ದೊಣ್ಣೆ
ದೊಣ್ಣೆಯು ಎಲ್ಲ ಆಯುಧಗಳ ಪೈಕಿ ಅತ್ಯಂತ ಸರಳವಾದದ್ದು: ಸಾಮಾನ್ಯವಾಗಿ ಕಟ್ಟಿಗೆಯಿಂದ ತಯಾರಿಸಲಾದ ಗಿಡ್ಡನೆಯ ಕೋಲು ಅಥವಾ ಲಾಠಿ. ಇದನ್ನು ಪ್ರಾಗೈತಿಹಾಸಿಕ ಕಾಲದಿಂದ ಆಯುಧವಾಗಿ ಪ್ರಯೋಗಿಸಲಾಗಿದೆ.[೧] ಕೀನ್ಯಾದ, ಟುರ್ಕಾನಾದಲ್ಲಿನ ನಟಾರುಕ್‍ನ ಸ್ಥಳದಲ್ಲಿ ಸೇರಿದಂತೆ, ಹಿಂದೆ, ದೊಣ್ಣೆಗಳಿಂದ ಉಂಟಾದ ಮೊದ್ದು ಬಲದ ಪೆಟ್ಟುಗಳ ಹಲವಾರು ಉದಾಹರಣೆಗಳಿವೆ. ಇದನ್ನು ೧೦,೦೦೦ ವರ್ಷಗಳ ಹಿಂದೆ ನಡೆದ ಬೇಟೆಗಾರ-ಸಂಗ್ರಹಕರ ಗುಂಪುಗಳ ನಡುವಿನ ಒಂದು ಪ್ರಾಗೈತಿಹಾಸಿಕ ಸಂಘರ್ಷದ ಸ್ಥಳವೆಂದು ವರ್ಣಿಸಲಾಗಿದೆ.[೨] ಜನಪ್ರಿಯ ಸಂಸ್ಕೃತಿಯಲ್ಲಿ, ದೊಣ್ಣೆಗಳನ್ನು ಪ್ರಾಚೀನ ಸಂಸ್ಕೃತಿಗಳೊಂದಿಗೆ ಸಂಬಂಧಿಸಲಾಗಿದೆ, ವಿಶೇಷವಾಗಿ ಗವಿಮಾನವರೊಂದಿಗೆ.
ಬಹುತೇಕ ದೊಣ್ಣೆಗಳು ಒಂದು ಕೈಯಿಂದ ಪ್ರಯೋಗಿಸುವಷ್ಟು ಚಿಕ್ಕದಾಗಿರುತ್ತವೆ, ಆದರೆ ಹೆಚ್ಚು ದೊಡ್ಡನೆಯ ದೊಣ್ಣೆಗಳಿಗೆ ಪರಿಣಾಮಕಾರಿಯಾಗಲು ಎರಡೂ ಕೈಗಳನ್ನು ಉಪಯೋಗಿಸುವುದು ಅಗತ್ಯವಾಗಬಹುದು. ಸಮರಕಲೆಗಳು ಮತ್ತು ಕಾನೂನು ಜಾರಿ ಲಾಠಿಯು ಸೇರಿದಂತೆ ಇತರ ಕ್ಷೇತ್ರಗಳಲ್ಲಿ ವಿವಿಧ ವಿಶೇಷೀಕೃತ ದೊಣ್ಣೆಗಳನ್ನು ಬಳಸಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Chisholm, Hugh, ed. (1911). . Encyclopædia Britannica. Vol. 6 (11th ed.). Cambridge University Press. p. 564.
{{cite encyclopedia}}
: Cite has empty unknown parameters:|separator=
and|HIDE_PARAMETER=
(help) - ↑ Lahr, M. Mirazón; Rivera, F.; Power, R. K.; Mounier, A.; Copsey, B.; Crivellaro, F.; Edung, J. E.; Fernandez, J. M. Maillo; Kiarie, C. (2016). "Inter-group violence among early Holocene hunter-gatherers of West Turkana, Kenya". Nature. 529 (7586): 394–398. doi:10.1038/nature16477. PMID 26791728.