ನಂದು ಮಹಾದೇವ್ ನಾಟೆಕರ್
ನಂದು ಎಂ. ನಾಟೇಕರ್ (೧೨ ಮೇ ೧೯೩೩[೧][೨] - ೨೮ ಜುಲೈ ೨೦೨೧) ಇವರು ಭಾರತದ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದಾರೆ.
ಜನನ
ಬದಲಾಯಿಸಿನಂದು ಮಹಾದೇವ್ ನಾಟೆಕರ್ ಅವರು ೧೨ ಮೇ ೧೯೩೩ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದರು.
ವೃತ್ತಿ
ಬದಲಾಯಿಸಿನಾಟೇಕರ್ ಅವರ ೧೫ ವರ್ಷಗಳ ವೃತ್ತಿಜೀವನದಲ್ಲಿ ೧೦೦ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.[೩] ಇವರು ೧೯೫೬ರಲ್ಲಿ ವಿದೇಶದಲ್ಲಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾಗಿದ್ದರು.[೪][೫] ನಾಟೇಕರ್ ಅವರು ನಾಟೇಕರ್ ಸ್ಪೋರ್ಟ್ಸ್ ಮತ್ತು ಫಿಟ್‌ನೆಸ್(ಎನ್‌ಎಸ್‌ಎಫ್)ನ ನಿರ್ದೇಶಕರಾಗಿದ್ದರು.
ಇವರು ಪುರುಷರ ಡಬಲ್ಸ್ ರಾಷ್ಟ್ರೀಯ ಚಾಂಪಿಯನ್‌ಶಿಪ್ ಅನ್ನು ಒಟ್ಟು ಆರು ಬಾರಿ,[೬] ಪುರುಷರ ಸಿಂಗಲ್ಸ್ ರಾಷ್ಟ್ರೀಯ ಚಾಂಪಿಯನ್‌ಶಿಪ್ ಅನ್ನು ಒಟ್ಟು ಆರು ಬಾರಿ[೭] ಮತ್ತು ಮಿಶ್ರ ಡಬಲ್ಸ್ ರಾಷ್ಟ್ರೀಯ ಚಾಂಪಿಯನ್‌ಶಿಪ್ ಅನ್ನು ಒಟ್ಟು ಐದು ಬಾರಿ ಗೆದ್ದಿದ್ದಾರೆ.[೮]
ನಾಟೇಕರ್ ಇವರು ಮುಂಬೈನ ರಾಮ್‌ನಾರಾಯಣ್ ರುಯಾ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದರು.[೯] ಅವರ ಮಗ ಗೌರವ್ ನಾಟೇಕರ್ ಟೆನಿಸ್‌ನಲ್ಲಿ ಏಳು ಬಾರಿ ಭಾರತದ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ.[೧೦]
ನಿಧನ
ಬದಲಾಯಿಸಿನಾಟೇಕರ್ ಅವರು ೨೮ ಜುಲೈ ೨೦೨೧ ರಂದು ಪುಣೆಯಲ್ಲಿ ನಿಧನರಾದರು. ಆಗ ಅವರಿಗೆ ೮೮ ವರ್ಷ.[೧೧][೧೨]
ಸಾಧನೆಗಳು
ಬದಲಾಯಿಸಿ- ಭಾರತದಲ್ಲಿ ರಾಷ್ಟ್ರೀಯ ಮಟ್ಟದ ಪುರುಷರ ಸಿಂಗಲ್ಸ್ ಚಾಂಪಿಯನ್‌ಶಿಪ್ , ಡಬಲ್ಸ್ ಚಾಂಪಿಯನ್‌ಶಿಪ್ ಮತ್ತು ಮಿಶ್ರ ಡಬಲ್ಸ್ ಚಾಂಪಿಯನ್‌ಶಿಪ್ ಅನ್ನು ಅನೇಕ ಬಾರಿ ಗೆದ್ದಿದ್ದಾರೆ.[೩][೧೩]
- ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಇವರು ಕೊನೆಯ ೮ನೇ ಸ್ಥಾನಕ್ಕೆ ತಲುಪಿದ್ದಾರೆ.
- ೧೯೫೪-೫೫ರ ಥಾಮಸ್ ಕಪ್ ಸರಣಿಯ ಸಮಯದಲ್ಲಿ ಮಲೇಷ್ಯಾದಲ್ಲಿ ಪ್ರಕಟಿಸಿದ ಸ್ಮರಣಿಕೆಯನ್ನು 'ದಿ ಗ್ರೇಟ್‌ಗಳಲ್ಲಿ' ಸೇರಿಸಲಾಗಿದೆ.[೧೪]
- ೧೯೬೧ ರಲ್ಲಿ ಭಾರತದ ಅತ್ಯಂತ ಜನಪ್ರಿಯ ಕ್ರೀಡಾಪಟು ಎಂದು ಪ್ರಸಿದ್ಧರಾಗಿದ್ದರು.[೩]
- ನಾಟೇಕರ್ ಮತ್ತು ಮೀನಾ ಶಾ ಅವರು ೧೯೬೨ ರಲ್ಲಿ ಬ್ಯಾಂಕಾಕ್‌ನ ಕಿಂಗ್ಸ್ ಕಪ್ ಇಂಟರ್ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು ಮತ್ತು ೧೯೬೩ರ ಅದೇ ಸಮಾರಂಭದಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.[೪]
- ೧೯೬೬ ರಲ್ಲಿ ಜಮೈಕಾದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದರು.[೧೪]
- ೧೯೮೯ ರಲ್ಲಿ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ನಿಂದ ಮೆರಿಟೋರಿಯಸ್ ಸರ್ವೀಸ್ ಅವಾರ್ಡ್ ಅನ್ನು ನೀಡಲಾಯಿತು.[೧೫]
- ೧೯೯೧ ರಲ್ಲಿ ಮಾರಿಷಸ್‌ನ ಜಗತಿಕ್ ಮರಾಠಿ ಪರಿಷತ್ತಿನಲ್ಲಿ ಸನ್ಮಾನಿಸಲಾಯಿತು.[೧೪]
- ಜನವರಿ ೨೦೦೧ ರಲ್ಲಿ ಭಾರತದ ಪೆಟ್ರೋಲಿಯಂ ಕ್ರೀಡಾ ನಿಯಂತ್ರಣ ಮಂಡಳಿಯಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು.[೧೬]
- ೨೦೦೨ರಲ್ಲಿ ಸಹ್ಯಾದ್ರಿ ನವರತ್ನ ಪುರಸ್ಕಾರ ಪ್ರಶಸ್ತಿಯನ್ನು ನೀಡಲಾಯಿತು.[೧೪]
ಉಲ್ಲೇಖಗಳು
ಬದಲಾಯಿಸಿ- ↑ "Reference India: M-R". 2003.
- ↑ "Nandu Natekar, India's first badminton hero, passes away | Badminton News – Times of India".
- ↑ ೩.೦ ೩.೧ ೩.೨ "Natekar.com". Archived from the original on 7 February 2005. Retrieved 25 December 2007.
- ↑ ೪.೦ ೪.೧ PIB.NIC.IN
- ↑ WebIndia123
- ↑ In the years 1955,1956,1958,1960,1961,1963 – Badminton India Archives – Men's Doubles
- ↑ In the years 1953,1954,1958,1960,1961,1965 – Badminton India Archives – Men's Singles
- ↑ In the years 1953,1954,1961,1966,1970 – Badminton India Archives – Mixed Doubles
- ↑ "Ruia College – Awards and Distinctions". Archived from the original on 5 January 2008. Retrieved 25 December 2007.
- ↑ Indian Express (newspaper)[permanent dead link]
- ↑ Scroll Staff. "Indian badminton legend Nandu Natekar dies at 88". Scroll.in (in ಅಮೆರಿಕನ್ ಇಂಗ್ಲಿಷ್). Retrieved 28 July 2021.
- ↑ "Indian badminton great Nandu Natekar passes away". www.telegraphindia.com. Retrieved 28 July 2021.
- ↑ Badminton India Archives – Individual Championships
- ↑ ೧೪.೦ ೧೪.೧ ೧೪.೨ ೧೪.೩ Indiantelevision.com
- ↑ Badminton India Archives – Awards
- ↑ "The Hindu (newspaper)". Archived from the original on 4 March 2007. Retrieved 25 December 2007.
{{cite web}}
: CS1 maint: unfit URL (link)