ನಿಹಾಲಿ ಭಾಷೆ

(ನಿಹಾಲಿ ಇಂದ ಪುನರ್ನಿರ್ದೇಶಿತ)

ಇಂಡೋ ಆರ್ಯನ್, ದ್ರಾವಿಡ, ಟಿಬೆಟ್ ಬರ್ಮನ್, ಆಸ್ಟ್ರೋ ಎಷಿಯಾಟಿಕ್ ಎಂದು ನಾಲ್ಕು ಭಾಗಗಳಾಗಿ ಭಾರತದ ಭಾಷೆಗಳನ್ನು ವರ್ಗಿಕರಿಸುತ್ತಾರೆ. ಆದರೆ ಯಾವ ಭಾಷ ಕುಟುಂಬಕ್ಕೂ ಸೇರದೆ, ತನ್ನದೆ ಆದ ವಿಶಿಷ್ಟ ಸಂಸ್ಕೃತಿಯನ್ನು, ಶೈಲಿಯನ್ನು ಹೊಂದಿರುವ‍ ಭಾ‍‍‍‍‍‍‍ಷೆಗಳಲ್ಲಿ ಮೊದಲ ಸಾಲಿನಲ್ಲಿ ಬರುವಂತಹದು ನಿಹಾಲಿ.

ರಹಸ್ಯ ಭಾಷೆಯಾಗಿ ನಿಹಾಲಿ

ಬದಲಾಯಿಸಿ

ಮಹಾರಾಷ್ಟ್ರದ ಜಾಲ್ಗಾಂವ್ ಜಾಮೋದ್ನಲ್ಲಿ ಸುಮಾರು ೨೫೦೦ ಆದಿವಾಸಿಗಳು ನಿಹಾಲಿ ಭಾಷೆಯನ್ನು ಮಾತನಾಡುತ್ತಾರೆ.[]ನಿಹಾಲಿಯನ್ನು ಹೆಚ್ಚು ಕಡಿಮೆ ರಹಸ್ಯ ಭಾಷೆಯಾಗಿ ಬಳಸುತ್ತಾರೆ. ಅದು ಸಾಮಾನ್ಯವಾಗಿ ಹೊರಗಿನವರಿಗೆ ಬಹಿರಂಗವಾಗುವುದಿಲ್ಲ.ನಿಹಾಲಿ ಭಾಷೆಯ ಭಾಷಣಕಾರರು ಇದ್ದಾರೆ.ಆದರೆ ಅಲ್ಲಿ ಹೆಚ್ಚು ಹಿಂದಿಯನ್ನು ಅಳವಡಿಸಿಕೊಳ್ಳಲು ಸರ್ಕಾರ ಒಲವು ತೋರಿಸುತ್ತಿದೆ.

ಆದಿವಾಸಿಗಳ ಭಾಷೆ

ಬದಲಾಯಿಸಿ

ನಿಹಾಲಿಯನ್ನು ಮಾತನಾಡುವ ಸ್ಥಳಿಯ ಬುಡಕಟ್ಟು ಜನರು ಮರಾಠಿ, ಕೊರ್ಕು ಮತ್ತು ಹಿಂದಿಯಂತಹ ಇತರ ಭಾಷೆಗಳನ್ನು ಮಾತನಾಡುವವರೊಂದಿಗೆ ಆಂತರ್ ವಿವಾಹವಾದರು. ಒಂದು ಮಗು ಮನೆಯಲ್ಲಿ ನಿಹಾಲಿಯನ್ನು ಮಾತನಾಡುತ್ತಿದ್ದರ, ಒಮ್ಮೆ ಅವನು ತರಗತಿಗೆ ಪ್ರವೇಶಿಸಿದಾಗ ಆ ಶಾಲೆಯ ಬೊಧನ ಭಾಷೆಗೆ ಬದಲಾಗುತ್ತಾನೆ. ಪೋಷಕರು ತಮ್ಮ ಮಕ್ಕಳೊಂದಿಗೆ ಮಾತೃಭಾ‍‍‍‍ಷೆಯನ್ನು ಮಾತನಾಡಿದಾಗ ಈ ನಿಹಾಲಿ ಭಾಷೆ ಜೀವಂತವಾಗಿರುತ್ತದೆ.

ನಿಹಾಲಿ ಭಾಷೆಯಲ್ಲಿ ಜನಪದ ಸಾಹಿತ್ಯ

ಬದಲಾಯಿಸಿ

ನಿಹಾಲಿ ಭಾಷೆಯ ಜನರು ತಮ್ಮ ಭಾಷೆಯಲ್ಲಿ ಜಾನಪದ ಕಥೆಗಳು ಮತ್ತು ಹಾಡುಗಳನ್ನು ಹಾಡುತ್ತಾರೆ, ಅವರ ಇತಿಹಾಸ ಮತ್ತು ಪುರಾಣಗಳು ನಿಜವಾಗಿಯೂ ಎಷ್ಟು ಶ್ರೀಮಂತವಾಗಿವೆ ಎಂಬುದು ತಿಳಿಯುತ್ತದೆ.[]

ನಿಹಾಲಿ ಭಾಷೆ ಇತರ ಸಮುದಾಯಗಳಿಗಿಂತ ಭಿನ್ನವಾಗಿದೆ ಮತ್ತು ಕಡಿಮೆ ಸಂಖ್ಯೆಯ ಭಾಷಿಕರು ಇದ್ದಾರೆ ಎಂದು ಅವರಿಗೆ ಈಗ ತಿಳಿದಿದೆ ನಿಹಾಲಿ ಭಾಷೆಯನ್ನು ರಕ್ಷಿಸಬಲ್ಲ ವಿಧಾನಗಳ ಕುರಿತು ಭಾಷಾವಿಜ್ಞಾನಿಗಳು ಪ್ರಶ್ನಿಸಿದಾಗ ಅವರು ನಿಹಾಲಿ ಆದರಿತ ಬೋಧನೆ ಸಾಮಾಗ್ರಿಗಳನ್ನು ತಯಾರಿಸಲು ಮತ್ತು ಬೋಧಿಸಲು ಸೂಚಿಸುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. https://en.wikipedia.org/wiki/Nihali_language
  2. https://elar.soas.ac.uk/Collection/MPI1029688