ನದಿ ಕೊರೆತ

ಕಣಿವೆಯ ಇಪ್ಪತ್ತು ಮೈಲಿ ಅಗಲವು ನೀಡಿತು

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಭೂಮೇಲ್ಮೈಯನ್ನು ಸವೆಸುವ ನೈಸರ್ಗಿಕ ಕರ್ತೃಗಳ ಪೈಕಿ ನದಿಯೂ ಒಂದು ಮಳೆ ಆಧರಿಸಿದ ನದಿಗಳು ಬೆಟ್ಟದ ಇಳಿಜಾರಿನಲ್ಲಿ ಹಾಯುವಾಗ ಅವುಗಳಲ್ಲಿ ನೆಲ ಸವೆಸುವ ಶಕ್ತಿ ಹೆಚ್ಚಾಗಿರುತ್ತದೆ. ನದಿ ಸಾಗಿಸುವ ಶಿಲೆ ಮತ್ತು ಮಣ್ಣಿನ ಪ್ರಮಾಣ ಮೂಲ ಶಿಲೆಯ ಗುಣ,ಇಳಿಜಾರಿನ ಕೋನ,ನದಿಗೆ ಸೇರುವ ಉಪನದಿಗಳು ಮುಂತಅದವನ್ನು ಆಧರಿಸಿರುತ್ತದೆ . ಪ್ರಾಂಭಿಕ ಹಂತದಲ್ಲಿ ನದಿ ನೀರು ಇಳಿಜಾರಿನಲ್ಲಿ ರಭಸವಾಗಿ ಹರಿಯುವುದರಿಂದ ಮೇಲ್ಮ್ ಯನ್ನು ತ್ವರಿತವಾಗಿ ಕೋಚ್ಚುತ್ತದೆ. ಆಗ ಕೊರೆತುವ ನದಿಪಾತ್ರ V ಆಕಾರದಲ್ಲಿರುತ್ತದೆ.ಮೈದಾನದಲ್ಲಿ ಹರಿಯುವಾಗ ಆದರ ಕೊರೆಯುವ ಶಕ್ತಿ ಕುಗ್ಗುತ್ತದೆ.ಆದ್ದರಿಂದ ಸಾಗಣೆಯ ಪ್ರಮಾಣವೂ ಗಣನೀಯವಾಗಿ ಇಳೀಮುಖವಾಗುತ್ತದೆ.ಕೊರೆಯುವ ಶಕ್ತಿ ಕುಗ್ಗುತ್ತಲೇ ಕಣಿವೆ ಆಳವಾಗುವ ಬದಲು ಆಗಲವಾಗುತ್ತದೆ.ಅಡೆತಡೆಗಳನ್ನು ಕೊಚ್ಚುವ ಸಾಮರ್ಥ್ಯ ಈಗ ನದಿಗಿರುವುದಿಲ್ಲ.ಅಂಕುಡೊಂಕಾಗಿ ಸುತ್ತಲು ಪ್ರಾರಂಭಿಸುತ್ತದೆ. ನದಿ ತಿರುವುಗಳು ಹುಟ್ಟುತ್ತವೆ, ಕೆಲವೋಮ್ಮೆ ನದಿ ಕೊರೆತ ಹೆಚ್ಚಾದಾಗ ತಿರುವುಗಳು ಕೂಡಿಕೊಂಡು ಸರೋವರಗಳಾಗುವುದೂ ಉಂಟು.ಮೂಲ ನದಿ ಹೊರಳಿ ಮತ್ತೊಂದು ಪಾತ್ರದಲ್ಲಿ ಊರ್ಧ್ವಮುಖವಾಗಿ ನೆಲ ಒತ್ತರಿಸಿ ಬಂದರೆ ಹೊಸತಾಗಿ ಅದನ್ನು ಕೊರೆಯಲು ಪ್ರಾರಂಭಿಸುತ್ತದೆ.ಗಡಸುಶಿಲೆಗಳು ಎದುರಾದಾಗ ಅಥವಾ ಮೃದುಶಿಲೆಗಳು ಬೇಗಸವೆದು ಹೊದಾಗ ಆ ಎಡೆಗಳಲ್ಲಿ ಜಲಪಾತಗಳು ಸಷ್ಟಿಯಾಗುತ್ತವೆ . ಶರಾವತಿ ನದಿ ಪಶ್ಚಿಮ ಘಟ್ಟದಲ್ಲಿ ಸೃಷ್ಟಿಸಿರುವ ಜೋಗ್ ಜಲಪಾತ ಜಗತ್ ಪ್ರಸಿಧ್ಧ . ೨೫೩ ಮೀ . ಎತ್ತರದಿಂದ ಅದು ದುಮ್ಮಿಕ್ಕುತ್ತದೆ. ಶಿವನ ಸಮುದ್ರದ ಬಳಿ ಕಾವೇರಿ ೧೧೦ ಮೀ. ಎತ್ತರದಿಂದ ಗಗನ ಚುಕ್ಕಿ , ಭರ ಚುಕ್ಕಿ ಜಲಪಾತಗಳಾಗಿ ದುಮ್ಮಿಕ್ಕುತ್ತಿದೆ . ನದಿ ನೀರು ಕಡೆಯುವ ಭೂ ಲಕ್ಷಣಗಳಲ್ಲಿ ಕಂದಕಗಳು ಬಹು ಮುಖ್ಯವಾದವು ಕೊಚ್ಚಿ ನೂರಾರು ಮೀ. ಆಳದ ಕಂದಕ ನಿರ್ಮಿಸಿದೆ . ಉತ್ತರ ಅಮೇರಿಕಾದ ಕೊಲರಡೋ ನದಿ ೩೦೦ ಕಿ.ಮೀ. ಉದ್ದದ ೧೫ ಕಿ.ಮೀ. ಅಗಲದ ೧೫೦೦ ಮೀ. ಆಳದ ಮಹಾ ಕಂದಕವನ್ನು ನಿರ್ಮಿಸಿದೆ. ಈ ನದಿ ಹರಿಯುವ ಪಾತ್ರದುದ್ದಕ್ಕೂ ಸ್ತರರೂಪದ ಶಿಲೆಗಳಿರುವುದರಿಂದ ಬೇಗನೆ ನೆಲ ಸವೆದು ಕಂದಕವಾಗಿದೆ . ಇದನ್ನು 'ಗ್ರಾಂಡ್ ಕ್ಯಾಮಿಯ 'ಎಂಬ ಹೆಸರಿನಿಂದ ಕರೆದಿದ್ದಾರೆ . ಭೂಭಾಗ ಏರುಪೇರಾದಾಗ ನದಿಗಳು ಹೊಸದಾಗಿ ಆಕ್ರಮಣ ಮಾಡಲು ಅನುಕೂಲಕಾರಿ . ಪ್ರತಿ ವರ್ಷವೂ ಭೂಮಿಯ ಮೇಲ್ಮೈ ಣೀಮಧ ೨೦೦೦ ಕೋಟಿ ಟನ್ ಶಿಲಾವಸ್ತುವನ್ನು ನದಿಗಳು ಕೊಚ್ಚಿ ಸಾಗಿಸಿ ಸಾಗರಕ್ಕೆ ಸೇರಿಸುತ್ತಿವೆ. ೧೦೦೦೦ ವರ್ಷಗಳ ಅವಧಿಯಲ್ಲಿ ನದಿ ನೀರಿನಿಂದ ಭೂಮಿಯ ೩.೧೩ ಸೆಂ.ಮಿ. ನೆಲ ಕೊಚ್ಚಿ ಹೋಗಿ ಸಾಗರದ ಪಾಲಾಗುತ್ತಿದೆಯೆಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ . ಮಿಸ್ಸಿಸಿಪಿ ನದಿಯೊಂದೇ ವಾರ್ಷಿಕ ೫.೧೬ ಕೋಟಿ ಟನ್ ಶಿಲೆ ಮಣ್ಣು ಮತ್ತು ಮೆಕ್ಕಲನ್ನು ಕೊಚ್ಚಿ ಸಾಗಿಸುತ್ತಿದೆ ಎಂದು ಲೆಕ್ಕಹಾಕಲಾಗಿದೆ. ಬ್ರಹ್ಮಪುತ್ರನದಿಯ ಗೌಹತಿಯ ಬಳಿ ದಿನವೊಂದರಲ್ಲಿ ೨೧ ಲಕ್ಷ ಟನ್ ಹೂಳನ್ನು ಸಾಗಿಸುತ್ತದೆ. ಗಂಗಾ ನದಿ ಸೃಷ್ಟಿಸಿರುವ ಮೆಕ್ಕಲಾ ಸಾಗರ ತಳ ಸೇರಿ ಶ್ರೀಲಂಕದವರೆಗೂ ಹಬ್ಬಿದೆ .