ನೊಣವಿನಕೆರೆ ರಾಮಕೃಷ್ಣಯ್ಯ

ಬೆಂಗಳೂರಿನ ಐ.ಟಿ.ಐ ನಲ್ಲಿ ಅಧಿಕಾರಿಯಾಗಿ, ಕೆಲಸ ನಿರ್ವಹಿಸಿ ನಿವೃತ್ತರಾದ ನೊಣವಿನಕೆರೆ ರಾಮಕೃಷ್ಣಯ್ಯನವರಿಗೆ ದೂರದರ್ಶನದಲ್ಲಿ ನಟನೆಯ ಗೀಳೂ ಆವರಿಸಿದೆ. ಐಟಿಐಲಲಿತಕಲಾಸಂಘದಲ್ಲಿ ಕ್ರಿಯಾಶೀಲರಾಗಿದ್ದರು. ರಾಮಕೃಷ್ಣಯ್ಯ ವೃತ್ತಿಯಲ್ಲಿ ವಕೀಲರು. ಬಹುಶಃ ೩ ವರ್ಷ ಕೆಲಸಮಾಡಿದರು. ಒಂದು ಪ್ರಮುಖ ವಿಶಯವೆಂದರೆ ವಕೀಲರಾಗಿ ನಟಿಸುವ ಅವಕಾಶ ಅವರಿಗೆ ದೊರೆತಿದೆ. ಈ ಎರಡೂರಂಗಗಳ ಮಧ್ಯೆ ಒಪ್ಪಂದಮಾಡಿಕೊಳ್ಳುತ್ತಾ ಜೀವನ ರಂಗದಲ್ಲಿ ಯಶಸ್ವಿಯಾಗಿದ್ದಾರೆ. ಕೆಲಸದಲ್ಲಿದ್ದಾಗಲೆ ಕನ್ನಡ ಎಮ್.ಎ. ಹಾಗೂ ಕಾನೂನು ಪದವೀಧರರಾದರು.

ಜನನ, ಹಾಗೂ ಪರಿವಾರ ಬದಲಾಯಿಸಿ

ತಿಪಟೂರು ಜಿಲ್ಲೆಯ ನೊಣವಿನಕೆರೆ ವಾಸಿ, ತಂದೆ ಡಾ. ನರಸಿಂಹಯ್ಯ,; ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಉದ್ಯೋಗ. ಅಜ್ಜ , ಗೊಂಬೆಆಟ ಪ್ರದರ್ಶಿಸುತ್ತಿದ್ದರು. ಅವರಿಗೆ ಪಿಟೀಲು ಬಾರಿಸುವುದು ಅತಿ ಮುದಕೊಡುತ್ತಿತ್ತು. ಹರಿಕಥೆಯ ಪ್ರಸಂಗಗಳನ್ನು ಮಾಡುತ್ತಿದ್ದರು. ತಾತನ ಸಂಗದಲ್ಲಿದ್ದರಿಂದ ಅವೆಲ್ಲಾ ವಿದ್ಯಗಳೂ ತಂದೆಯವರಿಗೆ ಹಸ್ತಗತವಾಗಿದ್ದವು. ಕಲಾವಿದರ ಕುಟುಂಬ. ತಿಪಟೂರಿನ ರಾಮಸ್ವಾಮಿ ರಾಮಕೃಷ್ಣಯ್ಯನವರ ಸೋದರ ಮಾವ. ಅವರು ವರನಟ ಡಾ. ರಾಜಕುಮಾರ್ ಗೆ ಬಹಳ ಬೇಕಾದವರು.

ನಾಟಕ ಕಲೆಗೆ ದೊರೆತ ಬೆಂಬಲ ಬದಲಾಯಿಸಿ

ಬೆಂಗಳೂರಿನ ಎಚ್.ಎಮ್.ಟಿ,ಐ.ಟಿ.ಐ, ಬಿ.ಇ.ಎಲ್, ಮೈಕೋ ಮೊದಲಾದ ಕಾರ್ಖಾನೆಗಳ ೪-೫ ದಶಗಳಕಾಲ ಕಾಲ ನಾಟಕ ಚಟುವಟಿಕೆಗಳಲ್ಲಿ ಅತ್ಯಂತ ಕ್ರಿಯಾಶೀಲವಾಗಿ ದುಡಿದಿದ್ದರು. 'ಬೆನಕ', 'ಸ್ಪಂದನ', 'ಸಮುದಾಯ,' ಗಳಂತಹ 'ದೊಡ್ಡ ರಂಗ ತಂಡ'ಗಳಿಗೆ ಸರಿಸಾಟಿಯಾಗಿ ಅಥವಾ ಅವಕ್ಕೂ ಮಿಗಿಲಾಗದ ರಂಗಚಟುವಟಿಕೆಗಳು ಕಾರ್ಖಾನೆಗಳಲ್ಲಿ ಜರುಗುತ್ತಿದ್ದವು. ಸಾರ್ವಜನಿಕ ಕೈಗಾರಿಕಾವಲಯವು ಟೆಲಿವಿಶನ್ ಧಾರಾವಾಹಿಗಳಿಗೆ ಹೆಚ್ಚಿನ ಸಂಖ್ಯೆಯ ಕಲಾವಿದರನ್ನು ನೀಡಿವೆ. ಕಾರ್ಖಾನೆಗಳ ಆಡಳಿತ ಮಂಡಲಿಗಳು ರಂಗತಾಲೀಮುಗಳಿಗೆ ರಜೆಯ ಸೌಲಭ್ಯ ಕೊಡುತ್ತಿದ್ದವು. ಹಣಕಾಸಿನ ನೆರವನ್ನೂ ಪಡೆಯುವ ಸೌಲಭ್ಯಗಳಿದ್ದವು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಾರ್ಮಿಕರಿಗೆ ಮತ್ತೆ ಕೆಲಸಕ್ಕೆ ಹಾಜರಾದಾಗ ನವಚೈತನ್ಯಗಳಿಸಿ ಅವರ ಕೆಲಸದಲ್ಲಿ ದಕ್ಷತೆ ಹೆಚ್ಚುತ್ತಿದ್ದ ಸಂಗತಿಗಳು ಬೆಳಕಿಗೆ ಬಂದವು.

'ರಾಮಕೃಷ್ಣಯ್ಯನವರು, 'ದೂರದರ್ಶನದ ಧಾರಾವಾಹಿ'ಗಳಿಗೆ ಕಥೆಬರೆದು ನಿರ್ದೇಶಿಸಿದರು. ಅವರ 'ನೆರೆಹೊರೆ ಧಾರಾವಾಹಿ', ಬಹಳ ಜನಪ್ರಿಯತೆಗಳಿಸಿತ್ತು. 'ಟೆಲೆಫಿಲಂಸ್ ' ಗಳಲ್ಲೂ ನಟಿಸಿದರು. 'ಹಲವಾರು ಧಾರಾವಾಹಿಗಳಲ್ಲಿ ವಕೀಲರ ಪಾತ್ರ, ಮೊದಲಾದ ಪ್ರಮುಖಪಾತ್ರವಹಿಸಿದ್ದರು.

  • ಜಗಳಗಂಟಿಯರು,
  • ಸಾಹಸ ಲಕ್ಷ್ಮಿಯರು,
  • ಜೀವನ,
  • ಮನ್ವಂತರ,
  • ಮುಕ್ತ

ಆಕಾಶವಾಣಿಯ ಗ್ರಾಮವಿಕಾಸ ಯೋಜನೆಗೆ ಸಹಾಯ ಬದಲಾಯಿಸಿ

ಆಕಾಶವಾಣಿಗೆ ಗ್ರಾಮವಿಕಾಸ ಯೋಜನೆಗಳ ಬಗ್ಗೆ ಸಾಕಷ್ಟು ನಾಟಕಗಳನ್ನು ಬರೆದುಕೊಟ್ಟರು.

ಪ್ರಕಟಣೆಗೆ ಸಿದ್ಧವಾದ ಕಥಾಸಂಕಲನಗಳು ಬದಲಾಯಿಸಿ

  • ಮಿಸ್ಡ್ ಕಾಲ್ಸ್ ಹಾಸ್ಯಸಂಕಲನ.
  • ಪ್ರೇಮದುಂಗುರ ಕಥಾಸಂಕಲನಗಳು.

ಬಣ್ಣ ಅಭಿನಯ ಶಾಲೆಯಲ್ಲಿ ಬದಲಾಯಿಸಿ

'ಕನ್ನಡ ಟೆಲೆವಿಶನ್ ಧಾರಾವಾಹಿ'ಗಳಲ್ಲಿ ಅಭಿನಯ, ವಕೀಲಿವೃತ್ತಿ, ಜೊತೆಗೆ, 'ನಾಗರಾಜ ಕೋಟೆ'ಯವರ ’ಬಣ್ಣ ಅಭಿನಯ ಶಾಲೆ’ಯಲ್ಲಿ ರಂಗಭೂಮಿಯ ಕುರಿತು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.