ನಿಯಾ ಶರ್ಮಾ

ಭಾರತೀಯ ಕಿರುತೆರೆ ನಟಿ

ನಿಯಾ ಶರ್ಮಾ(ಜನನː೧೭ ಸೆಪ್ಟೆಂಬರ್‌ ೧೯೯೦) ರವರೊಬ್ಬ ಭಾರತೀಯ ದೂರದರ್ಶನ ನಟಿ . ಇವರು ಸ್ಟಾರ್ ಪ್ಲಸ್‌ನ ಕಾಲಿ - ಏಕ್ ಅಗ್ನಿಪರಿಕ್ಷಾ [] ಎಂಬ ಧಾರವಾಹಿಯಲ್ಲಿ ಅನು ಎಂಬ ಪಾತ್ರದಲ್ಲಿ , ಏಕ್‌ ಹಜಾರೊ ಮೆ ಮೇರಿ ಬೆಹೆನಾ ಹೆ[] - ಮಾನ್ವಿ , ಜೀ ಟಿವಿಯ ಜಮಾಯಿ ರಾಜ[] - ರೋಶ್ನಿ ಪಟೇಲ್‌ , ಕಲರ್ಸ್‌ ಟಿವಿ ಯ ಇಷ್ಕ್‌ ಮೆ ಮರ್ಜಾವಾ[] - ಆರೋಹಿ ಕಶ್ಯಪ್‌ ನಂತಹ ಪಾತ್ರಗಳಲ್ಲಿ ಅಭಿನಯಿಸಿ ಇವರು ಹೆಸರುವಾಸಿಯಾಗಿದ್ದಾರೆ . ಇವರು ಖತ್ರೋನ್ ಕೆ ಖಿಲಾಡಿ ಯಲ್ಲಿ ಸ್ಪರ್ಧಿಯಾಗಿದ್ದು ಟಾಪ್‌ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು .[]. ನಿಯಾ ಶರ್ಮಾ ರವರು ಟ್ವಿಸ್ಟೆಡ್‌ ವೆಬ್‌ ಸೀರೀಸ್‌ನಿಂದಾಗಿ ಜನಪ್ರಿಯತೆಯನ್ನು ಪಡೆದರು . ಬ್ರಿಟಿಷ್ ಮೂಲದ ಈಸ್ಟರ್ನ್ ಐ ಪತ್ರಿಕೆ ಪ್ರಕಟಿಸಿದ ಪ್ರಕಾರ , ಟಾಪ್ ೫೦ ಸೆಕ್ಸಿಯೆಸ್ಟ್ ಏಷ್ಯನ್ ವುಮೆನ್ ೨೦೧೭ ರ ಪಟ್ಟಿಯಲ್ಲಿ ಇವರು ಎರಡನೇ ಸ್ಥಾನವನ್ನುಗಳಿಸಿದ್ದಾರೆ . []

ನಿಯಾ ಶರ್ಮಾ
Born೧೭ ಸೆಪ್ಟೆಂಬರ್‌ ೧೯೯೦
ರೋಹಿಣಿ, ಭಾರತ
Nationalityಭಾರತೀಯ
Occupationನಟಿ
Years active೨೦೧೦ -

ವೈಯಕ್ತಿಕ ಜೀವನ

ಬದಲಾಯಿಸಿ

ನಿಯಾ ಶರ್ಮಾ ರವರ ನಿಜವಾದ ಹೆಸರು ನೇಹಾ ಶರ್ಮಾ . ಅವರ ಕುಟುಂಬದಲ್ಲಿ ಅವರು ಕಿರಿಯ ಮಗಳು . ಆಕೆಗೆ ಒಬ್ಬ ಹಿರಿಯ ಸಹೋದರನಿದ್ದಾನೆ. ಬ್ರಿಟಿಷ್ ಮೂಲದ ಈಸ್ಟರ್ನ್ ಐ ಪತ್ರಿಕೆಯಲ್ಲಿ ಪ್ರಕಟಿಸಿದ ಪ್ರಕಾರ ಶರ್ಮಾರವರು ೨೦೧೬ ರಲ್ಲಿ ನಂ .೩ ಹಾಗೂ ೨೦೧೭ ರಲ್ಲಿ ಟಾಪ್ ೫೦ ಸೆಕ್ಸಿಯೆಸ್ಟ್ ಏಷ್ಯನ್ ಮಹಿಳಾ ಪಟ್ಟಿಯಲ್ಲಿ ೨ ನೇ ಸ್ಥಾನವನ್ನುಗಳಿಸಿದ್ದಾರೆ. []

ವೃತ್ತಿಜೀವನ

ಬದಲಾಯಿಸಿ

ನಿಯಾ ರವರು ತಮ್ಮ ವೃತ್ತಿಜೀವನವನ್ನು ಕಾಲಿ- ಏಕ್ ಅಗ್ನಿಪರೀಕ್ಷಾ ಎಂಬ ಧಾರಾವಾಹಿಯಲ್ಲಿ ನಟಿಸುವುದರ ಮೂಲಕ ಪ್ರಾರಂಭಿಸಿದರು ನಂತರ ಬೆಹೆನೆ ಎಂಬ ಧಾರವಾಹಿಯ ಮೂಲಕ ಮುಂದಿನ ಹೆಜ್ಜೆ ಹಾಕಿದರು. ಇವರು ದಿ ಪ್ಲೇಯರ್ ಎಂಬ ರಿಯಾಲಿಟಿ ಶೋನಲ್ಲಿಯೂ ಸಹ ಕಿರು ಪಾತ್ರವನ್ನು ನಿರ್ವಹಿಸಿದರು . ೨೦೧೧ ರಲ್ಲಿ ಏಕ್ ಹಜಾರೊ ಮೇ ಮೇರಿ ಬೆಹ್ನಾ ಹೆ ಧಾರವಾಹಿಯಲ್ಲಿ ಮಾನ್ವಿ ಎಂಬ ಪಾತ್ರದಲ್ಲಿ , ೨೦೧೪ ರಲ್ಲಿ ಜೀ ಟವಿಯ ಜಮಾಯಿ ರಾಜಾ ಎಂಬ ಧಾರವಾಹಿಯಲ್ಲಿ ರವಿ ದೂಬೆ ರವರ ಜೊತೆ ರೋಶ್ನಿ ಎಂಬ ಪಾತ್ರದಲ್ಲಿ , ೨೦೧೭ ರಲ್ಲಿ ವಿಕ್ರಮ್ ಭಟ್ ರವರ ವೆಬ್ ಸರಣಿ ಟ್ವಿಸ್ಟೆಡ್ ನಲ್ಲಿ ಮಹಿಳಾ ಪ್ರಮುಖ ಪಾತ್ರವಾದ ಆಲಿಯಾ ಮುಖರ್ಜಿಯವರ ಪಾತ್ರವನ್ನು ನಿರ್ವಹಿಸಿದರು ಹಾಗೂ ಅದೇ ವರುಷದಲ್ಲಿ ಅವರು ಫಿಯರ್‌ ಫ್ಯಾಕ್ಟರ್‌ ː ಖತ್ರೋನ್‌ ಕೆ ಖಿಲಾಡಿ ೮ ಪೈನ್‌ ಇನ್‌ ಸ್ಪೈನ್ ಎಂಬ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದರು . ಅದರಲ್ಲಿ ಅವರು ಆಗಸ್ಟ್‌ ೬ ರಂದು ಎಲಿಮಿನೇಟ್‌ ಆಗಿದ್ದು ಆಗಸ್ಟ್‌ ೨೬ ರಂದು ಅವರು ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಪುನಃ ಆ ಶೋನಲ್ಲಿ ಭಾಗವಹಿಸಿ ಕೊನೆಗೆ ಖತ್ರೋನ್‌ ಕೆ ಖಿಲಾಡಿ ೮ ರಲ್ಲಿ ಮೊದಲನೇ ಫೈನಲಿಸ್ಟ್‌ ಆಗಿ ಆಯ್ಕೆಯಾದರು .[]

೨೦೧೮ ರಲ್ಲಿ ಅರ್ಜುನ್ ಬಿಜ್ಲಾನಿಯವರ ಜೊತೆ ಆರೋಹಿ ಕಶ್ಯಪ್ ಎಂಬ ಮುಖ್ಯ ಪಾತ್ರದಲ್ಲಿ ಇಷ್ಕ್ ಮೇ ಮರ್ಜವಾನ್ ಎಂಬ ಧಾರವಾಹಿಯಲ್ಲಿ ನಟಿಸಿದರು .ಈ ಪ್ರದರ್ಶನವು ಕಲರ್ಸ್ ಟಿವಿಯಲ್ಲಿ ಪ್ರಸಾರವಾಗಿತ್ತು ಹಾಗೂ ಜೂನ್ ೨೦೧೯ ರಲ್ಲಿ ಕೊನೆಗೊಂಡಿತು. ೨೦೧೯ ರಲ್ಲಿ ಇವರು ಕಲರ್ಸ್ ಟಿವಿಯಲ್ಲಿ ಪ್ರಸಾರವಾಗಲಿರುವ ನಾಗಿನ್ 4ರಲ್ಲಿ ನಾಗ್ರಾಣಿಯಾಗಿ ಪಾತ್ರವಹಿಸುತ್ತಿದ್ದಾರೆ .[][೧೦][೧೧]

ದೂರದರ್ಶನ

ಬದಲಾಯಿಸಿ
ವರ್ಷ ಪ್ರದರ್ಶನ ಪಾತ್ರ ಚಾನೆಲ್ ಉಲ್ಲೇಖ
೨೦೧೦–೨೦೧೧ ಕಾಲಿ ಏಕ್‌ ಅಗ್ನಿಪರೀಕ್ಷಾ ಅನು ಸ್ಟಾರ್‌ ಪ್ಲಸ್ [೧೨]
೨೦೧೧ ಬೆಹೆನೆ ನಿಶಾ ಮೆಹೆತಾ [೧೨]
ದ ಪ್ಲೇಯರ್ ಕಿರು ಪಾತ್ರ ಚಾನೆಲ್‌ ವಿ
೨೦೧೧–೨೦೧೩ ಏಕ್‌ ಹಜಾರೋ ಮೆ ಮೇರಿ ಬೆಹೆನ ಹೆ ಮಾನ್ವಿ ಚೌದ್ರಿ ಸ್ಟಾರ್‌ ಪ್ಲಸ್ [೧೩]
೨೦೧೧ ಇಸ್‌ ಪ್ಯಾರ್‌ ಕೊ ಕ್ಯ ನಾಮ್‌ ದೂ ಮಾನ್ವಿ ಚೌದ್ರಿ (ಅತಿಥಿ)
೨೦೧೨ ನಯೀ ಸೋಚ್‌ ಕೀ‌ ತಲಾಶ್ ಆಮೀರ್‌ ಕೆ ಸಾಥ್
೨೦೧೨–೨೦೧೩ ಸ್ಟಾರ್ಲೈಟ್
೨೦೧೨ ಯೆ ರಿಶ್ತಾ ಕ್ಯಾ ಕೆಹೆಲಾತಾ ಹೆ
೨೦೧೩ ಪ್ಯಾರ್‌ ಕ ದರ್ದ್‌ ಹೆ ಮೀಠಾ ಮೀಠಾ ಪ್ಯಾರ ಪ್ಯಾರ
೨೦೧೪–೨೦೧೬ ಜಮಾಯಿ ರಾಜ ರೋಶ್ನಿ ಪಟೇಲ್ ಜೀ ಟಿವಿ [೧೪]
೨೦೧೪ ಪವಿತ್ರ್‌ ರಿಶ್ತಾ ರೋಶ್ನಿ ಪಟೇಲ್ (ಅತಿಥಿ)
ಕಬೂಲ್‌ ಹೆ [೧೫]
ಬಾಕ್ಸ್‌ ಕ್ರಿಕರಟ್‌ ಲೀಗ್‌ ೧ ಸ್ಪರ್ಧಿ ಸೋನಿ ಎಂಟರ್ಟೈನ್ಮೆಂಟ್‌ ಟೆಲಿವಿಷನ್
೨೦೧೫ ಕಿಲ್ಲರ್ ಕರಾಕೆ ಅಟ್ಕಾ ತೊ ಲಟ್ಕಾ & ಟಿವಿ
೨೦೧೬ ಕಾಮಿಡಿ ನೈಟ್ಸ್‌ ಬಚಾವೊ ಸ್ವತಃ (ಅತಿಥಿ) ಕಲರ್ಸ್‌ ಟಿವಿ
ಟಶನ್‌‌ - ಎ - ಇಶ್ಕ್ ರೋಶ್ನಿ ಪಟೇಲ್ (ಅತಿಥಿ) ಜೀ ಟಿವಿ
೨೦೧೭ ಫಿಯರ್‌ ಫ್ಯಾಕ್ಟರ್‌ ː ಖತ್ರೋಂಕೆ ಖಿಲಾಡಿ ೮ ಸ್ಪರ್ಧಿ ಕಲರ್ಸ್‌ ಟಿವಿ [೧೬]
ರಸೋಯಿ ಕಿ ಜಂಗ್‌ ಮಮ್ಮಿಯೋಂ ಕೆ ಸಂಗ್ [೧೭]
ಭಾಗ್‌ ಬಕುಲ್‌ ಭಾಗ್ ಸ್ವತಃ (ಅತಿಥಿ) [೧೮]
೨೦೧೮ ಆಪ್‌ ಕೆ ಆಜಾನೆ ಸೆ ಜೀ ಟಿವಿ
೨೦೧೮–೨೦೧೯ ಇಶ್ಕ್‌ ಮೆ ಮರ್ಜಾವಾ ಆರೋಹಿ ಕಶ್ಯಪ್ / ಅಂಜಲಿ ಶರ್ಮಾ ಕಲರ್ಸ್‌ ಟಿವಿ [೧೯]
೨೦೧೮ ಉಡಾನ್‌ ಸಪ್ನೋ ಕಿ ಆರೋಹಿ ಕಶ್ಯಪ್(ಅತಿಥಿ)
ಇಂಟರ್ನೆಟ್‌ವಾಲಾ ಲವ್
ಏಕ್‌ ಆಫ್‌ ಸ್ಪೇಸ್‌ ೧ ಸ್ವತಃ (ಅತಿಥಿ) ಎಮ್‌ ಟಿವಿ ಇಂಡಿಯಾ
ನಾಗಿನ್‌ ೩ ಆರೋಹಿ ಕಶ್ಯಪ್(ಅತಿಥಿ) ಕಲರ್ಸ್‌ ಟಿವಿ
೨೦೧೯ ಶಕ್ತಿ - ಅಸ್ತಿತ್ವ್‌ ಕೆ ಎಹೆಸಾಸ್‌ ಕಿ
ಫಿಯರ್‌ ಫ್ಯಾಕ್ಟರ್‌ ː ಖತ್ರೋಂಕೆ ಖಿಲಾಡಿ ೯ ಸ್ವತಃ(ವೈಲ್ಡ್‌ ಕಾರ್ಡ್‌ ಸ್ಪರ್ಧಿ)

ಪ್ರಶಸ್ತಿಗಳು

ಬದಲಾಯಿಸಿ
  • ೨೦೧೨ – ಇಂಡಿಯನ್‌ ಟಎಲಿವಿಷನ್‌ ಅಕಾಡೆಮಿ ಅವಾರ್ಡ್ಸ್‌, ದೇಶ್‌ ಕೀ ಧಡ್ಕನ್ – ಅತ್ಯುತ್ತಮ ನಟಿ – ಪಾಪ್ಯುಲರ್ ಏಕ್‌ ಹಜಾರೊ ಮೆ ಮೇರಿ ಬೆಹೆನಾ ಹೆ (ವಿಜೇತೆ)[೨೦]
  • ೨೦೧೪ – ಜೀ ರಿಶ್ತೆ ಅವಾರ್ಡ್ಸ್‌ , ಜನಮೆಚಚಿದ ನವ ಜೋಡಿ - ಜಮಾಯಿ ರಾಜ [೨೧]
  • ೨೦೧೪ – ಜೀ ರಿಶ್ತೆ ಅವಾರ್ಡ್ಸ್‌ , ಜನಮೆಚ್ಚಿದ ಅತ್ತೆ-ಸೊಸೆ - ಜಮಾಯಿ ರಾಜ [೨೧]
  • ೨೦೧೫ – ಟೆಲಿವಿಷನ್‌ ಸ್ಟೈಲ್ ಅವಾರ್ಡ್ಸ್‌, ಅತ್ಯುತ್ತಮ ಸ್ಟೈಲಿಶ್‌ ಮಗಳು - ಜಮಾಯಿ ರಾಜ [೨೨]
  • ೨೦೧೫ – ಇಂಡಿಯನ್‌ ಟಎಲಿವಿಷನ್‌ ಅಕಾಡೆಮಿ ಅವಾರ್ಡ್ಸ್‌ , Gr8! ಫೇಸ್‌ ಫೀಮೇಲ್- ಜಮಾಯಿ ರಾಜ[೨೩]

ನಾಮನಿರ್ದೇಶನ

ಬದಲಾಯಿಸಿ
  • ೨೦೧೩ – ಇಂಡಿಯನ್‌ ಟೆಲಿ ಅವಾರ್ಡ್ಸ್ , ಅತ್ಯುತ್ತಮ ನಟಿ (ಮುಖ್ಯ ಪಾತ್ರ) – ಏಕ್‌ ಹಜಾರೊ ಮೆ ಮೇರಿ ಬೆಹೆನಾ ಹೆ[೨೪]
  • ೨೦೧೪ – ಇಂಡಿಯನ್‌ ಟಎಲಿವಿಷನ್‌ ಅಕಾಡೆಮಿ ಅವಾರ್ಡ್ಸ್‌ , ಅತ್ಯುತ್ತಮ ತೆರೆಮೇಇನ ದಂಪತಿಗಳು – ಜಮಾಯಿ ರಾಜ [೨೫]
  • ೨೦೧೪ – ಜೀ ರಿಶ್ತೆ ಅವಾರ್ಡ್ಸ್‌ , ಜನಮೆಚ್ಚಿದ ಜೋಡಿ – ಜಮಾಯಿ ರಾಜ [೨೧]
  • ೨೦೧೪ – ಜೀ ರಿಶ್ತೆ ಅವಾರ್ಡ್ಸ್‌ , ಜನಮೆಚ್ಚಿದ ಹೊಸ ಸದಸ್ಯೆ – ಮಹಿಳೆ – ಜಮಾಯಿ ರಾಜ [೨೧]
  • ೨೦೧೪ – ಜೀ ರಿಶ್ತೆ ಅವಾರ್ಡ್ಸ್‌ , ಜನಮೆಚ್ಚಿದ ಮಗಳು – ಜಮಾಯಿ ರಾಜ [೨೧]
  • ೨೦೧೪ – ಜೀ ರಿಶ್ತೆ ಅವಾರ್ಡ್ಸ್‌ , ಫೇವರೇಟ್‌ ಪಾಪ್ಯುಲರ್‌ ಫೇಸ್‌ - ಜಮಾಯಿ ರಾಜ [೨೧]
  • ೨೦೧೫ – ಇಂಡಿಯನ್‌ ಟೆಲಿ ಅವಾರ್ಡ್ಸ್‌ , ಅತ್ಯುತ್ತಮ ತೆರೆ ಮೇಲಿನ ಜೋಡಿ - ಜಮಾಯಿ ರಾಜ [೨೬]
  • ೨೦೧೫ – ಜೀ ಗೋಲ್ಡ್ ಅವಾರ್ಡ್ಸ್‌ , ಅತ್ಯುತ್ತಮ ನಟಿ - ಜಮಾಯಿ ರಾಜ [೨೭]
  • ೨೦೧೫ – ಜೀ ಗೋಲ್ಡ್ ಅವಾರ್ಡ್ಸ್‌ , ಅತಿ ಹೆಚ್ಚು ಜನಪ್ರಿಯತೆ ಪಡೆದ ಜೋಡಿ - ಜಮಾಯಿ ರಾಜ
  • ೨೦೧೫ – ಜೀ ರಿಶ್ತೆ ಅವಾರ್ಡ್ಸ್‌ , ನೆಚ್ಚಿನ ಪತಿ ಪತ್ನಿ ಸಂಬಂಧ - ಜಮಾಯಿ ರಾಜ [೨೮]
  • ೨೦೧೫ – ಜೀ ರಿಶ್ತೆ ಅವಾರ್ಡ್ಸ್‌ , ಜನಮೆಚ್ಚಿದ ಮಗಳು - ಜಮಾಯಿ ರಾಜ[೨೮]
  • ೨೦೧೯ – ಇಂಡಿಯನ್‌ ಟೆಲಿ ಅವಾರ್ಡ್ಸ್ , ಜನಮೆಚ್ಚಿದ ನಾಯಕಿ (ಮುಖ್ಯ ಪಾತ್ರ) - ಇಶ್ಕ್‌ ಮೆ ಮರ್ಜಾವಾ

ಗ್ಯಾಲರಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. [೧]
  2. https://www.imdb.com/title/tt2366915/
  3. "pinkvilla , Updated: July 16, 2019 09:46 pm". Archived from the original on ಸೆಪ್ಟೆಂಬರ್ 29, 2019. Retrieved ನವೆಂಬರ್ 23, 2019.
  4. The Indian Express
  5. indiatoday , September 17, 2017UPDATED: September 17, 2017 22:36 IST
  6. https://www.news18.com/photogallery/movies/sexiest-asian-women-2017-priyanka-chopra-nia-sharma-beat-deepika-padukone-1597173-1.html
  7. ಟೈಮ್ಸ್‌ ಆಫ್‌ ಇಂಡಿಯಾ
  8. https://www.dnaindia.com/television/report-khatron-ke-khiladi-8-finale-week-nia-khan-becomes-the-first-finalist-on-the-show-2546474
  9. https://www.news18.com/amp/news/movies/nia-sharma-to-star-in-naagin-4-but-wont-be-a-shapeshifting-snake-herself-2361943.html
  10. https://news.abplive.com/entertainment/television/naagin-4-ishq-mein-marjawan-actresses-nia-sharma-aalisha-panwar-to-play-female-lead-will-replace-surbhi-jyoti-1094711
  11. https://www.news18.com/news/movies/naagin-4s-nia-sharma-starved-herself-to-look-in-a-particular-way-says-was-obsessed-with-weight-2392687.html
  12. ೧೨.೦ ೧೨.೧ "Nia Sharma – The Barbie doll of silver screen!". Archived from the original on 2018-10-31.
  13. "Krystle and Nia Sharma to play leads in Cinevistaas' next". Metro Masti. Archived from the original on 30 ನವೆಂಬರ್ 2011. Retrieved 27 September 2011.
  14. "Nia Sharma back to act opposite Ravi Dubey". The Times of India. Retrieved 9 April 2016.
  15. "'Rangat-E-Eid' in 'Qubool Hai'". timesofindia.com. Retrieved 29 July 2015.
  16. name="india.com"
  17. "Nia Sharma's secret is finally out, find out what line of work she wanted to be in". 11 December 2017.
  18. Team, Tellychakkar. "Integration: Nia Sharma to challenge Bakool in Bhaag Bakool Bhaag". Tellychakkar.com. Retrieved 2017-08-08.
  19. "Jamai Raja star Nia Sharma to play the lead in this romantic thriller?". India Today.
  20. name="url12th ITA Awards: Nia Sharma Awarded *The New Dhadkan Of Young India* | Tellyexpress.com"
  21. ೨೧.೦ ೨೧.೧ ೨೧.೨ ೨೧.೩ ೨೧.೪ ೨೧.೫ "Zee Rishtey Awards 2014 Official Home Page, Vote online for your Favourite Jodi, Favourite Parivaar, Favourite Popular Face Male and Favourite Popular Face Female on Zee TV. Watch ZRA contestant and nomination and performance videos. Watch this space for 2014 Zee Rishtey Award Winners on zeetv.com/zra2014". www.zeetv.com.
  22. "Television Style Awards 2015 Winners List: Gautam Gulati, Karishma Tanna, Divyanka Tripathi Nia Sharma and Others Take Trophies". IBTIMES. Retrieved 31 March 2015.
  23. "ITA Awards 2015 Complete Winners List: Yeh Hai Mohabbatein, Meri Aashiqui., Saathiya Shine". Oneindia.in. 7 September 2015.
  24. "Nia Sharma, Deepika Singh, Viraf Patel look at the nominees for twelfth Indian Telly Awards!". Retrieved 29 April 2013.
  25. "The 14th Indian Television Academy Awards 2014". indiantelevisionacademy.com. Archived from the original on 7 November 2014.
  26. "Indian Telly Awards 2015: Varun Singh, Karan Patel, Sriti Jha, Kapil Sharma winners". The Indian Express. 30 November 2015. Retrieved 31 March 2016.
  27. Sarkar, Prarthna. "Zee Gold Awards 2015 Highlights, Complete Winners' List: 'Yeh Hai Mohabbatein' Bags Most Honours; Karan-Divyanka's Romance Steals the Show". International Business Times-India Edition. Retrieved 25 October 2016
  28. ೨೮.೦ ೨೮.೧ "Zee Rishtey Awards 2015: 'Kumkum Bhagya', 'Ek Tha Raja, Tashan-e-Ishq...' get lucky". The Times of India. Retrieved 3 April 2016.