ದೌರ್ಗಂಧಿಕಾಪಹರಣ
ದೌರ್ಗಂಧಿಕಾಪಹರಣ ಬಿ ಜಿ ಎಲ್ ಸ್ವಾಮಿಯವರು ಬರೆದ ಪುಸ್ತಕ. ಈ ಪುಸ್ತಕವು ವೈಜ್ಞಾನಿಕ ವಿಷಯವೊಂದರ ಸುತ್ತ ಹೆಣೆದ ಹಾಸ್ಯಮಯ ಸನ್ನಿವೇಶಗಳನ್ನೊಳಗೊಂಡಿದೆ.
ದೌರ್ಗಂಧಿಕಾಪಹರಣ - ಬಿ ಜಿ ಎಲ್ ರವರ ಅನುಭವಗಳ ಹಾಸ್ಯ ರೂಪದ ಕಥನ. ತಮ್ಮ ಓದು, ಬೋಧನೆಯ ಸಮಯದಲ್ಲಿ ಸಸ್ಯಗಳ ಬೇಟೆಗೆ ಹೊರಟಾಗ ಆದ ಅನುಭವಗಳನ್ನು (ದುರ್ಗಂಧದ ಅನುಭವಗಳನ್ನು) ಈ ಪುಸ್ತಕದಲ್ಲಿ ನಮ್ಮೊಡನೆ ಹಂಚಿಕೊಂಡಿದ್ದಾರೆ. ಸ್ವಾಮಿಯವರ ಇತರ ಲೇಖನಗಳಂತೆ, ಇದೂ ಕೂಡ ಪ್ರತಿಯೊಂದು ಪುಟದಲ್ಲೂ ನಗಿಸುವ ಸಾಮಗ್ರಿಯುಳ್ಳದ್ದು.
ಸ್ವತಃ ಬಿ ಜಿ ಎಲ್ ಸ್ವಾಮಿಯವರೇ ಬರೆದಿರುವ ಚಿತ್ರಗಳುಳ್ಳ ಈ ಪುಟ್ಟ ಕೃತಿ, ಸದಭಿರುಚಿಯ ಹಾಸ್ಯವುಳ್ಳ ಓದಲೇಬೇಕಾದಂತಹ ಪುಸ್ತಕ. “ಜನಸಾಮಾನ್ಯರನ್ನು ಗುರಿಯಾಗಿಟ್ಟುಕೊಂಡು ವಿಜ್ಞಾನ ವಿಷಯಗಳನ್ನು ಪ್ರಸ್ತಾವಿಸುವ ಬರವಣಿಗೆ” ಎಂದು ಪೀಠಿಕೆಯಲ್ಲಿ ಬರೆಯುವ ಸ್ವಾಮಿಯವರು ಈ ಪುಸ್ತಕದ ‘ಮನರಂಜನಾ’ ಮೌಲ್ಯದ ಬಗ್ಗೆ ಆಗ ಅಲೋಚಿಸಿದ್ದಿಲ್ಲರಬಹುದು, ಆದರೆ ಮೂರು ಹಾಸ್ಯಮಯ ‘ಉಪಾಖ್ಯಾನ’ಗಳಿಂದ ಕೂಡಿದ ಈ ಕೃತಿ ಒಳ್ಳೆಯ ಮನರಂಜನೆ ನೀಡುತ್ತದೆ.
ಈ ಲೇಖನಗಳನ್ನೂ ನೋಡಿ
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಕೃತಿಯ ಬಗ್ಗೆ ಚುಟುಕು ವಿಮರ್ಶೆ Archived 2007-09-26 ವೇಬ್ಯಾಕ್ ಮೆಷಿನ್ ನಲ್ಲಿ.