ನಕಲಿಸುವಿಕೆ

(ನಕಲು ಇಂದ ಪುನರ್ನಿರ್ದೇಶಿತ)

ನಕಲಿಸುವಿಕೆ ಮಾಹಿತಿ ಅಥವಾ ಕೃತಿಯ ಕೇವಲ ಒಂದು ನಿದರ್ಶನವನ್ನು ಆಧರಿಸಿ, ಆ ಮಾಹಿತಿ ಅಥವಾ ಕೃತಿಯ ಪ್ರತಿ ಮಾಡುವಿಕೆ, ಮತ್ತು ಇದು ಆ ಮಾಹಿತಿ/ಕೃತಿಯನ್ನು ಮೂಲತಃ ರಚಿಸಿದ ಪ್ರಕ್ರಿಯೆಯನ್ನು ಬಳಸುವುದಿಲ್ಲ. ಮಾಹಿತಿಯ ಸಾದೃಶ್ಯಕ ರೂಪಗಳಲ್ಲಿ, ನಕಲಿಸುವಿಕೆ ಕೇವಲ ಸೀಮಿತ ಮಟ್ಟದ ನಿಖರತೆಗೆ ಸಂಭವವಿದೆ, ಮತ್ತು ಇದು ಬಳಸಲಾದ ಉಪಕರಣದ ಗುಣಮಟ್ಟ ಮತ್ತು ನಿರ್ವಾಹಕನ ಕೌಶಲವನ್ನು ಆಧರಿಸಿದೆ. ಮೂಲದಿಂದ ನಕಲಿಗೆ ಸ್ವಲ್ಪ ಅನಿವಾರ್ಯ ಕ್ಷೀಣಿಸುವಿಕೆ ಮತ್ತು ಸದ್ದಿನ (ಯಾದೃಚ್ಛಿಕ ಸಣ್ಣ ಬದಲಾವಣೆಗಳು) ಸೇರಿಕೆ ಇರುತ್ತದೆ; ನಕಲಿನ ಕ್ರಮಾಗತ ನಿರ್ಮಾಣಗಳನ್ನು ಮಾಡಿದಾಗ, ಈ ಕ್ಷೀಣಿಸುವಿಕೆ ಪ್ರತಿ ನಿರ್ಮಾಣದೊಂದಿಗೆ ಶೇಖರಿಸುತ್ತದೆ. ಮಾಹಿತಿಯ ಅಂಕೀಯ ರೂಪಗಳೊಂದಿಗೆ, ನಕಲಿಸುವಿಕೆ ನಿಖರವಾಗಿರುತ್ತದೆ. ಕಂಪ್ಯೂಟರ ಬಳಕೆದಾರ ಆಯ್ಕೆಮಾಡಿ ತಾನು ಬಯಸಿದ ಪ್ರದೇಶಕ್ಕೆ ನಕಲಿಸುವ ಮಾಹಿತಿಗೆ ನಕಲಿಸು ಮತ್ತು ಅಂಟಿಸು ವಿಧಾನವನ್ನು ಆಗಾಗ್ಗೆ ಬಳಸಲಾಗುತ್ತದೆ.

ದತ್ತಾಂಶದ ಪ್ರತಿ ಓದಿಕೆಗೆ ಕೇವಲ ಒಂದು ಬಗೆಯ ಸಂಭಾವ್ಯ ವ್ಯಾಖ್ಯಾನವಿರುತ್ತದೆ, ಮತ್ತು ದತ್ತಾಂಶದ ಒಂದು ವ್ಯಾಖ್ಯಾನವನ್ನು ಬರೆಯಲು ಕೇವಲ ಒಂದು ಸಂಭಾವ್ಯ ರೀತಿಯಿರುತ್ತದೆ ಎಂಬ ತತ್ವವನ್ನು ಬಹುತೇಕ ಉನ್ನತ-ನಿಖರತೆಯ ನಕಲಿಸುವಿಕೆ ತಂತ್ರಗಳು ಬಳಸುತ್ತವೆ.

ದೃಶ್ಯ ಕಲೆಯಲ್ಲಿ, ವರ್ಣಚಿತ್ರ ಬರೆಯುವುದು ಮತ್ತು ಶಿಲ್ಪ ನಿರ್ಮಿಸುವುದನ್ನು ಕಲಿಯಲು ಪ್ರವೀಣರ ಕೃತಿಗಳನ್ನು ವಿದ್ಯಾರ್ಥಿಗಳು ನಕಲುಮಾಡುವುದು ಒಂದು ರೂಢಿಯಲ್ಲಿರುವ ರೀತಿಯಾಗಿದೆ. ಶಿಲ್ಪಕಲೆಯಲ್ಲಿ, ನಕಲುಗಳನ್ನು ಹಲವುವೇಳೆ ತೋರುಗಡ್ಡಿ ಯಂತ್ರ, ಪ್ಯಾಂಟೋಗ್ರಾಫ಼್, ಅಥವಾ ಒಂದು ಮಾದರಿಯನ್ನು ಶೋಧಿಸುವ ಮತ್ತು ಅದನ್ನು ವಿವಿಧ ವಸ್ತುಗಳಲ್ಲಿ ಮತ್ತು ಯಾವುದೇ ಅಪೇಕ್ಷಿತ ಗಾತ್ರದಲ್ಲಿ ಉತ್ಪಾದಿಸುವ ಗಣಕಯಂತ್ರ ನಿರ್ದೇಶಿತ ರೌಟರ್ ವ್ಯವಸ್ಥೆಗಳಂತಹ ಸಾಧನಗಳನ್ನು ಬಳಸಿ ಮಾಡಲಾಗಿದೆ.[] ಮೇಣ ಎರಕಹೊಯ್ಯುವಿಕೆ ಮತ್ತು ಅಚ್ಚೊತ್ತುವಿಕೆಯ ಇತರ ರೂಪಗಳು ಮೂರು ಆಯಾಮದ ಕೃತಿಗಳನ್ನು ನಕಲಿಸುವ ಮತ್ತೊಂದು ಬಗೆ.

ಉಲ್ಲೇಖಗಳು

ಬದಲಾಯಿಸಿ
  1. "David Petry: Body Scans a Big Step in Replacing Courthouse Sculpture". Archived from the original on 2013-02-24. Retrieved 2017-04-17.