ದ ಲಾರ್ಡ್ ಆಫ಼್ ದ ರಿಂಗ್ಸ್: ದ ರಿಟರ್ನ್ ಆಫ಼್ ದ ಕಿಂಗ್ (ಚಲನಚಿತ್ರ)
ದ ಲಾರ್ಡ್ ಆಫ಼್ ದ ರಿಂಗ್ಸ್: ದ ರಿಟರ್ನ್ ಆಫ಼್ ದ ಕಿಂಗ್ ೨೦೦೩ರ ಒಂದು ಬೃಹತ್ ಕಾಲ್ಪನಿಕ ಸಾಹಸಮಯ ಚಲನಚಿತ್ರ. ಇದನ್ನು ಪೀಟರ್ ಜ್ಯಾಕ್ಸನ್ ನಿರ್ದೇಶಿಸಿದ್ದಾರೆ. ಇದು ಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್ರ ದಿ ಲಾರ್ಡ್ ಆಫ್ ದಿ ರಿಂಗ್ಸ್‌ನ ಮೂರನೇ ಸಂಪುಟದ ಮೇಲೆ ಆಧಾರಿತವಾಗಿದೆ. ಈ ಚಲನಚಿತ್ರವು ದ ಲಾರ್ಡ್ ಆಫ಼್ ದ ರಿಂಗ್ಸ್ ಚಿತ್ರತ್ರಯದ ಮೂರನೇ ಭಾಗವಾಗಿದೆ. ಈ ಚಿತ್ರವನ್ನು ಬ್ಯಾರಿ ಎಂ. ಆಸ್ಬಾರ್ನ್, ಜ್ಯಾಕ್ಸನ್ ಹಾಗೂ ಫ಼್ರ್ಯಾನ್ ವಾಲ್ಷ್ ನಿರ್ಮಿಸಿದ್ದಾರೆ ಮತ್ತು ವಾಲ್ಷ್, ಫ಼ಿಲಿಪಾ ಬಾಯೆನ್ಸ್ ಹಾಗೂ ಜ್ಯಾಕ್ಸನ್ ಬರೆದಿದ್ದಾರೆ. ಈ ಚಿತ್ರವು ಅಲೈಜಾ ವುಡ್, ಇಯನ್ ಮೆಕೆಲನ್, ಲಿವ್ ಟೈಲರ್, ವೀಗೊ ಮಾರ್ಟನ್ಸನ್, ಶಾನ್ ಆ್ಯಸ್ಟಿನ್, ಕೇಟ್ ಬ್ಲ್ಯಾಂಚೆಟ್, ಜಾನ್ ರೀಸ್ ಡೇವಿಸ್, ಬರ್ನಾರ್ಡ್ ಹಿಲ್, ಬಿಲಿ ಬಾಯ್ಡ್, ಡೊಮಿನಿಕ್ ಮೊನೆಹನ್, ಒರ್ಲ್ಯಾಂಡೊ ಬ್ಲೂಮ್, ಹ್ಯೂಗೊ ವೀವಿಂಗ್, ಮಿರಾಂಡಾ ಒಟೊ, ಡೇವಿಡ್ ವೆನಮ್, ಕಾರ್ಲ್ ಅರ್ಬನ್, ಜಾನ್ ನೋಬಲ್, ಆ್ಯಂಡಿ ಸರ್ಕೀಸ್, ಇಯನ್ ಹೋಮ್ ಹಾಗೂ ಶಾನ್ ಬೀನ್ ಸೇರಿದಂತೆ ಸಮೂಹ ಪಾತ್ರವರ್ಗವನ್ನು ಹೊಂದಿದೆ. ಇದರ ಮುಂಚಿನ ಭಾಗಗಳೆಂದರೆ ದ ಫ಼ೆಲೊಷಿಪ್ ಆಫ಼್ ದ ರಿಂಗ್ (೨೦೦೧) ಮತ್ತು ದ ಟೂ ಟವರ್ಸ್ (೨೦೦೨).
ದ ಲಾರ್ಡ್ ಆಫ಼್ ದ ರಿಂಗ್ಸ್: ದ ರಿಟರ್ನ್ ಆಫ಼್ ದ ಕಿಂಗ್ | |
---|---|
ನಿರ್ದೇಶನ | ಪೀಟರ್ ಜ್ಯಾಕ್ಸನ್ |
ನಿರ್ಮಾಪಕ |
|
ಚಿತ್ರಕಥೆ |
|
ಆಧಾರ | ಜೆ. ಆರ್. ಆರ್. ಟೊಲ್ಕೀನ್‍ರ ದ ರಿಟರ್ನ್ ಆಫ಼್ ದ ಕಿಂಗ್ ಮೇಲೆ ಆಧಾರಿತ |
ಪಾತ್ರವರ್ಗ |
|
ಸಂಗೀತ | ಹಾವರ್ಡ್ ಶೋರ್ |
ಛಾಯಾಗ್ರಹಣ | ಆ್ಯಂಡ್ರ್ಯೂ ಲೆಸ್ನೀ |
ಸಂಕಲನ | ಜೇಮಿ ಸರ್ಕಿರ್ಕ್ |
ವಿತರಕರು | ನ್ಯೂ ಲೈನ್ ಸಿನೆಮಾ[೧] |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | 200 ನಿಮಿಷಗಳು[೨] 252 ನಿಮಿಷಗಳು (extended)[೩] |
ದೇಶ | |
ಭಾಷೆ | ಇಂಗ್ಲಿಷ್ |
ಬಂಡವಾಳ | $94 ಮಿಲಿಯನ್[೮] |
ಬಾಕ್ಸ್ ಆಫೀಸ್ | $1.120 ಬಿಲಿಯನ್[೮] |
ದ ರಿಟರ್ನ್ ಆಫ಼್ ದ ಕಿಂಗ್ ಚಿತ್ರಕ್ಕೆ ಅಮೇರಿಕದ ನಿರ್ಮಾಣಶಾಲೆ ನ್ಯೂ ಲೈನ್ ಸಿನೆಮಾ ಬಂಡವಾಳ ಒದಗಿಸಿ ಅದನ್ನು ವಿತರಿಸಿತು. ಆದರೆ ಚಿತ್ರೀಕರಣ ಮತ್ತು ಸಂಕಲನ ಸಂಪೂರ್ಣವಾಗಿ ಜ್ಯಾಕ್ಸನ್‍ರ ತವರಾದ ನ್ಯೂ ಜೀಲ್ಯಾಂಡ್‍ನಲ್ಲಿ ಚಿತ್ರತ್ರಯದ ಇತರ ಎರಡು ಭಾಗಗಳೊಂದಿಗೆ ಏಕಕಾಲದಲ್ಲಿ ನಡೆಯಿತು. ೧೭ ಡಿಸೆಂಬರ್ ೨೦೦೩ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ವಿಮರ್ಶಕರು ಮತ್ತು ಅಭಿಮಾನಿಗಳು ಸಮಾನವಾಗಿ ಮೆಚ್ಚಿದರು. ಇದನ್ನು ಚಿತ್ರತಯಾರಿಕೆಯಲ್ಲಿ ಒಂದು ಮೈಲಿಗಲ್ಲು ಮತ್ತು ಕಲ್ಪನಾ ಚಿತ್ರ ಪ್ರಕಾರದಲ್ಲಿ ಒಂದು ಸಾಧನೆ ಎಂದು ಪರಿಗಣಿಸಲಾಗಿದೆ. ಈ ಚಿತ್ರವು ವಿಶ್ವಾದ್ಯಂತ $1.120 ಬಿಲಿಯನ್‍ಗಿಂತ ಹೆಚ್ಚು ಹಣವನ್ನು ಸಂಪಾದಿಸಿದೆ. ಇದು ೨೦೦೩ರ ಅತಿ ಹೆಚ್ಚು ಹಣಗಳಿಸಿದ ಚಿತ್ರವಾಗಿತ್ತು.[೯]
ದ ರಿಟರ್ನ್ ಆಫ಼್ ದ ಕಿಂಗ್ ಸಾರ್ವಕಾಲಿಕವಾಗಿ ತಯಾರಾದ ಅತ್ಯುತ್ತಮ ಹಾಗೂ ಅತ್ಯಂತ ಪ್ರಭಾವಿ ಕಲ್ಪನಾ ಚಿತ್ರಗಳಲ್ಲಿ ಒಂದು ಎಂದು ವ್ಯಾಪಕವಾಗಿ ಪರಿಗಣಿತವಾಗಿದೆ. ಈ ಚಲನಚಿತ್ರವು ೭೬ನೇ ಅಕ್ಯಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ನಾರ್ಮನಿರ್ದೇಶನಗೊಂಡಿದ್ದ ಎಲ್ಲ ೧೧ ವರ್ಗಗಳಲ್ಲೂ ಪ್ರಶಸ್ತಿ ಗೆಲ್ಲುವುದರ ಜೊತೆಗೆ ಅನೇಕ ಪ್ರಶಸ್ತಿಗಳನ್ನು ಗೆದ್ದಿತು. ಒಂದೇ ಚಲನಚಿತ್ರವು ಅತಿ ಹೆಚ್ಚು ಅಕ್ಯಾಡೆಮಿ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ಸರಿಗಟ್ಟಿತು ಮತ್ತು ಅಕ್ಯಾಡೆಮಿ ಪ್ರಶಸ್ತಿಗಳ ಅತ್ಯಂತ ಹೆಚ್ಚಿನ ಸಂಭಾವ್ಯ ಪ್ರಶಸ್ತಿಗಳ ಗೆಲುವಿನ ದಾಖಲೆಯನ್ನು ನಿರ್ಮಿಸಿತು.
ಕಥಾವಸ್ತು
ಬದಲಾಯಿಸಿಇಬ್ಬರು ಹಾಬಿಟ್‍ಗಳಾದ ಸ್ಮೀಗಲ್ ಮತ್ತು ಡೀಗಲ್ ಮೀನು ಹಿಡಿಯುತ್ತಿರುತ್ತಾರೆ. ಆಗ ನದಿಯಲ್ಲಿ ಡೀಗಲ್‍ಗೆ ವನ್ ರಿಂಗ್ ಸಿಗುತ್ತದೆ. ಸ್ಮೀಗಲ್ ಉಂಗುರದಿಂದ ಬಂಧನಕ್ಕೆ ಸಿಕ್ಕಿಹಾಕಿಕೊಂಡು ಅದಕ್ಕಾಗಿ ತನ್ನ ಗೆಳೆಯನನ್ನು ಸಾಯಿಸುತ್ತಾನೆ. ಉಂಗುರವು ಅವನ ದೇಹ ಮತ್ತು ಮನಸ್ಸನ್ನು ತಿರುಚಿದಂತೆ ಅವನು ಮಂಜಿನ ಬೆಟ್ಟಗಳಿಗೆ ಹೋಗುತ್ತಾನೆ, ಮತ್ತು ಅಂತಿಮವಾಗಿ ಗೊಲಮ್ ಎಂಬ ಜೀವಿಯಾಗುತ್ತಾನೆ.
ಶತಮಾನಗಳ ನಂತರ, ಉಂಗುರದ ಯುದ್ಧದ ವೇಳೆಯಲ್ಲಿ, ಗ್ಯಾಂಡ್ಯಾಲ್ಫ್ ಅರಗೊರ್ನ್, ಲೆಗೊಲಾಸ್, ಗಿಮ್ಲಿ ಮತ್ತು ಥಿಯೊಡೆನ್ ರಾಜನನ್ನು ಐಸನ್‍ಗಾರ್ಡ್‌ಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅವರು ಮೆರಿ ಮತ್ತು ಪಿಪಿನ್‍ರೊಂದಿಗೆ ಮತ್ತೆ ಸೇರುತ್ತಾರೆ. ಗ್ಯಾಂಡ್ಯಾಲ್ಫ್ ಸೋತ ಸಾರುಮಾನ್‍ನ ಪ್ಯಾಲಂಟೀರ್‌ನ್ನು ಪಡೆದುಕೊಳ್ಳುತ್ತಾನೆ. ಪಿಪಿನ್ ನಂತರ ನೋಡುವ ಶಿಲೆಯಲ್ಲಿ ವೀಕ್ಷಿಸಿದಾಗ, ಸೌರಾನ್ ಅವನ ಮೇಲೆ ಮನೋಸಂಪರ್ಕದಿಂದ ದಾಳಿ ಮಾಡುತ್ತಾನೆ. ಸೌರಾನ್ ಗೊಂಡೊರ್‌ನ ರಾಜಧಾನಿ ಮಿನಾಸ್ ಟಿರಿತ್ ಮೇಲೆ ದಾಳಿ ಮಾಡುವನು ಎಂದು ಗ್ಯಾಂಡ್ಯಾಲ್ಫ್ ತರ್ಕಿಸುತ್ತಾನೆ. ಗೊಂಡೊರ್‌ನ ಪಾರುಪತ್ಯಗಾರನಾದ ಡೆನೆಥೋರ್‌ಗೆ ಎಚ್ಚರಿಕೆ ನೀಡಲು ತನ್ನೊಂದಿಗೆ ಪಿಪಿನ್‍ನನ್ನು ಕರೆದುಕೊಂಡು ಅಲ್ಲಿಗೆ ಸವಾರಿ ಮಾಡುತ್ತಾನೆ.
ಗೊಲಮ್ ಫ಼್ರೋಡೊ ಬ್ಯಾಗಿನ್ಸ್ ಮತ್ತು ಸ್ಯಾಮ್‍ವೈಸ್ ಗ್ಯಾಮ್ಜಿಯನ್ನು ಮಿನಾಸ್ ಮೊರ್ಗುಲ್‍ಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅವರು ಒಂಬತ್ತು ನಾಜ಼್ಗುಲ್‍ರ ನಾಯಕನಾದ ಮಾಟಗಾರ ರಾಜನು ಆರ್ಕ್‌ಗಳ ಸೇನೆಯನ್ನು ಗೊಂಡೊರ್ ಕಡೆಗೆ ಮುನ್ನಡೆಸುತ್ತಿರುವುದನ್ನು ನೋಡುತ್ತಾರೆ. ಹಾಬಿಟ್‍ಗಳು ರಹಸ್ಯ ದಾರಿಯ ಮೂಲಕ ಮೊರ್ಡೊರ್‌ನೊಳಗೆ ಕರೆದೊಯ್ಯುವ, ಕಡಿಬಂಡೆಯ ಮುಖದಲ್ಲಿ ಕೆತ್ತಿದ ಮೆಟ್ಟಿಲುಗಳನ್ನು ಹತ್ತಲು ಆರಂಭಿಸುತ್ತಾರೆ. ಆದರೆ ಅವರನ್ನು ಸಾಯಿಸಿ ಉಂಗುರವನ್ನು ತೆಗೆದುಕೊಳ್ಳಲು ಗೊಲಮ್ ಯೋಜಿಸಿದ್ದಾನೆಂದು ಅವರಿಗೆ ತಿಳಿದಿರುವುದಿಲ್ಲ. ಮಾಟಗಾರ ರಾಜ ಮತ್ತು ಅವನ ಪಡೆಗಳು ಆಸ್ಗಿಲಿಯಾತ್ ಮೇಲೆರಗಿ ಅದನ್ನು ಧ್ವಂಸಮಾಡುತ್ತಾರೆ. ಹಾಗಾಗಿ, ಫ಼ಾರಮಿರ್ ಮತ್ತು ಅವನ ಕಾವಲುದಂಡು ಮಿನಾಸ್ ಟಿರಿತ್‍ಗೆ ಹಿಮ್ಮೆಟ್ಟುತ್ತದೆ.
ಗೊಲಮ್ ಹಾಬಿಟ್‌ಗಳ ಆಹಾರವನ್ನು ಚೆಲ್ಲಿ ಸ್ಯಾಮ್‍ನನ್ನು ಹೊಣೆಮಾಡುತ್ತಾನೆ. ಸ್ಯಾಮ್ ಉಂಗುರವನ್ನು ಬಯಸುತ್ತಿದ್ದಾನೆಂದು ನಂಬಿ, ಅವನಿಗೆ ಮನೆಗೆ ಹೋಗುವಂತೆ ಫ಼್ರೋಡೊ ಹೇಳುತ್ತಾನೆ. ನಂತರ ಅವನು ಮತ್ತು ಗೊಲಮ್ ಮೊರ್ಡೊರ್‌ಗೆ ಕರೆದೊಯ್ಯುವ ಸುರಂಗಕ್ಕೆ ಮುಂದುವರೆಯುತ್ತಾರೆ. ಅಲ್ಲಿಗೆ ಆಗಮಿಸಿದ ಮೇಲೆ, ಗೊಲಮ್ ಯುಕ್ತಿಮಾಡಿ ಅವನನ್ನು ಬೃಹತ್ ಜೇಡವಾದ ಶೀಲಾಬ್‍ನ ಗವಿಯೊಳಗೆ ಹೋಗುವಂತೆ ಮಾಡುತ್ತಾನೆ. ಫ಼್ರೋಡೊ ಸ್ವಲ್ಪದರಲ್ಲಿ ತಪ್ಪಿಸಿಕೊಂಡು ಗೊಲಮ್‍ನ ಎದುರುಬಂದು, ತಮ್ಮಿಬ್ಬರ ಸಲುವಾಗಿ ತಾನು ಉಂಗುರವನ್ನು ನಾಶಮಾಡಬೇಕೆಂದು ಅವನಿಗೆ ಹೇಳುತ್ತಾನೆ. ಗೊಲಮ್ ಫ಼್ರೋಡೊನ ಮೇಲೆರಗುತ್ತಾನೆ, ಆದರೆ ಒಂದು ಕಮರಿಯಲ್ಲಿ ಬೀಳುತ್ತಾನೆ. ಫ಼್ರೋಡೊ ಮುಂದುವರಿಯುತ್ತಾನೆ, ಆದರೆ ಶೀಲಾಬ್ ಅವನನ್ನು ಕಂಡುಹಿಡಿದು, ನಿಶ್ಚೇಷ್ಟಗೊಳಿಸಿ ಕಟ್ಟಿಹಾಕುತ್ತದೆ. ಆದರೆ, ಸ್ಯಾಮ್ ಆಗಮಿಸಿ ಶೀಲಾಬ್‍ನ್ನು ಗಾಯಗೊಳಿಸಿ ದೂರ ಓಡಿಸುತ್ತಾನೆ. ಆರ್ಕ್‌ಗಳು ಬಂದು ತಮ್ಮೊಂದಿಗೆ ಫ಼್ರೋಡೊನನ್ನು ಕರೆದುಕೊಂಡು ಹೋದಾಗ ಸ್ಯಾಮ್ ಅಡಗಿಕೊಳ್ಳುತ್ತಾನೆ. ಫ಼್ರೋಡೊನ ಮಿತ್ರಿಲ್ ನಡುಗವಚದ ಒಡೆತನಕ್ಕಾಗಿ ಆರ್ಕ್‌ಗಳು ಹೊಡೆದಾಟವನ್ನು ಶುರುಮಾಡುತ್ತಾರೆ. ಆಗ ಫ಼್ರೋಡೊನೊಂದಿಗೆ ತಪ್ಪಿಸಿಕೊಂಡು ತಮ್ಮ ಪ್ರಯಾಣವನ್ನು ಮುಂದುವರಿಸಲು ಸ್ಯಾಮ್‍ಗೆ ಅವಕಾಶ ಸಿಗುತ್ತದೆ.
ಅರಗೊರ್ನ್‌ನೊಂದಿಗೆ ತನ್ನ ಮಗನ ನೋಟವನ್ನು ನೋಡಿದ ನಂತರ ಮಧ್ಯಭೂಮಿಯನ್ನು ತೊರೆಯಲು ನಿರಾಕರಿಸಿದ ಆರ್ವೆನ್ ಸಾಯುತ್ತಿದ್ದಾಳೆಂದು ಎಲ್ರಾಂಡ್‍ನಿಂದ ಅರಗೊರ್ನ್ ತಿಳಿದುಕೊಳ್ಳುತ್ತಾನೆ. ಅವನು ಡನ್‍ಹ್ಯಾರೊನ ಮೃತ ಮನುಷ್ಯರಿಂದ ಹೆಚ್ಚಿನ ಪಡೆಗಳನ್ನು ಪಡೆದು ತನ್ನ ಜನ್ಮಸಿದ್ಧ ಹಕ್ಕನ್ನು ಮತ್ತೆ ಹೊಂದಲು ನೆರವಾಗಲು, ಎಲ್ರಾಂಡ್ ಅರಗೊರ್ನ್‌ಗೆ ಇಸಿಲ್ಡುರ್‌ನ ಕತ್ತಿ ನಾರ್ಸಿಲ್‍ನ ಚೂರುಗಳನ್ನು ಬಡಿದು ಆಕಾರ ನೀಡಲಾದ ಆಂಡುರಿಲ್‍ನ್ನು ಕೊಡುತ್ತಾನೆ. ಲೆಗೊಲಾಸ್ ಮತ್ತು ಗಿಮ್ಲಿ ಜೊತೆಗೆ, ಅರಗೊರ್ನ್ ಮೃತರ ದಾರಿಗಳಿಗೆ ಹೋಗುತ್ತಾನೆ. ಅವರನ್ನು ಇಸಿಲ್ಡುರ್ ಅವರ ಮೇಲೆ ಹಾಕಿದ ಶಾಪದಿಂದ ಬಿಡುಗಡೆ ಮಾಡುವುದಾಗಿ ವಚನನೀಡಿ ಮೃತರ ಸೇನೆಯನ್ನು ಸೇರಿಸಿಕೊಳ್ಳುತ್ತಾನೆ. ಒಸ್ಗಿಲಿಯಾತ್‍ನ್ನು ಪುನಃಪಡೆದುಕೊಳ್ಳುವ ನಿರರ್ಥಕ ಪ್ರಯತ್ನದ ನಂತರ ಫ಼ಾರಾಮಿರ್ ಗಂಭೀರವಾಗಿ ಗಾಯಗೊಳ್ಳುತ್ತಾನೆ; ತನ್ನ ಮಗ ಸತ್ತಿದ್ದಾನೆಂದು ನಂಬಿ, ಡೆನೆಥೋರ್‌ಗೆ ಹುಚ್ಚು ಹಿಡಿಯುತ್ತದೆ. ಗಾಥ್‍ಮಾಗ್‍ನ ನೇತೃತ್ವದಲ್ಲಿನ ಆರ್ಕ್ ಸೇನೆಯ ವಿರುದ್ಧ ನಗರವನ್ನು ರಕ್ಷಿಸಲು ಗ್ಯಾಂಡ್ಯಾಲ್ಫ್ ಮಾತ್ರ ಉಳಿದುಕೊಳ್ಳುತ್ತಾನೆ. ಗಾಥ್‍ಮಾಗ್‍ನ ಸೇನಾಪಡೆಗಳು ನಗರದೊಳಗೆ ಬಲವಂತದಿಂದ ದಾರಿಮಾಡಿಕೊಳ್ಳುತ್ತಿದ್ದಂತೆ, ಡೆನೆಥೋರ್ ತನ್ನನ್ನು ಮತ್ತು ಫ಼ಾರಾಮಿರ್‌ನನ್ನು ಚಿತೆ ಮೇಲೆ ಸಾಯಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಪಿಪಿನ್ ಗ್ಯಾಂಡ್ಯಾಲ್ಫ್‌ಗೆ ಎಚ್ಚರಿಕೆ ನೀಡಿ ಅವರಿಬ್ಬರೂ ಫ಼ಾರಾಮಿರ್‌ನನ್ನು ಉಳಿಸಿಕೊಳ್ಳುತ್ತಾರೆ, ಆದರೆ ಮೈಗೆ ಬೆಂಕಿ ಹತ್ತಿರುವ ಡೆನೆಥೋರ್ ಮಿನಾಸ್ ಟಿರಿತ್‍ನ ಮೇಲಿಂದ ಜಿಗಿದು ಸಾವನ್ನಪ್ಪುತ್ತಾನೆ. ನಂತರ ಥೆಯೊಡೆನ್ ಮತ್ತು ಅವನ ಸೋದರಳಿಯ ಎಯೊಮೆರ್ ರೋಹಿರಿಮ್‍ನೊಂದಿಗೆ ಆಗಮಿಸುತ್ತಾರೆ. ನಂತರ ನಡೆದ ಯುದ್ಧದಲ್ಲಿ, ಅವರು ಆಲಿಫ಼ಾಂಟ್ ಸವಾರರಾದ ಹರಾಡ್ರಿಮ್‍ರಿಂದ ಸೋಲುತ್ತಾರೆ, ಮತ್ತು ಮಾಟಗಾರ ರಾಜನು ಥೆಯೊಡೆನ್‍ಗೆ ಮಾರಣಾಂತಿಕವಾಗಿ ಗಾಯಮಾಡುತ್ತಾನೆ. ಮೆರಿಯ ಸಹಾಯದೊಂದಿಗೆ ಥೆಯೊಡೆನ್‍ನ ಸೋದರ ಸೊಸೆ ಎಯೊವಿನ್ ಮಾಟಗಾರ ರಾಜನನ್ನು ನಾಶಮಾಡಿದರೂ, ಥೆಯೊಡೆನ್ ಆದ ಗಾಯಗಳಿಂದ ಸಾವನ್ನಪ್ಪುತ್ತಾನೆ. ಅರಗೊರ್ನ್ ಮೃತರ ಸೇನೆಯೊಂದಿಗೆ ಆಗಮಿಸುತ್ತಾನೆ. ಅವರು ಆರ್ಕ್‌ರನ್ನು ಸೋಲಿಸಿ ಯುದ್ಧವನ್ನು ಗೆಲ್ಲುತ್ತಾರೆ; ನಂತರ ಅರಗೊರ್ನ್ ಅವರನ್ನು ಶಾಪದಿಂದ ಬಿಡುಗಡೆ ಮಾಡುತ್ತಾನೆ. ಫ಼್ರೋಡೊ ಮತ್ತು ಸ್ಯಾಮ್ ಮೌಂಟ್ ಡೂಮ್‍ಗೆ ಹೋಗಲು ಅವಕಾಶವಾಗಲು, ಗಮನ ಭಂಗದ ಉದ್ದೇಶದಿಂದ ಅರಗೊರ್ನ್ ತನ್ನ ಸೇನೆಯನ್ನು ಕಪ್ಪು ದ್ವಾರದ ಎದುರು ಕರೆದೊಯ್ಯಲು ನಿರ್ಧರಿಸುತ್ತಾನೆ.
ಅರಗೊರ್ನ್‌ನ ಸೇನೆಯು ಸೌರಾನ್‍ನ ಪಡೆಗಳು ಹೊರಬರುವಂತೆ ಮಾಡಿ ಮೊರ್ಡೊರ್‌ನ್ನು ಖಾಲಿ ಮಾಡಿಸುತ್ತಾರೆ. ಇದರಿಂದ ಜ್ವಾಲಾಮುಖಿಯನ್ನು ಮುಟ್ಟಲು ಸ್ಯಾಮ್ ಮತ್ತು ಫ಼್ರೋಡೊರಿಗೆ ಅವಕಾಶ ಸಿಗುತ್ತದೆ. ಆದರೆ ಅವರು ಮೌಂಟ್ ಡೂಮ್‌ನ್ನು ಮುಟ್ಟುತ್ತಿದ್ದಂತೆ ಗೊಲಮ್ ಅವರ ಮೇಲೆ ದಾಳಿಮಾಡುತ್ತಾನೆ. ಜ್ವಾಲಾಮುಖಿಯ ಬೆಂಕಿಯ ಮೇಲಿನ ಬಂಡೆ ಚಾಚಿನ ಮೇಲೆ ನಿಂತುಕೊಂಡಾಗ, ಫ಼್ರೋಡೊ ಉಂಗುರದ ವಶವಾಗಿ ಅದು ತನ್ನದೆಂದು ಸಾಧಿಸಿ, ಬೆರಳಿನಲ್ಲಿ ಹಾಕಿಕೊಳ್ಳುತ್ತಾನೆ. ಇದರಿಂದ ಸೌರಾನ್ ಮತ್ತು ನಾಜ಼್ಗುಲ್‌ರಿಗೆ ಸೂಚನೆ ಹೋಗುತ್ತದೆ. ಫ಼್ರೋಡೊ ಅದೃಶ್ಯನಾಗಿದ್ದರೂ ಗೊಲಮ್ ಅವನನ್ನು ಕಂಡುಹಿಡಿದು ಅವನ ಮೇಲೆ ದಾಳಿ ಮಾಡುತ್ತಾನೆ ಮತ್ತು ಉಂಗುರವನ್ನು ಪುನಃಪಡೆಯಲು ಅವನ ಬೆರಳನ್ನು ಕಡಿದು ಹಾಕುತ್ತಾನೆ. ಫ಼್ರೋಡೊ ಪ್ರತಿರೋಧಿಸುತ್ತಾನೆ ಮತ್ತು ಉಂಗುರದ ಸಲುವಾಗಿ ಅವರಿಬ್ಬರೂ ಹೋರಾಡುತ್ತಿರುವಾಗ, ಇಬ್ಬರೂ ಬಂಡೆ ಚಾಚಿನಿಂದ ಕೆಳಗೆ ಬೀಳುತ್ತಾರೆ. ಗೊಲಮ್ ಉಂಗುರದೊಂದಿಗೆ ಬೆಂಕಿಯಲ್ಲಿ ಬಿದ್ದು ಸಾಯುತ್ತಾನೆ. ಫ಼್ರೋಡೊ ಬಂಡೆ ಚಾಚಿನ ಪಕ್ಕವನ್ನು ಅಪ್ಪಿ ಹಿಡಿದುಕೊಂಡಾಗ ಸ್ಯಾಮ್ ಅವನನ್ನು ಉಳಿಸುತ್ತಾನೆ ಮತ್ತು ಉಂಗುರವು ಶಿಲಾರಸದಲ್ಲಿ ವಿಯೋಜನೆಗೊಳ್ಳುತ್ತದೆ. ಫ಼್ರೋಡೊ ಮತ್ತು ಸ್ಯಾಮ್ ತಪ್ಪಿಸಿಕೊಂಡಂತೆ, ತನ್ನ ಪಡೆಗಳು ಮತ್ತು ನಾಜ಼್ಗುಲ್ ಜೊತೆಗೆ ಸೌರಾನ್ ನಾಶವಾಗುತ್ತಾನೆ ಮತ್ತು ಮೊರ್ಡೊರ್ ಕುಸಿಯುತ್ತದೆ. ಹಾಬಿಟ್‍ಗಳನ್ನು ಕಾಪಾಡಲು ಗ್ಯಾಂಡ್ಯಾಲ್ಫ್ ಹದ್ದುಗಳೊಂದಿಗೆ ಹಾರುತ್ತಾನೆ. ಅವರು ಮಿನಾಸ್ ಟಿರಿತ್‍ನಲ್ಲಿ ಆಮೇಲೆ ಎಚ್ಚರಗೊಂಡು ಬದುಕಿರುವ ಜೊತೆಗಾರೊಂದಿಗೆ ಮತ್ತೆ ಸೇರುತ್ತಾರೆ. ಅರಗೊರ್ನ್‌ನನ್ನು ಗೊಂಡೊರ್‌ನ ರಾಜನನ್ನಾಗಿ ಮಾಡಲಾಗುತ್ತದೆ ಮತ್ತು ಆರ್ವೆನ್ ಅವನ ರಾಣಿಯಾಗುತ್ತಾಳೆ. ಹಾಬಿಟ್‌ಗಳು ತಮ್ಮ ಮನೆಯಾದ ಶಾಯರ್‌ಗೆ ಮರಳುತ್ತಾರೆ. ಸ್ಯಾಮ್ ರೋಜ಼ಿ ಕಾಟನ್‍ಳನ್ನು ಮದುವೆಯಾಗುತ್ತಾನೆ. ಸ್ವಲ್ಪ ವರ್ಷಗಳ ನಂತರ, ಫ಼್ರೋಡೊ ಮಧ್ಯಭೂಮಿಯನ್ನು ತೊರೆದು ತನ್ನ ಅಂಕಲ್ ಬಿಲ್ಬೊ, ಗ್ಯಾಂಡ್ಯಾಲ್ಫ್, ಮತ್ತು ಎಲ್ಫ್‌ಗಳೊಂದಿಗೆ ಸಾವಿಲ್ಲದ ನಾಡಿಗೆ ತೆರಳುತ್ತಾನೆ. ಅವನು ಸ್ಯಾಮ್‍ನ ಬಳಿ ತಮ್ಮ ಸಾಹಸಗಳನ್ನು ವಿವರಿಸುವ ದ ರೆಡ್ ಬುಕ್ ಆಫ಼್ ವೆಸ್ಟ್‌ಮಾರ್ಚ್‌ನ್ನು ಬಿಡುತ್ತಾನೆ. ನಂತರ ಸ್ಯಾಮ್ ಶಾಯರ್‌ಗೆ ಹಿಂದಿರುಗಿ ರೋಜ಼ಿ ಮತ್ತು ತನ್ನ ಮಕ್ಕಳನ್ನು ಅಪ್ಪಿಕೊಳ್ಳುತ್ತಾನೆ.
ಪಾತ್ರವರ್ಗ
ಬದಲಾಯಿಸಿ- ಅಲೈಜಾ ವುಡ್ ಫ಼್ರೋಡೊ ಬ್ಯಾಗಿನ್ಸ್ ಆಗಿ
- ಶಾನ್ ಆ್ಯಸ್ಟಿನ್ ಸ್ಯಾಮ್‍ವೈಸ್ ಗ್ಯಾಮ್ಜಿ ಆಗಿ
- ಆ್ಯಂಡಿ ಸರ್ಕೀಸ್ ಸ್ಮೀಗಲ್/ಗೊಲಮ್ ಆಗಿ
- ಇಯನ್ ಮೆಕೆಲನ್ ಗ್ಯಾಂಡ್ಯಾಲ್ಫ್ ದ ವೈಟ್ ಆಗಿ
- ವೀಗೊ ಮಾರ್ಟನ್ಸನ್ ಅರಗೊರ್ನ್ ಎಲೆಸಾರ್ ಆಗಿ
- ಕೇಟ್ ಬ್ಲ್ಯಾಂಚೆಟ್ ಗಲಾದ್ರಿಯಲ್ ಆಗಿ
- ಜಾನ್ ರೀಸ್-ಡೇವಿಸ್ ಗಿಮ್ಲಿ ಆಗಿ
- ಬರ್ನಾರ್ಡ್ ಹಿಲ್ ಥಿಯೊಡೆನ್ ಆಗಿ
- ಬಿಲಿ ಬಾಯ್ಡ್ ಪೆರೆಗ್ರಿನ್ ಟುಕ್ ಆಗಿ
- ಡೊಮಿನಿಕ್ ಮೊನೆಹನ್ ಮೆರಿಯಡಾಕ್ ಬ್ರ್ಯಾಂಡಿಬಕ್ ಆಗಿ
- ಒರ್ಲ್ಯಾಂಡೊ ಬ್ಲೂಮ್ ಲೆಗೊಲಾಸ್ ಗ್ರೀನ್‍ಲೀಫ಼್ ಆಗಿ
- ಹ್ಯೂಗೊ ವೀವಿಂಗ್ ಎಲ್ರಾಂಡ್ ಆಗಿ
- ಲಿವ್ ಟೈಲರ್ ಆರ್ವೆನ್ ಆಗಿ
- ಮಿರಾಂಡಾ ಒಟೊ ಎಯೊವಿನ್ ಆಗಿ
- ಡೇವಿಡ್ ವೆನಮ್ ಫ಼ಾರಮಿರ್ ಆಗಿ
- ಕಾರ್ಲ್ ಅರ್ಬನ್ ಎಯೊಮೆರ್ ಆಗಿ
- ಜಾನ್ ನೋಬಲ್ ಡೆನೆಥೋರ್ ಆಗಿ
- ಇಯನ್ ಹೋಮ್ ಬಿಲ್ಬೊ ಬ್ಯಾಗಿನ್ಸ್ ಆಗಿ
- ಶಾನ್ ಬೀನ್ ಬೋರೊಮಿರ್ ಆಗಿ
- ಮಾರ್ಟೋನ್ ಚೋಕಾಸ್ ಸೆಲೆಬೊರ್ನ್ ದ ವೈಸ್ ಆಗಿ
- ಲಾರೆನ್ಸ್ ಮಾಕೊವಾರೆ ಆ್ಯಂಗ್ಮಾರ್‌ನ ಮಾಟಗಾರ ರಾಜನಾಗಿ
- ಥಾಮ್ಸ್ ರಾಬಿನ್ಸ್ ಡೀಗಲ್ ಆಗಿ
ಆಧಾರ ಸಾಮಗ್ರಿಯೊಂದಿಗಿನ ಹೋಲಿಕೆ
ಬದಲಾಯಿಸಿಪೀಟರ್ ಜ್ಯಾಕ್ಸನ್‍ರ ದ ಲಾರ್ಡ್ ಆಫ಼್ ದ ರಿಂಗ್ಸ್‌ನ ಎಲ್ಲ ಚಲನಚಿತ್ರ ರೂಪಾಂತರಗಳಲ್ಲಿರುವಂತೆ, ಅನೇಕ ಘಟನೆಗಳು, ಕಾಲರೇಖೆಗಳು ಮತ್ತು ಭೌಗೋಳಿಕ ದೂರಗಳನ್ನು ಸಂಕೋಚಿಸಲಾಗಿದೆ ಅಥವಾ ಸರಳೀಕರಿಸಲಾಗಿದೆ. ಪುಸ್ತಕಗಳಿಂದ ಬಹುತೇಕ ಪ್ರಮುಖ ಘಟನೆಗಳನ್ನು ಸೇರಿಸಲಾಗಿದೆ, ಮತ್ತು ಕಾದಂಬರಿಯಲ್ಲಿನ ಬಹಳ ಕಡಿಮೆ ಘಟನೆಗಳನ್ನು ಚಲನಚಿತ್ರದಿಂದ ಕೈಬಿಡಲಾಗಿದೆ; ಆದರೆ, ಚಲನಚಿತ್ರದಲ್ಲಿ ಕಾದಂಬರಿಗಳಿಂದ ಗಮನಾರ್ಹವಾಗಿ ಮಾರ್ಪಡಿಸಲಾದ ಕೆಲವು ಘಟನೆಗಳಿವೆ. ಕೆಲವು ಘಟನೆಗಳು ಕೇವಲ ಚಲನಚಿತ್ರದಲ್ಲಿ ಕಾಣಬರುತ್ತವೆ ಮತ್ತು ಚಿತ್ರದಲ್ಲಿನ ಕೆಲವು ವಿವರಗಳು ಪುಸ್ತಕಗಳಲ್ಲಿ ಕಂಡುಬರುವುದಿಲ್ಲ.
ತಯಾರಿಕೆ
ಬದಲಾಯಿಸಿದ ಲಾರ್ಡ್ ಆಫ಼್ ದ ರಿಂಗ್ಸ್ ಚಲನಚಿತ್ರ ತ್ರಯವು ಅಸಾಮಾನ್ಯವಾಗಿದೆ, ಹೇಗೆಂದರೆ ಜ್ಯಾಕ್ಸನ್‍ರ ಪೂರ್ವಭಾಗತ್ರಯವಾದ ದ ಹಾಬಿಟ್ನ ಬಿಡುಗಡೆಯವರೆಗೆ, ಈ ಸರಣಿಯ ಪ್ರತ್ಯೇಕ ಕಂತುಗಳನ್ನು ಬರೆದು ಏಕಕಾಲದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಜ್ಯಾಕ್ಸನ್‍ಗೆ ದ ರಿಟರ್ನ್ ಆಫ಼್ ದ ಕಿಂಗ್ ತಯಾರುಮಾಡಿದ ಚಲನಚಿತ್ರಗಳಲ್ಲಿ ಅತ್ಯಂತ ಸುಲಭವೆಂದು ಕಂಡುಬಂದಿತು, ಏಕೆಂದರೆ ಇದು ಕಥೆಯ ಪರಾಕಾಷ್ಠೆಯನ್ನು ಹೊಂದಿತ್ತು.[೧೦]. ಈ ಚಿತ್ರದ ಚಿತ್ರೀಕರಣವು ಬಹುಘಟಕಗಳಡಿ ನ್ಯೂ ಜ಼ೀಲಂಡ್‍ನಾದ್ಯಂತ, ೧೧ ಅಕ್ಟೋಬರ್ ೧೯೯೯ ಮತ್ತು ೨೨ ಡಿಸೆಂಬರ್ ೨೦೦೦ರ ಮಧ್ಯೆ ನಡೆಯಿತು. ಚಿತ್ರದ ಅಪ್ರಧಾನ ಸರಣಿಗಳನ್ನು ಚಿತ್ರದ ಬಿಡುಗಡೆಯ ಮೊದಲು ೨೦೦೩ರಲ್ಲಿ ಆರು ವಾರಗಳವರೆಗೆ ತೆಗೆಯಲಾಯಿತು.
ವಿನ್ಯಾಸ
ಬದಲಾಯಿಸಿಜ್ಯಾಕ್ಸನ್ ಕಲ್ಪಿಸಿಕೊಂಡ ಮಧ್ಯಭೂಮಿಯನ್ನು ಮುಖ್ಯವಾಗಿ ಮಾಜಿ ಟಾಲ್ಕೀನ್ ಸಚಿತ್ರಕಾರರಾದ ಅಲನ್ ಲೀ ಹಾಗೂ ಜಾನ್ ಹೋವ್ ವಿನ್ಯಾಸಗೊಳಿಸಿದರು. ಚಿತ್ರತ್ರಯದ ಆಯುಧಗಳು, ಯುದ್ಧಕವಚ, ಸಣ್ಣ ಗಾತ್ರದ ಪ್ರತಿಕೃತಿಗಳು, ಕೃತಕ ಅಂಗಗಳು, ಮತ್ತು ಜೀವಿಗಳನ್ನು ನಿಭಾಯಿಸಿದ ವೆಟಾ ಕಾರ್ಯಾಗಾರವು ಇದನ್ನು ಸೃಷ್ಟಿಸಿತು.
ಹಿಂದಿನ ಎರಡೂ ಚಲನಚಿತ್ರಗಳಲ್ಲಿ ಸಂಕ್ಷಿಪ್ತವಾಗಿ ಕಾಣಲಾದ ಮಿನಾಸ್ ಟಿರಿತ್ ನಗರವನ್ನು ಈ ಚಲನಚಿತ್ರದಲ್ಲಿ ಪೂರ್ತಿಯಾಗಿ ಕಾಣಲಾಗುತ್ತದೆ, ಮತ್ತು ಅದರ ಜೊತೆಗೆ ಗೊಂಡೊರ್‌ನ ನಾಗರಿಕತೆ. ಈ ನಗರಕ್ಕೆ ನಾಲ್ಕು ಅಂತಸ್ತುಗಳ ರಸ್ತೆಗಳಿದ್ದವು ಮತ್ತು ಪ್ರತಿ ಮನೆಗೆ ವಂಶಲಾಂಛನ ಸಂಕೇತಗಳಿದ್ದವು.
ಕಿಲ್ಲೆ ಕೂಡ ಇತ್ತು, ಮತ್ತು ಇದು ಒಣಗಿದ ಬಿಳಿ ಮರವನ್ನು ಹೊಂದಿದೆ. ಇದನ್ನು ಪಾಲಿಸ್ಟೈರೀನ್‍ನಿಂದ ನಿರ್ಮಿಸಲಾಗಿತ್ತು, ಜೊತೆಗೆ ಪ್ರಾಚೀನ ಹಾಗೂ ಗಂಟುಗಂಟಾದ ಲೆಬನೀಸ್ ಆಲಿವ್ ಮರಗಳಿಂದ ಪ್ರಭಾವಿತವಾದ ನೈಜ ಶಾಖೆಗಳಿದ್ದವು. ಡೆನೆಥೋರ್‌ನ ಸಿಂಹಾಸನವನ್ನು ಕಲ್ಲಿನಿಂದ ಕೆತ್ತಲಾಗಿತ್ತು, ಜೊತೆಗೆ ಹಿಂದಿನ ರಾಜರ ಪಾಲಿಸ್ಟೈರೀನ್ ಪ್ರತಿಮೆಗಳಿದ್ದವು.
ಮೂರನೇ ಚಲನಚಿತ್ರವು ಬೃಹತ್ ಜೇಡರ ಹುಳುವಾದ ಶೀಲಾಬ್‍ನ್ನು ಪರಿಚಯಿಸುತ್ತದೆ. ಶೀಲಾಬ್‍ನ್ನು ೧೯೯೯ರಲ್ಲಿ ವಿನ್ಯಾಸಗೊಳಿಸಲಾಯಿತು,[೧೧] ಮತ್ತು ಇದರ ದೇಹವು ಸುರಂಗಜಾಲ ಜೇಡದ ಮೇಲೆ ಆಧಾರಿತವಾಗಿತ್ತು ಹಾಗೂ ಅಸಂಖ್ಯಾತ ಬೆಳೆತಗಳಿದ್ದ ತಲೆಯನ್ನು ಅನೇಕ ಶಿಲ್ಪಗಳಿಂದ ಆಯ್ಕೆ ಮಾಡಲಾಗಿತ್ತು. ಶೀಲಾಬ್‍ನ ಗವಿಗೆ ಮರಳುಗಲ್ಲು ಸ್ಫೂರ್ತಿಯಾಗಿತ್ತು ಮತ್ತು ಇದನ್ನು ಅಸ್ತಿತ್ವದಲ್ಲಿದ್ದ ಐಸನ್‍ಗಾರ್ಡ್ ರಂಗಸಜ್ಜಿನ ಗವಿಗಳಿಂದ ಕೆತ್ತಲಾಗಿತ್ತು.
ಪ್ರಧಾನ ಛಾಯಾಗ್ರಹಣ
ಬದಲಾಯಿಸಿದ ರಿಟರ್ನ್ ಆಫ಼್ ದ ಕಿಂಗ್ ಅನ್ನು ೨೦೦೦ ರ ವೇಳೆಯಲ್ಲಿ ಚಿತ್ರೀಕರಿಸಲಾಯಿತು. ವಾಸ್ತವವಾಗಿ ಚಿತ್ರಕ್ಕಾಗಿ ಚಿತ್ರೀಕರಿಸಲಾದ ಕೆಲವು ಅತ್ಯಂತ ಮುಂಚಿನ ದೃಶ್ಯಗಳನ್ನು ಕೊನೆಯಲ್ಲಿ ಚಿತ್ರೀಕರಿಸಲಾಗಿತ್ತು.
ಕಪ್ಪು ದ್ವಾರದ ಯುದ್ಧವನ್ನು ಹಿಂದೆ ಸಿಡಿಗುಂಡು ಪ್ರದೇಶವಾಗಿದ್ದ ರ‍್ಯಾಂಜಿಪೊ ಮರೂಭೂಮಿಯಲ್ಲಿ ಚಿತ್ರೀಕರಿಸಲಾಯಿತು.[೧೨][೧೩] ನ್ಯೂ ಜ಼ೀಲಂಡ್‍ನ ಸೈನಿಕರನ್ನು ಹೆಚ್ಚಳ ನಟರಾಗಿ ಗೊತ್ತು ಮಾಡಿಕೊಳ್ಳಲಾಯಿತು. ಅದೇ ಸಮಯದಲ್ಲಿ ಗೈಡ್‍ಗಳು ಸ್ಫೋಟಗೊಂಡಿರದ ಗಣಿಗಳ ಮೇಲೆ ಕಣ್ಣಿಟ್ಟಿದ್ದರು. ಮೌಂಟ್ ಡೂಮ್‍ನ ಹೊರರೂಪಕ್ಕಾಗಿ ಮೌಂಟ್ ರೂವಪೇಯುದಲ್ಲಿ ಚಿತ್ರೀಕರಿಸಲಾಯಿತು.
ದೃಶ್ಯ ಪರಿಣಾಮಗಳು
ಬದಲಾಯಿಸಿದ ರಿಟರ್ನ್ ಆಫ಼್ ದ ಕಿಂಗ್ ೧,೪೮೮ ದೃಶ್ಯ ಪರಿಣಾಮದ ಸರಣಿಗಳನ್ನು ಹೊಂದಿದೆ, ಮೊದಲ ಚಿತ್ರದ ಸಂಖ್ಯೆಗಿಂತ ಸರಿಸುಮಾರು ಮೂರು ಪಟ್ಟು ಮತ್ತು ಎರಡನೇಯದರಿಗಿಂತ ಬಹುತೇಕ ಎರಡು ಪಟ್ಟು. ಈ ಕೆಲಸದ ಆರಂಭದಲ್ಲಿ ಅಲನ್ ಲೀ ಮತ್ತು ಮಾರ್ಕ್ ಲೂಯಿಸ್ ನ್ಯೂ ಜ಼ೀಲಂಡ್‍ನ ಭೂದೃಶ್ಯದ ವಿವಿಧ ಛಾಯಾಚಿತ್ರಗಳನ್ನು ಸಂಯೋಜಿಸಿ ಪೆಲೆನೋರ್ ಬಯಲಿನ ಅಂಕೀಯ ಕಣವನ್ನು ಸೃಷ್ಟಿಸಿದರು. ಅಗಾಧ ಯುದ್ಧವನ್ನು ಯೋಜಿಸಲು ಜ್ಯಾಕ್ಸನ್ ಮತ್ತು ಕ್ರಿಶ್ಚನ್ ರಿವರ್ಸ್ ಕಂಪ್ಯೂಟರ್‌ಗಳನ್ನು ಬಳಸಿದರು.
ಯುದ್ಧಕ್ಕಾಗಿ, ಅವರು ಮ್ಯಾಸಿವ್ ತಂತ್ರಾಂಶದ ಅಂಕೀಯ ಕುದುರೆಗಳಿಗಾಗಿ ೪೫೦ ಚಲನೆಗಳನ್ನು ಮುದ್ರಿಸಿಟ್ಟುಕೊಂಡರು (ಆದರೆ ಸಾವುಗಳನ್ನು ಅನಿಮೇಟ್ ಮಾಡಲಾಗಿತ್ತು). ಟ್ರೋಲ್‍ಗಳು ಮಿನಾಸ್ ಟಿರಿತ್‍ನ ದ್ವಾರಗಳ ಮೂಲಕ ರಭಸದಿಂದ ನುಗ್ಗುವುದು ಜೊತೆಗೆ ಗ್ರಾಂಡ್ ಅನ್ನು ದ್ವಾರಕ್ಕೆ ಎಳೆದೊಯ್ಯುವ ಜೀವಿಗಳು ಮುಂತಾದ ಚಲನಚಿತ್ರದಲ್ಲಿನ ತಡವಾದ ಸೇರಿಕೆಗಳನ್ನು ನಿಭಾಯಿಸಲಾಯಿತು.
ಹಿಂದಿನ ಚಲನಚಿತ್ರಗಳಂತೆ, ನಟರಿಗಾಗಿ ಬಳಸಿದ ಅಂಕೀಯ ನಕಲುಗಳ ನಡುವೆ ವ್ಯಾಪಕ ಆಕಾರ ಬದಲಾವಣೆಗಳಿವೆ. ಮೃತರ ರಾಜನ ಪಾತ್ರವನ್ನು ಕೃತಕ ಅಂಗಗಳುಳ್ಳ ಒಬ್ಬ ನಟನು ಅಭಿನಯಿಸಿದನು, ಮತ್ತು ಪಾತ್ರದ ಮನಃಸ್ಥಿತಿಯನ್ನು ಅವಲಂಬಿಸಿ, ಅವನ ತಲೆಯು ಆಗಾಗ್ಗೆ ಹೆಚ್ಚು ಬುರುಡೆಯಂತಹ ಅಂಕೀಯ ರೂಪಕ್ಕೆ ಬದಲಾಯಿಸುತ್ತದೆ.
ಜ್ಯಾಕ್ಸನ್‍ರಿಗೆ ತಮ್ಮ ಕಲ್ಪಾನ ಜಗತ್ತಿನ ಸಂಪೂರ್ಣ ಚಿತ್ರಣಕ್ಕೆ ಅಗತ್ಯವಿದ್ದುದರಿಂದ, ಅನೇಕ ಸಣ್ಣ ಆಕಾರದ ಪ್ರತಿಕೃತಿಗಳನ್ನು ನಿರ್ಮಿಸಲಾಯಿತು, ಉದಾಹರಣೆಗೆ 1:72 ತುಲನಾತ್ಮಕ ಅಳತೆಯ ಮಿನಾಸ್ ಟಿರಿತ್‍ನ ಪ್ರತಿಕೃತಿ.
ಧ್ವನಿ ಪರಿಣಾಮಗಳು
ಬದಲಾಯಿಸಿಧ್ವನಿ ವಿಭಾಗವು ವರ್ಷದ ಮೊದಲಿನ ಭಾಗವನ್ನು ಸರಿಯಾದ ಧ್ವನಿಗಳನ್ನು ಹುಡುಕುವುದರಲ್ಲಿ ಕಳೆಯಿತು. ಶೀಲಾಬ್‍ನ ಕಿರುಚಾಟವನ್ನು ಸೃಷ್ಟಿಸಲು ಟ್ಯಾಸ್ಮೇನಿಯನ್ ಡೆವಿಲ್ ಪ್ರಾಣಿಯನ್ನು ಬಳಸಲಾಯಿತು. ಸೌರಾನ್‍ನ ಪತನದಲ್ಲಿ ಮಾನವ ಕೂಗುಗಳು ಮತ್ತು ಕತ್ತೆಯ ಅರಚಾಟವನ್ನು ಮಿಶ್ರಣ ಮಾಡಲಾಯಿತು ಮತ್ತು ಕುಸಿತದ ದ್ವನಿಗಳಿಗೆ ಒಡೆದ ಗಾಜನ್ನು ಬಳಸಲಾಯಿತು. ಮಿನಾಸ್ ಟಿರಿತ್ ಮೇಲಿನ ಮುತ್ತಿಗೆಯ ವೇಳೆಯ ಕ್ಷಿಪಣಿ ವ್ಯಾಪಾರಕ್ಕಾಗಿ, ನಿರ್ಮಾಣ ಕಾರ್ಮಿಕರು ಪೂರ್ವದಲ್ಲಿ ನಿರ್ಮಾಣ ಕ್ರೇನ್‍ನಿಂದ ಮೇಲೆತ್ತಲಾದ ನೈಜವಾದ ೨ ಟನ್ನಿನ ಕಲ್ಲಿನ ತುಂಡುಗಳನ್ನು ಕೆಳಗೆ ಬೀಳಿಸಿದರು.
ಸಂಗೀತ
ಬದಲಾಯಿಸಿಚಿತ್ರದ ಸಂಗೀತವನ್ನು ಹಾವರ್ಡ್ ಶೋರ್ ಸಂಯೋಜಿಸಿದರು. ಇವರು ಚಿತ್ರತ್ರಯದ ಮೊದಲು ಎರಡು ಭಾಗಗಳನ್ನು ಸಂಯೋಜಿಸಿದ್ದರು. ಶೋರ್ ವೇಳಾಪಟ್ಟಿಯೊಂದಿಗೆ ವೇಗವನ್ನು ಕಾಪಾಡಿಕೊಳ್ಳಲು ದಿನಕ್ಕೆ ಏಳು ನಿಮಿಷಗಳಷ್ಟು ಸಂಗೀತವನ್ನು ಸಂಯೋಜಿಸಬೇಕಾಗುತ್ತಿತ್ತು.
ಬಿಡುಗಡೆ
ಬದಲಾಯಿಸಿಈ ಚಲನಚಿತ್ರದ ವೈಶ್ವಿಕ ಪ್ರಥಮ ಪ್ರದರ್ಶನವನ್ನು ವೆಲ್ಲಿಂಗ್ಟನ್‍ನ ಎಂಬಸಿ ಥಿಯೇಟರ್‌ನಲ್ಲಿ ೧ ಡಿಸೆಂಬರ್ ೨೦೦೩ರಂದು ಆಯೋಜಿಸಲಾಗಿತ್ತು, ಮತ್ತು ಚಿತ್ರದ ನಿರ್ದೇಶಕರು ಹಾಗೂ ಅನೇಕ ತಾರೆಗಳು ಹಾಜರಿದ್ದರು.
ಗೃಹ ಮಾಧ್ಯಮ
ಬದಲಾಯಿಸಿಚಲನಚಿತ್ರದ ಚಿತ್ರಮಂದಿರ ಆವೃತ್ತಿಯನ್ನು ವಿಎಚ್ಎಸ್ ಹಾಗೂ ಡಿವಿಡಿಯಲ್ಲಿ ೨೫ ಮೇ ೨೦೦೪ರಂದು ಬಿಡುಗಡೆ ಮಾಡಲಾಯಿತು.
ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ
ಬದಲಾಯಿಸಿಬಾಕ್ಸ್ ಆಫ಼ಿಸ್
ಬದಲಾಯಿಸಿಈ ಚಿತ್ರವು ಅಮೇರಿಕ ಮತ್ತು ಕೆನಡಾದಲ್ಲಿ $377,845,905 ದಷ್ಟು ಗಳಿಸಿತು ಮತ್ತು ಇತರ ದೇಶಗಳಲ್ಲಿ $742,083,616 ದಷ್ಟು ಗಳಿಸಿತು. ಹಾಗಾಗಿ ವಿಶ್ವಾದ್ಯಂತ ಒಟ್ಟು ಮೊತ್ತವು $1,119,929,521 ದಷ್ಟು ಆಯಿತು. ವಿಶ್ವಾದ್ಯಂತ, ಹಣದುಬ್ಬರಕ್ಕೆ ಸರಿಹೊಂದಿಸದಿದ್ದಾಗ ಇದು ಸಾರ್ವಕಾಲಿಕವಾಗಿ ೨೬ನೇ ಅತಿ ಹೆಚ್ಚು ಹಣ ಗಳಿಸಿದ ಚಿತ್ರವಾಗಿದೆ.[೧೪] ಇದು ಇತಿಹಾಸದಲ್ಲಿ $1 ಬಿಲಿಯನ್‍ಗಿಂತ ಹೆಚ್ಚು ಹಣಗಳಿಸಿದ ಎರಡನೇ ಚಿತ್ರವಾಗಿದೆ.
ಪ್ರಶಸ್ತಿ ಗೌರವಗಳು
ಬದಲಾಯಿಸಿಈ ಚಲನಚಿತ್ರವು ಹನ್ನೊಂದು ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಗಳನ್ನು ಪಡೆದುಕೊಂಡಿತ್ತು: ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಮಾರ್ಪಡಿಸಿದ ಚಿತ್ರಕಥೆ, ಅತ್ಯುತ್ತಮ ಮೂಲ ಸಂಗೀತ, ಅತ್ಯುತ್ತಮ ಮೂಲ ಗೀತೆ, ಅತ್ಯುತ್ತಮ ದೃಶ್ಯ ಪರಿಣಾಮಗಳು, ಅತ್ಯುತ್ತಮ ಕಲಾ ನಿರ್ದೇಶನ, ಅತ್ಯುತ್ತಮ ವಸ್ತ್ರವಿನ್ಯಾಸ, ಅತ್ಯುತ್ತಮ ಪ್ರಸಾಧನ, ಅತ್ಯುತ್ತಮ ಧ್ವನಿ ಮಿಶ್ರಣ ಮತ್ತು ಅತ್ಯುತ್ತಮ ಚಿತ್ರ ಸಂಕಲನ. ೨೦೦೪ರ ೭೬ನೇ ಅಕ್ಯಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ, ಈ ಚಿತ್ರವು ನಾಮನಿರ್ದೇಶನಗೊಂಡ ಎಲ್ಲ ವರ್ಗಗಳಲ್ಲಿ ಪ್ರಶಸ್ತಿ ಗೆದ್ದಿತು ಮತ್ತು ಟೈಟಾನಿಕ್ ಹಾಗೂ ಬೆನ್-ಹರ್ ಜೊತೆಗೆ ಅತಿ ಹೆಚ್ಚು ಒಟ್ಟಾರೆ ಅಕ್ಯಾಡೆಮಿ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ಹೊಂದಿದೆ.[೧೫] ಇದು ಅತ್ಯುತ್ತಮ ಚಲನಚಿತ್ರದ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಕಲ್ಪನಾಪ್ರಧಾನ ಚಿತ್ರವಾಗಿತ್ತು.
ಈ ಚಲನಚಿತ್ರವು ಎರಡು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು[೧೬][೧೭], ಐದು ಬ್ಯಾಫ಼್ಟಾಗಳು, ಎರಡು ಎಮ್‍ಟಿವಿ ಮೂವಿ ಅವಾರ್ಡ್ಸ್, ಎರಡು ಗ್ರ್ಯಾಮಿ ಪ್ರಶಸ್ತಿಗಳನ್ನು ಕೂಡ ಗೆದ್ದಿತು.
ಉಲ್ಲೇಖಗಳು
ಬದಲಾಯಿಸಿ- ↑ ಉಲ್ಲೇಖ ದೋಷ: Invalid
<ref>
tag; no text was provided for refs namedTROFKAFI
- ↑ "THE LORD OF THE RINGS - THE RETURN OF THE KING". British Board of Film Classification. Archived from the original on 22 March 2018. Retrieved 2 May 2019.
- ↑ "THE LORD OF THE RINGS - THE RETURN OF THE KING [Extended version]". British Board of Film Classification. Archived from the original on 21 March 2018. Retrieved 2 May 2019.
- ↑ "The Lord of the Rings The Return of the King". British Film Institute. Archived from the original on 27 November 2016. Retrieved 27 November 2016.
- ↑ "The Lord of the Rings The Return of the King (2003)". American Film Institute. Archived from the original on 2 April 2014. Retrieved 6 December 2012.
- ↑ "The Lord of the Rings The Return of the King (2003)". Turner Classic Movies. Archived from the original on 15 September 2011. Retrieved 6 December 2012.
- ↑ "The Lord of the Rings The Return of the King (2003)". AllMovie. Archived from the original on 15 January 2014. Retrieved 6 December 2012.
- ↑ ೮.೦ ೮.೧ "The Lord of the Rings: The Return of the King (2003)". Box Office Mojo. Archived from the original on 1 February 2009. Retrieved 3 February 2009.
- ↑ "All Time Worldwide Box Office". Box Office Mojo. Archived from the original on 5 June 2004.
- ↑ Lee, Alana. "Peter Jackson on The Return of the King". BBC Films. Archived from the original on 4 March 2007. Retrieved 20 October 2006.
- ↑ Russell, Gary (2004). The Lord of the Rings: The Art of the Return of the King. Harpercollins. ISBN 0-00-713565-3.
- ↑ Samantha Sofka (15 March 2015). "Peter Jackson Filmed Part of RETURN OF THE KING on a Mine Field". nerdist.com. Archived from the original on 22 October 2015. Retrieved 23 March 2016.
- ↑ "The Lord of the Rings: The Return of the King (2003 Filming Locations". imdb.com. Archived from the original on 15 January 2016. Retrieved 23 March 2016.
- ↑ "All Time Worldwide Box Office Grosses". boxofficemojo.com. Archived from the original on 19 July 2012.
- ↑ "The 76th Academy Awards (2004) Nominees and Winners". oscars.org. Archived from the original on 29 September 2012. Retrieved 20 November 2011.
- ↑ Crean, Ellen (25 January 2004). "Golden Globe Spins For 'Rings'". CBS News. Archived from the original on 29 January 2011. Retrieved 10 March 2011.
- ↑ "Hail to the 'King' at Golden Globes". MSNBC. 26 January 2004. Archived from the original on 25 September 2012. Retrieved 10 March 2011.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Official website
- ದ ಲಾರ್ಡ್ ಆಫ಼್ ದ ರಿಂಗ್ಸ್: ದ ರಿಟರ್ನ್ ಆಫ಼್ ದ ಕಿಂಗ್ at IMDb
- ದ ಲಾರ್ಡ್ ಆಫ಼್ ದ ರಿಂಗ್ಸ್: ದ ರಿಟರ್ನ್ ಆಫ಼್ ದ ಕಿಂಗ್ at AllMovie
- ಬಾಕ್ಸ್ ಆಫ಼ೀಸ್ ಮೋಜೊದಲ್ಲಿ ದ ಲಾರ್ಡ್ ಆಫ಼್ ದ ರಿಂಗ್ಸ್: ದ ರಿಟರ್ನ್ ಆಫ಼್ ದ ಕಿಂಗ್ (ಚಲನಚಿತ್ರ)
- ದ ಲಾರ್ಡ್ ಆಫ಼್ ದ ರಿಂಗ್ಸ್: ದ ರಿಟರ್ನ್ ಆಫ಼್ ದ ಕಿಂಗ್ at Metacritic
- ದ ಲಾರ್ಡ್ ಆಫ಼್ ದ ರಿಂಗ್ಸ್: ದ ರಿಟರ್ನ್ ಆಫ಼್ ದ ಕಿಂಗ್ at Rotten Tomatoes