ನನ್ ಲೈಫ್ ಅಲ್ಲಿ (ಚಲನಚಿತ್ರ)

ನಾಗತಿಹಳ್ಳಿ ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ದೇಶಕ ರಾಮ್ ದೀಪ್ ಸಾರಥ್ಯದಲ್ಲಿ ನಿರ್ಮಾಣಗೊಂಡಿರುವ ಕನ್ನಡ ಚಲನಚಿತ್ರ. ಮೂಲತಹ ಕರ್ನಾಟಕದವರಾದ ರಾಮ್ ದೀಪ್ ವಿದೇಶದಲ್ಲಿ ಕೆಲವು ವರ್ಷಗಳ ಕಾಲ ತಂತ್ರಾಂಶ(ಸಾಫ್ಟವೇರ್) ತಂತ್ರ ಜ್ಞಾನ ಕ್ಷೇತ್ರದಲ್ಲಿ ಕೆಲಸಮಾಡಿ, ಕನ್ನಡ ಚಲನಚಿತ್ರ ರಂಗದಲ್ಲಿ ಮೇಷ್ಟ್ರು ಎಂದು ಕರೆಯಲ್ಪಡುವ ನಾಗತಿಹಳ್ಳಿ ಚಂದ್ರಶೇಖರ್ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಾಗತಿಹಳ್ಳಿ ಚಂದ್ರಶೇಖರ್ ಗರಡಿಯಲ್ಲಿ ಕನ್ನಡದ ಪ್ಯಾರಿಸ್ ಪ್ರಣಯ , ಅಮೃತಧಾರೆ ಚಲನಚಿತ್ರಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಚಿತ್ರದ ಚಿತ್ರೀಕರಣವನ್ನು ಸಂಪೂರ್ಣವಾಗಿ ಕರ್ನಾಟಕದಲ್ಲಿಯೇ ಚಿತ್ರಿಸಲಾಗಿದೆ. ಕರ್ನಾಟಕದ ಉಡುಪಿ , ಮಂಗಳೂರು, ಹಾಸನ, ಸಕಲೇಶಪುರ ಮತ್ತು ಬೆಂಗಳೂರುಗಳಲ್ಲಿ ಚಿತ್ರೀಕರಣ ನಡೆದಿದ್ದು , ಯುವ ಮತ್ತು ಇತ್ತೀಚಿಗೆ ಪ್ರತೀ ಚಿತ್ರದಲ್ಲಿಯೂ ವಿಭಿನ್ನ ರೀತಿಯಲ್ಲಿ ಛಾಯಾಗ್ರಹಣದಲ್ಲಿ ಪ್ರಯೋಗಗಳನ್ನು ಮಾಡುತ್ತಿರುವ ಮನೋಹರ್ ಜೋಷಿಯವರು ಮತ್ತೊಮ್ಮೆ ಇಲ್ಲಿ ಪ್ರಯೋಗಗಳನ್ನು ತಮ್ಮ ಛಾಯಾಗ್ರಹಣದಲ್ಲಿ ಮುಂದುವರೆಸಿದ್ದು ಅದನ್ನು ಚಿತ್ರದಲ್ಲಿ ಅದರಲ್ಲೂ ಹಾಡಿಗಳಲ್ಲಿ ಅನುಭವಿಸಬಹುದಾಗಿದೆ. ಈ ಚಿತ್ರದ ನಿರ್ಮಾಣಕ್ಕೆ ಹಲವು ಜನರು ಕೈಗೂಡಿಸಿದ್ದು ಕನ್ನಡದ ಚಲನಚಿತ್ರ ರಂಗದಲ್ಲಿ ಹೊಸ ಪ್ರಯತ್ನವನ್ನು ಮಾಡುತ್ತಿದ್ದಾರೆ. ಚಿತ್ರದಲ್ಲಿ ಹಾಸ್ಯನಟ ಮಿತ್ರ, ದಿಲೀಪ್ ರಾಜ್, ನಾಗತಿಹಳ್ಳಿ ಚಂದ್ರಶೇಖರ್ ನಟಿಸಿದ್ದಾರೆ.

ನನ್ ಲೈಫ್ ಅಲ್ಲಿ (ಚಲನಚಿತ್ರ)
ಚಿತ್ರ:NanLifeAlliKannadaFilm.jpg
ನನ್ ಲೈಫ್ ಅಲ್ಲಿ
ನಿರ್ದೇಶನರಾಮ್ ದೀಪ್
ನಿರ್ಮಾಪಕನಿವೇದಿತ, ವೆಂಕಟೇಶ್ ಬಾಬು, ಅನಿಲ್ ಯುವರಾಜ್ , ಜೈ ಪಾಲ್, ಮನು , ಸಯ್ಯದ್ ಮುಜಾಹಿದ್, ಶ್ರೀಧರ್ ಗಿರೀಶ್, ಲೋಕೇಶ್, ಮಲ್ಲಿಕಾರ್ಜುನ್
ಚಿತ್ರಕಥೆಲೋಕೇಶ್ ಬಿ ಎಸ್
ಕಥೆರಾಮ್ ದೀಪ್
ಸಂಭಾಷಣೆಮನೋಜವ ಗಲಗಲಿ
ಪಾತ್ರವರ್ಗಅನೀಶ್ ತೇಜೇಶ್ವರ್ ಸಿಂಧು ಲೋಕನಾಥ್ ಮಿತ್ರ, ದಿಲೀಪ್ ರಾಜ್
ಸಂಗೀತಅಜನೀಶ್ ಲೋಕನಾಥ್
ಛಾಯಾಗ್ರಹಣಮನೋಹರ್ ಜೋಷಿ
ಸಂಕಲನಸಂತೋಷ್ ರಾಧಾಕೃಷ್ಣನ್
ಬಿಡುಗಡೆಯಾಗಿದ್ದು೨೦೧೪
ನೃತ್ಯವಿದ್ಯಾ ಸಾಗರ್
ಸಾಹಸಡಿಫರೆಂಟ್ ಡ್ಯಾನಿ
ಚಿತ್ರ ನಿರ್ಮಾಣ ಸಂಸ್ಥೆನಾಗತಿಹಳ್ಳಿ ಸಿನಿ ಪ್ರೊಡಕ್ಷನ್ಸ್
ಸಾಹಿತ್ಯಕವಿರಾಜ್, ನಾಗತಿಹಳ್ಳಿ ಚಂದ್ರಶೇಖರ್, ಮನೋಜವ ಗಲಗಲಿ, ಲೋಕೇಶ್ ಬಿ ಎಸ್, ಮಂಜು ಹೊನ್ನಾವರ
ಹಿನ್ನೆಲೆ ಗಾಯನಶ್ರೀರಾಮ್ ನಾರಾಯಣ್, ಲಕ್ಷ್ಮಿ ನಟರಾಜ್, ಮನೋಜವ ಗಲಗಲಿ, ಅಜನೀಶ್ ಲೋಕನಾಥ್ , ರಾಜೇಶ್ ಕೃಷ್ಣನ್

ಹಾಡುಗಳು

ಬದಲಾಯಿಸಿ
ಕ್ರಮ ಸಂಖ್ಯೆ ಹಾಡು ಗಾಯಕರು ಸಾಹಿತ್ಯ
1 "ಜಿನು ಜಿನುಗೋ" ಶ್ರೀರಾಮ್ ನಾರಾಯಣ್, ಲಕ್ಷ್ಮಿ ನಟರಾಜ್ ಮಂಜು ಹೊನ್ನಾವರ
2 "ಲೈಫ್ ಅನ್ನೋ ಹೈವೇ" ಮನೋಜವ ಗಲಗಲಿ ಮನೋಜವ ಗಲಗಲಿ
3 "ನನ್ನ ನೋಡು" ಅಜನೀಶ್ ಲೋಕನಾಥ್ ಕವಿರಾಜ್
4 "ಮಾತಿಲ್ಲದ ಈ ಮೌನ" ರಾಜೇಶ್ ಕೃಷ್ಣನ್ ರಾಮ್ ದೀಪ್
5 "ನನ್ ಲೈಫ್ ಅಲ್ಲಿ " ಕಾರುಣ್ಯ ನಾಗತಿಹಳ್ಳಿ ಚಂದ್ರಶೇಖರ್
6 "ಲೈಫ್ ಅನ್ನೋ ಹೈವೇ" ಅಜನೀಶ್ ಲೋಕನಾಥ್ ಮನೋಜವ ಗಲಗಲಿ