ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ.
ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ.


ನೆರ್ಸ ಎಂಬುದು ಕರ್ನಾಟಕ ಮತ್ತು ಗೋವಾ ಗಡಿಯಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಗ್ರಾಮವು ತನ್ನಲ್ಲಿರುವ ಶ್ರೀಮಂತ ಜೀವವೈವಿಧ್ಯದಿಂದಾಗಿ ವಿಶ್ವ ವಿಖ್ಯಾತಿ ಪಡೆದಿದೆ. ಹಚ್ಚ ಹಸಿರಿನಿಂದ ಕೂಡಿರುವ ನೆರ್ಸ ಗ್ರಾಮವು ನಿಮಗೆ ನಿಜವಾದ ರಜೆಯ ಮೋಜು ಆನಂದಿಸಲು ಅವಕಾಶ ಮಾಡಿಕೊಡುತ್ತದೆ. ಈ ಸಣ್ಣಗ್ರಾಮವು ಪಕ್ಷಿ ವೀಕ್ಷಕರಿಗೆ ಮತ್ತು ವನ್ಯಜೀವಿ ಆಸಕ್ತರಿಗೆ ಸ್ವರ್ಗವೆಂದು ಪರಿಗಣಿಸಲ್ಪಟ್ಟಿದೆ. ಈ ಕಾರಣದಿಂದಾಗಿ ಆಸಕ್ತರಿಗೆ ಈ ಗ್ರಾಮ ಅತ್ಯಂತ ಪ್ರಸಿದ್ಧವಾಗಿದೆ.


ನೆರ್ಸದಲ್ಲಿ ನೋಡಬಹುದಾದುದು ಏನು?

ಬದಲಾಯಿಸಿ

ನೆರ್ಸಾ ಗ್ರಾಮವು ಪ್ರಾಕೃತಿಕ ಸೊಬಗಿನ ಖನಿಯನ್ನೇ ಹೊಂದಿದೆ. ಪಶ್ಚಿಮ ಘಟ್ಟಗಳ ಹಚ್ಚ ಹಸಿರಿನ ದಟ್ಟ ಅರಣ್ಯಗಳು ಚಾರಣಕ್ಕೆ, ಪಕ್ಷಿ ವೀಕ್ಷಣೆಗೆ ಮತ್ತು ಪ್ರಾಣಿಗಳ ಜಾಡು ಹಿಡಿದು ತಿರುಗಾಡಲು ಅತ್ಯಂತ ಸೂಕ್ತವಾಗಿದೆ. ನೆರ್ಸ ಗ್ರಾಮಕ್ಕೆ ನೀವು ಭೇಟಿಕೊಟ್ಟಾಗ ನೀವು ಇಲ್ಲಿಗೆ ಸಮೀಪದ ಭೀಮ್ ಘಡ್, ಕೊಂಗ್ಲ, ಅಬ್ನಲಿ ಮತ್ತು ಜಂಗೋನ್ ನಂತಹ ತಾಣಗಳನ್ನು ಸಹ ನೋಡಬಹುದು. ಇಲ್ಲಿನ ಕೆಲವು ತಾಣಗಳಿಗೆ ಕಾಲ್ನಡಿಗೆಯನ್ನು ಹೊರತು ಪಡಿಸಿ ಬೇರಾವ ಸಾರಿಗೆಯ ಮೂಲಕ ತಲುಪಲು ಸಾಧ್ಯವಿಲ್ಲ. ಪಕ್ಷಿ ವೀಕ್ಷಣೆ, ಚಿಟ್ಟೆಗಳನ್ನು ಕಾಣಲು ಮತ್ತು ಇಲ್ಲಿನ ಜೀವ ವೈವಿಧ್ಯದ ಸೊಬಗು ಸವಿಯಲು ಬಯಸುವ ಆಸಕ್ತರಿಗೆ ಇಲ್ಲಿನ ಕಾಡುಗಳು ಮರೆಯಲಾಗದ ಅನುಭವ ನೀಡುತ್ತದೆ. ಆದರೆ ಅದಕ್ಕಾಗಿ ಒಂದು ಕಠಿಣ ಚಾರಣ ಮಾಡಲು ತಯಾರಾಗಿರಬೇಕು ಅಷ್ಟೆ.

ನೆರ್ಸದ ಮರೆಯಲಾಗದ ತಾಣಗಳಲ್ಲಿ ತಲೆವಡಿ ಒಂದು. ತಲೆವಡಿಯು ಬಾವಲಿಗಳಿಗಾಗಿ ಪ್ರಸಿದ್ಧಿಪಡೆದಿದ್ದು, ಇಲ್ಲಿ 40 ಬಗೆಯ ಬಾವಲಿಯ ಜಾತಿಗಳನ್ನು ಗುರುತಿಸಲಾಗಿದೆ. ಲೊಂಡ ಕಾಡಿನಲ್ಲಿರುವ ಬರಪೆಡಿ ಗುಹೆಯು 200ಕ್ಕು ಅಧಿಕ ಬಾವಲಿಗಳಿಗೆ ಆಶ್ರಯವನ್ನು ಒದಗಿಸಿದೆ.[]

ಖಾನಾಪುರವು ಇಲ್ಲಿಗೆ ಸಮೀಪದ ಪ್ರಮುಖ ರೈಲು ನಿಲ್ದಾಣವಾಗಿದೆ. ಈ ಗ್ರಾಮವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 500 ಕಿ,ಮೀ ದೂರದಲ್ಲಿದೆ. ನೀವು ಬೆಂಗಳೂರಿನಿಂದ ನೆರ್ಸಗೆ ರಾತ್ರಿಯಲ್ಲಿ ಹೊರಡುವ ಸುವಿಹಾರಿ ಬಸ್ಸುಗಳ ಮೂಲಕ ತಲುಪಬಹುದು.

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2016-11-12. Retrieved 2016-11-08.


"https://kn.wikipedia.org/w/index.php?title=ನೆರ್ಸ&oldid=1056211" ಇಂದ ಪಡೆಯಲ್ಪಟ್ಟಿದೆ