ನಯಾಗರ ಜಲಪಾತ

ಮೂರು ಜಲಪಾತಗಳು ಕೆನಡಾ ಮತ್ತು ಯೂನಿಯನ್ ರಾಜ್ಯಗಳ ನಡುವಿನ ಅಂತಾರಾಷ್ಟ್ರೀಯ ಗಡಿಯನ್ನು ದಾಟುತ್ತವೆ
(ನಯಾಗರಾ ಜಲಪಾತ ಇಂದ ಪುನರ್ನಿರ್ದೇಶಿತ)

ನಯಾಗರ ಫಾಲ್ಸ್, [](Niagara Falls) (/naɪˈæɡrə/) ಅಮೆರಿಕ ಸಂಯುಕ್ತ ಸಂಸ್ಥಾನ, ಮತ್ತು ಕೆನಡಾ ದೇಶಗಳ ಅತಿದೊಡ್ಡ ಮತ್ತು ಅತ್ಯಂತ ಸುಂದರ ಜಲಪಾತ. ಈ ಜಲಪಾತ ಎರಡು ದೇಶಗಳಲ್ಲಿ ಹರಡಿಕೊಂಡಿದೆ. ಜಲಪಾತದ ಒಂದು ಭಾಗದಲ್ಲಿ ಅಮೆರಿಕ ಇನ್ನೊಂದು ತುದಿಯಲ್ಲಿ ಕೆನಡ. ಇವೆರಡರ ಮಧ್ಯೆ ನಯಾಗರ ನದಿ ಹರಿಯುತ್ತದೆ. ಅಮೆರಿಕದ ಈರಿ ಸರೋವರ ಮತ್ತು ಕೆನಡದ ಒಂಟಾರಿಯೋ ಸರೋವರಗಳ ಮಧ್ಯೆ ಇರುವ ಸಣ್ಣ ನಯಾಗರ ನದಿ, ಈ ಅದ್ಭುತ ಜಲಪಾತ ಸೃಷ್ಟಿಸಿದೆ. ನಯಾಗರ ಮೂರು ಜಲಪಾತಗಳನ್ನು ಹೊಂದಿದೆ.

  1. ಅಮೇರಿಕನ್ ಜಲಪಾತ, (ಚಿಕ್ಕದು)
  2. ಬ್ರೈಡಲ್ ಜಲಪಾತ, (ಅತಿ ಚಿಕ್ಕದು)
  3. ಕೆನಡಿಯನ್, ಅಥವಾ ಕುದುರೆ ಲಾಳಿಯನ್ನು ಹೋಲುವ ಜಲಪಾತ.(ಗಾತ್ರದಲ್ಲಿ ದೊಡ್ಡದು)
ನಯಾಗರಾ ಜಲಪಾತ
ಸ್ಥಳBorder of ಆಂಟೇರಿಯೋ, ಕೆನಡಾ, & ನ್ಯೂಯಾರ್ಕ್, ಅಮೆರಿಕ ಸಂಯುಕ್ತ ಸಂಸ್ಥಾನ
ನಿರ್ದೇಶಾಂಕಗಳ43°04′48″N 79°04′29″W / 43.0799°N 79.0747°W / 43.0799; -79.0747 (Niagara Falls)
ಬಗೆCataract
ಒಟ್ಟು ಉದ್ದ167 ft (51 m)
ಒಟ್ಟು ಪ್ರಪಾತಗಳು3
ಸೇರುವ ನದಿನಯಾಗರ ನದಿ
ಸರಾಸರಿ
ಹರಿಯುವ ವೇಗ
85,000 cu ft/s (2,400 m3/s)

ಅಂತಾರಾಷ್ಟ್ರೀಯ ಸೀಮಾರೇಖೆಯನ್ನುಮೊದಲು 'ಹಾರ್ಸ್ ಶೂ ಫಾಲ್ಸ್' ಕಡೆಯಿಂದ ೧೮೧೯ ರಲ್ಲಿ ಎಳೆದು ನಿರ್ಧಾರಮಾಡಿದ ಜಾಗವನ್ನು ಎರಡೂ ಕಡೆಯವರು ಒಪ್ಪಿಕೊಳ್ಳುತ್ತಿಲ್ಲ. ಸ್ವಾಭಾವಿಕ ಭೂಕುಸಿತ ಮತ್ತು ನೀರಿನ ಕೊರೆತಗಳಿಂದ ಕೊಚ್ಚಿಹೋದ ಭೂಮಿಯ ಬಗ್ಗೆ ಮತ್ತು ಕಟ್ಟಡನಿರ್ಮಾಣದಿಂದ ಆಗಿರುವ ಆಕ್ರಮಣಗಳಿಂದ ಅಲ್ಲಿನ ಜನಕ್ಕೆ ಸಮಾಧಾನ ಸಿಕ್ಕದೆ, ಆ ಜಾಗ ವಿವಾದದಲ್ಲಿದೆ.

ನಯಾಗರ ಜಲಪಾತದ ವಿವರಗಳು

ಬದಲಾಯಿಸಿ
  1. ನಯಾಗರ ಜಲಪಾತದ ಎತ್ತರ ೧೭೩ ಅಡಿಗಳು. ಆದರೆ ಅದರ ಅತಿ ಹೆಚ್ಚು.[] ಈ ವಿಶಾಲತೆ ನಯಾಗರಕ್ಕೆ ಅಪಾರ ಗಾಂಭೀರ್ಯವನ್ನು ತಂದುಕೊಡುತ್ತದೆ. ಪ್ರತಿ ವರ್ಷ ೧೨ ದಶ ಲಕ್ಷ ಪ್ರವಾಸಿಗರು ನಯಾಗರದ ಸೊಬಗನ್ನು ವೀಕ್ಷಿಸಲು ಇಲ್ಲಿಗೆ ಬರುತ್ತಾರೆ. ನಯಾಗರ ಜಲಪಾತ-ಇದು ಅಮೆರಿಕ ದೇಶದ ನ್ಯೂಯಾರ್ಕ್ ರಾಜ್ಯ, ಮತ್ತು ಕೆನಡಾ ದೇಶದ ಆಂಟೇರಿಯೋ ಪ್ರಾಂತ್ಯಗಳ ನಡುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಧುಮುಕುವ ಮೂರು ಜಲಪಾತಗಳಿಗೆ ಒಟ್ಟಾಗಿ ಕರೆಯುವ ಸಾಮೂಹಿಕ ಹೆಸರು.
  2. ನಯಾಗರ ನದಿಯ ಹತ್ತಿರದಲ್ಲಿ ಲೇಕ್ ಈರಿ ,ಮತ್ತು ಲೇಕ್ ಆಂಟೇರಿಯೋ ತಮ್ಮ ಜಲಧಾರೆಯನ್ನು ಸುರಿಸುತ್ತವೆ. ಈ ಎರಡು ಸರೋವರಗಳು ಸುರಿಸುವ ನೀರಿನ ಜಲಪಾತ ವಿಶ್ವದಲ್ಲೇ ಅತಿ ಹೆಚ್ಚಿನದೆಂದು ದಾಖಲಾಗಿದೆ ಲೇಕ್ ಈರಿ, ಲೇಕ್ ಆಂಟೇರಿಯೋ, ಇವೆರಡು ಸೇರಿ,ಭಾರಿ ಜಲಪಾತವಾಗಿ ಮಾರ್ಪಟ್ಟಿದೆ. ವಿಶ್ವದಲ್ಲೇ ಜನಪ್ರಿಯ. ನ್ಯೂಯಾರ್ಕ್ ರಾಜ್ಯದ ಬಫೆಲೊನಗರದಿಂದ ೧೭ ಮೈಲಿ (೨೭ಕಿ.ಮೀ) ಉತ್ತರ ಉತ್ತರ-ಪಚ್ಚಿಮ ಬಫೆಲೊ ನಗರದಿಂದ ೭೫ ಮೈಲಿ (೧೨೧ ಕಿ.ಮೀ) ದಕ್ಷಿಣ ದಕ್ಷಿಣ-ಪೂರ್ವ ಟೊರಾಂಟೊ ನಗರ. ಈ ಅವಳಿ ನಗರಗಳ ಮಧ್ಯೆ ಅಂತೆರಿಯೊ ಮತ್ತು ನಯಾಗರ ಫಾಲ್ಸ್, ಹಿಮ ನದಿಗಳು ಹೊಸದಾಗಿ ಬಂದ ಸರೋವರಗಳ ನೀರು ನಯಾಗರದ ಹತ್ತಿರ ಭೂಮಿಯನ್ನು ಕೊರೆದು ಕಂದಕಗಳನ್ನು ನಿರ್ಮಾಣ ಮಾಡಿವೆ.ಅವು ಅಟಲಾಂಟಿಕ್ ಸಾಗರಕ್ಕೆ ಬೀಳುವ ದಾರಿಯಲ್ಲಿ ಸರಾಸರಿ ವಿಸ್ಕಾನ್ಸಿನ್ ರಾಜ್ಯದ ಬಳಿ ನೀರಿನ ರಭಸ ಕಡಿಮೆಯಾಗುತ್ತೆ.(ಹಿಮ ಯುಗದ ಕಾಲ), ೬ ಮಿಲಿಯನ್ ಕ್ಯೂ. ಫೀಟ್ ನೀರು ಕ್ರೆಸ್ಟ್ ಕಡೆ ಧುಮುಕುತ್ತದೆ ಕ್ರೆಸ್ಟ್ (೧೬೮,೦೦೦ m3) ಪ್ರತಿ ನಿಮಿಷಕ್ಕೆ ರಭಸದಿಂದ ೪ ಮೀ. ಕ್ಯೂ (೧೧೦,೦೦೦ m3) ಫೀಟ್ ಸರಾಸರಿ ಧುಮುಕುತ್ತದೆ.
  3. ರಮ್ಯ ಸುಂದರ ದೃಶ್ಯಗಳಿಗೆ ನಯಾಗರ ಜಲಪಾತ ಹೆಸರುವಾಸಿಯಾಗಿದೆ. ಇಲ್ಲಿ ಸ್ಥಾಪಿಸಲ್ಪಟ್ಟಿರುವ ಜಲವಿದ್ಯುತ್ ನಿರ್ಮಾಣ ಸ್ಥಾವರ,[] ಜನರಿಗೆ ಮನರಂಜನೆ ಒದಗಿಸುವ ಜೊತೆಗೆ ವಾಣಿಜ್ಯ ಮತ್ತು ಔದ್ಯೋಗಿಕ ಸ್ಥಾವರಗಳಿಗೆ, ಕಾರ್ಖಾನೆಗಳಿಗೆ, ನಿಯಮಿತವಾಗಿ ವಿದ್ಯುತ್ ಸರಬರಾಜಿನ ಆವಶ್ಯಕತೆಗಳನ್ನು ಸಮರ್ಥವಾಗಿ ೧೯ನೇ ಶತಮಾನದಿಂದ ನಿರ್ವಹಿಸುತ್ತಿದೆ. ೧೬೫ ಅಡಿ ಎತ್ತರ, (೫೦ಮೀ) ಹಾರ್ಸ್ ಶೂ ಜಲಪಾತ ಉತ್ತರ ಅಮೆರಿಕದ ಅತ್ಯಂತ ಹೆಚ್ಚು ಬಲಯುತವಾದ ಜಲಪಾತವೆಂದು ಹೆಸರುಗಳಿಸಿದೆ. (ಎತ್ತರ ಹಾಗೂ ಅದು ಹೊರದೂಡುವ ಜಲರಾಶಿಯ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು)

[] ಜಲಪಾತಗಳ ಸಮೂಹವಾಗಿ ಕುದುರೆ ಲಾಳದಾಕಾರದಲ್ಲಿ ರಭಸದಿಂದ ಕೆಳಗೆ ಧುಮ್ಮಿಕ್ಕುವ ನೀರು ಹಾಲಿನ ಕಡಲಿನಂತೆ ವಿಶಾಲ. ಅಪಾರ ಜಲರಾಶಿ ನಿರಂತರವಾಗಿ ಭೋರ್ಗರೆಯುತ್ತಾ ಹಾರಿ ವೇಗವಾಗಿ ಕಿವಿಕಿವಿಡಾಗುವಂತೆ ಶಬ್ದಮಾಡುತ್ತಾ ನೆಗೆದು, ತಡವರಿಸುತ್ತಾ-ಎದ್ದು-ಬಿದ್ದು ಓಡಿಹೋಗುವ ನಿರಂತರ ನೋಟ, ಎಲ್ಲರನ್ನೂ ಚಕಿತಗೊಳಿಸುತ್ತದೆ.

ಕೆನಡ ಮತ್ತು ಉತ್ತರ ಅಮೆರಿಕಗಳನ್ನು ಬೇರ್ಪಡಿಸುವ ಈ 'ವಿಶ್ವ ಪ್ರಸಿದ್ಧ ಸುಂದರ ಜಲರಾಶಿ', ಕೆನಡಾ ಕಡೆ ಆಂಟಾರಿಯೋ ಮತ್ತು ಅಮೆರಿಕದ ನ್ಯೂಯಾರ್ಕ್ ನಗರಗಳ ಮಧ್ಯಭಾಗದಲ್ಲಿದೆ. ಪರ್ಯಟನೆಯ ದೃಷ್ಟಿಯಿಂದ ಇದನ್ನು ಮೂರು ವಿಭಾಗಗಳಾಗಿ ವಿಂಗಡಿಸುತ್ತಾರೆ.

 
'ಟೇಬಲ್ ರಾಕ್ ಕಡೆ ಹೋಗುತ್ತಿದ್ದಂತೆ, ಕುದುರೆ ಲಾಳದಾಕಾರದ ರೂಪದಲ್ಲಿ ಬೃಹತ್ ಪ್ರಮಾಣದ ನೀರು ಧುಮುಕುವುದನ್ನು ವೀಕ್ಷಿಸುತ್ತೇವೆ'
  • ಗೋಟ್ ಐಲ್ಯಾಂಡ್
  • ಹಾರ್ಸ್ ಶೂ ಫಾಲ್ಸ್
  • ಬ್ರೈಡಲ್ ವೇಲ್

ಮೇಡ್ ಆಫ್ ದ ಮಿಸ್ಟ್ ರೈಡ್

ಬದಲಾಯಿಸಿ
 
'ಮೇಡ್ ಆಫ಼್ ದ ಮಿಸ್ಟ್' ಎಂಬ ಹಡಗಿನಲ್ಲಿ ನಯಾಗರ ನದಿಯ ನೀರಿನ ಮೇಲೆ ನಿಯಮಿತ ಉಡುಪನ್ನು ಧರಿಸಿ, ಯಾನಮಾಡಲು ಪರ್ಯಟಕರು ಮುದಗೊಳ್ಳುತ್ತಾರೆ

ಮೇ ತಿಂಗಳ ಮಧ್ಯಭಾಗದಲ್ಲಿ ಈ ಜಲಪಾತ ಬಹಳ ಹೆಸರುವಾಸಿಯಾದದ್ದು. ಉತ್ತರ ಅಮೆರಿಕಾ ಮತ್ತು ಕೆನಡಾ ರಾಷ್ಟ್ರಗಳ ಕಡೆಯಿಂದ ಈ ಜಲಪಾತವನ್ನು ಚೆನ್ನಾಗಿ ವೀಕ್ಷಿಸಬಹುದು. 'ನೀಲಿಬಣ್ಣದ ರೇನ್ ಕೋಟ್' ಧರಿಸಿ ಗುಂಪುಗುಂಪಾಗಿ ಪರ್ಯಟಕರು 'ಬೋಟ್ ಯಾನ'ಮಾಡುತ್ತಾ ಜಲಪಾತದ ಬುಡದವರೆಗೂ ಹೋಗಿಬರಲು ಸಾಧ್ಯವಿದೆ. ಅಲ್ಲಿ ಮೈಗೆ ಮುತ್ತುವ ತುಂತುರು ಹನಿಗಳ, ಹಿಮಮಣಿಗಳ ಅದ್ಭುತ ಅನುಭವಗಳನ್ನು ಮೈತುಂಬಿಸಿಕೊಂಡು ಬರುತ್ತಾರೆ. ಹೃದಯದ ಬಡಿತ ನಿಲ್ಲುವಷ್ಟು, ಇಲ್ಲವೆ ಡವಡವಗುಟ್ಟಿಸುವಷ್ಟು ರೋಮಾಂಚಕಾರಿ ಅನುಭವ ಅನನ್ಯವಾದುದು.

'ನಯಾಗರ ಫಾಲ್ಸ್ ನ ವಿವರಗಳು'

ಬದಲಾಯಿಸಿ

ಬಹುತೇಕ ನೀರು ಕಾಲುವೆ ಮತ್ತು ಪೈಪ್ ಗಳ ಮುಖಾಂತರ ಹತ್ತಿರದ 'ಜಲವಿದ್ಯುತ್ ಸ್ಥಾವರ'ಕ್ಕೆ ಹಾಯಿಸಲಾಗುತ್ತದೆ. ವಿಶ್ವದ ಶೇಕಡಾ ೨೦% ರಷ್ಟು ಸಿಹಿನೀರು ಈ ಪ್ರದೇಶದ್ಸ ಮೇಲೆ ಹರಿದು ಬರುವ ನದಿಗಳು ಜಲಪಾತಕ್ಕೆ ಒದಗಿಸುತ್ತವೆ. 'ಗೈಡ್ ವ್ಯವಸ್ಥೆ' ಅತ್ಯುತ್ತಮವಾಗಿದೆ. ಸ್ಕೂಲ್ ಮಾಸ್ತರಣಿಯೋರ್ವಳು ಪೀಪಾಯಿನಲ್ಲಿ ಕುಳಿತು ಜಲಪಾತದ ಮೇಲಿನಿಂದ ಕೆಳಗೆ ಸಾಗಿ ಬದುಕಿ ಬಂದ ಬಗ್ಗೆ ವಿವರಣೆ ಸಿಗುತ್ತದೆ. ಜಲಪಾತದ ಅತಿ ಅಗಲವಾದ ಹರಿವು ನಿಮಿಷಕ್ಕೆ ೬ ಮಿಲಿಯನ್ ಘನ ಅಡಿಯಷ್ಟು ನೀರು ಒಂದೇಸಮನೆ ಭೋರ್ಗರೆಯುತ್ತಾ ಕೆಳಗೆ ಧುಮ್ಮಿಕ್ಕಿ ಓಡುತ್ತದೆ. ಜಲಪಾತದ ಬಳಿ, ಮನರಂಜನೀಯ ಹಾಗೂ ಅತ್ಯಂತ ರುದ್ರರಮಣೀಯ ದೃಶ್ಯಗಳನ್ನು ಕಾಣಬಹುದು. ವಿದ್ಯುತ್ ಸ್ಥಾವರದ ಜೊತೆಗೆ, ಔದ್ಯೋಗಿಕ ಮತ್ತು ಕೈಗಾರಿಕ ಕೇಂದ್ರವೆಂದು ಹೆಸರುಪಡೆದಿದೆ. 'ಮಧುಚಂದ್ರ'ಕ್ಕೆ ಇದು ಹೇಳಿಮಾಡಿಸಿದ ತಾಣ. ಇಲ್ಲಿಗೆ ಮದುವೆಯಾಗುವ ನೆವದಿಂದಲೇ ಬಂದವರ ಸಂಖ್ಯೆ ಅಪಾರ. ಯಾವ ಖರ್ಚುವೆಚ್ಚವಿಲ್ಲದೆ ಎರಡು ಹಾರ, ಇಲ್ಲವೇ 'ಪುಷ್ಪ ಗುಚ್ಛಗಳ ವಿನಿಮಯ'ದೊಂದಿಗೆ ಈಡೇರುವ ಮದುವೆಗಳು ಸರ್ವೇ ಸಾಮಾನ್ಯವಾಗಿವೆ.

ಚಲನಚಿತ್ರದ ಹೆಸರು ನಯಾಗರ

ಬದಲಾಯಿಸಿ

ಇದೇ ಹೆಸರಿನ ಒಂದು 'ಹಾಲಿವುಡ್ ನಿರ್ಮಿತ ಚಲನಚಿತ್ರ' ಸನ್ ೧೯೫೦ ರಲ್ಲಿ ನಿರ್ಮಿಸಲ್ಪಟ್ಟಿತ್ತು. ಇದರ ನಂತರ ಬೇಕಾದಷ್ಟು ಚಲನಚಿತ್ರ ನಿರ್ಮಾಪಕರು ಈ ತಾಣವನ್ನು ತಮ್ಮ ಚಿತ್ರಗಳಿಗೆ ಆರಿಸಿಕೊಂಡಿದ್ದಾರೆ. ಮನರಂಜನೆಗೆ ವಿಶೇಷ ವ್ಯವಸ್ಥೆಮಾಡಿದ ಪರ್ಯಟಕ ಸಂಸ್ಥೆಗಳು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತು ಅತ್ಯಂತ ಯಶಸ್ವಿಯಾಗಿ ಸಹಾಯ ಕಲ್ಪಿಸುತ್ತವೆ.

  • ವಿದ್ಯುತ್ ನಿರ್ಮಾಣ ನಿಗಮ
  • ಅಕ್ವೇರಿಯಮ್
  • ಕಲಾ ಉದ್ಯಾನವನ
  • ವಸ್ತುಪ್ರದರ್ಶನ-ದೇರ್ ಡೆವಿಲ್
  • ಹೆಲಿಕಾಪ್ಟರ್ ನಲ್ಲಿ ನಯಾಗರ ಮೇಲೆ ಅತಿ ಹತ್ತಿರದಲ್ಲಿ ಸುತ್ತಾಡಿಸುವ ಅಭಿಯಾನ
  • ’ವಿರ್ಲ್ ಪೂಲ್ ನೀರಿನ ಕಾರಂಜಿಯ ಉದ್ಯಾನವನ’
  • ನಯಾಗರ ಕೋಟೆ
  • ಜೆಟ್ ಬೋಟ್ ನಲ್ಲಿ ಸುತ್ತಾಟ
  • ಐತಿಹಾಸಿಕ ಪ್ರೇಕ್ಷಣೀಯ ತಾಣಗಳ
  • ಜಲಪಾತದ ಅತಿ ಹತ್ತಿರಕ್ಕೆ ಕೊಂಡೊಯ್ಯುವ, ಮೇಡ್ ಆಫ್ ದ ಮಿಸ್ಟ್, ಕೇವ್ ಆಫ್ ದ ವಿಂಡ್ ರೈಡ್ಸ್ ಗಳು

ಬ್ರೆಕ್ ಫಾಸ್ಟ್, ಊಟ, ತಿಂಡಿ-ತಿನಿಸುಗಳ ವ್ಯವಸ್ಥೆ

ಬದಲಾಯಿಸಿ

'ಊಟ', 'ಬ್ರೆಕ್ ಫಾಸ್ಟ್', ಫಾಸ್ಟ್ ಫುಡ್ ಗಳಿಗೆ ಭಾರತವೂ ಸೇರಿದಂತೆ ಹಲವಾರು 'ರೆಸ್ಟಾರೆಂಟ್' ಗಳಿವೆ. ಅವರೆಲ್ಲಾ ಪರ್ಯಟಕರನ್ನು ತಮ್ಮ ವಾಹನಗಳಲ್ಲಿ ಕೂರಿಸಿಕೊಂಡು ತಮ್ಮ 'ಹೋಟೆಲ್' ಗಳಲ್ಲಿ ಊಟದ ವ್ಯವಸ್ಥೆಗಳನ್ನು ಒದಗಿಸಿದ ನಂತರ, ಅವರನ್ನು ಮತ್ತೆ 'ಜಲಪಾತ'ದ ಹತ್ತಿರಕ್ಕೆ ಕರೆತಂದು ಬಿಡುತ್ತಾರೆ. 'ಭಾರತೀಯ ಹೋಟೆಲ್ ಗಳ ಪರಿಚಾರಕರು' ಎಲ್ಲೆಡೆ ಸಿಗುತ್ತಾರೆ. ಅಂಗವಿಕಲರಿಗೆ, ಮಕ್ಕಳಿಗೆ, ವೃದ್ಧರಿಗೆ, ಹೆಣ್ಣುಮಕ್ಕಳಿಗೆ, ಮತ್ತು ಯುವಕರಿಗೆ, ಎಲ್ಲಾ ತರಹದ ಸೌಲಭ್ಯಗಳೂ ಯಾತ್ರಿಕರಿಗೆ ಲಭ್ಯವಿದೆ. ಕೆನಡಾದೇಶದ ಕಡೆ ಸ್ಥಾಪಿಸಲಾಗಿರುವ ಸ್ಕೈಲಾನ್ ಟವರ್ ನ ತಿರುಗುವ ಹೋಟೆಲ್ ನಲ್ಲಿ ಕುಳಿತು ಪೇಯ-ತಿಂಡಿ-ತಿನಸುಗಳನ್ನು ಮೆಲ್ಲುತ್ತಾ 'ನಯಾಗರ ಜಲಪಾತ'ವನ್ನು ವೀಕ್ಷಿಸುವ ಪರ್ಯಟಕರಿಗೆ ಒಂದು ವಿಹಂಗಮನೋಟವನ್ನು ಒದಗಿಸಿಕೊಡುತ್ತದೆ.

ಚಿತ್ರ ಗ್ಯಾಲರಿ

ಬದಲಾಯಿಸಿ

ಇವುಗಳನ್ನೂ ನೋಡಿ

ಬದಲಾಯಿಸಿ
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖಗಳು

ಬದಲಾಯಿಸಿ
  1. "April, 7,2015, Go Canada.com, Niagara Falls, Canada". Archived from the original on 2020-09-21. Retrieved 2016-06-21.
  2. Niagara parks, Niagara Falls Geology Facts & Figures
  3. NIAGARA FALLS HISTORY of POWER
  4. http://www.niagarafallslive.com/facts_about_niagara_falls.htm