ನಾರಸಂದ್ರ ಬೆಂಗಳೂರು ನಗರದಿಂದ ೪೮ ಕಿ.ಮಿ. ದೂರದಲ್ಲಿರುವ ಗ್ರಾಮ. ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಕುದೂರು ಹೋಬಳಿಗೆ ಸೇರಿದ ಈ ಗ್ರಾಮವು ಬೆಂಗಳೂರು ಮಂಗಳೂರು ರಾ‍ಷ್ಟ್ರೀಯ ಹೆದ್ದಾರಿಯಲ್ಲಿದೆ.

ನಾರಸಂದ್ರ ಗ್ರಾಮವು ಮೈಸೂರು ಸಂಸ್ತಾನದ ಆಡಳಿತ ಕಾಲದಲ್ಲೆ ಮಾದರಿ ಗ್ರಾಮವಾಗಿ ಅಭಿವ್ರುದ್ಡಿಗೊಂಡಿದ್ದು ಸ್ವಾತಂತ್ರ್ಯ ನಂತರ ಹೆಚ್ಚಿನ ಬೆಳವಣಿಗೆ ಕಾಣದಿರುವುದು ವಿಶಾದದ ಸಂಗತಿ.

ಮೈಸೂರು ಸಂಸ್ಥಾನದ ಆಸ್ಥಾನ ಸಾಹಿತಿ ವಿದ್ವಾನ್ ಬಸವಪ್ಪ ಶಾಸ್ತ್ರಿಗಳು ಈ ಗ್ರಾಮದವರು. ಅವರು "ಮೈಸೂರಿನ ಮಹಾರಾಜರಾದ ಹತ್ತನೆ ಶ್ರೀ ಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಜಿ.ಸಿ.ಎಸ್.ಐ ಅವರ ಆಳ್ವಿಕೆಯ ಕಾಲದಲ್ಲಿ ಪ್ರಪ್ರಥಮವಾಗಿ ಈ ರಾಜ್ಯ ಗೀತೆಯನ್ನು ರಚಿಸಲಾಯಿತು. ಮೈಸೂರು ಅರಸರ ಕುಲದೇವತೆಯಾದ ಶ್ರೀ ಚಾಮುಂಡೇಶ್ವರಿ ಅಥವಾ ಗೌರಿಯನ್ನು ಪ್ರಾರ್ಥಿಸುವ ಈ ರಾಜ್ಯಗೀತೆಯಾಗಿದ್ದ "ಕಾಯೌ ಶೀಗೌರಿ ಕರುಣಾಲಹರೀ" ರಚಿಸಿದವರು ಆಸ್ಥಾನ ಸಾಹಿತಿ ವಿದ್ವಾನ್ ಬಸವಪ್ಪ ಶಾಸ್ತ್ರಿ. ಕನ್ನಡ-ಸಂಸ್ಕೃತ ಭಾಷೆಗಳಲ್ಲಿ ವಿಶೇಷ ಪ್ರಭುತ್ವ ಪಡೆದ ಪ್ರಕಾಂಡ ಪಂಡಿತರು. ಪ್ರತಿಭಾಸಂಪನ್ನರು. "ಅಭಿನವಕಾಳಿದಾಸ "ಎಂಬ ಬಿರುದು ಧರಿಸಿ ಖ್ಯಾತರಾದವರು. ಕನ್ನಡದ ಉಡುಗೆ ತೊಟ್ಟ ಸಂಸ್ಕೃತದ ಈ ಗೀತೆ ಮೈಸೂರಿನ ಪ್ರಜಾಕೋಟಿಯ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿತ್ತು.

ನಾರಸಂದ್ರದ ಮತ್ತೊಬ್ಬ ಸಾಹಿತಿ ನಾರಸಂದ್ರ ರಾಮಚಂದ್ರಯ್ಯ ನವರು, ಇವರು ಇದೇ ಗ್ರಾಮದ ಶ್ಯಾನುಭೋಗರಾಗಿದ್ದ ಶ್ರೀಯುತ ರಂಗಣ್ಣ ನವರ ಪುತ್ರ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಸಾಹಿತ್ಯ ಕೃ‍‍ಷಿಯಲ್ಲಿ ತೊಡಗಿಕೊಂಡ ಇವರು ಲೇಖನ, ಶಿಶು ಸಾಹಿತ್ಯ, ತ್ರಿಪದಿಗಳು, ಗೀತ ಸಾಹಿತ್ಯ ಪ್ರಖಾರದಲ್ಲಿ ಸೇವೆ ಸಲ್ಲಿಸಿದ್ದಾರೆ.

ಕರಡಿ ಗುಚ್ಚಮ್ಮ ದೇವಾಲಯ

ಬದಲಾಯಿಸಿ

ನಾರಸಂದ್ರದಲ್ಲಿ ನೆಲೆಸಿರುವ ಕರಡಿಗುಚ್ಚಮ್ಮ ದೇವಿ ಗ್ರಾಮ ದೇವತೆಯಾಗಿದ್ದು ಯುಗಾದಿ ನಂತರದ ಸೋಮವಾರದಂದು ವೈಭವದ ವಿಶಿ‌‍ಷ್ಟ ಜಾತ್ರಾ ಮಹೋತ್ಸವ ನೆರೆವೇರುತ್ತದೆ.

ನಾರಸಂದ್ರ, ಬಿಸ್ಕೂರು, ಮಾದಿಗೊಂಡನ ಹಳ್ಳಿ ಗ್ರಾ.ಪಂ.ಗಳ ವ್ಯಾಪ್ತಿಯ ಹದಿನಾರು ಹಳ್ಳಿಯ ಸಮಸ್ತರು ಸಹ ಪ್ರತಿಯೊಂದು ಗ್ರಾಮದಿಂದಲೂ ಎತ್ತಿನ ಬಂಡಿ, ಟ್ರಾಕ್ಟರ್‌ ಇತರೆ ವಾಹನಗಳ ಮೇಲೆ ತಮ್ಮೂರಿನ ಹೆಸರಿನಲ್ಲಿ ಕರಡಿಗುಚ್ಚಮ್ಮ ದೇವಿಯ ಕುರ್ಜು ಅಲಂಕಾರ ಮಾಡಿಕೊಂಡು ಮಂಗಳವಾದ್ಯ ಸಹಿತ ಜನಪದ ಪದಗಳನ್ನು ಹೇಳುತ್ತಾ ನಡೆದು ಬಂದು ಕರಡಿಗುಚ್ಚಮ್ಮ ದೇವಿಯ ಸನ್ನಿದಿಯಲ್ಲಿ ದೇವಿ ಗುಡಿಯ ಪೌಳಿಯ ಸುತ್ತಮುತ್ತ ಮೂರು ಸುತ್ತು ಸುತ್ತಿಸಿ ದೇವಿಗೆ ನಮಿಸಿವರು.

ಹದಿನಾರು ಹಳ್ಳಿಗಳ ಮಹಿಳೆಯರು ಕರಡಿಗುಚ್ಚಮ್ಮ ದೇವಿಯ ಹರಕೆ ಸಲ್ಲಿಸಲು ಹೊತ್ತು ತಂದಿದ್ದ ಹೂವು ಹೊಂಬಾಳೆ ಹಸಿತಂಬಿಟ್ಟಿನ ಆರತಿ ಬೆಳಗುವರು. ಬೆಂಗಳೂರು ,ತುಮಕೂರು ಜಿಲ್ಲೆಯ ನಾನಾ ಭಾಗಗಳಿಂದಲೂ ಸಹ  ದೇವಿಯ ಭಕ್ತರು ವಾಹನಗಳಲ್ಲಿ ಆಗಮಿಸಿತ್ತಾರೆ. ಬೆಂಗಳೂರು –ಮಂಗಳೂರು ಹೆದ್ದಾರಿಯಲ್ಲಿ ಮೂರು ಕಿ.ಮಿ. ದೂರದವರಗೆ ವಾಹನಗಳ ಸಾಲು ನಿಂತಿರುತ್ತದೆ.. ಕರಡಿ ಗುಚ್ಚಮ್ಮ ಸೇವಾ ಟ್ರಸ್ಟಿನ ಪದಾಧಿಕಾರಿಗಳೆಲ್ಲರೂ ಭಾಗವಹಿಸಿದ್ದ ಭಕ್ತರಿಗೆ ಅನುಕೂಲ ಕಲ್ಪಿಸಿತ್ತಾರೆ. ಸೋಮವಾರ ಮದ್ಯಾನ್ಹ 3 ಗಂಟೆಗೆ ಆರಂಭವಾಗುವ ಕರಡಿಗುಚ್ಚಮ್ಮ ಜಾತ್ರೆ ಹತ್ತಾರು ಸಾವಿರ ಭಕ್ತಾದಿಗಳು ಸೇರುತ್ತಾರೆ, ನೂಕು ನುಗ್ಗಲು ಇರುತ್ತದೆ. ವಿಸ್ಮಯ ಎಂದರೆ ಸಂಜೆ 6 ಗಂಟೆಗೆ ಗುಡಿಯ ಬಳಿಗೆ ಸಪ್ತ ಮಾತೃಕೆಯರು, ತಾಳೆದುರ್ಗಿಯರು ಬರುತ್ತಾರೆ ಎಂಬ ಪ್ರತೀತಿ ಇರುವುದರಿಂದ 6 ಗಂಟೆಗೆ ಎಲ್ಲರೂ ತೆರಳುತ್ತಾರೆ.