ಮರೆವು ಒಂದು ರೀತಿಯ ಮೆದುಳಿನ ನ್ಯೂನ್ಯತೆ. ರೋಗ, ಭೌತಿಕ ಅಥವಾ ಮಾನಸಿಕ ಆಘಾತದಿಂದ ಉಂಟಾಗುವ ಜ್ಞಾಪಕ ಶಕ್ತಿಯ ಕೊರತೆ.[೧] ವಿವಿಧ ನಿದ್ರಾಜನಕಗಳು ಮತ್ತು ಸಂಮೋಹನ ಔಷದಿಗಳ ಬಳಕೆಯಿಂದಲೂ ತಾತ್ಕಾಲಿಕವಾಗಿ ಮರೆವು ಉಂಟಾಗಬಹುದು. ಉಂಟಾದ ಹಾನಿಯ ವ್ಯಾಪ್ತಿಯ ಕಾರಣ ನೆನಪಿನ ಶಕ್ತಿ ಸಂಪೂರ್ಣವಾಗಿ ಅಥವಾ ಭಾಗಶಃ ನಾಶವಾಗಬಹುದು.

ಎರಡು ಮುಖ್ಯ ಪ್ರಕಾರಗಳ ಮರೆವು

ಬದಲಾಯಿಸಿ
 • ಹಿಂಚಲನ ಮರೆವು ಮತ್ತು ಮುಂಚಲನ ಮರೆವು. ಹಿಂಚಲನ ಮರೆವು ಒಂದು ನಿರ್ದಿಷ್ಟ ದಿನಾಂಕದ ಮೊದಲು, ಸಾಮಾನ್ಯವಾಗಿ ಅಪಘಾತ ಅಥವಾ ಶಸ್ತ್ರಕ್ರಿಯೆಯ ದಿನಾಂಕದ ಮೊದಲು ಪಡೆದ ಮಾಹಿತಿಯನ್ನು ಪುನಃ ಪಡೆಯುವಲ್ಲಿ ಅಸಾಮರ್ಥ್ಯ. ಕೆಲವು ಪ್ರಕರಣಗಳಲ್ಲಿ ಸ್ಮೃತಿ ಹಾನಿಯು ದಶಕಗಳಷ್ಟು ಹಿಂದಕ್ಕೆ ವಿಸ್ತರಿಸಬಹುದಾದರೆ,
 • ಇತರರಲ್ಲಿ ವ್ಯಕ್ತಿಯು ಕೇವಲ ಕೆಲವು ತಿಂಗಳುಗಳ ನೆನಪನ್ನು ಕಳೆದುಕೊಳ್ಳಬಹುದು. ಮುಂಚಲನ ಮರೆವು ಹೊಸ ಮಾಹಿತಿಯನ್ನು ಅಲ್ಪಾವಧಿ ಸಂಗ್ರಹದಿಂದ ದೀರ್ಘಾವಧಿ ಸಂಗ್ರಹಕ್ಕೆ ವರ್ಗಾಯಿಸುವಲ್ಲಿ ಅಸಾಮರ್ಥ್ಯ. ಈ ಬಗೆಯ ಮರೆವು ಇರುವವರು ದೀರ್ಘ ಅವಧಿಗಳವರೆಗೆ ವಿಷಯಗಳನ್ನು ನೆನಪಿನಲ್ಲಿ ಇಡಲಾರರು. ಮರೆವಿನ ಈ ಎರಡು ಪ್ರಕಾರಗಳು ಪರಸ್ಪರವಾಗಿ ಅನನ್ಯವಲ್ಲ; ಎರಡೂ ಏಕಕಾಲದಲ್ಲಿ ಸಂಭವಿಸಬಹುದು.

ಇತಿವೃತ್ತ

ಬದಲಾಯಿಸಿ
 • ಮರೆವು ವಿಶಿಷ್ಟವಾಗಿ ಕಪೋಲದ ಮಧ್ಯ ಪಾಲಿಗಳಿಗೆ ಆದ ಹಾನಿಗೆ ಸಂಬಂಧಿಸಿದೆ ಎಂದೂ ಪ್ರಕರಣದ ಅಧ್ಯಯನಗಳು ತೋರಿಸುತ್ತವೆ. ಜೊತೆಗೆ, ಹಿಪೊಕ್ಯಾಂಪಸ್‍ನ ನಿರ್ದಿಷ್ಟ ಪ್ರದೇಶಗಳು ಜ್ಞಾಪಕ ಶಕ್ತಿಗೆ ಸಂಬಂಧಿಸಿವೆ. ಡೈಎನ್ಸೆಫ಼ೆಲಾನ್‍ನ ಪ್ರದೇಶಗಳು ಹಾನಿಗೊಂಡಾಗ ಮರೆವು ಉಂಟಾಗಬಹುದು ಎಂದೂ ಸಂಶೋಧನೆ ತೋರಿಸಿಕೊಟ್ಟಿದೆ.
 • ಇತ್ತೀಚಿನ ಅಧ್ಯಯನಗಳು ಆರ್‍ಬಿಎಪಿ೪೮ ಪ್ರೋಟೀನ್‍ನ ಕೊರತೆ ಮತ್ತು ಸ್ಮೃತಿ ಹಾನಿಯ ನಡುವೆ ಪರಸ್ಪರ ಸಂಬಂಧವನ್ನು ತೋರಿಸಿಕೊಟ್ಟಿವೆ. ಮರೆವಿನಿಂದ ನರಳುತ್ತಿರುವವರಲ್ಲಿ, ತಕ್ಷಣದ ಮಾಹಿತಿಯನ್ನು ಮರುಪಡೆಯುವ ಸಾಮರ್ಥ್ಯ ಇನ್ನೂ ಉಳಿದಿರುತ್ತದೆ, ಮತ್ತು ಅವರು ಹೊಸ ನೆನಪುಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಗಬಹುದು.
 • ಆದರೆ, ಹೊಸ ವಿಷಯವನ್ನು ಕಲಿಯುವ ಮತ್ತು ಹಳೆ ಮಾಹಿತಿಯನ್ನು ಮರುಪಡೆಯುವ ಸಾಮರ್ಥ್ಯದಲ್ಲಿ ತೀವ್ರ ಕಡಿತವನ್ನು ಗಮನಿಸಬಹುದು. ರೋಗಿಗಳು ಹೊಸ ಕಾರ್ಯವಿಧಾನ ಜ್ಞಾನವನ್ನು ಕಲಿಯಬಹುದು. ಹಿಂದಿನ ಕಲಿಕಾ ಪ್ರಸಂಗಗಳಲ್ಲಿ ಎದುರಾದ ನಿರ್ದಿಷ್ಟ ಮಾಹಿತಿಯನ್ನು ನೆನಪಿಸಿಕೊಳ್ಳುವ ಸಾಮರ್ಥ್ಯದಲ್ಲಿ ಗಾಢವಾದ ದುರ್ಬಲತೆಗಳಿದ್ದರೂ, ಮರೆವಿರುವ ರೋಗಿಗಳು ಗಣನೀಯ ಪ್ರಮಾಣದ ಬೌದ್ಧಿಕ, ಭಾಷಿಕ, ಹಾಗೂ ಸಾಮಾಜಿಕ ಕೌಶಲವನ್ನೂ ಉಳಿಸಿಕೊಂಡಿರುತ್ತಾರೆ.

ಚಿಕಿತ್ಸೆ

ಬದಲಾಯಿಸಿ
 • ಮಾನ್ಯವಾಗಿ ಹಲವು ಬಗೆಯ ಮರೆವು ಯಾವುದೇ ಚಿಕಿತ್ಸೆ ಇಲ್ಲದೇ ತಾನೇತಾನಾಗಿ ವಾಸಿಯಗುತ್ತದೆ.[೨] ಇಲ್ಲವಾದಲ್ಲಿ, ಹಲವು ವಿಧಾನದಿಂದ ಮರೆವನ್ನು ಗುಣಪಡಿಸಬಹುದು. ಅವುಗಳಲ್ಲಿ ಕಾಗ್ನಿಟಿವ್ ಅಥವ ಔದ್ಯೋಗಿಕ(Occupational) ಚಿಕಿತ್ಸೆಯೂ ಒಂದು. ಚಿಕಿತ್ಸೆಯಲ್ಲಿ,ರೋಗಿಗಳ ಹೊಸ ಹಾಗು ಹಳೆಯ ಸ್ಮರಣೆಯ ನಮೂನೆಗಳನ್ನು ಅಧ್ಯಯನ ಮಾಡಿ, ಸ್ಮರಣಾ ಕೌಶಲ್ಯವನ್ನು ವೃಧ್ಧಿಸಲು ಹಾಗು ಮರುಪಡೆಯಲು ವಿಧಾನಗಳನ್ನು ರೂಪಿಸಲಾಗುತ್ತದೆ.[೩] ಮಾಹಿತಿಗಳನ್ನು ಕ್ರಮಬಧ್ಧವಾಗಿ ಹಾಗು ಸುಲಭವಾಗಿ ನೆನಪಿಟ್ಟುಕೊಳ್ಳುವ ತಂತ್ರವನ್ನೂ, ಬಹಳ ಉದ್ದನೆಯ ಮಾತುಕತೆಗಳನ್ನು ನೆನಪಿತಟ್ಟುಕೊಳ್ಳುವ ತಂತ್ರವನ್ನೂ ಕೂಡ ಬಳಸಲಾಗುತ್ತದೆ. [೪]
 • ಮತ್ತೊಂದು ವಿಧಾನವೆಂದರೆ, ತಂತ್ರಜ಼್ನಾನವನ್ನು ಬಳಸಿಕೊಂಡು, ದಿನನಿತ್ಯದ ಚಟುವಟಿಕೆಗಳನ್ನು ಮಾಡುವುದು. ಔಷಧವನ್ನು ತೆಗೆದುಕೊಳ್ಳಲು,ಹುಟ್ಟುಹಬ್ಬಗಳು ಹಾಗು ಇನ್ನಿತರೆ ವಿಷಯಗಳನ್ನು ನೆನಪಿನಲ್ಲಿ ಇಡಲು, ಇಲೆಕ್ಟ್ರಾನಿಕ್ಸ್ ಸಾಧನಳಲ್ಲಿ ಜ್ನಾಪಕಗಳನ್ನು(reminders) ಇಟ್ಟುಕೊಳ್ಳಬಹುದು. ಸ್ನೇಹಿತರ,ಕುಟುಂಬಿಕಸ್ಥರ,ಸಹೋದ್ಯೋಗಿಳನ್ನು ನೆನಪಿನಲ್ಲಿ ಇಡಲು, ಅವರ ಭಾವಚಿತ್ರಗಳನ್ನು ಇಟ್ಟುಕೊಳ್ಳೂವುದರ ಮೂಲಕ ನೆನಪಿನಲ್ಲಿ ಇರಿಸಬಹುದು.[೫]
 • ವಿಸ್ಮೃತಿಗೆ ಚಿಕಿತ್ಸೆ ನೀಡಲು ಯಾವುದೇ ಔಷಧಿಗಳಿಲ್ಲವಾದರೂ, ವೈದ್ಯಕೀಯ ಪರಿಸ್ಥಿತಿಗಳ ಆಧಾರದ ಮೇಲೆ ನೆನಪಿನ ಶಕ್ತಿ ಸುಧಾರಣೆಗೆ ಚಿಕಿತ್ಸೆ ನೀಡಬಹುದು. ಇದರಿಂದ್ ಕಾಣಿಸಿಕೊಳ್ಳಬಹುದಾದ, ಕಡಿಮೆ ಥೈರಾಯ್ಡ್ ಕಾರ್ಯ, ಯಕೃತ್ತು ಅಥವಾ ಮೂತ್ರಪಿಂಡ ರೋಗ, ಖಿನ್ನತೆ, ಬೈಪೋಲಾರ್ ಅಸ್ವಸ್ಥತೆ ಮತ್ತು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಇವುಗಳಿಗೆ ಚಿಕಿತ್ಸೆ ನೀಡಬಹುದು.[೬]
 • ವೆರ್ನಿಕೆ-ಕೊರ್ಸಾಕೋಫ್ ಸಿಂಡ್ರೋಮ್(Wernicke–Korsakoff syndrome) ಥಯಮಿನ್ ಕೊರತೆಯನ್ನು ಒಳಗೊಂಡಿರುತ್ತದೆ ಮತ್ತು ಥೈಯಮಿನ್-ಭರಿತ ಆಹಾರಗಳನ್ನು ಸೇವಿಸುವುದರಿಂದ ಈ ಕೊರತೆ ನಿವಾರಣೆಯಾಗುತ್ತದೆ. ಉದಾಹರಣೆಗೆ ಸಂಪೂರ್ಣ ಧಾನ್ಯದ ಧಾನ್ಯಗಳು, ದ್ವಿದಳ ಧಾನ್ಯಗಳು (ಬೀನ್ಸ್ ಮತ್ತು ಮಸೂರ ಬೇಳೆ/ ಕೆಂಪು ಬೇಳೆ), ಬೀಜಗಳು, ನೇರ ಹಂದಿಮಾಂಸ ಮತ್ತು ಈಸ್ಟ್. [೭]
 • ಮದ್ಯಪಾನಕ್ಕೆ ಚಿಕಿತ್ಸೆ ಮತ್ತು ಮದ್ಯಪಾನ ಮಾಡದಿರುವುದು ಮತ್ತು ಅನಗತ್ಯ ಔಷಧಿ ಸೇವನೆ ತಡೆಗಟ್ಟುವುದರಿಂದ ಮತ್ತಷ್ಟು ಹಾನಿಯನ್ನು ತಡೆಗಟ್ಟಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಕಳೆದುಹೋದ ಸ್ಮರಣೆಯನ್ನು ಪುನಃ ಪಡೆದುಕೊಳ್ಳುಲಾಗುವುದಿಲ್ಲ. ರೋಗಿಗಳು ಕೆಲವು ಚಿಕಿತ್ಸೆಯನ್ನು ಸ್ವೀಕರಿಸಿದಾಗ ಸುಧಾರಣೆಗಳು ಸಂಭವಿಸಿದ್ದರೂ, ಇದುವರೆಗೆ ಮರೆವಿಗೆ ಸಂಪೂರ್ಣ ಚಿಕಿತ್ಸೆಯಿಲ್ಲ.[೮] ರೋಗಿಯು ಯಾವ ಮಟ್ಟದಲ್ಲಿ ಚೇತರಿಸಿಕೊಳ್ಳುತ್ತಾನೆ ಎಂಬುದು ತೀವ್ರತೆಯನ್ನು ಅವಲಂಬಿಸಿರುತ್ತದೆ.[೯]

ಉಲ್ಲೇಖಗಳು

ಬದಲಾಯಿಸಿ
 1. Gazzaniga, M., Ivry, R., & Mangun, G. (2009) Cognitive Neuroscience: The biology of the mind. New York: W.W. Norton & Company.
 2. Nordqvist, Christian (21 January 2017) [2004]. medicalnewstoday. com/articles/ 9673.php "Amnesia: Causes, Symptoms, and Treatments". Medical News Today. Retrieved 5 February 2017. {{cite web}}: Check |url= value (help)
 3. "Treating Amnesia". Neurology Now. 4 (4): 37. 2008. doi:10.1097/01.NNN.0000333846.54546.f8. Retrieved 22 December 2012.
 4. Mayo Clinic Staff (2011) Amnesia: Treatments and Drugs. Mayo Clinic. Retrieved from: http://www.mayoclinic.com/health/amnesia/DS01041/DSECTION=treatments-and-drugs.
 5. ಉಲ್ಲೇಖ ದೋಷ: Invalid <ref> tag; no text was provided for refs named Unknown2
 6. Mandal, A. (n.d) Treatment of Amnesia. News Medical. Retrieved From: http://www.news-medical.net/health/Treatment-of-amnesia.aspx
 7. ಉಲ್ಲೇಖ ದೋಷ: Invalid <ref> tag; no text was provided for refs named Nordquist4
 8. ಉಲ್ಲೇಖ ದೋಷ: Invalid <ref> tag; no text was provided for refs named MayoClinic4
 9. Benson DF (October 1978). "Amnesia". Southern Medical Journal. 71 (10): 1221–1227. doi:10.1097/00007611-197810000-00011. ISSN 0038-4348. PMID 360401.
"https://kn.wikipedia.org/w/index.php?title=ಮರೆವು&oldid=845956" ಇಂದ ಪಡೆಯಲ್ಪಟ್ಟಿದೆ