ನುಗ್ಗಿಕೇರಿ ಹನುಮಂತ ದೇವಾಲಯ
ನುಗ್ಗಿಕೇರಿ ಹನುಮಂತ ದೇವಾಲಯವು[೧] ಕರ್ನಾಟಕದ ಧಾರವಾಡದಿಂದ ೭.೫ ಕಿ.ಮೀ ದೂರದಲ್ಲಿದೆ. ಈ ದೇವಾಲಯಕ್ಕೆ ಕರ್ನಾಟಕದ ಹಲವು ಭಾಗಗಳಿಂದ ಭಕ್ತರು ಬರುತ್ತಾರೆ. ಶನಿವಾರ ಹನುಮಂತ ದೇವರ ವಿಶೇಷ ದಿವಸವಾಗಿರುವುದರಿಂದ ಈ ಸ್ಥಳಕ್ಕೆ ಹೆಚ್ಚಿನ ಭಕ್ತರು ಭೇಟಿ ಕೊಡುತ್ತಾರೆ.
ಭೂಗೋಳ
ಬದಲಾಯಿಸಿನುಗ್ಗಿಕೇರಿ ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯಲ್ಲಿದೆ. ಬೆಂಗಳೂರಿನಿಂದ ೪೩೭ ಕಿ.ಮಿ, ಮೈಸೂರಿನಿಂದ ೫೨೦ ಕಿ.ಮಿ ಮತ್ತು ಜಿಲ್ಲಾ ಕೇಂದ್ರದಿಂದ ೭.೫ ಕಿ.ಮಿ ದೂರದಲ್ಲಿದೆ. ಇಲ್ಲಿಗೆ ಬರಲು ರಸ್ತೆ ಮಾರ್ಗವೇ ಮುಖ್ಯ ಮಾರ್ಗವಾಗಿದ್ದು, ಹತ್ತಿರದ ಧಾರವಾಡಕ್ಕೆ ಅಥವಾ ಹುಬ್ಬಳ್ಳಿಗೆ ರೈಲಿನಲ್ಲಿ ಬಂದು, ಅಲ್ಲಿಂದ ಮುಂದಕ್ಕೆ ಬಸ್ಸಿನಲ್ಲಿ ಬರಬಹುದು.
ಇತಿಹಾಸ
ಬದಲಾಯಿಸಿಈ ದೇವರನ್ನು ನುಗ್ಗಿಕೇರಿ ಗ್ರಾಮದಲ್ಲಿನ ನುಗ್ಗಿಕೇರಿ ದೇಸಾಯಿ ಕುಟುಂಬದ ಹಿರಿಯ ಸದಸ್ಯರು ಪೂಜಿಸುತ್ತಿದ್ದಾರೆಂದು ನಂಬಲಾಗಿದೆ. ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಶ್ರೀ ವ್ಯಾಸತೀರ್ಥರು ಇಲ್ಲಿನ ಬಲಭೀಮ ದೇವರ ಪ್ರತಿಷ್ಟಾಪನೆಯನ್ನು ಮಾಡಿದ್ದಾರೆಂದು ನಂಬಲಾಗಿದೆ.
ಸ್ಥಳ ಪುರಾಣ
ಬದಲಾಯಿಸಿಈ ದೇವಾಲಯವು ಶತಮಾನಗಳ ಪೌರಾಣಿಕ ಇತಿಹಾಸವನ್ನು ಹೊಂದಿದೆ. ಪ್ರಾಚೀನ ಕಾಲದಲ್ಲಿ, ಜನಮೇಜಯನ ತಂದೆ, ಪರೀಕ್ಷಿತ ಮಹಾರಾಜ, ಬೇಟೆಗೆಂದು ಕಾಡಿಗೆ ಹೋಗಿದ್ದಾಗ ತೀವ್ರ ಹಸಿವಿನಿಂದ ಬಳಲುತ್ತಾನೆ. ಅಲೆದಾಡುತ್ತ, ಧ್ಯಾನದಲ್ಲಿ ಮುಗ್ದನಾಗಿ ತಪಸ್ಸು ಮಾಡುತ್ತಿರುವ ಒಬ್ಬ ಮುನಿಯನ್ನು ಕಂಡು, ಅವನ ಬಳಿ ಹೋಗಿ ಮಾತಾಡಲು ಪ್ರಯತ್ನಿಸುತ್ತಾನೆ. ಆದರೆ ಧ್ಯಾನದಲ್ಲಿ ತಲ್ಲೀನನಾಗಿದ್ದ ಮುನಿ ಯಾವುದೇ ಪ್ರತಿಕ್ರಿಯೆ ನೀಡದೆ ಶಾಂತವಾಗಿರುತ್ತಾನೆ. ಇದರಿಂದ ಕೋಪಗೊಂಡ ರಾಜನು ಹತ್ತಿರದಲ್ಲಿದ್ದ ಹಾವನ್ನು ಮುನಿಯ ಮೇಲೆ ಬಿಡುತ್ತಾನೆ. ಸ್ವಲ್ಪ ಸಮಯದ ನಂತರ, ಮುನಿಗೆ ಅವಮಾನಿಸಿದ ಕೋಪದಲ್ಲಿ, ಆತ ರಾಜನಿಗೆ ಶಾಪ ನೀಡುತ್ತಾನೆ — ಹಾವಿನ ಕಚ್ಚುವಿಕೆಯ ಮೂಲಕವೇ ಅವನಿಗೆ ಮರಣ ಸಂಭವಿಸಲಿ ಎಂದು. ಶಾಪದ ಪರಿಣಾಮವಾಗಿ, ಪರೀಕ್ಷಿತ ಮಹಾರಾಜನಿಗೆ ಹಾವು ಕಚ್ಚಿ ಅವನು ಸಾವನ್ನಪ್ಪುತ್ತಾನೆ.ತಂದೆಯ ಮರಣದ ಆಕ್ರೋಶದಿಂದ, ಜನಮೇಜಯನು ಎಲ್ಲ ಹಾವುಗಳು ಯಜ್ಞಕೊಂಡದಲ್ಲಿ ಬಿದ್ದು ಸಾಯುವಂತೆ ಒಂದು ಮಹಾಯಜ್ಞವನ್ನು ಆರಂಭಿಸುತ್ತಾನೆ.ಹಾವುಗಳು ಯಜ್ಞದಲ್ಲಿ ಬಿದ್ದು ಸಾಯುತ್ತಿದ್ದಾಗ, ಒಂದು ಸಣ್ಣ ಹಾವು ದೇವರ ಸಹಾಯಕ್ಕಾಗಿ ಮೊರೆಯಿಡುತ್ತದೆ.ಯಜ್ಞವನ್ನು ನಿಲ್ಲಿಸಬೇಕೆಂದು ವಿನಂತಿಸುತ್ತದೆ. ತಕ್ಷಣ ದಿವ್ಯ ಶಬ್ದವೊಂದು ಜನಮೇಜಯನಿಗೆ ಎಚ್ಚರಿಕೆ ನೀಡುತ್ತದೆ .ಯಜ್ಞವನ್ನು ಮುಂದುವರಿಸಿದರೆ ಅವನಿಗೂ ತಂದೆಯಂತೆಯೇ ಅಂತ್ಯ ಉಂಟಾಗುತ್ತದೆ ಎಂದು. ಈ ಮಾತು ಕೇಳಿ, ಜನಮೇಜಯನು ಯಜ್ಞವನ್ನು ತಕ್ಷಣ ನಿಲ್ಲಿಸುತ್ತಾನೆ.ಆದರೂ, ಸರ್ಪದೋಷದಿಂದ ಮುಕ್ತಿಯಾಗಲು, ಅವನು ಹಲವು ದೇಗುಲಗಳನ್ನು ನಿರ್ಮಿಸುತ್ತಾನೆ. ಈ ಆಂಜನೇಯ ದೇವಾಲಯವು ಅವನು ನಿರ್ಮಿಸಿದ ಆ ದೇಗುಲಗಳಲ್ಲಿ ಒಂದು.[೨]
ವಿಶೇಷತೆ
ಬದಲಾಯಿಸಿಪ್ರತಿ ವರ್ಷ ಚೈತ್ರ ಶುದ್ಧ ಪೂರ್ಣಿಮೆಯ ಹನುಮಂತ ಜಯಂತಿಯಂದು ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ.
ನುಗ್ಗಿಕೇರಿ ಹನುಮಂತ ದೇವಾಲಯ | |
---|---|
ಸಾಮಾನ್ಯ ಮಾಹಿತಿ | |
ನಿರ್ದೇಶಾಂಕ | 15°N 75°E / 15°N 75°E |
ಉಲ್ಲೇಖಗಳು
ಬದಲಾಯಿಸಿ- ↑ nativeplanet.com ಜಾಲತಾಣದಲ್ಲಿನ ವರದಿ
- ↑ https://www.udayavani.com/supplements/multifaceted/nuggikeri-anjaneya-temple.
{{cite web}}
: Missing or empty|title=
(help)