ಬ್ರಹ್ಮಾಂಡ

(ನಕ್ಷತ್ರಕೂಟ ಇಂದ ಪುನರ್ನಿರ್ದೇಶಿತ)

ಗುರುತ್ವಾಕರ್ಷಣದಿಂದ ಒಟ್ಟಾಗಿರುವ ಅನೇಕ ನಕ್ಷತ್ರಗಳು, ಅವುಗಳ ಮಧ್ಯೆ ಇರುವ ವಾಯು, ಧೂಳು ಮತ್ತು ಅಜ್ಞಾತ ಕಪ್ಪು ದ್ರವ್ಯದ (en:Dark Matter) ಬೃಹತ ಗಾತ್ರದ ಸಮೂಹ -ಬ್ರಹ್ಮಾಂಡ; ನಕ್ಷತ್ರಗಳ ಗುಂಪು ಎರಡು ಅಥವಾ ಹೆಚ್ಚು ನಕ್ಷತ್ರಗಳ ಗುಂಪಿಗೆ ನಕ್ಷತ್ರಪುಂಜಗಳು; (ನಕ್ಷತ್ರಕೂಟ:ಉಪಯೋಗದಲ್ಲಿಲ್ಲ - ಜಾತಕ ತಾಳೆ ನೋಡುವಾಗ ಮಾತ್ರಾ ಉಪಯೋಗಿಸುವರು) ಅಥವಾ ತಾರಾಗಣವು ಕೆಲವೇ ನಕ್ಷತ್ರಗಳ ಒಂದು ಗುಂಪು ಎಂದು ಹೆಸರು. ಈ ನಕ್ಷತ್ರಕೂಟಗಳಲ್ಲಿ ಸಾಮಾನ್ಯವಾಗಿ ೧೦ ಮಿಲಿಯನ್ ಇಂದ ೧ ಟ್ರಿಲಿಯನ್ ನಕ್ಷತ್ರಗಳು ಒಂದೇ ಗುರುತ್ವದ ಕೇಂದ್ರಬಿಂದುವಿನ ಸುತ್ತ ಪ್ರದಕ್ಷಣೆ ಮಾಡುತ್ತವೆ. ಸೂರ್ಯ ಮತ್ತು ಸೌರಮಂಡಲ ಇರುವ ನಕ್ಷತ್ರಕೂಟದ ಹೆಸರು ಆಕಾಶಗಂಗೆ.

ಒಂದು ಮರುಸುತ್ತಿನ ಆಕಾರದ ನಕ್ಷತ್ರಪುಂಜ NGC 4414ಹಬ್ಬಲ್ ದೂರದರ್ಶಕದ ಚಿತ್ರ. ಕೃಪೆ:ನಾಸಾ/ಇಎಸ್‍ಎ

'ನಕ್ಷತ್ರಕೂಟ'ದ ಬದಲಿಗೆ

  • ಬ್ರಹ್ಮಾಂಡ ಅಥವಾ ನಿಹಾರಿಕೆ (Galaxy)
  • ನಾವು ಇರುವ ಬ್ರಹ್ಮಾಂಡಕ್ಕೆ ಆಕಾಶಗಂಗೆ ಎಂದು ಹೆಸರು ಇಂಗ್ಲಿಷ್'ನಲ್ಲಿ 'ಮಿಲ್ಕೀ ವೇ', ಎನ್ನುವರು ಅದನ್ನು ಕನ್ನಡಕ್ಕೆ ಕ್ಷೀರಪಥಎಂದು ಅನುವಾದಿಸಲಾಗಿದೆ. (ನಕ್ಷತ್ರಕೂಟ ಎಂಬ ಪದವಿಲ್ಲ; ಅದರ ಬದಲು ಖಗೋಲ ಶಾಸ್ತ್ರ ಪ್ರವೇಶಿಕೆ 'ಜಗತ್ತುಗಳ ಹುಟ್ಟು ಸಾವು', ಪುಸ್ತಕದಲ್ಲಿ 'ನಕ್ಷತ್ರಗುಚ್ಛ' ಎಂಬ ಪದ ಉಪಯೋಗಿಸಿದ್ದಾರೆ).