ನೀರ್‌ಮಹಲ್

ಕಿಶೋರ್ ಮಾಣಿಕ್ಯ ದೇಬ್‍ಬರ್ಮ ಕಟ್ಟಿದ ಅರಮನೆ

ನೀರ್‌ಮಹಲ್ (ಟ್ವಿಜಿಲಿಕ್ಮಾ ನುಯುಂಗ್) (ಅಂದರೆ "ನೀರಿನ ಅರಮನೆ") ತ್ರಿಪುರಾ ರಾಜ್ಯದ ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ದೇಬ್‍ಬರ್ಮ ಕಟ್ಟಿದ ಪೂರ್ವದ ಒಂದು ಅರಸರ ಅರಮನೆಯಾಗಿದೆ. ಇದು ಟ್ವಿಜಿಲಿಕ್ಮಾ (ಈಗ ರುದ್ರಸಾಗರ್ ಎಂದು ಕರೆಯಲ್ಪಡುತ್ತದೆ) ಸರೋವರದ ಮಧ್ಯದಲ್ಲಿದೆ.[] ಇದರ ನಿರ್ಮಾಣ 1930ರಲ್ಲಿ ಶುರುವಾಗಿ 1938ರಲ್ಲಿ ಮುಗಿಯಿತು. ಇದು ತ್ರಿಪುರದ ರಾಜಧಾನಿ ಅಗರ್ತಲದಿಂದ ೫೩ ಕಿಲೋಮೀಟರ್ ದೂರದ ಮೇಲಾಘರ್‌ನಲ್ಲಿ ಸ್ಥಿತವಾಗಿದೆ. ಈ ಅರಮನೆಯು ಹಿಂದೂ ವಾಸ್ತುಕಲಾ ಶೈಲಿಯನ್ನು ಅಳವಡಿಸಿಕೊಂಡಿದೆ.

ರುದ್ರಸಾಗರ ಸರೋವರದ ಮಧ್ಯದಲ್ಲಿ ಸ್ಥಿತವಾಗಿರುವ ನೀರ್‌ಮಹಲ್‍ನ ಮುಂಭಾಗದ ನೋಟ

ನೀರ್‌ಮಹಲ್‌ನ್ನು ಬೇಸಿಗೆಯ ನಿವಾಸವಾಗಿ ನಿರ್ಮಿಸಲಾಯಿತು. ಭವ್ಯವಾದ ರುದ್ರಸಾಗರ ಸರೋವರದ ಮಧ್ಯದಲ್ಲಿ ಒಂದು ಅರಮನೆಯನ್ನು ಕಟ್ಟಿಸುವ ವಿಚಾರ ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ದೇಬ್‍ಬರ್ಮದರಾಗಿತ್ತು.

ಅರಮನೆಯನ್ನು ಎರಡು ಭಾಗಗಳಾಗಿ ವಿಭಜಿಸಲಾಗುತ್ತದೆ. ಅರಮನೆಯ ಪಶ್ಚಿಮ ಪಾರ್ಶ್ವವನ್ನು ಅಂದರ್ ಮಹಲ್ ಎಂದು ಕರೆಯಲಾಗುತ್ತದೆ. ಇದನ್ನು ಅರಸರ ಕುಟುಂಬಕ್ಕಾಗಿ ನಿರ್ಮಿಸಲಾಗಿತ್ತು. ಪೂರ್ವ ಪಾರ್ಶ್ವವು ಬಯಲು ರಂಗಮಂದಿರವಾಗಿದ್ದು ಇಲ್ಲಿ ಮಹಾರಾಜರು ಮತ್ತು ಅವರ ರಾಜವಂಶದ ಕುಟುಂಬಗಳ ಮನೋರಂಜನೆಗಾಗಿ ನಾಟಕ, ರಂಗಭೂಮಿ, ನೃತ್ಯ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಅರಮನೆಯು ಒಟ್ಟು ೨೪ ಕೋಣೆಗಳನ್ನು ಹೊಂದಿದೆ.

ಉಲ್ಲೇಖಗಳು

ಬದಲಾಯಿಸಿ