ನಿಕ್ ವುಜಿಸಿಕ್

ನಿಕೊಲಸ್ ಜೆಮ್ಸ್ ವುಜಿಸಿಕ್ ಅವರು ೧೯೮೨ ಡಿಸೆಂಬರ್ ೪ರಂದು ವಿಕ್ಟೋರಿಯಾದ ಮೆಲ್ಬರ್ನ್ನಲ್ಲಿ ಜನಿಸಿದರು.ಇವರನ್ನು ನಿಕ್ ವುಜಿಸಿಕ್ ಎಂದೂ ಕರೆಯುತ್ತಾರೆ.ಫೊಕಾಮೆಲಿಯ(ಫೊಕಾಮೆಲಿಯ ಎಂಬುವುದು ಕಾಲುಗಳು ಮತ್ತು ತೋಳುಗಳು ಇಲ್ಲದೆ ಇರುವ ಒಂದು ಅಪರೂಪ ಕಾಯಿಲೆ) ಎಂಬ ರೋಗದಿಂದ ನರಳುತಿದ್ದರೂ ವುಜಿಸಿಕ್ ಅವರು ಒಬ್ಬ ಪ್ರಸಿದ್ದ ಸಂಚಾರಿ ಕ್ರೈಸ್ತ ಭೊದಕರು ಹಾಗು ಪ್ರೇರಕ ಭಾಷಣಕಾರರು ಹೌದು.ಮಗುವಾಗಿದ್ದಾಗ, ಅವರು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ಹೋರಾಡಿದರು, ಆದರೆ ಅಂತಿಮವಾಗಿ ತನ್ನ ಅಂಗವೈಕಲ್ಯತೆಯನ್ನು ಅಧೀನಪಡಿಸಿಕೊಂಡರು.ತಂದೆ ತಾಯಿಯರು ಯುಗೊಸ್ಲಾವಿಯದ ಒಂದು ಭಾಗದ(ಇಂದಿನ ಸರ್ಬಿಯ) ಧಾರ್ಮಿಕ ಕ್ರೈಸ್ತ ಕುಟುಂಬದವರು.ಇವರ ತಂದೆ ಬೋರಿಸ್ಲಾವ್ ೧೯೬೯ರಲ್ಲಿ ಹಾಗು ತಾಯಿ ದುಸಂಕ ೧೯೬೪ರಲ್ಲಿ ಆಸ್ಟ್ರೇಲಿಯಾದಲ್ಲಿ ನೆಲೆಸಿದರು.ಅವರು ಮೆಲ್ಬರ್ನ ಚರ್ಚಿನಲ್ಲಿ ಕಾರ್ಯನಿರತರಾಗಿದ್ದರು.ಇವರ ತಾಯಿಯು ಮೆಲ್ಬರ್ನನಿನ ರಾಯಲ್ ಚಿಲ್ಡ್ರನ್ಸ್ ಹಾಸ್ಪಿಟಲ್ನಲ್ಲಿರುವ ಶುಶ್ರೂಷಾ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು ಹಾಗು ಇವರ ತಂದೆಯು ವ್ಯವಹಾರ ನಿರ್ವಹಣೆ ಮಾಡುತ್ತಿದ್ದರು.

ನಿಕ್ ವುಜಿಸಿಕ್

ಬಾಲ್ಯಸಂಪಾದಿಸಿ

ವುಜಿಸಿಕ್ ಅವರ ತಂದೆ ತಾಯಿಯರು ಸದಾ ಕಾಲ ಇವರ ಚಿಂತೆಯಲ್ಲೆ ಇರುತಿದ್ದರು,ಆದರೆ ತಮ್ಮಗೆ ಅಂಗವೈಕಲ್ಯತೆ ಇದ್ದರೂ ಅವರು ಅವರಿಗೆ ಸೇರಬೇಕಾದ ಸ್ವಾತಂತ್ರ್ಯವನ್ನು ಕೇಳಿಕೊಳ್ಳುತ್ತಿದ್ದರು.ಅವರ ತಾಯಿ ಅವರನ್ನು ಸ್ವಯಂ ಬೆಂಬಲಿಸಲು ಒಂದು ಕುಶನ್ ನೀಡಿದರು ಸಹ, ಯುವ ವುಜಿಸಿಕ್ ಸ್ವತಃ ಹೇಗೆ ಗೋಡೆಯ ಮೇಲೆ ಹಣೆಯ ಓರೆಯಾಗಿಸಿ ನಿಧಾನವಾಗಿ ನೇರವಾಗಿ ಸ್ವತಃ ನಿಂತು ನಿಲ್ಲುವುದೆಂದು ಕಲಿತರು.ವುಜಿಸಿಕ್ ಅವರು ಜನಿಸಿದಾಗಲೆ ತಮಗೆ ಎರಡು ಸಣ್ಣ ವಿರೂಪಗೊಂಡ ಪಾದಗಳು ಇದ್ದವು.ಅವರು ಅವುಗಳ ಆಕಾರದಿಂದಾಗಿ "ಚಿಕನ್ ಡ್ರಮ್ಸ್ಟಿಕ್" ಎಂದು ಕರೆಯುತಿದ್ದರು.ಪ್ರಾರಂಬದಲ್ಲಿ ಜನಿಸಿದಾಗಲೆ ಅವರ ಕಾಲ್ಬೆರಳುಗಳು ಕೂಡಿಕೊಂಡಿದ್ದವು.ಈ ಕಾಲ್ಬೆರಳುಗಳನ್ನು ಪ್ರತ್ಯೇಕಿಸಲು ಶಸ್ತ್ರಚಿಕಿತ್ಸೆ ನಿರ್ವಹಿಸಲಾಯಿತು.ಶಸ್ತ್ರಚಿಕಿತ್ಸೆಯು ವೈದ್ಯರು ಬೇಕಾದ ರೀತಿಯಲ್ಲಿ ಆಗದಿದ್ದರೂ ವುಜಿಸಿಕ್ ಅವರು ತಮ್ಮ ಅಡಿ ಬಳಸಿ ವಿದ್ಯುತ್ ಗಾಲಿಯಕುರ್ಚಿ,ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ ಉಪಯೋಗಿಸಲು ಕಲಿತರು.ವುಜಿಸಿಕ್ ಅವರ ಬಾಲ್ಯ ಅದ್ಭುತ ಹಾಗು ಸಾಮಾನ್ಯವಾಗಿತ್ತೆಂದು ಟಿಪ್ಪಣಿಸಿದ್ದಾರೆ.

ಶಿಕ್ಷಣಸಂಪಾದಿಸಿ

ಆರಂಭಿಕ ಸವಾಲುಗಳ ಹೊರತಾಗಿಯೂ ವುಜಿಸಿಕ್ ಅವರು ತಮ್ಮ ೨೧ನೇ ವಯಸ್ಸಿನಲ್ಲಿ ಗ್ರಿಫಿತ್ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವೀದರರಾಗಿದ್ದರು.

ಪ್ರೇರಕ ಮಾತುಸಂಪಾದಿಸಿ

೧೯ನೇ ವಯಸ್ಸಿನಲ್ಲಿ ತಮ್ಮ ಕಥೆಯನ್ನು ಹಂಚಿಕೊಳ್ಳಲು ಇವರು ಇಡಿ ವಿಶ್ವವನ್ನೆ ತಿರುಗಾಡಿದರು.೨೦೦೫ ರಲ್ಲಿ, ಅವರು ಅಂತಾರಾಷ್ಟ್ರೀಯ ಲಾಭರಹಿತ ಸಂಸ್ಥೆ ಮತ್ತು ಮಿನಿಸ್ಟ್ರಿಯಾದ 'ಲೈಫ್ ವಿಥೌಟ್ ಲಿಂಬ್ಸ್' ಸ್ಥಾಪಿಸಿದರು.ವುಜಿಸಿಕ್ ತನ್ನ ಜೀವನದ ಕಥೆ ಹಾಗು ಸಂದೇಶವನ್ನು ಹರಡಲು ಚರ್ಚ್ಗಳಲ್ಲಿ, ಅನಾಥಾಶ್ರಮಗಳಲ್ಲಿ, ಆಸ್ಪತ್ರೆಗಳಲ್ಲಿ,ಕ್ರೀಡಾಂಗಣಗಳಲ್ಲಿ ಹಾಗೂ ವ್ಯಕ್ತಿಗಳಲ್ಲಿ ಹಂಚಿಕೊಳ್ಳಲು ಅವರು ಸಾಕಷ್ಟು ಅದೃಷ್ಟ ಮಾಡಿರಬೇಕೆಂದು ಹೇಳಿಕೊಳ್ಳುತಿದ್ದರು.'ದೇವರು, ತೋಳುಗಳು ಹಾಗು ಕಾಲುಗಳು ಇಲ್ಲದೆ ಇರುವ ವ್ಯಕ್ತಿಗಳನ್ನು ತನ್ನ ಕೈ ಕಾಲುಗಳನ್ನಾಗಿ ಬಳಸಬಹುದೆಂದರೆ, ಖಂಡಿತವಾಗಿಯೂ ಅವನು ಯಾವುದೇ ಸಿದ್ದವಿರುವ ಹೃದಯವನ್ನು ಬಳಸುತ್ತಾನೆ' ಎಂದು ಹೇಳುತ್ತಿದ್ದರು.೨೦೧೩ ರಲ್ಲಿ, ವುಜಿಸಿಕ್ ಅವರು ೨೪ ದೇಶಗಳಿಗೆ ಪ್ರಯಾಣಮಾಡಿ ಅಲ್ಲಿರುವ ದೊಡ್ಡ ಸರ್ಕಾರಿ ಅಧಿಕಾರಿಗಳನ್ನು ಭೇಟಿಮಾಡಿದರು. ಅದರಲ್ಲಿ ಸಿಂಗಪುರದ ಅಧ್ಯಕ್ಷರಾದ ಟೋನಿ ಟಾನ್,ಉರುಗ್ವೆಯ ಅಧ್ಯಕ್ಷರಾದ ಜೋಸ್ ಮುಜಿಕ ಮತ್ತು ತೈವಾನ್ ಅಧ್ಯಕ್ಷ ಮಾ ಯಿಂಗ್-ಜಿಯೋ ಇವರೊಂದಿಗೆ ಬೇಟಿಯಾಗಿದ್ದಾರೆ.೨೦೧೪ರಲ್ಲಿ ವುಜಿಸಿಕ್ ಅವರು ೪೦೦ ದಶಲಕ್ಷ ಜನರೊಂದಿಗೆ ತನ್ನ ಸಂದೇಶವನ್ನು ಹಂಚಿಕೊಳ್ಳಲು ಬಯಸಿರುವುದಾಗಿ ಹೇಳಿದರು.ಅವರು ೫೭ಕ್ಕೂ ಹೆಚ್ಚು ದೇಶಗಳಲ್ಲಿ ೩೦೦೦ಕ್ಕೂ ಹೆಚ್ಚು ಬಾರಿ ಮಾತನಾಡಿದ್ದಾರೆ. ಅವರು ೧,೧೦,೦೦೦ಕ್ಕೂ ಹೆಚ್ಚು ಪ್ರೇಕ್ಷಕರನ್ನು ಸೆಳೆದಿದ್ದಾರೆ.

ಭರವಸೆಯ ಸಂದೇಶಸಂಪಾದಿಸಿ

ವುಜಿಸಿಕ್ ತನ್ನ ಓದುಗರು ಮತ್ತು ಕೇಳುಗರಿಗೆ ಒಳ್ಳೆಯ ಜೀವನ ಸಲಹೆ ನೀಡುತ್ತಾರೆ.ಅವರು ತಮ್ಮ ಓದುಗರಿಗೆ ನೀಡುವ ಸಲಹೆ ಎಂದರೆ ಜೀವನದಲ್ಲಿ ಎಷ್ಟೇ ಕಷ್ಟ ಬಂದರು ಅದನ್ನು ಧೈರ್ಯದಿಂದ ಎದುರಿಸಬೇಕೆಂದು ಹಾಗು ಈ ಧೈರ್ಯವು ದೇವರ ಸಹಾಯದಿಂದಲೇ ದೊರಕುವುದೆಂದು,ಆದ್ದರಿಂದ ಅವನೊಂದಿಗೆ ಆತ್ಮಿಯ ಸಂಭಂದವನ್ನು ಬೆಳೆಸಬೇಕು. ದೇವರ ಪ್ರೀತಿ ಎಲ್ಲರೊಂದಿಗು ಹಂಚಿಕೊಳ್ಳುವುದೆ ಇವರ ಮುಖ್ಯ ಗುರಿಯಾಗಿದೆ.ಜನ ಇವರನ್ನು ತಮ್ಮ ಸಂತೋಷದ ರಹಸ್ಯ ಕೇಳಿದಾಗ,ತಮ್ಮ ಸಂತೋಷದ ರಹಸ್ಯವೆ ದೇವರು ತಮ್ಮನ್ನು ಸೃಷ್ಟಿಸಿದ್ದು ಎಂದು ಹೆಮ್ಮೆಯಿಂದ ಉತ್ತರಿಸುತ್ತಾರಂತೆ. ಪ್ರೀತಿಯಿಂದ ಇಡೀ ದೇಶವನ್ನೆ ಗೆಲ್ಲಬಹುದೆಂದು ಹೇಳಿದ್ದಾರೆ.ಇವರ ಮುಖ್ಯ ಸಂದೇಶ ಎಂದರೆ ಯಾವುದೇ ಸಂದರ್ಭದಲ್ಲೂ ಒಬ್ಬ ಮನುಷ್ಯನಿಗೆ ತನ್ನ ಅಡೆತಡೆಗಳನ್ನು ಅವಕಾಶಗಳನ್ನಾಗಿ ತಿರುಗಿಸಲು ಸಾಧ್ಯ ಎಂಬುದು.ವುಜಿಸಿಕ್ ಅವರು ಕಾರ್ಪೊರೇಟ್ ಪ್ರೇಕ್ಷಕರೊಂದಿಗೆ, ಸರ್ಕಾರಗಳೊಂದಿಗೆ, ಬಯಲು ರಂಗದಲ್ಲಿ ಮತ್ತು ಶಾಲೆಗಳಲ್ಲಿ,ಬೆದರಿಸುವುದನ್ನು ಅಥವ ಪೀಡನೆಯನ್ನು ಕೊನೆಗೊಳ್ಳುವುದು, ಸ್ಪೂರ್ತಿದಾಯಕ ಧನಾತ್ಮಕ ಬದಲಾವಣೆ,ಪ್ರಯತ್ನ ಮತ್ತು ಸಂಕಲ್ಪ, ಹಾಗೂ ತನ್ನ ಜೀವನದ ಕಥೆ, ಹೀಗೆ ವಿಭಿನ್ನ ವಿಷಯಗಳ ಬಗ್ಗೆ ಮಾತನಾಡುತ್ತಾರೆ.ವುಜಿಸಿಕ್ ಅವರನ್ನು ಬಾಲಕನಾಗಿದ್ದಾಗ ತಮ್ಮ ಸುತ್ತಮುತ್ತಲಿನ ಜನ ಅವರನ್ನು ಬಹಳ ಪೀಡಿಸುತಿದ್ದರು.

ಇತರ ಯೋಜನೆಗಳುಸಂಪಾದಿಸಿ

ಇದರಿಂದ ಗಾಯಗೊಂಡ ಬಾಲಕ ವುಜಿಸಿಕ್ ಕೇವಲ ೧೦ ವಯಸ್ಸಿನಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದರು.ಈ ಅನುಭವದಿಂದ ಪ್ರಭಾವಗೊಂಡ ವುಜಿಸಿಕ್ ಮಕ್ಕಳಿಗೆ ಹಾಗು ಯುವಕರಿಗೆ ಸಹಾಯವನ್ನುದ್ದೇಶಿಸಿ ಪೀಡನೆಯನ್ನು ಕೊನೆಗೊಳಿಸಲು ಒಂದು ಲಾಭರಹಿತ , ಜಾತ್ಯತೀತ, ರಾಷ್ಟ್ರವ್ಯಾಪಿ ಆಂದೋಲನ ತೊಡಗಿಕೊಂಡರು.ವುಜಿಸಿಕ್ ಅವರು ನವೆಂಬರ್ ೨೦೧೫ರಲ್ಲಿ ಸಂಸ್ಥೆಯ ಪ್ರಮುಖ ಭಾಷಣಕಾರರಾಗಿ ಆಯ್ಕೆಯಾದರು.ವುಜಿಸಿಕ್ ಅವರು ೨೦೦೯ರಲ್ಲಿ ಡೋರ್ಪೊಸ್ಟ್ ಪ್ರಾಜೆಕ್ಟ್ನ ಉನ್ನತ ಪ್ರಶಸ್ತಿಗೆದ್ದ ಕಿರುಚಿತ್ರ 'ಬಟರ್ಫ್ಲೈ ಸರ್ಕಸ್'ನಲ್ಲಿ ನಟಿಸಿದರು.೨೦೧೦ರಲ್ಲಿ ಈ ಚಿತ್ರಕ್ಕೆ ಅತ್ಯುತ್ತಮ ಸಣ್ಣ ಚಲನಚಿತ್ರ ಪ್ರಶಸ್ತಿ ಲಭಿಸಿತು.ಅದೇ ಚಲನಚಿತ್ರೋತ್ಸವದಲ್ಲಿ ವುಜಿಸಿಕ್ ಅವರು ಮಾಡಿದ 'ವಿಲ್ಲ್' ಎಂಬ ಪಾತ್ರಕ್ಕೆ ಅತ್ಯುತ್ತಮ ನಟ ಎಂಬ ಪ್ರಶಸ್ತಿ ನೀಡಲಾಯಿತು.ಫೆಬ್ರವರಿ ೧೨,೨೦೧೨ ರಂದು ವುಜಿಸಿಕ್ ಅವರು ಕಾನೆ ಮಿಯಾಹಾರ ಅವರೊಂದಿಗೆ ಮದುವೆಯಾದರು.ಅವರ ಮಗ ಕಿಯೋಷಿ ಜೇಮ್ಸ್, ೨೦೧೩ರಲ್ಲಿ ಜನಿಸಿದ ಮತ್ತು ತಮ್ಮ ಎರಡನೇ ಮಗ ಡೆಜನ್ ಲೆವಿ ಆಗಸ್ಟ್ ೨೦೧೫ರಲ್ಲಿ ಜನಿಸಿದ.

ಪ್ರಶಸ್ತಿ ಮತ್ತು ಮಾಧ್ಯಮ ನೋಟಸಂಪಾದಿಸಿ

೧೯೯೦ರಲ್ಲಿ, ವುಜಿಸಿಕ್ ಅವರಿಗೆ ಆಸ್ಟ್ರೇಲಿಯನ್ ಯಂಗ್ ನಾಗರಿಕ ಪ್ರಶಸ್ತಿ ದೊರಕಿತು.೨೦೦೫ರಲ್ಲಿ ವರ್ಷದ ಯುವ ಆಸ್ಟ್ರೇಲಿಯನ್ ಎಂದು ನಾಮನಿರ್ದೇಶನಗೊಂಡಿತು.೨೦೦೭ರಲ್ಲಿ,ವುಜಿಸಿಕ್ ಕಿಂಗ್ಡಮ್ ನಿಯೋಜನೆ ಸಂಸ್ಥೆಯ ಮೂಲಕ "ವೆಲ್ ಡನ್" ಪ್ರಶಸ್ತಿಯ ಪುರಸ್ಕೃತರಾಗಿದ್ದಾರೆ.ಮಾರ್ಚ್ ೨೦೦೮ರಲ್ಲಿ ವುಜಿಸಿಕ್ ೨೦/೨೦ ಅಮೇರಿಕಾದ ದೂರದರ್ಶನ ಕಾರ್ಯಕ್ರಮದ ಬಾಬ್ ಕಮಿಂಗ್ಸ್ ಅವರನ್ನು ಸಂದರ್ಶಿಸಿದ್ದರು.ಕ್ರಿಶ್ಚಿಯಾನಿಟಿ ಟುಡೆ ಧರ್ಮ ಪತ್ರಿಕೆಯು ವುಜಿಸಿಕ್ ಅವರನ್ನು ಮುಂದಿನ ಪೀಳಿಗೆಯನ್ನು ಆಕಾರಗೊಳಿಸಿದ ೩೩ ವಯಸ್ಸಿನ ಒಳಗಿರುವ ೩೩ ಗಣ್ಯವ್ಯಕ್ತಿಗಳಲ್ಲಿ ಒಬ್ಬರು ಎಂದು ಗುರುತಿಸಿದರು.ವುಜಿಸಿಕ್ ಅವರು ಚೀನಾದ ಫೀನಿಕ್ಸ್ ಟೆಲಿವಿಷನ್ ಪ್ರಸಾರದ ಜನಪ್ರಿಯ ದೂರದರ್ಶನ ಟಾಕ್ ಶೋದಲ್ಲಿ ಕಾಣಿಸಿಕೊಂಡಿದ್ದಾರೆ.ವುಜಿಸಿಕ್ ಅವರು ತನ್ನ ಕೆಲಸವನ್ನು ದೂರದರ್ಶನ ಪ್ರದರ್ಶನಗಳು ಮತ್ತು ತನ್ನ ಬರವಣಿಗೆಯ ಮೂಲಕ ಉತ್ತೇಜಿಸುತ್ತಾರೆ.ಅವರ ಮೊದಲ ಪುಸ್ತಕ "ಲೈಫ್ ವಿದೌಟ್ ಲಿಮಿಟ್ಸ್" :ಇನ್ಸ್ಪಿರೇಷನ್ ಆಫ಼್ ಅ ರಿಡಿಕುಲಸ್ಲಿ ಗುಡ್ ಲೈಫ಼್, ೨೦೧೦ರಂದು ರಾಂಡಮ್ ಹೌಸ್ ಪ್ರಕಟಿಸಿತು.ಈಗ ಈ ಪುಸ್ತಕವು ೩೦ಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದಗೊಂಡಿದೆ.೨೦೦೫ರಲ್ಲಿ ಚಿತ್ರೀಕರಿಸಿದ ಒಂದು ಸಾಕ್ಷ್ಯಚಿತ್ರವಾದ "ಲೈಫ಼್ಸ್ ಗ್ರೇಟರ್ ಪರ್ಪಸ್" ಸ್ಪೂರ್ತಿದಾಯಕವಾದ ಡಿವಿಡಿ.‍‍ಚಿತ್ರದ ಎರಡನೇ ಭಾಗ ಬ್ರಿಸ್ಬೇನ್ನಲ್ಲಿ ತನ್ನ ಸ್ಥಳೀಯ ಚರ್ಚ್ ನಲ್ಲಿ ಚಿತ್ರೀಕರಿಸಲಾಯಿತು -ಇದು ತಮ್ಮ ಪ್ರಥಮ ವೃತ್ತಿ ಪ್ರೇರಕ ಭಾಷಣಗಳಲ್ಲಿ ಒಂದು.(೧)"ಲೈಫ್ ವಿದೌಟ್ ಲಿಮಿಟ್ಸ್" :ಇನ್ಸ್ಪಿರೇಷನ್ ಆಫ಼್ ಅ ರಿಡಿಕುಲಸ್ಲಿ ಗುಡ್ ಲೈಫ಼್(೨೦೧೦). (೨)ಯುರ್ ಲೈಫ಼್ ವಿದೌಟ್ ಲಿಮಿಟ್ಸ್(೨೦೧೨) (೩)ಲಿಮಿಟ್ಲೆಸ್:ಡಿವೊಶನ್ಸ್ ಫ಼ೊರ್ ರಿಡಿಕುಲಸ್ಲಿ ಗುಡ್ ಲೈಫ಼್(೨೦೧೩) (೪)ಅನ್ಸ್ಟಾಪಬಲ್:ದ್ ಇನ್ಕ್ರಡಿಬ್ಲ್ ಪವರ್ ಒಫ಼್ ಫ಼ೆಯ್ತ್ ಇನ್ ಅಕ್ಷ್ನ್(೨೦೧೩) (೫)ದ ಪವರ್ ಒಫ಼್ ಅನ್ಸ್ಟಾಪಬಲ್ ಫ಼ೆಯ್ತ್(೨೦೧೪) (೬)ಸ್ಟಾನ್ಡ್ ಸ್ಟ್ರೊಂಗ್(೨೦೧೫) (೭)ಲವ್ ವಿದೌಟ್ ಲಿಮಿಟ್ಸ್(೨೦೧೬)

ಉಲ್ಲೇಖನಸಂಪಾದಿಸಿ

[www.thefamouspeople.com/profiles/nick-vujicic-6151.php]