'ಮುಂಬೈನ ಕರ್ನಾಟಕ ಸಂಘದ ಮುಖಪತ್ರಿಕೆ' ಯಾದ, 'ಸ್ನೇಹಸಂಬಂಧ,' ದಲ್ಲಿ ನಿರಂತರವಾಗಿ, 'ನಾದೋಪಾಸನ'[೧] ಯೆಂಬ ಶೀರ್ಷಿಕೆಯ ಅಡಿಯಲ್ಲಿ 'ಶ್ರೀಮತಿ.ಶ್ಯಾಮಲಾ ಪ್ರಕಾಶ್,' ರವರ ಲೇಖನಿಯಿಂದ ಮೂಡಿಬರುತ್ತಿರುವ, ಶಾಸ್ತ್ರೀಯ ಸಂಗೀತ ವಲಯದಲ್ಲಿ ದಾಖಲಿಸಲು ಯೋಗ್ಯವಾದ ಮೌಲಿಕ ಲೇಖನಗಳು ಅಭಿನಂದನಾರ್ಹವಾಗಿವೆ. ಅವರು ಕರ್ನಾಟಕದ ಹಲವು ಶಾಸ್ತ್ರೀಯ ಸಂಗೀತದ, ದಿಗ್ಗಜರ ಪರಿಚಯಾತ್ಮಕ ಲೇಖನಗಳನ್ನು ಆಯ್ದುಕೊಂಡು ಪ್ರಸ್ತುತಪಡಿಸುತ್ತಾ ಬಂದಿದ್ದಾರೆ. ಪ್ರತಿಸಂಚಿಕೆಯಲ್ಲೂ ಯಾವುದಾದರು ಮೇರು ವ್ಯಕ್ತಿಗಳ ಬಗ್ಗೆ ಸುಂದರ, ಮಾಹಿತಿಪೂರ್ಣ ಲೇಖನಗಳ ಮಾಲೆಗಳು ಹೊರಬಂದಿವೆ. ಈ ವಿದ್ವತ್ಪೂರ್ಣ ಲೇಖನಗಳು ಸಂಗೀತ ಕ್ಷೇತ್ರದ ಹಲವಾರು ಮುಖಗಳನ್ನು ವಿಶ್ಲೇಷಣೆ ಮಾಡುವುದರ ಜೊತೆಗೆ, ಸ್ವತಃ ವಿದುಷಿಯಾಗಿರುವ ಶ್ಯಾಮಲಮ್ಮನವರು ಕೆಲವಾರು ಹೊಸ ವೈಚಾರಿಕ ನೆಲೆಗಳನ್ನೂ ಪರಿಚಯಿಸಿದ್ದಾರೆ. ಈ ಲೇಖನಗಳ ತಯಾರಿಯಲ್ಲಿ ಅವರು ತೋರಿಸುವ ಆಸ್ತೆ, ಅನುಕರಣೀಯವಾಗಿದೆ. ದೂರವಾಣಿಯಲ್ಲಿ ತಮ್ಮ ಲೇಖನಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ಒತ್ತಟ್ಟಿಗೆ ಇಟ್ಟುಕೊಂಡನಂತರವೇ, ಅದು ಅವರ ಮೂಸೆಯಲ್ಲಿ 'ಭಟ್ಟಿ'ಗೆ ಸಿದ್ಧವಾಗುತ್ತದೆ.

ಉಲ್ಲೇಖಗಳುಸಂಪಾದಿಸಿ

  1. ಸಂಗೀತ:ಆಸಕ್ತಿ ಅಗತ್ಯ Mon, 12/19/2011, ಪ್ರಜಾವಾಣಿ
  2. ಸಹೃದಯಿ ವಾಚಕರ ಮನ ಮಿಡಿದ "ನಾದೋಪಾಸನ"-ಶೈಲಜಾ ಹೆಗಡೆಮುಂಬಯಿ,ನೇಸರು,ಜೂನ್, ಪು.೧೨-೧೩, ಜೂನ್, ೨೦೧೬