ನಿತ್ಯಾತ್ಮಶುಕ ಕವಿ
ನಿತ್ಯಾತ್ಮ ಶುಕ ಕವಿ ಕನ್ನಡದಲ್ಲಿ ಭಾಗವತ ಪುರಾಣವನ್ನು ಷಟ್ಪದಿ ಪದ್ಯಗಳಲ್ಲಿ "ಕರ್ಣಾಟಕ ಭಾಗವತ" ಎಂಬ ಹೆಸರಿನಲ್ಲಿ ರಚಿಸಿರುವುದು ಕಂಡುಬರುತ್ತದೆ. ರಾಮಾಯಣ, ಮಹಾಭಾರತಕಾವ್ಯ ಗಳಂತೆ ಭಾಗವತ ಸಂಸ್ಕೃತ ಭಾಷೆಯಲ್ಲಿದೆ. ವ್ಯಾಸಕವಿಯ ಪುತ್ರರಾದ ಶುಕಮಹರ್ಷಿಗಳು ಪರೀಕ್ಷಿತರಾಜನ ಅವಸಾನ ಕಾಲದಲ್ಲಿ ಈ ಮೇರುಕೃತಿಯನ್ನು ಆತನಿಗೆ ಬೋಧಿಸಿದರು. ಕರ್ಣಾಟಕ ಭಾಗವತ, ಪ್ರಮುಖವಾಗಿ, ಸಂಪೂರ್ಣವಾದ, ಕನ್ನಡ ಭಾಗವತ ; ಬಹುಶಃ, ಕುಮಾರವ್ಯಾಸನ ಸಮಕಾಲೀನರಾದ ಕವಿಗಳು ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಭಾಗವತ ಗ್ರಂಥ ಕನ್ನಡಿಗರಿಗೆ ಸಿಕ್ಕ ವರದಾನವಾಗಿದೆ.