ನೊಂಗ್ರಿಯಾಟ್
ನೊಂಗ್ರಿಯಾಟ್ ಈಶಾನ್ಯ ಭಾರತದ ಮೇಘಾಲಯ ರಾಜ್ಯದ ಪೂರ್ವ ಖಾಸಿ ಗುಡ್ಡಗಳ ಜಿಲ್ಲೆಯಲ್ಲಿರುವ ಒಂದು ಹಳ್ಳಿಯಾಗಿದೆ.[೨] ಇದು ಪ್ರಾಯಶಃ ತನ್ನ ಜೀವಂತ ಬೇರುಗಳ ಸೇತುವೆಗಳಿಗೆ ಅತ್ಯಂತ ಪರಿಚಿತವಾಗಿದೆ; ಒಂದು ಜಿಂಗ್‍ಕಿಯೆಂಗ್ ನೊಂಗ್ರಿಯಾಟ್ ಎಂದು ಕರೆಯಲ್ಪಡುವ ಹೃದಯಸ್ಪರ್ಶಿ ಎರಡು ಅಂತಸ್ತಿನ ತೂಗು ಸೇತುವೆಯಾಗಿದೆ. ಈ ಹಳ್ಳಿಯು ಮೂರು ಕಾರ್ಯಾತ್ಮಕ ಬೇರು ಸೇತುವೆಗಳನ್ನು ಹೊಂದಿದೆ.[೩] ಇವುಗಳನ್ನು ಕೈಗಳಿಂದ ನಿಪುಣತೆಯಿಂದ ತಯಾರಿಸಲಾಗಿದೆ. ಖಾಸಿ ಜನರು ಖಾಸಿ ಗುಡ್ಡಗಳಲ್ಲಿ ಹೀಗೆ ಶತಮಾನಗಳಿಂದ ವಿರುದ್ಧ ಬದಿಗಳ ಮೇಲಿನ ಆಲದ ಮರಗಳ ವಾಯವೀಯ ಬೇರುಗಳನ್ನು ಒಟ್ಟಾಗಿ ಹೆಣೆದು ನೆಯ್ದು ತಯಾರಿಸಿದ್ದಾರೆ. ಸರಳವಾಗಿ ಡಬಲ್ ಡೆಕರ್ ಎಂದು ಹೆಚ್ಚು ಪರಿಚಿತವಾಗಿರುವ ಜಿಂಗ್‍ಕಿಯೆಂಗ್ ನೊಂಗ್ರಿಯಾಟ್ ಅಂತರರಾಷ್ಟ್ರೀಯ ದೂರದರ್ಶನ ಕಾರ್ಯಕ್ರಮಗಳಲ್ಲಿ ಪ್ರದರ್ಶಿತವಾಗಿದೆ. ನೊಂಗ್ರಿಯಾಟ್‍ನಲ್ಲಿನ ನದಿಯ ಗತಿಗೆ ವಿರುದ್ಧವಾಗಿ ಕಾರ್ಯದಲ್ಲಿರುವ ಮತ್ತೊಂದು ಜೀವಂತ ಬೇರು ಸೇತುವೆಯಿದೆ, ಜೊತೆಗೆ ಬೇರುಗಳು ಮತ್ತು ಉಕ್ಕಿನ ತಂತಿ ಎರಡರಿಂದಲೂ ನಿರ್ಮಿಸಲ್ಪಟ್ಟಿರುವ ಮಿಶ್ರ ರಚನೆಯನ್ನು ಹೊಂದಿದೆ.[೪]
ಉಲ್ಲೇಖಗಳು
ಬದಲಾಯಿಸಿ- ↑ "How are Living Root Bridges Made?". The Living Root Bridge Project (in ಅಮೆರಿಕನ್ ಇಂಗ್ಲಿಷ್). 2017-05-05. Retrieved 2017-09-07.
- ↑ Khasi Hills: The land of abundant wonders, archived from the original on 2010-06-17, retrieved 2010-06-30
- ↑ "Root Bridges of the Umiam River Basin". The Living Root Bridge Project (in ಅಮೆರಿಕನ್ ಇಂಗ್ಲಿಷ್). 2017-04-27. Retrieved 2017-09-07.
- ↑ "How are Living Root Bridges Made?". The Living Root Bridge Project (in ಅಮೆರಿಕನ್ ಇಂಗ್ಲಿಷ್). 2017-05-05. Retrieved 2017-09-07.