ಅಭಿಜ್ಞಾನ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಗುರುತು ಲೇಖನಕ್ಕಾಗಿ ಇಲ್ಲಿ ನೋಡಿ.

ನೆನಪು ಎಂದರೆ ಒಬ್ಬ ವ್ಯಕ್ಥಿ ತನ್ನ ಜ್ಞಾನೇಂದ್ರಿಯಗಳ ಮೂಲಕ ಕಲಿತ ಅಥವಾ ಅನುಭವಿಸಿದ ವಿಷಯವನ್ನು ಪುನಃ ಅರಿವಿಗೆ ತರುವ ಸಾಮರ್ಥ್ಯ. ಕಲಿಯುವ ಪ್ರಕ್ರಿಯೆಯಲ್ಲಿ ನೆನೆಪು ಒಂದು ಪ್ರಮುಖ ಭಾಗವಾಗಿದೆ.ನಾವು ಹಳೆಯದನ್ನು ನೆನೆಪಿಸಿಕೊಳ್ಳಲು ಅಸಾಧ್ಯವಾದರೆ ಹೊಸದನ್ನು ಕಲಿಯಲು ಸಾಧ್ಯವಾಗುವುದಿಲ್ಲ. ನೆನಪು ಇಲ್ಲವಾದಲ್ಲಿ ಪ್ರತಿ ವಿಷಯವೂ ಪ್ರತಿ ಬಾರಿಯೂ ನಮಗೆ ಹೊಸ ಅನುಭವವನ್ನು ಕೊಡುತ್ತದೆ.ನೆನಪು ಇಲ್ಲವಾದಲ್ಲಿ ಮಧುರ ಅಥವಾ ಕಹಿ ಅನುಭವಗಳಿಲ್ಲವಾಗಿ ಜೀವನ ಬರಡಾಗುತ್ತದೆ.

ನೆನಪಿನ ವಿಧಗಳುಸಂಪಾದಿಸಿ

ಮನಶ್ಯಾಸ್ತ್ರಜ್ಞರು ನೆನಪನ್ನು ಮೂರು ಹಂತಗಳನ್ನಾಗಿ ವಿಭಾಗಿಸಿದ್ದಾರೆ.

ಸಂವೇದನಾ ನೆನೆಪು (Sensory Memory)ಸಂಪಾದಿಸಿ

ಇದು ನಮ್ಮ ಮೆದುಳಿನಲ್ಲಿ ಒಂದು ಸೆಕೆಂಡಿಗಿಂತಲೂ ಕಡಿಮೆ ಅವಧಿ ಮಾತ್ರವಿರುತ್ತದೆ. ಉದಾಹರಣೆಗೆ ನಾವು ಒಂದು ಒಂದು ಪಕ್ಷಿಯನ್ನು ನೋಡಿದಾಗ ಅದರ ವಿವರ ಕ್ಷಣಮಾತ್ರ ಸಮಯ ನಮ್ಮ ಮೆದುಳಿನಲ್ಲಿ ನಿಂತಿರುತ್ತದೆ. ಅನಂತರ ಅದರ ವಿವರ ಮಬ್ಬಾಗಿ ನಂತರ ಮರೆಯಾಗುತ್ತದೆ. ಅದಕ್ಕೂ ಮೊದಲೇ ನಾವು ಅದನ್ನು ಅರೆಕಾಲಿಕ ನೆನಪಿಗೆ ವರ್ಗಾಯಿಸಬೇಕಾಗುತ್ತದೆ.

ಅರೆಕಾಲಿಕ ನೆನೆಪು (Short term Memory)ಸಂಪಾದಿಸಿ

ಇದು ನಾವು ವಸ್ತುವಿನ ಕುರಿತು ಯೋಚಿಸುವಷ್ಟು ಸಮಯ ನಮ್ಮ ಮೆದುಳಿನಲ್ಲಿ ಅದರ ವಿವರವಿರುತ್ತದೆ.ಇದು ನಮ್ಮ ಮೆದುಳಿನಲ್ಲಿ ಹೆಚ್ಚು ಕಡಿಮೆ ೨೦ ಸೆಕೆಂಡಿನಷ್ಟು ಸಮಯವಿರುತ್ತದೆ.ಅನಂತರ ಕೆಲವು ನೆನಪುಗಳು ದೀರ್ಘಕಾಲೀನ ನೆನಪಿಗೆ ವರ್ಗಾವಣೆಯಾಗಿ ಉಳಿದವು ಮರೆಯಾಗುತ್ತವೆ. ಸ್ವಲ್ಪ ಸಮಯದ ವರಗೆ ಮಾತ್ರ ಈ ನೆನೆಪೂ ಇರುತ್ತದೆ.

ದೀರ್ಘಕಾಲೀನ ನೆನೆಪು (Long term Memory)ಸಂಪಾದಿಸಿ

ಇದರಲ್ಲಿ ಅತ್ಯಂತ ಹೆಚ್ಚು ವಿಷಯಗಳು ಸೇರಿಕೊಂಡಿರುತ್ತವೆ.ಇದರಲ್ಲಿರುವ ವಿಷಯಗಳು ಒಂದೋ ತೀವ್ರವಾದ ಭಾವೋತ್ಕರ್ಷದಿಂದ ಅಥವಾ ಪುನರುಕ್ತಿಯಿಂದ (repetition)ಸೇರಿಕೊಳ್ಳುತ್ತವೆ. ಕೆಲವು ನೆನಪುಗಳು ಜೀವನ ಪೂರ್ತಿ ಇರುತ್ತವೆ.

ಧ್ಯಾನ - ಯೊಗ ಮತ್ತು ನೆನಪುಸಂಪಾದಿಸಿ

  • ಆಚಾರ್ಯ ನಯಚಂದ್ರಸಾಗರ್‌ಜಿ ಅವರಿಗೆ ಈಗ ೫೮ ವರ್ಷ. ಯುವಕನಾಗಿದ್ದಾಗ ಅವರು ವಜ್ರಕ್ಕೆ ಹೊಳಪು ನೀಡುವ ಕೆಲಸ ಮಾಡುತ್ತಿದ್ದರು. ೨೩ನೆಯ ವಯಸ್ಸಿನಲ್ಲಿ ಲೌಕಿಕ ಪ್ರಪಂಚದಿಂದ ಭ್ರಮ ನಿರಸನ ಹೊಂದಿದ ಅವರು ಕುಟುಂಬ ಹಾಗೂ ವೃತ್ತಿಯನ್ನು ತೊರೆದರು. ಅದಾದ ಮೂರು ವರ್ಷಗಳ ನಂತರ ಅವರು ಸಂಪೂರ್ಣ ಮೌನ ಮತ್ತು ಏಕಾಂತ ವ್ರತ ಕೈಗೊಂಡರು. ಬರಿಗಾಲಿನಲ್ಲಿ ದೇಶಪರ್ಯಟನೆ ಕೈಗೊಂಡರು. ಮಂತ್ರಜಪ, ಪ್ರಾರ್ಥನೆ ಮಾಡುತ್ತಿದ್ದರು. ಈ ನಡುವೆ, ಜೈನ ಧಾರ್ಮಿಕ ಗ್ರಂಥಗಳನ್ನು ಸಂಸ್ಕೃತದಿಂದ ಗುಜರಾತಿಗೆ ಅನುವಾದಿಸಿದರು.
  • ನಯಚಂದ್ರಸಾಗರ್‌ಜಿ ೨೦೦೦ರಲ್ಲಿ ಗುಜರಾತ್‌ನ ಉಂಝಾ ಪಟ್ಟಣಕ್ಕೆ ಭೇಟಿ ನೀಡಿದ್ದರು. ಆಗ ಮುನಿಶ್ರೀ ಅಜಿತ್‌ಚಂದ್ರಸಾಗರ್‌ಜಿ ಅವರು ಅಜಯ್‌ ಎಂಬ ಹೆಸರಿನ ಹತ್ತು ವರ್ಷದ ಬಾಲಕ. ಆತ ನಯಚಂದ್ರಸಾಗರ್‌ಜಿ ಅವರಿಂದ ಪ್ರಭಾವಿತನಾಗಿ ಮನೆಯವರ ಆಶೀರ್ವಾದ ಪಡೆದು ಅವರೊಂದಿಗೆ ದೇಶಪರ್ಯಟನೆಗೆ ಹೊರಟುಬಿಟ್ಟರು. ಎರಡು ವರ್ಷಗಳ ಬಳಿಕ ಏಕಾಂತವಾಸ ಹಾಗೂ ಧ್ಯಾನದಲ್ಲಿ ತೊಡಗಿದರು.

ನೋಡಿದ ಕೇಳಿದ ೫೦೦ ಸಂಗತಿಗಳ ನೆನಪುಸಂಪಾದಿಸಿ

  • ವೇದಿಕೆಯ ಮೇಲಿದ್ದ ಪೀಠದ ಮೇಲೆ ಆ ಜೈನ ಮುನಿಗಳು ಪದ್ಮಾಸನದಲ್ಲಿ ಕುಳಿತಿದ್ದರು. ಶ್ವೇತ ವಸ್ತ್ರಧಾರಿಗಳಾಗಿದ್ದ ಇತರ ಜೈನ ಮುನಿಗಳು ಅವರ ಅಕ್ಕಪಕ್ಕದಲ್ಲಿ ಇದ್ದರು. ಆ ಜೈನ ಮುನಿಗಳ ತುಟಿ ಆಗಾಗ ಚಲಿಸುತ್ತಿತ್ತು. ಬೆಳಗಿನಿಂದ ಮಧ್ಯಾಹ್ನದವರೆಗೂ ಪ್ರೇಕ್ಷಕರು ವೇದಿಕೆಗೆ ಬಂದು ಮುನಿಗೆ ಬಗೆಬಗೆಯ ವಸ್ತುಗಳನ್ನು ತೋರಿಸಿದರು. ಒಂದು ಹಂತದಲ್ಲಿ ಮುನಿಗಳಿಗೆ ಗಣಿತದ ಸಮಸ್ಯೆ ಒಡ್ಡಲಾಯಿತು. ಏಕಕಾಲದಲ್ಲಿ ಹತ್ತಾರು ವಿಷಯಗಳು ಮುನಿಯ ಮೆದುಳಿನಲ್ಲಿ ದಾಖಲಾದವು. ಮತ್ತೊಂದೆಡೆ ಕಾರ್ಯಕ್ರಮದಲ್ಲಿ ನೆರೆದಿದ್ದ ಕೆಲವರು ಈ ಎಲ್ಲ ವಸ್ತು ಮತ್ತು ಸಂಗತಿಗಳನ್ನು ಬರೆದಿಟ್ಟುಕೊಳ್ಳುತ್ತಿದ್ದರು. ಆರು ತಾಸುಗಳ ಬಳಿಕ 100,008 ಎಂಬ ಸಂಖ್ಯೆಯನ್ನು ಮುನಿಗಳಿಗೆ ಹೇಳಲಾಯಿತು. ಅದು ೫೦೦ನೆಯ ಶಬ್ದ ಹಾಗೂ ಕೊನೆಯ ಶಬ್ದ ಕೂಡ.
  • ನಂತರ ಎಲ್ಲ ೫೦೦ ಸಂಗತಿಗಳನ್ನು ಅದೇ ಕ್ರಮದಲ್ಲಿ ನೆನಪು ಮಾಡಿಕೊಂಡು ಹೇಳುತ್ತ ಹೋದರು. ಈ ಸುದೀರ್ಘ ಪ್ರಕ್ರಿಯೆಯಲ್ಲಿ ಒಂದೇ ಒಂದು ಸಲ ಮಾತ್ರ ಸಂಖ್ಯೆಯೊಂದನ್ನು ನೆನಪಿಸಿಕೊಳ್ಳುವುದಕ್ಕೆ ಕೆಲವು ಕ್ಷಣ ತೆಗೆದುಕೊಂಡರು. ಎಲ್ಲ ೫೦೦ ಸಂಗತಿಗಳನ್ನು ಪಟ್ಟಿ ಮಾಡಿ­ಕೊಂಡಿದ್ದ ಪ್ರೇಕ್ಷಕರು ಮುನಿಗಳು ಎಲ್ಲವನ್ನೂ ಸರಿ­ಯಾ­ಗಿ ನೆನಪಿಸಿಕೊಂಡು ಹೇಳಿ­ದ್ದನ್ನು ದೃಢಪಡಿಸಿದರು. ೨೪ ವರ್ಷದ ಮುನಿಶ್ರೀ ಅಜಿತ್‌ಚಂದ್ರ ಸಾಗರ್‌ಜಿ ಅವರ ಅದ್ಭುತ ಸ್ಮರಣಶಕ್ತಿಗೆ ಜನ ಬೆರಗಾದರು.
  • ಸ್ಮರಣಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಧ್ಯಾನದ ಮೊರೆ ಹೋಗಲು ವಿದ್ಯಾರ್ಥಿ­ಗಳನ್ನು ಪ್ರೋತ್ಸಾಹಿಸುವ ಪ್ರಯತ್ನದ ಭಾಗವಾಗಿ ಸರಸ್ವತೀ ಸಾಧನಾ ಸಂಶೋಧನಾ ಪ್ರತಿಷ್ಠಾನವು ಈ ಕಾರ್ಯಕ್ರಮ ಆಯೋಜಿಸಿತ್ತು. ಭಾರತದಲ್ಲಿ ಜೈನ ಮುನಿಗಳು ಸ್ಮರಣಶಕ್ತಿ ಹೆಚ್ಚಿಸಿಕೊಳ್ಳಲು ಶತಮಾನಗಳಿಂದಲೂ ಧ್ಯಾನ, ಸಾಧನೆಗಳನ್ನು ಮಾಡುತ್ತ ಬಂದಿದ್ದಾರೆ. ಜೈನ ಮುನಿಗಳಲ್ಲಿ ಇದು ಸಾಮಾನ್ಯವಾದರೂ, ಅಜಿತ್‌ಚಂದ್ರಸಾಗರ್‌ಜಿ ಅವರದ್ದು ವಿಶಿಷ್ಟ ಸಾಧನೆ.
  • ಜೈನ ಧಾರ್ಮಿಕ ಗ್ರಂಥಗಳ ೨೦ ಸಾವಿರ ಶ್ಲೋಕಗಳನ್ನು ಮುನಿಶ್ರೀ ಅಜಿತ್‌ಚಂದ್ರಸಾಗರ್‌ಜಿ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಈ ಮುನಿಗಳು 800 ವಸ್ತುಗಳನ್ನು ನೆನಪಿನಿಂದ ಮರುಸ್ಮರಣೆ ಮಾಡಿಕೊಂಡಿದ್ದಿದೆ. ತಮ್ಮಲ್ಲಿ ವಿಶೇಷ ಶಕ್ತಿ ಇದೆ ಅಥವಾ ತಾವೊಬ್ಬ ವಿಶೇಷ ಪ್ರತಿಭಾವಂತ ಎಂದು ಅವರು ಭಾವಿಸುವುದಿಲ್ಲ.

ಧ್ಯಾನದ ತರಬೇತಿಸಂಪಾದಿಸಿ

  • ಇವರ ಸರಸ್ವತೀ ಸಾಧನಾ ಸಂಶೋಧನಾ ಪ್ರತಿಷ್ಠಾನವು ಪ್ರತಿಷ್ಠಾನವು ಮಕ್ಕಳಿಗೆ ಧ್ಯಾನವನ್ನು ಕುರಿತು ತರಬೇತಿ ನೀಡುತ್ತಿದೆ. 14 ಸಾವಿರಕ್ಕೂ ಹೆಚ್ಚು ಮಕ್ಕಳು ಅದರ ಕೇಂದ್ರಗಳ ಮೂಲಕ ತರಬೇತಿ ಪಡೆದುಕೊಂಡಿದ್ದಾರೆ. ಪ್ರತಿಷ್ಠಾನ ಮುಂದಿನ ಹತ್ತು ವರ್ಷಗಳಲ್ಲಿ ಹತ್ತು ಲಕ್ಷ ಮಕ್ಕಳಿಗೆ ತರಬೇತಿ ನೀಡುವ ಗುರಿ ಇಟ್ಟುಕೊಂಡಿದೆ.[೧]

ನೆನಪಿನ ಗಣಿಸಂಪಾದಿಸಿ

  • ಕೇವಲ ಎರಡೂವರೆ ವರ್ಷದ ಆದೀಶ್ ಪಾಟೀಲ್ ವಿಶೇಷ ನೆನಪಿನ ಶಕ್ತಿಯುಳ್ಳವನು.[೨]

ನೋಡಿಸಂಪಾದಿಸಿ

ಉಲ್ಲೇಖಸಂಪಾದಿಸಿ

  1. ಅದ್ಭುತ ಸ್ಮರಣಶಕ್ತಿಯ ಜೈನ ಮುನಿ;ಮ್ಯಾಕ್ಸ್‌ ಬೀರಕ್‌;28 Dec, 2014
  2. https://www.prajavani.net/district/bengaluru-city/adeesh-patel-652554.html ಪುಟ್ಟನಿಗೆ ಪ್ರಪಂಚವೇ ಪರಿಚಿತ
"https://kn.wikipedia.org/w/index.php?title=ನೆನಪು&oldid=925623" ಇಂದ ಪಡೆಯಲ್ಪಟ್ಟಿದೆ