'ನಮ್ ರೇಡಿಯೋ', ಇದು ಕನ್ನಡದ ಮೊದಲ ಅಂತರಜಾಲ ರೇಡಿಯೋ. ಇದರಲ್ಲಿ ಕನ್ನಡದ ಸಿನೇಮಾ ಹಾಡುಗಳು,ಭಕ್ತಿಗೀತೆ,ಭಾವಗೀತೆ, ರಂಗಗೀತೆ,ಜನಪದ ಗೀತೆ,ಮಾಹಿತಿಗಳು,ಸಂಸ್ಕೃತಿ ಸಂಬಂಧಿಸಿದ ವಿಷಯಗಳು,ನಾಟಕಗಳು,ಸಂವಾದಗಳು,ಸಂದರ್ಶನ ಹೀಗೆ ಮುಂತಾದ ಕಾರ್ಯಕ್ರಮಗಳು ಪ್ರಸಾರವಾಗುತ್ತದೆ.

ಫೆಬ್ರವರಿ ೨೯,೨೦೧೬ ರಂದು ಅಧಿಕೃತವಾಗಿ ಚಾಲನೆಗೊಂಡ 'ನಮ್ ರೇಡಿಯೋ' ಅದಕ್ಕೂ ಮೊದಲು ಸುಮಾರು ಎರಡು ತಿಂಗಳುಗಳ ಕಾಲ ಪರೀಕ್ಷಾರ್ಥವಾಗಿ,ಪ್ರಾಯೋಗಿಕವಾಗಿ ಪ್ರಸಾರಗೊಂಡಿತ್ತು.ನಮ್ ರೇಡಿಯೋ ವನ್ನು www.nammradio.com ಜಾಲತಾಣದಲ್ಲಿ ಕೇಳಬಹುದಾಗಿದೆ.ಹಾಗು ಸದ್ಯದಲ್ಲೇ ಆಪ್ ಕೂಡ ಹೊರಬರಲಿದೆ.

ಸಧ್ಯದ ಎಫ್ ಎಂ ವಾಹಿನಿಗಳು ಸಾಕಷ್ಟು ಇದ್ದರೂ ಅವೆಲ್ಲ ಕೇವಲ ಕರ್ನಾಟಕದಲ್ಲಿರುವ ನಗರದ ಕೇಳುಗರನ್ನು ತಲುಪಲು ಸಾಧ್ಯವಾಗಿದೆ.ಇನ್ನು ಗ್ರಾಮೀಣ ಪ್ರದೇಶದ,ಹೊರನಾಡ ಕನ್ನಡಿಗರಿಗನ್ನು ತಲುಪಲು ಸಾಧ್ಯವಾಗಿರಲಿಲ್ಲ.ನಮ್ ರೇಡಿಯೋ ಈ ಕೊರತೆಯನ್ನು ನೀಗಿಸಲಿದೆ.ವಿಶೇಷವಾಗಿ ಹೊರ ದೇಶದಲ್ಲಿರುವ ಕನ್ನಡಿಗರಿಗೆ ತಮ್ಮ ತಾಯ್ನಾಡಿನ,ತಾಯ್ನುಡಿಯ ಜೊತೆಗೆ ಮತ್ತಷ್ಟು ಬೆಸೆದುಕೊಳ್ಳಲು ಅನುಕೂಲವಾಗಲಿದೆ.[]

ಉಲ್ಲೇಖ

ಬದಲಾಯಿಸಿ
  1. Ltd, Asianet News Pvt. "Suvarnanews:ಕನ್ನಡಿಗರಿಂದ, ಕನ್ನಡಿಗರಿಗಾಗಿ ಮತ್ತು ಕನ್ನಡಿಗರಿಗೊಸ್ಕರ ಕನ್ನಡ ಎಫ್ ಎಂ". Suvarna News. Retrieved 2016-03-14.