ನೀರಾ ಆರ್ಯ ಅವರು ಭಾರತೀಯ ರಾಷ್ಟ್ರೀಯ ಸೇನೆಯ (INA) ಅನುಭವಿಯಾಗಿದ್ದರು. ಅವರು INA ಯ ರಾಣಿ ಆಫ್ ಝಾನ್ಸಿ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದರು.

ಆರಂಭಿಕ ಜೀವನ ಬದಲಾಯಿಸಿ

ನೀರಾ ಆರ್ಯ ಅವರು ಮಾರ್ಚ್ ೫, ೧೯೦೨ ರಂದು ಖೇಕ್ರಾ ನಗರದಲ್ಲಿ ಜನಿಸಿದರು. ಅವರ ತಂದೆ ಶ್ರೀಮಂತ ಉದ್ಯಮಿಯಾಗಿದ್ದರು. ಅವರ್ ತಮ್ಮ ಆರಂಭಿಕ ಶಿಕ್ಷಣವನ್ನು ಕಲ್ಕತ್ತಾದಲ್ಲಿ ಮುಗಿಸಿದರು.

ಗಂಡನ ಹತ್ಯೆ ಬದಲಾಯಿಸಿ

ನೀರಾ ಆರ್ಯ ಅವರು ಬ್ರಿಟಿಷ್ ಸಿಐಡಿ ಅಧಿಕಾರಿಯಾಗಿದ್ದ ಶ್ರೀಕಾಂತ್ ಜೈರಂಜನ್ ದಾಸ್ ಅವರನ್ನು ವಿವಾಹವಾಗಿದ್ದರು. [೧] ನೀರಾರವರು ಭಾರತೀಯ ರಾಷ್ಟ್ರೀಯ ಸೇನೆಗೆ ಸೇರಿದ್ದಾರೆ ಎಂದು ಅರಿತ ಶ್ರೀಕಾಂತ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ನೀರಾ ಅವರು ಹತ್ಯೆ ಮಾಡಬೇಕೆಂದು ಬಯಸಿದ್ದರು. ನೀರಾರವರು ನಿರಾಕರಿಸಿದಾಗ, ನೇತಾಜಿಯನ್ನೇ ಹತ್ಯೆ ಮಾಡಲು ನೇತಾಜಿ ಇರುವ ಸ್ಥಳವನ್ನು ಬಹಿರಂಗಪಡಿಸಬೇಕೆಂದು ಶ್ರೀಕಾಂತ್ ಬಯಸಿದ್ದರು. ವಿಫಲವಾದ ಹತ್ಯೆಯ ಪ್ರಯತ್ನದ ಸಂದರ್ಭದಲ್ಲಿ, ಶ್ರೀಕಾಂತ್ ನೇತಾಜಿ ಕಡೆಗೆ ಗುಂಡು ಹಾರಿಸಿದ್ದರು. ನೇತಾಜಿ ಗುಂಡಿನ ದಾಳಿಯಿಂದ ಬದುಕುಳಿದರು. ಆದರೆ ಅವರ ಚಾಲಕ ಕೊಲ್ಲಲ್ಪಟ್ಟರು. ಇದನ್ನು ಕೇಳಿದ ನೀರಾರವರು ಶ್ರೀಕಾಂತ್ ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. [೨] [೩]

ಶ್ರೀಕಾಂತ್‌ನನ್ನು ಕೊಂದಿದ್ದಕ್ಕಾಗಿ ನೀರಾರವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸೆಲ್ಯುಲಾರ್ ಜೈಲಿನಲ್ಲಿ ಬಂಧಿಯಾಗಿದ್ದರು ಮತ್ತು ಅಮಾನುಷವಾಗಿ ಚಿತ್ರಹಿಂಸೆ ನೀಡಲಾಯಿತು ಅವರ ಸ್ತನಗಳನ್ನು ಸಹ ಕತ್ತರಿಸಲಾಯಿತು.

ನಂತರ ಜೀವನ ಮತ್ತು ಸಾವು ಬದಲಾಯಿಸಿ

ಸ್ವಾತಂತ್ರ್ಯಾನಂತರ ನೀರಾರವರ ಬಿಡುಗಡೆಯಾಯಿತು. ಜುಲೈ ೨೬ , ೧೯೯೮ ರಿ೦ದು ಸಾಯುವವರೆಗೂ ಅವರು ತಮ್ಮ ಉಳಿದ ಜೀವನವನ್ನು ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು.

ಪುಸ್ತಕಗಳು ಮತ್ತು ಚಲನಚಿತ್ರಗಳು ಬದಲಾಯಿಸಿ

  • ನೀರಾ ಆರ್ಯ ಅವರ ಜೀವನಚರಿತ್ರೆಯ ಚಲನಚಿತ್ರವನ್ನು ಯೋಜಿಸಲಾಗಿದೆ. ಇದನ್ನು ಚೀನಾದ ಚಲನಚಿತ್ರ ನಿರ್ಮಾಪಕರಾದ ಜಾಂಗ್ ಹುಯಿಹುವಾಂಗ್ ನಿರ್ಮಿಸಲಿದ್ದಾರೆ. [೪] [೫]
  • ನೀರಾ ಆರ್ಯ: INA ಯ ಪ್ರಥಮ ಮಹಿಳೆ ಗೂಢಚಾರಿಕೆ, ಮಧು ಧಾಮ, ಆರ್ಯಖಂಡ ಟೆಲಿವಿಷನ್ ಪ್ರೈ. ಲಿಮಿಟೆಡ್, ಆವೃತ್ತಿ ೨೦೨೧
  • ಮೇರಾ ಜೀವನ ಸಂಘರ್ಷ, ನೀರಾ ಆರ್ಯ, ಆರ್ಯಖಂಡ್ ಟೆಲಿವಿಷನ್ ಪ್ರೈ. ಲಿಮಿಟೆಡ್, ಆವೃತ್ತಿ ೨೦೨೧ [೬]

ಉಲ್ಲೇಖಗಳು ಬದಲಾಯಿಸಿ

  1. Desk, TM News (2020-12-30). "Did you know a brave woman who let her breast cut off to protect Netaji Subhash Chandra Bose!". Telangana Mata (in ಇಂಗ್ಲಿಷ್). Archived from the original on 2021-08-17. Retrieved 2021-08-15.
  2. "Subhash Chandra Bose: आजाद हिंद फौज की पहली महिला जासूस नीरा आर्या...बचाई नेताजी की जान, पति को किया कुर्बान". Navbharat Times (in ಹಿಂದಿ). Retrieved 2021-08-15.
  3. "एक वीरांगना: नेताजी सुभाष चंद्र बोस की जान बचाने के लिए जिसने कर दी थी पति की हत्या, अब पर्दे पर दिखेगी कहानी". Amar Ujala (in ಹಿಂದಿ). Retrieved 2021-08-15.
  4. "वीरांगना नीरा आर्य पर फिल्म बनाएंगी चीन की फिल्मकार". Amar Ujala (in ಹಿಂದಿ). Retrieved 2021-08-15.
  5. "Google Translate". translate.google.com. Retrieved 2021-08-15.
  6. "पुस्तक समीक्षा : विमान दुर्घटना में बलिदान नहीं हुए थे नेताजी सुभाष चंद्र बोस".