ಕಾಲುವೆ

(ನಾಲೆ ಇಂದ ಪುನರ್ನಿರ್ದೇಶಿತ)

ಕಾಲುವೆಯು ಒಂದು ಮಾನವ ನಿರ್ಮಿತ ಅಥವಾ ಕೃತಕ ಜಲಮಾರ್ಗ ಮತ್ತು ಇದರ ಉದ್ದೇಶ ನೀರಿನ ಸಾಗಣೆ, ಅಥವಾ ಜಲ ಸಾಗಣೆ ವಾಹನಗಳಿಗೆ ಮಾರ್ಗ ಒದಗಿಸುವುದು. ಬಹುತೇಕ ಸಂದರ್ಭಗಳಲ್ಲಿ, ವ್ಯವಸ್ಥೆಗೊಳಿಸಲಾದ ಕಾಮಗಾರಿಗಳು ಕಡಿಮೆ ವೇಗದ ಹರಿವಿನ ಜಲಾಶಯಗಳನ್ನು ಸೃಷ್ಟಿಸುವ ಕಟ್ಟೆಗಳು ಮತ್ತು ಜಲಬಂಧಗಳ ಸರಣಿಯನ್ನು ಹೊಂದಿರುತ್ತವೆ. ಕಾಲುವೆಯು ನದಿಗೆ ಸಮಾಂತರದಲ್ಲಿದ್ದಾಗ ಮತ್ತು ತನ್ನ ನೀರಿನ ಸ್ವಲ್ಪ ಭಾಗವನ್ನು ಮತ್ತು ಜಲಾನಯನ ಪ್ರದೇಶವನ್ನು ಹಂಚಿಕೊಂಡಾಗ ಅದನ್ನು ನ್ಯಾವಿಗೇಶನ್ ಎಂದು ಕೂಡ ಕರೆಯಲಾಗುತ್ತದೆ. ಇದು ತನ್ನ ಕಣಿವೆಯಲ್ಲಿ ಇದ್ದುಕೊಂಡೇ ನಿಶ್ಚಲ ಜಲದ ವಿಸ್ತಾರವನ್ನು ಹೆಚ್ಚಿಸಲು ಮತ್ತು ಉದ್ದವಾಗಿಸಲು ಕಟ್ಟೆಗಳು ಮತ್ತು ಜಲಬಂಧಗಳ ನಿರ್ಮಾಣದ ಮೂಲಕ ತನ್ನ ಸಂಪನ್ಮೂಲಗಳನ್ನು ಲಾಭಕರವಾಗಿ ಬಳಸಿಕೊಳ್ಳುತ್ತದೆ.

ಆಯರ್ಲಂಡ್‌ನ ರಾಯಲ್ ಕೆನಾಲ್

ಇದಕ್ಕೆ ವ್ಯತಿರಿಕ್ತವಾಗಿ, ಕಾಲುವೆಯು ಬದುವಿನ ಮೇಲಿನ ಜಲವಿಭಾಜಕ ರೇಖೆಯನ್ನು ಕತ್ತರಿಸಿ ಅಡ್ಡಲಾಗಿ ಸಾಗುತ್ತದೆ, ಮತ್ತು ಇದಕ್ಕೆ ಸಾಮಾನ್ಯವಾಗಿ ಅತ್ಯುನ್ನತ ಎತ್ತರದ ಮೇಲೆ ಬಾಹ್ಯ ಜಲಮೂಲ ಬೇಕಾಗುತ್ತದೆ. ಅನೇಕ ಕಾಲುವೆಗಳನ್ನು ಕಣಿವೆಗಳು ಮತ್ತು ಬಹಳ ಕೆಳಗೆ ಹರಿಯುವ ಇತರ ಜಲಮಾರ್ಗಗಳಿಗಿಂತ ಮೇಲಿರುವ ಎತ್ತರದ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಎತ್ತರದ ಮಟ್ಟದಲ್ಲಿ ನೀರಿನ ಮೂಲಗಳನ್ನು ಹೊಂದಿರುವ ಕಾಲುವೆಗಳು ನೀರನ ಅಗತ್ಯವಿರುವ ನಗರದಂತಹ ಗಮ್ಯಸ್ಥಾನಕ್ಕೆ ನೀರನ್ನು ಪೂರೈಕೆ ಮಾಡಬಹುದು. ರೋಮನ್ ಸಾಮ್ರಾಜ್ಯದ ಮೇಲ್ಗಾಲುವೆಗಳು ಅಂತಹ ನೀರು ಪೂರೈಕೆಯ ಕಾಲುವೆಗಳಾಗಿದ್ದವು.

ಸಾಗಣೆಯನ್ನು ಸುಧಾರಿಸಲು ಕಾಲುವೆಗಳು ವ್ಯವಸ್ಥೆಗೊಳಿಸುವ ರಚನೆಗಳನ್ನು ಬಳಸುತ್ತವೆ. ಅವುಗಳೆಂದರೆ: ನದಿಯ ನೀರಿನ ಮಟ್ಟಗಳನ್ನು ಬಳಸಬಲ್ಲ ಎತ್ತರಕ್ಕೆ ಏರಿಸಲು ಅಡ್ಡಕಟ್ಟೆಗಳು ಮತ್ತು ಕಟ್ಟೆಗಳು; ರ‍್ಯಾಪಿಡ್‍ಗಳು ಅಥವಾ ಜಲಪಾತಗಳ ಹರಹಿನ ಸುತ್ತ ಹೆಚ್ಚು ಉದ್ದ ಮತ್ತು ಹೆಚ್ಚು ಸೌಮ್ಯ ಜಲಮಾರ್ಗವನ್ನು ಸೃಷ್ಟಿಸಲು ಸುತ್ತು ಬಳಸುವ ಇಳಿಜಾರುಗಳು; ಹಡಗುಗಳು ಮತ್ತು ಹರಿಗೋಲುಗಳು ಏರಲು/ಇಳಿಯಲು ಅವಕಾಶ ನೀಡುವ ಜಲಬಂಧಗಳು. ಅವು ಜಲವಿಭಾಜಕ ರೇಖೆಗಳಿಗೆ ಅಡ್ಡಲಾಗಿ ಸಾಗುವುದರಿಂದ, ಕಾಲುವೆಗಳನ್ನು ನಿರ್ಮಿಸುವುದು ಹೆಚ್ಚು ಕಷ್ಟ ಮತ್ತು ಅವುಗಳಿಗೆ ಹಲವುವೇಳೆ ಹೆಚ್ಚಿನ ಸುಧಾರಣೆಗಳು ಬೇಕಾಗುತ್ತದೆ, ಉದಾಹರಣೆಗೆ ನೀರನ್ನು ಇತರ ಹೊಳೆಗಳು ಮತ್ತು ರಸ್ತೆಗಳ ಮೇಲೆ ಸಾಗಿಸಲು ವಾಯಡಕ್ಟ್‌ಗಳು ಮತ್ತು ಮೇಲ್ಗಾಲುವೆಗಳು, ಮತ್ತು ಕಾಲುವೆಯಲ್ಲಿ ನೀರನ್ನು ಹಿಡಿದಿಡುವ ವಿಧಾನಗಳು. ಕಾಲುವೆಗಳಲ್ಲಿ ಎರಡು ವಿಶಾಲ ಬಗೆಗಳಿವೆ: ಜಲಮಾರ್ಗಗಳು ಮತ್ತು ಮೇಲ್ಗಾಲುವೆಗಳು. ಜನರು ಮತ್ತು ಸರಕುಗಳನ್ನು ಹೊರಬಹುದಾದ ನೌಕೆಗಳನ್ನು ಸಾಗಿಸಲು ಜಲಮಾರ್ಗಗಳನ್ನು ಬಳಸಲಾಗುತ್ತದೆ. ಮೇಲ್ಗಾಲುವೆಗಳು ಕುಡಿಯಲು, ಕೃಷಿ ನೀರಾವರಿ, ಜಲವಿದ್ಯುತ್ ಘಟಕಗಳಿಗೆ ನೀರು ಪೂರೈಸುತ್ತವೆ.

"https://kn.wikipedia.org/w/index.php?title=ಕಾಲುವೆ&oldid=1059238" ಇಂದ ಪಡೆಯಲ್ಪಟ್ಟಿದೆ