್ಲಿ ಇಂತಹ ಅಧುನಿಕ ಕೃಷಿ ಮಾನವನ ಆರೋಗ್ಯದ ಮೇಲೂ ಜೈವಿಕ ದುಷ್ಪರಿಣಾಮ ಉಂಟು ಮಾಡುತ್ತದೆ.
- ಮಾಂಸಕ್ಕಾಗಿ ಹಂದಿ ಮತ್ತು ಕೋಳಿಗಳ ತಳಿಯನ್ನು ಅಭಿವೃದ್ದಿ ಮಾಡುತ್ತಿದ್ದು ಇದರಲ್ಲಿ ವೇಗವಾಗಿ ಪ್ರಾಣಿಗಳ ಹಾರ್ಮೋನ್ ಬೆಳವಣಿಗೆ ಆಗುವುದರಿಂದ ಮತ್ತು ರಸಾಯನಿಕ ಬಳಕೆಯ ಮೂಲಕ ಸಾಕು ಪ್ರಾಣಿಗಳನ್ನು ಕೈಗಾರಿಕಾ ಸರಕಿನಂತೆ ಉತ್ಪಾದಿಸಲಾಗುತ್ತದೆ. ಕೃಷಿಯ ಉತ್ಪಾದನೆ ಗಳನ್ನು ಪ್ರಮುಖವಾಗಿ ಆಹಾರ, ಇಂಧನ, ಕಚ್ಚಾ ವಸ್ತು, ಔಷಧ, ಮಾದಕ ವಸ್ತುಗಳಾಗಿ ವಿಂಗಡಿಸಲಾಗಿದೆ.
- ನ್ಯಾನೊತಂತ್ರಜ್ಞಾನವು ಕೃಷಿ ಕ್ಷೇತ್ರದ ಸಂಪೂರ್ಣ ಸರಪಳಿ ಕಾರ್ಯಗಳಾದ ಆಹಾರ ಉದ್ಯಮ ಹಿಡಿದು ಉತ್ಪನ್ನಗಳ ಸುರಕ್ಷತೆ, ಉಳಿತಾಯ, ಸಂಸ್ಕರಣೆ, ಪ್ಯಾಕೇಜಿಂಗ, ಸಾರಿಗೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲೂ ಇದು ನೆರವಾಗುತ್ತದೆ. ನ್ಯಾನೊವಿಜ್ಞಾನದ ಪರಿಕಲ್ಪನೆಗಳು ಮತ್ತು ನ್ಯಾನೊತಂತ್ರಜ್ಞಾನಗಳ ಕೊಂಡಿಯು ಉತ್ಪಾದನಾ ಸರಣಿಯ ಸಂಪೂರ್ಣ ಬಲವರ್ಧನೆಗೆ ಸಹಕಾರಿಯಾಗುತ್ತವೆ.ಉತ್ಪಾದನಾ ಸರಪಣಿಯಲ್ಲಿ ಸಂಸ್ಕರಣೆಯ ಮರುರಚನೆ ಮತ್ತು ರಕ್ಷಣಾ ಪ್ರಕ್ರಿಯೆ ಮತ್ತು ಜನರ ಆಹಾರ ಬಳಕೆಯ ಕ್ರಮಗಳನ್ನು ಅದು ಪುನರ್ವ್ಯಾಖ್ಯಾನಕ್ಕೆ ಸಹಾಯಮಾಡುತ್ತದೆ. *ಕೃಷಿ ಕ್ಷೇತ್ರಕ್ಕೆ ಸಂಭಂದಿಸಿದಂತೆ ಹಲವಾರು ಸವಾಲುಗಳಿವೆ.ಅಂದರೆ ಕೃಷಿ ಪ್ರದೇಶದಲ್ಲಿನ ಕಡಿಮೆ ಇಳುವರಿ,ದೊಡ್ದ ಪ್ರಮಾಣದ ಕೃಷಿಗೆ ಯೋಗ್ಯವಲ್ಲದ ಭೂಮಿ,ಫಲವತ್ತಾದ ಭೂಪ್ರದೇಶದ ಇಳಿಮುಖ,ಉಪಮೂಲವಸ್ತುಗಳೆನಿಸಿದ ನೀರು,ರಸಾಯನಿಕ ಗೊಬ್ಬರಗಳು,ಕೀಟನಾಶಕಗಳು,ಉತ್ಪನ್ನಗಳ ಪೋಲು ಅಲ್ಲದೇ ಆಹಾರವಸ್ತುಗಳ ಸುರಕ್ಷಿತತೆಯ ವಿಷಯದಲ್ಲಿ ಸಹ ನ್ಯಾನೊತಂತ್ರಜ್ಣಾನದ ಅಳವಡಿಕೆ ಬಹುಮುಖ್ಯವಾಗಿದೆ. More details at http://www.sainsce.com/agriculture.aspx Archived 2013-03-31 ವೇಬ್ಯಾಕ್ ಮೆಷಿನ್ ನಲ್ಲಿ. [೯]'
ಆಕರಗಳು
ಬದಲಾಯಿಸಿ- ↑ Press Release: American Elements Announces P-Mite Line of Platinum Nanoparticles for Catalyst Applications, October 3, 2007
- ↑ Platinum nanoparticles bring spontaneous ignition Archived 2016-12-20 ವೇಬ್ಯಾಕ್ ಮೆಷಿನ್ ನಲ್ಲಿ., April 25, 2005
- ↑ Electrocatalytic oxidation of methanol
- ↑ Hillie, Thembela and Mbhuti according to sunil this method of catalysis will surely improve the performances of the old catalysis methodsHlophe. "ನ್ಯಾನೊಅಂತ್ರಜ್ಞಾನ ಮತ್ತು ಶುದ್ದ ನೀರಿನ ಸವಾಲು" Nature.com/naturenanotechonolgy. November 2007: Volume 2.
- ↑ Hillie, Thembela (2007). "Nanotechnology and the challenge of clean water". Nature Nanotechnology. 2: 663–664. doi:10.1038/nnano.2007.350.
{{cite journal}}
: Unknown parameter|coauthors=
ignored (|author=
suggested) (help) - ↑ Waldner, Jean-Baptiste (2007). Nanocomputers and Swarm Intelligence. London: ISTE. p. 26. ISBN 1847040020.
- ↑ Suresh Neethirajan, Digvir Jayas. (2009). Nanotechnology for food and bioprocessing industries. 5th CIGR International Technical Symposium on Food Processing, Monitoring Technology in Bioprocesses and Food Quality Management, Postdam, Germany. 8 p.
- ↑ Nano-foods: The Next Consumer Scare? http://www.islamonline.net/servlet/Satellite?c=Article_C&pagename=Zone-English-HealthScience%2FHSELayout&cid=1216208224637 Archived 2011-02-17 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "ಆರ್ಕೈವ್ ನಕಲು". Archived from the original on 2013-03-31. Retrieved 2010-02-04.
ಬಾಹ್ಯ ಕೊಂಡಿಗಳು
ಬದಲಾಯಿಸಿ- Overview of Nanotechnology Applications
- http://www.sainsce.com/PDF/Nanotechnology-Sainsce.pdf[ಶಾಶ್ವತವಾಗಿ ಮಡಿದ ಕೊಂಡಿ]