ನಾಡಿ ಜ್ಯೋತಿಷವು ತಮಿಳುನಾಡು, ಕೇರಳ ಮತ್ತು ಪಕ್ಕದ ಪ್ರದೇಶಗಳಲ್ಲಿ ಅಭ್ಯಸಿಸಲ್ಪಡುವ ಧರ್ಮ ಜ್ಯೋತಿಷದ ಒಂದು ರೂಪವಾಗಿದೆ. ಇದು ಎಲ್ಲ ಮನುಷ್ಯರ ಭೂತ, ವರ್ತಮಾನ ಮತ್ತು ಭವಿಷ್ಯದ ಜೀವನಗಳನ್ನು ಪ್ರಾಚೀನ ಕಾಲದಲ್ಲಿನ ಧರ್ಮ ಋಷಿಗಳು ಮುಂಗಂಡಿದ್ದರು ಎಂಬ ನಂಬಿಕೆ ಮೇಲೆ ಆಧಾರಿತವಾಗಿದೆ.[೧]

ಸಿದ್ಧಾಂತ ಬದಲಾಯಿಸಿ

ನಾಡಿ ಜ್ಯೋತಿಷದ ಮೂಲಭೂತ ಪರಿಕಲ್ಪನೆಯೆಂದರೆ "ನಾಡಿ". ಒಂದು ರಾಶಿಯಲ್ಲಿ ೧೫೦ ನಾಡಿಗಳಿರುತ್ತವೆ; ಒಂದು ರಾಶಿಯೆಂದರೆ ೩೦ ಕೋನಮಾನಗಳು. ರಾಶಿಚಕ್ರದ ಹನ್ನೆರಡು ರಾಶಿಗಳನ್ನು ಮೂರು ವರ್ಗಗಳಾಗಿ ಗುಂಪುಮಾಡಲಾಗುತ್ತದೆ: ಚರ, ಸ್ಥಿರ ಮತ್ತು ದ್ವಿಸ್ವಭಾವ ರಾಶಿಗಳು. ೧೫೦ ನಾಡಿಗಳ ನಾಮಕರಣವು ರಾಶಿಗಳ ಈ ಮೂರು ಪ್ರಕಾರಗಳಿಗೆ ವಿಶಿಷ್ಟವಾಗಿದೆ. ೩೬೦ ಕೋನಮಾನಗಳಲ್ಲಿ ೧,೮೦೦ ನಾಡಿಗಳಿವೆ. ಸಂಪೂರ್ಣ ರಾಶಿಚಕ್ರದಲ್ಲಿ ೪೫೦ ವಿಶಿಷ್ಟ ಹೆಸರುಗಳು ಮತ್ತು ಸಂಖ್ಯೆಗಳಿವೆ.[೨] ನಾಡಿ ಗ್ರಂಥಗಳು ಭವಿಷ್ಯವಾಣಿಯ ಮೂಲಭೂತ ಏಕಮಾನವಾಗಿ ನಾಡಿಯ ಈ ಪರಿಕಲ್ಪನೆಯನ್ನು ಬಳಸುತ್ತವೆ. ಹಾಗಾಗಿಯೇ ಅವನ್ನು "ನಾಡಿ ಅಂಶಗಳು" ಎಂದು ಕರೆಯಲಾಗುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. Bakshi, Dhiraj (2016). Science of Vedic Nadi Shastra. CreateSpace Independent Publishing Platform. ISBN 978-1537246116. Retrieved July 22, 2018.
  2. Theology And Tradition Of Eternity: Philosophy Of Adi Advaita (Reprint ed.). PartridgeIndia. January 15, 2016. p. 362. ISBN 978-1482869842. {{cite book}}: |first= missing |last= (help)