ನೀಲಕಂಠನಹಳ್ಳಿ ಇದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಒಂದು ಗ್ರಾಮ. ಇದು ಮದ್ದೂರು ಕಸಬಾ(1) ಹೋಬಳಿ ಹಾಗೂ ಆಲೂರು ಅಂಚೆಗೆ ಒಳಪಡುತ್ತದೆ.ಇದು ಮದ್ದೂರಿನಿಂದ ೭(7) ಕಿಲೋಮೀಟರ್ ದೂರದಲ್ಲಿದೆ ಹಾಗೂ ಮಂಡ್ಯದಿಂದ ೨೬(26) ಕಿಲೋಮೀಟರ್ ದೂರದಲ್ಲಿದೆ ಮೈಸೂರಿನಿಂದ ೭೧(71) ಕಿಲೋಮೀಟರ್ ದೂರದಲ್ಲಿದೆ.ಬೆಂಗಳೂರಿನಿಂದ ೮೪(84) ಕಿಲೋಮೀಟರ್ ದೂರದಲ್ಲಿದೆ. ೨೦೧೧ ರ ಜನಗಣತಿಯ ಪ್ರಕಾರ ಜನಸಂಖ್ಯೆ ೧೩೫೦. ಪಿನ್ ಕೋಡ್-೫೭೧೪೩೩(571433).

ನೀಲಕಂಠನಹಳ್ಳಿ
ನೀಲಕಂಠನಹಳ್ಳಿ
city
Government
 • MLAD.C ತಮ್ಮಣ್ಣ[]
Population
 (೨೦೦೧(2001))
 • Total೧೩೯೦(೧,೩೯೦)
Websitewww.maddur.nic.in/

ಪ್ರಮುಖ ದೇವಸ್ಥಾನಗಳು

ಬದಲಾಯಿಸಿ

ಬಸವೇಶ್ವರ ದೇವಸ್ಥಾನ, ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ಮಾಯಮ್ಮ ದೇವಿ ದೇವಸ್ಥಾನ, ಬೊಮ್ಮಲಿಂಗೇಶ್ವರ ಸ್ವಾಮಿ ದೇವಸ್ಥಾನ, ಕ್ಯಾತಮ್ಮ ದೇವಿ ದೇವಸ್ಥಾನ, ಮಾರಮ್ಮ ದೇವಿ ದೇವಸ್ಥಾನ, ರಾಕಾಸಮ್ಮ ದೇವಿ ದೇವಸ್ಥಾನ, ಕಬ್ಬಾಳಮ್ಮ ದೇವಿ ದೇವಸ್ಥಾನ.

ಹಬ್ಬಗಳು

ಬದಲಾಯಿಸಿ

ಇಲ್ಲಿನ ಊರಬ್ಬ ಬಸವನ ಹಬ್ಬ ಅದ್ದೂರಿಯಾಗಿ ನಡೆಸಲಾಗುತ್ತದೆ. ಈ ಹಬ್ಬದಲ್ಲಿ ಬಸವೇಶ್ವರ ಸ್ವಾಮಿ ಕೆಂಡೋತ್ಸವ ಹಾಗೂ ವೀರಭದ್ರ ಸ್ವಾಮಿ ಕೆಂಡೋತ್ಸವ ಕಾಣಬಹುದು. ಮಕರ ಸಂಕ್ರಾಂತಿ, ಯುಗಾದಿ, ಮಹಾಶಿವರಾತ್ರಿ, ರಾಮನವಮಿ, ದೀಪಾವಳಿ, ಬಸವನ ಹಬ್ಬ ಇತ್ಯಾದಿಗಳು

ಅಣೆಕಟ್ಟು

ಬದಲಾಯಿಸಿ

ಬಾಣೋಜಿ ಪಂಥ್ ಏತನೀರಾವರಿ ಯೋಜನೆ. ಇಲ್ಲಿ ಶಿಂಷಾ ನದಿಗೆ ಅಡ್ಡಲಾಗಿ ಚಿಕ್ಕ ಡ್ಯಾಂ ನಿರ್ಮಾಣ ಮಾಡಲಾಗಿದೆ. ಈ ನೀರನ್ನು ಕೆ. ಹೊನ್ನಲಗೆರೆಯ ಕೆರೆಗೆ ಹರಿಸಲಾಗುತ್ತದೆ.ಆದರೆ ಇಲ್ಲಿ ಕೆಲವು ಜಮೀನುಗಳು ನೀರಾವರಿಯಾಗಿದ್ದು ಇನ್ನೂ ಕೆಲವು ಒಣ ಭೂಮಿಗಳಾಗಿವೆ.

ಸಹಕಾರ ಸಂಘಗಳು

ಬದಲಾಯಿಸಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಮಹಿಳಾ ಸಹಕಾರ ಸಂಘ.

ಸಂಪರ್ಕಿಸುವ ಮಾರ್ಗಗಳು

ಬದಲಾಯಿಸಿ

೧)ಮದ್ದೂರು ಕಡೆಯಿಂದ ವೈದ್ಯನಾಥಪುರ-ಆಲೂರು ಮಾರ್ಗ

೨) ರುದ್ರಾಕ್ಷಿಪುರ-ಹಲಗೂರು ರಸ್ತೆಯಿಂದ ಕೆ.ಹೊನ್ನಲಗೆರೆ ಮೂಲಕ ತಲುಪಬಹುದು.

ಪಕ್ಕದ ನಗರಗಳು ಮತ್ತು ಪಟ್ಟಣಗಳು

ಬದಲಾಯಿಸಿ

ಮಂಡ್ಯ (೨೬(26) ಕಿಲೋಮೀಟರ್)

ಚನ್ನಪಟ್ಟಣ (೨೩(23) ಕಿಲೋಮೀಟರ್)

ರಾಮನಗರ (೩೪ (34) ಕಿಲೋಮೀಟರ್)

ಮದ್ದೂರು (೭(7) ಕಿಲೋಮೀಟರ್)

ನಿಡಘಟ್ಟ (೧೨(12) ಕಿಲೋಮೀಟರ್)

ಹಲಗೂರು (30 ಕಿಲೋಮೀಟರ್)

ಬೆಂಗಳೂರು (85 ಕಿಲೋಮೀಟರ್)

ಮೈಸೂರು (71 ಕಿಲೋಮೀಟರ್)

ಭಾರತಿನಗರ(ಕೆ.ಎಮ್ ದೊಡ್ಡಿ) (17ಕಿಲೋಮೀಟರ್)

ಕಬ್ಬು,ಭತ್ತ,ರಾಗಿ, ಟೊಮೋಟೊ,ಮಾವು,ತೆಂಗು,ಅಡಿಕೆ,ಬಾಳೆ ಬೆಳೆಯುತ್ತಾರೆ. ಇಲ್ಲಿ ಒಣಭೂಮಿ ಮತ್ತು ನೀರಾವರಿ ಭೂಮಿ ಎರಡನ್ನು ಕಾಣಬಹುದು.ಒಣಭೂಮಿಯಲ್ಲಿ ಮಳೆ ಆಧಾರಿತ ಹಾಗೂ ಬೋರ್ ವೆಲ್ ಗಳ ಮೂಲಕ ಬೆಳೆ ಬೆಳೆಯಲಾಗುತ್ತಿದೆ.

ಉಲ್ಲೇಖಗಳು

ಬದಲಾಯಿಸಿ
  1. http://www.thehindu.com/news/national/karnataka/New-DC-for-Mandya-takes-charge/article14566329.ece