ಅಚ್ಚೊತ್ತುವಿಕೆ ಅಚ್ಚು ಎಂದು ಕರೆಯಲ್ಪಡುವ ಗಡುಸಾದ ಚೌಕಟ್ಟನ್ನು ಬಳಸಿ ದ್ರವ ಅಥವಾ ಬಾಗಿಸಬಹುದಾದ ಕಚ್ಚಾ ವಸ್ತುವಿಗೆ ಆಕಾರ ಕೊಡುವ ತಯಾರಿಕೆಯ ಪ್ರಕ್ರಿಯೆ. ಈ ಅಚ್ಚನ್ನು ಸ್ವತಃ ಅಂತಿಮ ವಸ್ತುವಿನ ರೂಪಿಕೆ ಅಥವಾ ಮಾದರಿ ಬಳಸಿ ತಯಾರಿಸಿರಬಹುದು.

ಈಟಿಯ ತುದಿಗಳನ್ನು ತಯಾರಿಸಲು ಬಳಸಲಾದ ಕಂಚಿನ ಯುಗದ ಕಲ್ಲಿನ ಅಚ್ಚು.

ಅಚ್ಚು ದ್ರವ ಅಥವಾ ಪ್ಲಾಸ್ಟಿಕ್, ಗಾಜು, ಲೋಹ, ಅಥವಾ ಪಿಂಗಾಣಿಯ ಕಚ್ಚಾ ವಸ್ತುವಿನಂತಹ ಬಾಗಿಸಬಹುದಾದ ವಸ್ತುವಿನಿಂದ ತುಂಬಲಾಗುವ ಕುಳಿ ಹೊಂದಿರುವ ತುಂಡು. ದ್ರವವು ಅಚ್ಚಿನ ಒಳಗೆ ಗಟ್ಟಿಯಾಗುತ್ತದೆ ಅಥವಾ ಘನೀಕರಿಸುತ್ತದೆ, ಮತ್ತು ಅದರ ಆಕಾರವನ್ನು ಪಡೆಯುತ್ತದೆ. ಅತ್ಯಂತ ಸಾಮಾನ್ಯ ದ್ವಿಕವಾಟ ಅಚ್ಚೊತ್ತುವಿಕೆ ಪ್ರಕ್ರಿಯೆಯು ಎರಡು ಅಚ್ಚುಗಳನ್ನು ಬಳಸುತ್ತದೆ, ವಸ್ತುವಿನ ಪ್ರತಿ ಅರ್ಧ ಭಾಗಕ್ಕೆ ಒಂದು. ತುಂಡು ಅಚ್ಚೊತ್ತುವಿಕೆ ಹಲವಾರು ವಿಭಿನ್ನ ಅಚ್ಚುಗಳನ್ನು ಬಳಸುತ್ತದೆ, ಮತ್ತು ಪ್ರತಿ ಅಚ್ಚು ಒಂದು ಸಂಕೀರ್ಣ ವಸ್ತುವಿನ ಒಂದು ಭಾಗವನ್ನು ನಿರ್ಮಿಸುತ್ತದೆ. ಇದನ್ನು ಸಾಮಾನ್ಯವಾಗಿ ಕೇವಲ ಹೆಚ್ಚು ದೊಡ್ಡ ಮತ್ತು ಹೆಚ್ಚು ಬೆಲೆಬಾಳುವ ವಸ್ತುಗಳಿಗೆ ಬಳಸಲಾಗುತ್ತದೆ.

ಅಚ್ಚುಗಳನ್ನು ತಯಾರಿಸುವ ನಿರ್ಮಾತೃವನ್ನು ಅಚ್ಚು ತಯಾರಕನೆಂದು ಕರೆಯಲಾಗುತ್ತದೆ. ಗಟ್ಟಿಯಾದ/ಘನೀಕೃತ ಪದಾರ್ಥವನ್ನು ಅಚ್ಚಿನಿಂದ ಬಿಡುಗಡೆಗೊಳಿಸುವುದನ್ನು ಸುಲಭ ಮಾಡಲು ಒಂದು ಬಿಡುಗಡೆ ಪದಾರ್ಥವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಅಚ್ಚು ಮಾಡಿದ ಪ್ಲಾಸ್ಟಿಕ್‍ಗಳ ಸಾಮಾನ್ಯ ಬಳಕೆಗಳು ಅಚ್ಚು ಮಾಡಿದ ಪೀಠೋಪಕರಣ, ಅಚ್ಚು ಮಾಡಿದ ಮನೆ ಸಾಮಗ್ರಿಗಳು, ಅಚ್ಚು ಮಾಡಿದ ಪೆಟ್ಟಿಗೆಗಳು, ಮತ್ತು ನಿರ್ಮಾಣ ವಸ್ತುಗಳನ್ನು ಒಳಗೊಂಡಿವೆ.