ನೀನಾ ರಾಜಾರಾಣಿ
ನೀನಾ ರಾಜಾರಾಣಿ, ಎಂಬಿಇ, ದಕ್ಷಿಣ ಏಷ್ಯಾದ ನೃತ್ಯಗಾರ್ತಿ ಮತ್ತು ನೃತ್ಯ ಸಂಯೋಜಕಿ. ಇವರು ದಿ ಪ್ಲೇಸ್ ಪ್ರೈಜ್ ೨೦೦೬ರ ವಿಜೇತರು. ಇವರು ಮಿಡ್ಲ್‌ಸೆಕ್ಸ್‌ನ ಹ್ಯಾರೋ ಮೂಲದ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ ಮತ್ತು ಪುರುಷ ಪ್ರಧಾನ ಪ್ರವಾಸಿ ನೃತ್ಯ ಕಂಪನಿಯಾದ ಸೃಷ್ಟಿ - ನೀನಾ ರಾಜಾರಾಣಿ ಡ್ಯಾನ್ಸ್ ಕ್ರಿಯೇಷನ್ಸ್‌ನ ಕಲಾತ್ಮಕ ನಿರ್ದೇಶಕಿಯಾಗಿದ್ದಾರೆ. [೧]
ನೀನಾ ರಾಜಾರಾಣಿ | |
---|---|
Born | |
Occupation(s) | ನೃತ್ಯ ಸಂಯೋಜನೆ, ನರ್ತಕಿ |
Years active | ೧೯೯೦ - ಪ್ರಸಕ್ತ |
Website | http://www.srishti.co.uk |
ನೀನಾ ರಾಜಾರಾಣಿ ಅವರು ೧೯೮೬ ರಲ್ಲಿ ಭಾರತೀಯ ವಿದ್ಯಾ ಭವನದಿಂದ ಭರತನಾಟ್ಯದಲ್ಲಿ ಡಿಪ್ಲೊಮಾವನ್ನು ಪಡೆದರು ಮತ್ತು ೧೯೮೭ ರಲ್ಲಿ ಅವರು ತಮ್ಮ ರಂಗೇತ್ರಮ್ ಅನ್ನು ಪ್ರದರ್ಶಿಸಿದರು. ರಾಜಾರಾಣಿ ಯುಕೆ, ಯುರೋಪ್, ಸಿಂಗಾಪುರ, ಮಲೇಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಪ್ರದರ್ಶಕಿಯಾಗಿ ಪ್ರವಾಸ ಮಾಡಿದ್ದಾರೆ.
ರಾಜಾರಾಣಿ ೨೦೦೬ರ ಶರತ್ಕಾಲದಲ್ಲಿ ಯುರೋಪಿನ ಅತಿದೊಡ್ಡ ನೃತ್ಯ ಸಂಯೋಜನೆಯ ಸ್ಪರ್ಧೆಯಾದ ಪ್ಲೇಸ್ ಪ್ರಶಸ್ತಿಯನ್ನು ಗೆದ್ದರು. ೨೦ ಫೈನಲಿಸ್ಟ್‌ಗಳು ಮತ್ತು ಒಟ್ಟಾರೆ ೨೦೪ ಪ್ರವೇಶಾರ್ತಿಗಳಲ್ಲಿ ರಾಜಾರಾಣಿಯನ್ನು ಆಯ್ಕೆ ಮಾಡಲಾಗಿತ್ತು.
ಕ್ವೀನ್ಸ್ ೨೦೦೯ ರ ಜನ್ಮದಿನದ ಗೌರವಗಳಲ್ಲಿ ನೀನಾ ರಾಜಾರಾಣಿ ದಕ್ಷಿಣ ಏಷ್ಯಾದ ನೃತ್ಯಕ್ಕೆ ಅವರ ಸೇವೆಗಳನ್ನು ಗುರುತಿಸಿ ಎಂಬಿಇಅನ್ನು ನೀಡಲಾಯಿತು. ಪ್ರಶಸ್ತಿಯನ್ನು ೧೩ ಜೂನ್ ೨೦೦೯ ರಂದು ಘೋಷಿಸಲಾಯಿತು.
ರಾಜಾರಾಣಿ ೧೯೯೧ ರಲ್ಲಿ ಸ್ಥಾಪಿಸಲಾದ ನೃತ್ಯ ಶಾಲೆಯನ್ನು ಹೊಂದಿದ್ದಾರೆ. ಇದು ಮಿಡ್ಲ್‌ಸೆಕ್ಸ್‌ನಲ್ಲಿರುವ ಹ್ಯಾರೋ ಆರ್ಟ್ಸ್ ಸೆಂಟರ್‌ನಲ್ಲಿ ನೆಲೆಗೊಂಡಿದೆ. ರಾಜಾರಾಣಿ ಪ್ರಸ್ತುತ ISTD ಯ ದಕ್ಷಿಣ ಏಷ್ಯಾದ ನೃತ್ಯ ವಿಭಾಗದ ಕಾರ್ಯದರ್ಶಿಯಾಗಿದ್ದಾರೆ. ಇವರು ಅಕಾಡೆಮಿಯ ಸಹ ಕಲಾವಿದೆಯೂ ಹೌದು.
ಪ್ರದರ್ಶನದಿಂದ ಮೂರು ವರ್ಷಗಳ ವಿರಾಮದ ನಂತರ, ರಾಜಾರಾಣಿ ಮಾರ್ಚ್ ೨೦೧೦ ರಲ್ಲಿ ಟೂರಿಂಗ್ ಕಂಪನಿ ಪ್ರದರ್ಶನದಲ್ಲಿ ವೇದಿಕೆಗೆ ಮರಳಿದರು. [೨]
ಉಲ್ಲೇಖಗಳು
ಬದಲಾಯಿಸಿ- ↑ Bibliographic Guide to Dance (in ಇಂಗ್ಲಿಷ್). G. K. Hall. 1992. ISBN 9780816170043.
- ↑ "Choreographer Nina Rajariani MBE showcases her favourite things". Watford Observer (in ಇಂಗ್ಲಿಷ್). Retrieved 2019-07-23.