ನಾಗೋರಿ (ಗೋವಿನ ತಳಿ)
ದನದ ಒಂದು ತಳಿ
ನಾಗೋರಿಯ ಮೂಲ ಜೋಧ್‌ಪುರ್ ಎಂದು ಕರೆಯಲ್ಪಡುತ್ತಿದ್ದ ಇಂದಿನ ರಾಜಸ್ಥಾನ. ಗಿಡ್ಡ ಕೊಂಬಿನ ದೊಡ್ಡ ಡುಬ್ಬದ ಬೂದು ಬಣ್ಣದ ಹೋರಿ ನಾಗೋರಿ ರಾಜಸ್ಥಾನದ ಕಡುಬಿಸಿಲಿನ ಸುಡುಮರಳಿನ ನೆಲದಲ್ಲಿ ಸುಲಭವಾಗಿ ಮತ್ತು ಅತೀ ಶೀಘ್ರವಾಗಿ ಕ್ರಮಿಸಬಲ್ಲ ತನ್ನ ಸಾಮರ್ಥ್ಯದಿಂದ ಗ್ರಾಮ ಗ್ರಾಮಗಳ ಸಂಪರ್ಕ ವ್ಯವಸ್ತೆಯಲ್ಲಿ ಬಿಡಿಸಲಾರದ ನಂಟನ್ನು ಹೊಂದಿದೆ. ಕಬ್ಬಿಣದ ಗಾಲಿಗಳುಳ್ಳ ಗಾಡಿಗಳನ್ನು ಎಳೆಯುತ್ತಿರುವ ನಾಗೋರಿ ರಾಜಸ್ಥಾನದಲ್ಲಿ ಕಾಣಬರುವ ಸಾಮಾನ್ಯ ದೃಶ್ಯ..
ನಾಗೋರಿ | |
---|---|
ತಳಿಯ ಹೆಸರು | ನಾಗೋರಿ |
ಮೂಲ | ನಾಗ್ಪುರ - ರಾಜಸ್ಥಾನ |
ವಿಭಾಗ | ಕೆಲಸಗಾರ ತಳಿ |
ಬಣ್ಣ | ಬಿಳಿ, ಬೂದು |
ಮುಖ | ಕಣ್ಣು : ಬಿಳಿ ರೆಪ್ಪೆ. , ಮೂತಿ : ಕಪ್ಪು. |
ಕಿವಿ | ಒಳಭಾಗ ಕೆಂಪು ಬಣ್ಣ. |
ನಾಗೋರಿಯ ದೈಹಿಕ ಲಕ್ಷಣಗಳೆಂದರೆ ಉದ್ದ ಮುಖ, ಚಪ್ಪಟೆ ಹಣೆ, ಪುಟ್ಟ ಕಣ್ಣುಗಳ ಮೆಲೆ ಜೋತುಕೊಂಡಂತಿರುವ ಕಣ್ರೆಪ್ಪೆ, ದೊಡ್ಡ ಕಿವಿ ಇತ್ಯಾದಿ. ನಾಗೋರಿ ತಳಿಯ ಹಸುಗಳು ತುಲನಾತ್ಮಕವಾಗಿ ಸ್ವಲ್ಪ ಸೌಮ್ಯ, ಆದರೆ ಹೋರಿಗಳು ಹೆಚ್ಚು ಒರಟ, ಏಕಾಂಗಿ ಪೃವೃತ್ತಿಯವು.
ಚಿತ್ರಗಳು
ಬದಲಾಯಿಸಿ-
ಗಂಡು
-
ಹೆಣ್ಣು
ಆಧಾರ/ಆಕರ
ಬದಲಾಯಿಸಿ'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.