ನಿತ್ಯಾಧಾರ ಮಾತೆಯ ದೇವಾಲಯ

ಕಡೂರಿನ ನಿತ್ಯಾಧಾರ ಮಾತೆಯ ದೇವಾಲಯ ಬದಲಾಯಿಸಿ

ಬೆಂಗಳೂರು ಹೊನ್ನಾವರ ರಸ್ತೆಯಲ್ಲಿ ಬೀರೂರಿಗೆ ಹೋಗುವ ಮಾರ್ಗದಲ್ಲಿ ಕಡೂರು ಪಟ್ಟಣದ ಹೊರಬದಿಯ ಎಡಭಾಗದಲ್ಲಿ ಈ ದೇವಾಲಯವಿದೆ. ಎದುರಿಗೆ ಶಿವನ ದೇವಸ್ಥಾನವೂ, ಹಿ೦ಬದಿಯಲ್ಲಿ ಮುಸ್ಲಿಮರ ಈದ್ಗಾ ಸಹ ಇದ್ದು, ಇದೊ೦ದು ಸರ್ವ ಧರ್ಮಗಳ ಸಂಗಮ ಸ್ಥಳವೆನಿಸಿದೆ. ಈ ದೇವಾಲಯದ ಹಬ್ಬವನ್ನು ಪ್ರತಿವರ್ಷ ಫೆಬ್ರವರಿ ತಿ೦ಗಳ ಮೊದಲ ವಾರದಲ್ಲಿ ಆಚರಿಸುವ ವಾಡಿಕೆಯಿದೆ. ಈ ಹಬ್ಬದ ದಿನದ೦ದು ಸುತ್ತಮುತ್ತಲಿನ ಅನೇಕ ಊರುಗಳಿಂದ ಕ್ರೈಸ್ತರು ಇಲ್ಲಿಗೆ ಆಗಮಿಸುತ್ತಾರೆ. ಹರಕೆ, ಕಾಣಿಕೆಗಳನ್ನು ಸಲ್ಲಿಸುತ್ತಾರೆ.

ಈ ದೇವಾಲಯವನ್ನು ಅರಸಿಕೆರೆಯ ಅಂದಿನ ಗುರುಗಳಾದಸ್ವಾಮಿ ಅರುಳ್ ಪೀಟರ್ ರವರು ೧೯೭೧ರಲ್ಲಿ ನಿರ್ಮಿಸಿದರು. ಚರ್ಚಿನ ಪ್ರಥಮ ಗುರುವಾಗಿ ನೇಮಿಸಲ್ಪಟ್ಟವರು ಸ್ವಾಮಿ ಜೋ ಮೇರಿ ಲೋಬೊರವರು. ಇವರು ಸ್ಥಳೀಯ ಕ್ರೈಸ್ತರೊಂದಿಗೆ ಮಾತ್ರವಲ್ಲದೆ, ಕ್ರೈಸ್ತೇತರ ಜನರೊಂದಿಗೂ ಬೆರೆತು, ದೇವಾಲಯದ ಏಳಿಗೆಗೆ ಶ್ರಮಿಸಿದರು. ಇಲ್ಲಿಯ ಪ್ರೇಮಜ್ಯೊತಿ ಶಾಲೆಯ ನಿರ್ಮಾಣದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಇವರ ನಂತರ ಸ್ವಾಮಿ ಕ್ಲೆಮೆಂಟ್ ಡಿ'ಸೋಜಾ, ಸ್ವಾಮಿ ಬೆಂಜಮಿನ್ ಅರಾನ್ಹಾ, ಸ್ವಾಮಿ ಥೊಮಸ್ ಮಾರ್ಟಿಸ್, ಸ್ವಾಮಿ ರೋನಿ ಕಾರ್ಡೋಜಾ, ಸ್ವಾಮಿ ಸಿಲ್ವೆಸ್ಟೆರ್ ಮಿರಾಂಡ, ಸ್ವಾಮಿ ಏಲಿಯಾಸ್ ಸಿಕ್ವೆರಾ ಮುಂತಾದವರು ಈ ದೇವಾಲಯದ ಏಳಿಗೆಗಾಗಿ ದುಡಿದಿದ್ದಾರೆ.