ನಿಷ್ಪ್ರಪಂಚಾಯ
ಹಿಂದೂ ಏಕದೇವತಾವಾದದ "ಇರುವಿಕೆ, ಪ್ರಜ್ಞೆ, ಆನಂದ" ಸರಣಿಯಲ್ಲಿ, ನಿಷ್ಪ್ರಪಂಚಾಯ ದೇವರ ಅಂಶಗಳಲ್ಲಿ ಒಂದಾದ ಆನಂದದ ವಿವರಣೆ. ಹಾಗೆ ಅದನ್ನು ಕೆಲವು ಹಿಂದೂ ದೇವಾಲಯಗಳು ಮತ್ತು ಆಶ್ರಮಗಳಲ್ಲಿ ಪ್ರತಿದಿನ ಹಾಡಲಾಗುತ್ತದೆ.
ನಿಷ್ಪ್ರಪಂಚಾಯ ಪದವನ್ನು ವಿವಿಧವಾಗಿ "ಅವನು ವಿಶ್ವ ಪ್ರಜ್ಞೆಯನ್ನು ಮೀರಿದವನು", "ಅವನು ಅತೀಂದ್ರಿಯ",[೧] ಮತ್ತು "ಈ ವಿಶ್ವದ ಮೇಲಿರುವವನು" ಎಂದು ಭಾಷಾಂತರಿಸಲಾಗುತ್ತದೆ.
ವ್ಯಾಕರಣಾತ್ಮಕವಾಗಿ, ನಿಷ್ಪ್ರಪಂಚಾಯ ಪದವು ನಿಷ್ಪ್ರಪಂಚ ಸಂಸ್ಕೃತ ನಾಮಪದದ ಸಂಪ್ರದಾನ ಕಾರಕವಾಗಿದೆ. ನಿಷ್ಪ್ರಪಂಚ ಅಂದರೆ ಅವ್ಯಕ್ತ. ನಿಷ್ ಅಂದರೆ ಇಲ್ಲದ, ಮತ್ತು ಪ್ರಪಂಚ ಅಂದರೆ "ವ್ಯಕ್ತ, ವಿಶ್ವದ್ದು" ಮತ್ತು ಯ ಸಂಪ್ರದಾನ ಪ್ರತ್ಯಯವಾಗಿದೆ.
ನಿಷ್ಪ್ರಪಂಚಾಯ ಕೆಲವು ಜನಪ್ರಿಯ ಮಂತ್ರಗಳಲ್ಲಿ ಬರುತ್ತದೆ. ಮುಂದಿನ ಓಂ ನಮಃ ಶಿವಾಯ ಮಂತ್ರ ನೋಡಿ:
- ಓಂ ನಮಃ ಶಿವಾಯ ಗುರವೆ (ಓಂ. ಗುರುವಿಗೆ ನಮನ, ಅವನೇ ಶಿವ.)
- ಸಚ್ಚಿದಾನಂದ ಮೂರ್ತಯೆ (ಅವನ ರೂಪವು ಇರುವಿಕೆ, ಪ್ರಜ್ಞೆ, ಮತ್ತು ಆನಂದ.)
- ನಿಷ್ಪ್ರಪಂಚಾಯ ಶಾಂತಾಯ) (ಅವನು ಅತೀಂದ್ರಿಯ, ಶಾಂತ,)
- ನಿರಾಲಂಬಾಯ ತೇಜಸೆ) (ಎಲ್ಲ ಆಧಾರಗಳಿಂದ ಮುಕ್ತ, ಮತ್ತು ಹೊಳೆಯುವವನು.)
ಉಲ್ಲೇಖಗಳು
ಬದಲಾಯಿಸಿ