ನಸ್ರತ್ ಫತೇ ಅಲಿ ಖಾನ್
ನಸ್ರತ್ ಫತೇ ಅಲಿ ಖಾನ್ ಹಿಂದುಸ್ತಾನಿ ಸಂಗೀತ ಪದ್ಧತಿಯ ಪಾಕಿಸ್ತಾನಿ ಗಾಯಕ. ಪ್ರಮುಖವಾಗಿ ಕವ್ವಾಲಿ ಹಾಗೂ ಸೂಫಿ ಪ್ರಬೇಧದಲ್ಲಿ ಹಾಡುತ್ತಿದ್ದರು. ನುಸ್ರತ್ ಫತೇ ಅಲಿ ಖಾನ್ ಅವರು ಅಕ್ಟೋಬರ್ 13, 1948ರಂದು ಪಾಕಿಸ್ತಾನದ ಫೈಸಲಾಬಾದಿನಲ್ಲಿ ಜನಿಸಿದರು.
Nusrat Fateh Ali Khan | |
---|---|
ಚಿತ್ರ:Nusrat Fateh Ali Khan 03 1987 Royal Albert Hall.jpg | |
ಹಿನ್ನೆಲೆ ಮಾಹಿತಿ | |
ಜನ್ಮನಾಮ | Pervez Fateh Ali Khan |
ಜನನ | Faisalabad, Punjab, Pakistan | ೧೩ ಅಕ್ಟೋಬರ್ ೧೯೪೮
ಮರಣ | August 16, 1997 London, England | (aged 48)
ಸಂಗೀತ ಶೈಲಿ | Qawwali, Ghazal, Fusion |
ವೃತ್ತಿ | Musician |
ವಾದ್ಯಗಳು | Vocals, harmonium |
ಸಕ್ರಿಯ ವರ್ಷಗಳು | 1965–1997 |
Labels | Real World, OSA, EMI, Virgin Records |
ಜೀವನ
ಬದಲಾಯಿಸಿತಮ್ಮ ಹದಿನಾರನೆಯ ವಯಸ್ಸಿನಲ್ಲಿ ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯಲ್ಲ್ಲಿ ಹಾಡಿದ ನುಸ್ರತ್ ಫತೇ ಅಲಿ ಖಾನ್ ಅವರು 1980ರ ದಶಕದ ಪ್ರಾರಂಭದಲ್ಲೇ ಇಂಗ್ಲೆಂಡಿನ ಓರಿಯೆಂಟಲ್ ಸ್ಟಾರ್ ಏಜೆನ್ಸಿ ಅವರಿಂದ ಹಾಡುಗಾರಿಕೆಗೆ ಅಹ್ವಾನ ಪಡೆದರು. ಯೂರೋಪ್, ಭಾರತ, ಜಪಾನ್, ಪಾಕಿಸ್ತಾನ ಮತ್ತು ಅಮೆರಿಕದ ಚಲನಚಿತ್ರಗಳು, ಧ್ವನಿ ಸುರುಳಿಗಳು ಮತ್ತು ಆಲ್ಬಂಗಳಲ್ಲಿ ಅವರ ಗಾನ ಮಾಧುರ್ಯ ಪಸರಿಸುತ್ತಾ ಸಾಗಿತು. ಅವರು ಸುಮಾರು 40 ದೇಶಗಳಲ್ಲಿ ತಮ್ಮ ಸಂಗೀತ ಕಚೇರಿಗಳನ್ನು ನಡೆಸಿದ್ದರು. ಪ್ರಧಾನವಾಗಿ ಉರ್ದು ಮತ್ತು ಪಂಜಾಬಿ ಭಾಷೆಗಳಲ್ಲಿ ಹಾಡುತ್ತಿದ್ದ ಅವರು ಪರ್ಷಿಯನ್, ಬ್ರಾಜ್ ಮತ್ತು ಹಿಂದೀ ಭಾಷೆಗಳಲ್ಲೂ ಹಾಡುತ್ತಿದ್ದರು.[೧]
ಫತೇ ಅಲಿ ಖಾನ್ ಅವರ ಸೂಫಿ ಭಕ್ತಿ ಗೀತೆಗಳು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿರುವುದರ ಜೊತೆಗೆ ಅವರು ಗಝಲ್, ಜಾಸ್ ಫ್ಯೂಷನ್, ಜಾನಪದ ಮತ್ತು ಸಿನಿಮಾ ಸಂಗೀತಕ್ಕೂ ಕೊಡುಗೆ ನೀಡಿದ್ದಾರೆ. ಕಿನ್ನ ಸೋಹನ್ ತೆನು, ಪಿಯಾ ರೇ ಪಿಯಾ ರೇ, ಗಮ್ ಹೈ ಯಾ ಖುಷಿ, ಮೇರಾ ಪಿಯಾ ಘರ್ ಆಯಾ, ದಮಾ ದಂ ಮಸ್ತ್ ಕಲಂದರ್ ಮುಂತಾದ ಪ್ರಸಿದ್ಧ ಗೀತೆಗಳು.[೨] ಹಲವಾರು ಹಿಂದೀ ಚಿತ್ರಗಳಿಗೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದ ಫತೇ ಅಲಿ ಖಾನ್ ಕೋಯಿ ಜಾನೆ ಕೋಯಿ ನ ಜಾನೆ, ಇಷ್ಕ್ ದಾ ರುತ್ಬಾ, ಬಹಾ ನಾ ಆನ್ಸೂ, ಇಸ್ ಶಾನ್-ಎ-ಕರಮ್ ಕ್ಯಾ ಕೆಹನಾ, ದುಲ್ಹೆ ಕ ಸೆಹ್ರಾ ಪ್ರಮುಖವಾದವುಗಳು.[೩]
ಉಲ್ಲೇಖಗಳು
ಬದಲಾಯಿಸಿ- ↑ "Samāʿ | Mysticism, Dhikr & Sufism | Britannica". www.britannica.com (in ಇಂಗ್ಲಿಷ್).
- ↑ "Nusrat Online Blog | Nusart Fateh Ali Khan – Live At National Theatre Tokyo, 1987 Part 1". 30 October 2012.
- ↑ "BBC Asian Network - Nusrat: 20 Years On, Nusrat Through the Night! - Jeff Buckley, The Grammys & UNESCO! 11 little known facts about Nusrat Fateh Ali Khan". BBC.