ನೆಬ್ಯುಲ ಪುರಸ್ಕಾರ
ನೆಬ್ಯುಲ ಪುರಸ್ಕಾರವು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಪ್ರಕಾಶಿತವಾದ ಹಿಂದಿನ ವರ್ಷದ ಉತ್ತಮೋತ್ತಮ ವೈಜ್ಞಾನಿಕ/ಕಲ್ಪನಾತ್ಮಕ ಕಥಾಸಾಹಿತ್ಯಗಳಿಗೆ ವೈಜ್ಞಾನಿಕ ಕಥಾಸಾಹಿತ್ಯ ಮತ್ತು ಕಲ್ಪಾನಾಸಾಹಿತ್ಯ ಲೇಖಕರ ಸಂಘವು ಪ್ರದಾನ ಮಾಡುವ ಪ್ರಶಸ್ತಿ. ಈ ಪ್ರಶಸ್ತಿಯೊಡನೆ ಯಾವುದೇ ರೀತಿಯ ನಗದು ಬಹುಮಾನವು ಇರುವುದಿಲ್ಲ. ಪ್ರಶಸ್ತಿ ಪುತ್ತಳಿಯು ಒಂದು ಹೊಳೆಯುವ ಸುರುಳಿಯಾಕೃತಿಯ ನಕ್ಷತ್ರ ಸಮೂಹವನ್ನು ಹೊಂದಿದ ಪಾರದರ್ಶಕ ಘನ.
ಈ ಪುರಸ್ಕಾರವನ್ನು ಪಡೆದುಕೊಂಡ ಕೆಲವು ಹೆಸರಾಂತ ಲೇಖಕರೆಂದರೆ: ಐಸಾಕ್ ಅಸಿಮೋವ್ (ಎರಡು ಬಾರಿ), ಅರ್ಸುಲ ಕೆ. ಲಗ್ವಿನ್ (ಆರು ಬಾರಿ), ಅರ್ಥರ್ ಸಿ. ಕ್ಲಾರ್ಕ್ (ಮೂರು ಬಾರಿ).
ಪುರಸ್ಕಾರ ವರ್ಗಗಳು
ಬದಲಾಯಿಸಿಕೃತಿಗಳ ದೀರ್ಘ-ಹ್ರಸ್ವತೆಯ ಅನುಗುಣವಾಗಿ ಅವುಗಳನ್ನು ಈ ವರ್ಗಗಳಲ್ಲಿ ವಿಂಗಡಿಸಲಾಗಿದೆ:
- ಕಾದಂಬರಿ: ೪೦,೦೦೦ಕ್ಕಿಂತ ಹೆಚ್ಚು ಪದಗಳು
- ಕಿರು ಕಾದಂಬರಿ: ಕನಿಷ್ಠ ೧೭,೫೦೦೦ ಪದಗಳು ಆದರೆ ೪೦,೦೦೦ ಪದಗಳಿಗಿಂತ ಕಡಿಮೆ
- ಚುಟುಕು ಕಾದಂಬರಿ: ಕನಿಷ್ಠ ೭,೫೦೦೦ ಪದಗಳು, ಆದರೆ ೧೭,೫೦೦ ಪದಗಳಿಗಿಂತ ಕಡಿಮೆ
- ಸಣ್ಣ ಕಥೆ: ೭,೫೦೦ ಪದಗಳಿಗಿಂತ ಕಡಿಮೆ
- ಕಥಾವಸ್ತು: ಚಲಚ್ಚಿತ್ರ, ಟಿ.ವಿ. ಅಥವಾ ರೇಡಿಯೋಗಾಗಿ ಬರೆದ ಕಥಾವಸ್ತು ಅಥವಾ ನಾಟಕ