ದೇವ್‍ದಾಸ್ (ಚಲನಚಿತ್ರ)
ದೇವ್‍ದಾಸ್[೧] ೨೦೦೨ರ ಒಂದು ಪ್ರೇಮ ಕಥೆ.ಈ ಚಿತ್ರದ ನಿರ್ದೇಶಕರು ಸಂಜಯ್ ಲೀಲಾ ಬನ್ಸಾಲಿ. ಇದು ೧೯೧೭ ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ 'ದೇವ್‍ದಾಸ್' ಕಾದಂಬರಿ[೨] ಆದಾರಿತ ಚಿತ್ರ.
ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಇದ್ದವರು ಶಾರುಖ್ ಖಾನ್(ದೇವ್‍ದಾಸ್) ೧೯೦೦ರ ಒಬ್ಬ ಶ್ರೀಮಂತ ವಕೀಲ,ತನ್ನ ಓದಿನ ನಂತರ ಬಾಲ್ಯದ ಪ್ರಿಯತಮೆ 'ಪಾರೊ/ಪಾರ್ವತಿ'(ಐಶ್ವರ್ಯ ರೈ ಬಚ್ಚನ್)ಯನ್ನು ವಿವಾಹವಾಗಲು ಲಂಡನ್ನಿಂದ ತನ್ನ ಹುಟ್ಟೂರಿಗೆ ಹಿಂದಿರುಗುತ್ತಾನೆ.ಆದರೆ ತನ್ನ ಮನೆಯವರು ಈ ವಿವಾಹಕ್ಕೆ ವಿರುದ್ಧ ವ್ಯಕ್ತಪಡಿಸುತ್ತಾರೆ. ಆದುದರಿಂದ ಅವನು ಮದ್ಯಪಾನ ಸೇವನೆಗೆ ಒಳಪಡುತ್ತಾನೆ ಹಾಗು ಅವನು ಮಾನಸಿಕವಾಗಿ ಕುಗ್ಗುತ್ತಾನೆ. ಈ ಚಿತ್ರವು ತನ್ನ ನೃತ್ಯದಿಂದ ೨೦೧೪ರಲ್ಲಿ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಚಿತ್ರರಂಗದ ನೃತ್ಯ ವಿಭಾಗದಲ್ಲಿ ಮರುಪ್ರದರ್ಶನಗೊಂಡಿತು. ಈ ಚಿತ್ರವು ಭಾರತೀಯ ಗಲ್ಲಾ ಪೆಟ್ಟಿಗೆಯಲ್ಲಿ ಜಯಭೇರಿ ಕಂಡಿತು ಹಾಗು ಈ ಚಿತ್ರವು ಅತ್ಯುತ್ತಮ ಚಿತ್ರವೆಂದು ೨೦೦೨ರಲ್ಲಿ ಇದಕ್ಕೆ ಫಿಲ್ಮ್‌ಫೇರ್[೩] ಪ್ರಶಸ್ತಿಯನ್ನು ನೀಡಲಾಯಿತು. ಈ ಚಿತ್ರಕ್ಕೆ ಐದು ರಾಷ್ಟ್ರೀಯ ಪ್ರಶಸ್ತಿ ಲಭಿಸಿತು ಹಾಗು ಒಂಬತ್ತು ಫಿಲ್ಮ್ ಫೇರ್ ಪ್ರಶಸ್ತಿಯನ್ನು ಲಭಿಸಿತು. ಈ ಚಿತ್ರವು ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರಕ್ಕಾಗಿರುವ ಬಾಫ಼್ಟಾ ಪ್ರಶಸ್ತಿಗೆ ಆಯ್ಕೆಗೊಂಡಿತು. ೨೦೧೦ ರಲ್ಲಿ ಎಂಪೈರ್ ಪತ್ರಿಕೆ "ವಿಶ್ವದ ೧೦೦ ಅತ್ಯುತ್ತಮ ಚಲನಚಿತ್ರಗಳಲ್ಲಿ" ಈ ಚಿತ್ರಕ್ಕೆ ೭೪ನೇ ಸ್ಥಾನವನ್ನು ನೀಡಿತು. ಟೈಮ್ ಪತ್ರಿಕೆಯು ೨೦೦೨ರಲ್ಲಿ ವಿಶ್ವದಾದ್ಯಂತ ಬಿಡುಗಡೆಯಾದ ಎಲ್ಲಾ ಚಲನಚಿತ್ರಗಳ ನಡುವೆ 'ದೇವ್‍ದಾಸ್' ಅತ್ಯುತ್ತಮ ಚಲನಚಿತ್ರವೆಂದು ಘೋಷಿಸಿತು. ಇತ್ತೀಚೆಗೆ ಟೈಮ್ ಪತ್ರಿಕೆಯು ವಿಶ್ವಾದ್ಯಂತ ಸಹಸ್ರಮಾನದ ಚಲನಚಿತ್ರಗಳಲ್ಲಿ ಈ ಚಿತ್ರವನ್ನು ಟಾಪ್ ೧೦ ಚಲನಚಿತ್ರಗಳಲ್ಲಿ ಸೇರಿಸಿತು.
ಕಥಾವಸ್ತು
ಬದಲಾಯಿಸಿಹತ್ತು ವರ್ಷಗಳ ನಂತರ ತನ್ನ ಮಗನು ದೇವ್‍ದಾಸ್ ಮುಖರ್ಜಿ(ಶಾರುಖ್ ಖಾನ್) ವಕೀಲನಾಗಿ ಮನೆಗೆ ಹಿಂದಿರುಗುವ ಸುದ್ದಿಯನ್ನು ಕೇಳಿ ತಾಯಿ ಕೌಶಲ್ಯ(ಸ್ಮಿತಾ ಜೈಕರ್) ಸಂತೋಷಪಡುತ್ತಾಳೆ. ಈ ಸುದ್ದಿಯನ್ನು ಆಕೆ ತನ್ನ ನೆರೆಯ ಗೆಳತಿಯಾದ ಸುಮಿತ್ರ (ಕಿರ್ರನ್ ಖೇರ್)ಗೆ ಹೇಳುತ್ತಾಳೆ. ಸುಮಿತ್ರಾಳ ಮಗಳು ಪಾರ್ವತಿ/ಪಾರೊ ಚಕ್ರವರ್ತಿ(ಐಶ್ವರ್ಯ ರೈ ಬಚ್ಚನ್) ಹಾಗು ದೇವ್‍ದಾಸ್ ಚಿಕ್ಕಂದಿನಿಂದಲೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಹತ್ತು ವರ್ಷದ ಹಿಂದೆ ಅವನು ಲಂಡನ್ನಿಗೆ ಹೋಗುವಾಗ ಇವಳು ಆತನ ಹೆಸರಿನಲ್ಲಿ ಒಂದು ದೀಪವನ್ನು ಹಚ್ಚುತ್ತಾಳೆ, ಅದನ್ನು ಆರಿಸದೆ ಅವನು ಬರುವ ಕ್ಷಣಕ್ಕಾಗಿ ಕಾಯುತ್ತಿದ್ದಳು. ದೇವ್‍ದಾಸ್ ಹಿಂತಿರುಗಿದ ನಂತರ ಇವರಿಬ್ಬರ ಪ್ರೀತಿಯನ್ನು ಕಂಡು ಇವರು ಮದುವೆಯಾಗುತ್ತಾರೆಂದು ಎಲ್ಲರೂ ನಂಬಿದ್ದರು. ಆದರೆ ದೇವ್‍ದಾಸ್‍ನ ಪಿತೂರಿ ನಾದಿನಿ ಕುಮುದ(ಅನನ್ಯ ಖಾರೆ) ಅವಳ ತಾಯಿಯ ಸಂತತಿಯು ನೃತ್ಯ ಮಾಡುವುದಾಗಿ ಹೇಳಿ ಅವರಿಬ್ಬರ ಮದುವೆಯನ್ನು ಮಾಡಿಸಿದರೆ ತಮ್ಮ ವಂಶದ ಹೆಸರು ಹಾಳಾಗುತ್ತದೆ ಎಂದು ಹೇಳಿ ಅವರ ಸಂಬಂಧವನ್ನು ಮುರಿಯಲು ಪ್ರಯತ್ನಿಸುತ್ತಾಳೆ. ಒಂದು ದಿನ ದೇವ್‍ದಾಸನ ಅರಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೌಶಲ್ಯ ಸುಮಿತ್ರನನ್ನು ನೃತ್ಯ ಮಾಡಲು ಹೇಳುತ್ತಾಳೆ. ನೃತ್ಯದ ನಂತರ ಸುಮಿತ್ರ ಎಲ್ಲರ ಮುಂದೆ ದೇವ್‍ದಾಸ್ ಹಾಗು ಪಾರ್ವತಿಯ ಮದುವೆ ಪ್ರಸ್ತಾಪವನ್ನು ಇಡುತ್ತಾಳೆ. ಆದರೆ ಕೌಶಲ್ಯ ಆಕೆಯು ಓರ್ವ ನೀಚ ಕುಲದವಳು ಎಂದು ಹೇಳಿ ಅವಮಾನಿಸುತ್ತಾಳೆ. ಇದರಿಂದ ನೊಂದ ಸುಮಿತ್ರ ತನ್ನ ಮಗಳ ವಿವಾಹವನ್ನು ದೇವ್‍ದಾಸ್‍ಗಿಂತ ಹೆಚ್ಚು ಶೀಮಂತರಾದ ಠಾಕೂರ್ ಭುವನ್ ಚೌಧರಿ(ವಿಜಯೇಂದ್ರ ಘಟ್ಗೆ)ರವರೊಂದಿಗೆ ನಡೆಸಲು ತೀರ್ಮಾನಿಸುತ್ತಾಳೆ. ಠಾಕೂರ್ ಭುವನ್ ಚೌಧರಿ ಒಬ್ಬ ವಿಧುರ ಸಿರಿವಂತ. ಅವನಿಗೆ ಮೂರು ಮಕ್ಕಳಿದ್ದರು. ದೇವ್‍ದಾಸನ ತಂದೆಯು ತನ್ನ ಹಾಗು ಪಾರ್ವತಿಯ ಸಂಬಂಧಕ್ಕೆ ವಿರುದ್ಧರಾಗಿದ್ದರಿಂದ ಅವನು ಸಿಟ್ಟಿನಿಂದ ತನ್ನ ಮನೆಯನ್ನು ಬಿಟ್ಟು ವೇಶ್ಯಾಗೃಹದಲ್ಲಿ ವಾಸಿಸಲು ಹೋಗುವನು. ಅಲ್ಲಿ ಅವನು ಚಂದ್ರಮುಖಿ(ಮಾಧುರಿ ದೀಕ್ಷಿತ್ ನೇನೆ)ಯನ್ನು ಭೇಟಿಯಾಗುತ್ತಾನೆ. ದೇವ್‍ದಾಸನ ಮೈಕಾಂತಿಯನ್ನು ಕಂಡು ಆಕೆಯು ಅವನನ್ನು ಪ್ರೀತಿಸುತ್ತಾಳೆ. ಮದುವೆಯಾಗಿ ತನ್ನ ಗಂಡನ ಅರಮನೆಗೆ ಪಾರೊ ಹೋಗುತ್ತಾಳೆ. ತಾನು ಮದುವೆಯಾದ ಉದ್ದೇಶ-ತನ್ನ ಮಕ್ಕಳಿಗೆ ತಾಯಿಯ ಮಮತೆ ಸಿಗಲಿ ಹಾಗು ತನ್ನ ಆಸ್ತಿಗಳಿಗೆ ಒಡೆಯತಿ ಸಿಗಲ್ಲೆಂದು ಮಾತ್ರ, ತಾನು ಸದಾ ತನ್ನ ಮೊದಲ ಪತ್ನಿಯಾದ ಸುಭದ್ರಾಳನ್ನು ಮಾತ್ರ ಪ್ರೀತಿಸುತ್ತೇನೆ ಎಂದು ಭುವನ್ ಚೌಧರಿ ಹೇಳುತ್ತಾನೆ. ತನ್ನ ಪಾರ್ವತಿಯನ್ನು(ಪಾರೊ) ಕಳೆದುಕೊಂಡ ದುಃಖದಲ್ಲಿ ದೇವ್‍ದಾಸ್ ಚಂದ್ರಮುಖಿಯ ವೇಶ್ಯಾಗೃಹದಲ್ಲಿ ವಾಸಿಸಲು ಆರಂಭಿಸುತ್ತಾನೆ. ಹಾಗು ಅವನು ಮದ್ಯಪಾನ ಸೇವನೆಯಲ್ಲಿ ತೊಡಗುತ್ತಾನೆ. ತನ್ನ ಮಗನು ಮನೆಗೆ ಬರಲಿಲ್ಲವೆಂದು ಕೊರಗಿ ತಾನು ಮಾಡಿದ್ದು ತಪ್ಪು ಎಂದು ತಿಳಿದು ದೇವ್‍ದಾಸ್‍ನ ತಂದೆ ಸಾಯುವ ಸ್ಥಿತಿಗೆ ಬರುತ್ತಾರೆ. ಕೊನೆಯದಾಗಿ ತನ್ನ ಮಗನ ಮುಖವನ್ನು ನೋಡುವ ಆಸೆಯನ್ನು ಹೊಂದಿದರೂ ಅದು ನೆರವೇರುವುದಿಲ್ಲ. ತನ್ನ ತಂದೆಯ ಅಂತ್ಯಕ್ರಿಯೆಗೆ ದೇವ್‍ದಾಸ್ ಬರುವಾಗ ತಾನೊಬ್ಬ ಕುಡುಕನೆಂಬುದು ಎಲ್ಲರಿಗೂ ತಿಳಿಯುತ್ತದೆ. ತನ್ನ ಮಗನ ದಾರುಣ ಸ್ಥಿತಿಯನ್ನು ಕಂಡು ತಾಯಿ ಕೌಶಲ್ಯ ಕಣ್ಣೀರಿಡುತ್ತಾಳೆ. ಪಾರೊ ದೇವ್‍ದಾಸ್‍ನ ಬಳಿ ಹೋಗಿ ಮದ್ಯಪಾನ ಸೇವನೆ ಮಾಡಬೇಡವೆಂದು ಕೇಳಿದಾಗ ಆತ ಒಪ್ಪಲಿಲ್ಲ. ಅವನು ಸಾಯುವ ಮುನ್ನ ತನ್ನ ಬಳಿ ಬರುವುದಾಗಿ ಹೇಳಿ ಆಕೆಯ ಮೇಲೆ ಆಣೆ ಮಾಡಿ ಹೇಳುವನು. ಪಾರೊ ದುರ್ಗಾ ಪೂಜೆಗೆ ವೇಶ್ಯಾಗೃಹಕ್ಕೆ ಹೋಗಿ ಒಳಾಂಗಣದ ಮಣ್ಣನ್ನು ತರಲು ಹಾಗು ಚಂದ್ರಮುಖಿಯಿಂದ ದೇವ್‍ದಾಸ್‍ನನ್ನು ಕರೆದುಕೊಂಡು ಬರಲು ಹೋದಳು. ಆದರೆ ಚಂದ್ರಮುಖಿಯ ಒಳ್ಳೆಯ ಭಾವನೆ ಹಾಗು ದೇವ್‍ದಾಸ್‍ನ ಪರ ಪ್ರೀತಿಯನ್ನು ಕಂಡು ಖುಷಿಪಟ್ಟಳು. ತಾನು ಅಲ್ಲಿಗೆ ಹೋದದ್ದು ತೃಪ್ತಿಕೊಟ್ಟಿತು ಎಂದು ಹೇಳಿ, ಚಂದ್ರಮುಖಿಯನ್ನು ಪೂಜೆಗೆ ಆಹ್ವಾನಿಸಿದಳು. ಪೂಜೆಯಲ್ಲಿ ಪಾರ್ವತಿಯು ತನ್ನ ಅತ್ತೆಗೆ ಚಂದ್ರಮುಖಿಯು ತನ್ನ ಗೆಳತಿ ಎಂದು ಪರಿಚಯಿಸುತ್ತಾಳೆ. ಆದರೆ ಠಾಕೂರ್ ಭುವನ್ ಚೌಧ್ರಿರವರ ಅಳಿಯ ವೇಶ್ಯಾಗೃಹಕ್ಕೆ ಹೋಗುತ್ತಿದ್ದರಿಂದ ಅವನು ಚಂದ್ರಮುಖಿಯನ್ನು ಗುರುತಿಸುತ್ತಾನೆ. ನಂತರ ಅವನು ಎಲ್ಲರ ಮುಂದೆ ಅವಳ ನಿಜಹಿನ್ನೆಲೆಯನ್ನು ಹೇಳುತ್ತಾನೆ. ಹಾಗು ಭುವನ್ ಚೌಧ್ರಿಗೆ ಪಾರೊ-ದೇವ್‍ದಾಸ್‍ನ ಸಂಬಂಧವನ್ನು ಹೇಳುತ್ತಾನೆ. ಇದನ್ನು ಅರೆತ ಭುವನ್ ಚೌಧ್ರಿ ಪಾರೊ ತನ್ನ ಅರಮನೆಯಿಂದ ಹೊರಗೆ ಹೋಗಕೂಡದು ಎಂದು ನಿರ್ಧರಿಸುತ್ತಾನೆ. ತನ್ನ(ದೇವ್‍ದಾಸ್) ಸಾಯುವ ಸಮಯ ಬಂದಾಗ ತಾನು ರೈಲಿನಲ್ಲಿ ಪ್ರಯಾಣಿಸಬೇಕೆಂದು ಇಚ್ಛಿಸುತ್ತಾ, ತನ್ನ ಜೊತೆ ಯಾರೂ ಬರಕೂಡದೆಂದು ಹೇಳುತ್ತಾನೆ. ಪ್ರಯಾಣಿಸುತ್ತಿರುವಾಗ ತಾನು ಪಾರೊಗೆ ಮಾಡಿದ ಆಣೆಯು ನೆನಪಿಗೆ ಬಂದು ಅವಳ ಅರಮನೆಗೆ ಹೋಗುತ್ತಾನೆ. ಆದರೆ ಆರೋಗ್ಯ ಸರಿಯಿಲ್ಲದ್ದರಿಂದ ತನಗೆ ಏಳಲು ಸಾಧ್ಯವಾಗದೆ ನೆಲದಲ್ಲಿ ಮಲಗಿರುತ್ತಾನೆ. ಇದನ್ನು ಅರಿತ ಪಾರ್ವತಿ ಅಳುತ್ತಾ ತನ್ನ ದೇವ್‍ದಾಸ್‍ನ ಹತ್ತಿರ ವೇಗವಾಗಿ ಓಡುತ್ತಾಳೆ. ಆಗ ಭುವನ್ ಚೌಧ್ರಿ ಕಾವಲುಗಾರರಿಗೆ ಬಾಗಿಲನ್ನು ಮುಚ್ಚಲು ಹೇಳುತ್ತಾನೆ. ಆದ್ದರಿಂದ ಕೊನೆಯಲ್ಲಿ ಅವಳಿಗೆ ತನ್ನ ದೇವ್‍ದಾಸ್‍ನನ್ನು ನೋಡಲು ಸಾಧ್ಯವಾಗುವುದಿಲ್ಲ.
ಮುಖ್ಯ ಪಾತ್ರಗಳು
ಬದಲಾಯಿಸಿಶಾರುಖ್ ಖಾನ್-ದೇವದಾಸ್ 'ದೇವ್ ಮುಖರ್ಜಿ',ಐಶ್ವರ್ಯಾ ರೈ ಬಚ್ಚನ್-ಪಾರ್ವತಿ 'ಪಾರೋ' ಚಕ್ರವರ್ತಿ,ಮಾಧುರಿ ದೀಕ್ಷಿತ್ ನೆನೆ-ಚಂದ್ರಮುಖಿ,ಕಿರಣ್ ಖೇರ್-ಸುಮಿತ್ರಾ ಚಕ್ರವರ್ತಿ,ಸ್ಮಿತಾ ಜೈಕರ್-ಕೌಶಲ್ಯ ಮುಖರ್ಜಿ,ಅನನ್ಯ ಖಾರೆ-ಕುಮುದ್ ಮುಖರ್ಜಿ,ವಿಜಯೇಂದ್ರ ಘಾಟ್ಗೆ-ಭುವನ್ ಚೌಧರಿ,ಟೀಕು ತಲ್ಸಾನಿಯ-ಧರಮ್‍ದಾಸ್,ಮಿಲಿಂದ್ ಗುನಜಿ-ಕಾಲಿ ಬಾಬು,ಜಾಕಿ ಶ್ರಾಫ್-ಚುನ್ನೀಲಾಲ್.
ಚಿತ್ರೀಕರಿಸಿದ ಸ್ಥಳ
ಬದಲಾಯಿಸಿಚಿತ್ರದ ಪ್ರಮುಖ ಭಾಗವನ್ನು ಧಾರಾವಿ,ಮುಂಬೈಯಲ್ಲಿ ಚಿತ್ರೀಕರಿಸಗಿದ್ದು ೨೦ನೆಯ ಶತಮಾನದಲ್ಲಿ ಕಲ್ಕತ್ತಾದ ಪುನರ್ನಿರ್ಮಾಣ ಮಾಡಲಾಗಿದೆ.ಚಂದ್ರಮುಖಿಯ ವೇಶ್ಯಾಗೃಹವನ್ನು ಕೃತಕ ಸರೋವರದ ಪಕ್ಕದಲ್ಲಿ ಬನಾರಸ್‍ನ ಹಾಗೆ ನಿರ್ಮಿಸಲಾಗಿತ್ತು. ಪಾರೋವಿನ ಕೊಠಡಿಯನ್ನು ಸೃಷ್ಟಿಸಲು ೧೨,೨೦,೦೦,೦೦೮ ಬಣ್ಣದ ಗಾಜಿನ ತುಣುಕುಗಳನ್ನು ಬಳಸಲಾಯಿತು.
ಸಂಗೀತ
ಬದಲಾಯಿಸಿಚಿತ್ರದ ಧ್ವನಿಪಥವನ್ನು ಪ್ರಧಾನವಾಗಿ ಇಸ್ಮಾಯಿಲ್ ದರ್ಬಾರ್ ಮೂಲಕ ರಚಿಸಲಾಗಿದ್ದು ಹಾಗು ಸಾಹಿತ್ಯವನ್ನು ನುಸ್ರತ್ ಬದ್ರ್ ,ಪ್ರಕಾಶ್ ಕಪಾಡಿ ಮತ್ತು ಪಂಡಿತ್ ಬಿರ್ಜು ಮಹಾರಾಜ್ ಬರೆದರು. ಹಿನ್ನೆಲೆ ಗಾಯಕರಾದ ಶ್ರೇಯಾ ಘೋಷಾಲ್(ಪಾರ್ವತಿಗಾಗಿ), ಕವಿತಾ ಕೃಷ್ಣಮೂರ್ತಿ(ಚಂದ್ರಮುಖಿಗಾಗಿ) ಮತ್ತು ಉದಿತ್ ನಾರಾಯಣ್(ದೇವದಾಸ್‍ಗಾಗಿ) ಹಾಡಿದ್ದಾರೆ .ಪ್ಲಾನೆಟ್ ಬಾಲಿವುಡ್‍ನ ಅನಿಕೇತ್ ಜೋಶಿಯವರು ಈ ಚಿತ್ರದ ಹಾಡು ಹಾಗು ಸಂಗೀತಕ್ಕೆ ಒಟ್ಟು ೦೯ ಅಂಕಗಳನ್ನು ನೀಡಿದರು.
ಪ್ರಶಸ್ತಿಗಳು
ಬದಲಾಯಿಸಿಫಿಲ್ಮ್ಫೇರ್ ಪ್ರಶಸ್ತಿಗಳು
ಬದಲಾಯಿಸಿಅತ್ಯುತ್ತಮ ಚಿತ್ರ-ದೇವ್‍ದಾಸ್,ಅತ್ಯುತ್ತಮ ನಟ-ಶಾರುಖ್ ಖಾನ್,ಅತ್ಯುತ್ತಮ ನಟಿ-ಐಶ್ವರ್ಯ ರೈ ಬಚ್ಚನ್,ಅತ್ಯುತ್ತಮ ನಿರ್ದೇಶಕ-ಸಂಜಯ್ ಲೀಲಾ ಬನ್ಸಾಲಿ,ಅತ್ಯುತ್ತಮ ಪೋಷಕ ನಟಿ-ಮಾಧುರಿ ದೀಕ್ಷಿತ್ ನೇನೆ,ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ-ಶ್ರೇಯಾ ಘೋಷಾಲ್,ಕವಿತಾ ಕೃಷ್ಣಮೂರ್ತಿ,ಅತ್ಯುತ್ತಮ ಛಾಯಾಗ್ರಾಹಕ ಬಿನೋದ್ ಪ್ರಧಾನ್, ಅತ್ಯುತ್ತಮ ಕಲಾ ನಿರ್ದೇಶನ-ನಿತಿನ್ ಚಂದ್ರಕಾಂತ್ ದೇಸಾಯಿ, ಅತ್ಯುತ್ತಮ ನೃತ್ಯ ಸಂಯೋಜನೆ-ಸರೋಜ್ ಖಾನ್, ಅತ್ಯುತ್ತಮ ವರ್ಷದ ದೃಶ್ಯ-ಪಾರೊ-ಚಂದ್ರಮುಖಿ.[೧]
ರಾಷ್ಟ್ರ ಪ್ರಶಸ್ತಿ
ಬದಲಾಯಿಸಿಅತ್ಯುತ್ತಮ ಜನಪ್ರಿಯ ಹಾಗು ಸಂಪೂರ್ಣ ಮನರಂಜನೆಯನ್ನು ನೀಡುವ ಚಲನಚಿತ್ರ,ಅತ್ಯುತ್ತಮ ಕಲಾ ನಿರ್ದೇಶಕ-ನಿತಿನ್ ಚಂದ್ರಕಾಂತ್ ದೇಸಾಯಿ ,ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ-ಶ್ರೇಯಾ ಘೋಷಾಲ್(ಹಾಡು-ಬೇರೀ ಪಿಯಾ),ಅತ್ಯುತ್ತಮ ನೃತ್ಯ ಸಂಯೋಜನೆ-ಸರೋಜ್ ಖಾನ್,ಅತ್ಯುತ್ತಮ ವಸ್ತ್ರವಿನ್ಯಾಸ-ನೀತಾ ಲುಲ್ಲಾ,ಅಬು ಜಾನಿ ಸಂದೀಪ್ ಖೋಸ್ಲಾ ಮತ್ತು ರೆಝಾ ಶರೀಫಿ.
ಸ್ಟಾರ್ ಸ್ಕ್ರೀನ್ ಪ್ರಶಸ್ತಿ
ಬದಲಾಯಿಸಿಅತ್ಯುತ್ತಮ ನಟ-ಶಾರುಖ್ ಖಾನ್,ಅತ್ಯುತ್ತಮ ನಟಿ-ಐಶ್ವರ್ಯ ರೈ ಬಚ್ಚನ್,ಅತ್ಯುತ್ತಮ ಪೋಷಕ ನಟಿ-ಮಾಧುರಿ ದಿಕ್ಷಿತ್ ನೇನೆ,ಜೋಡಿ ನಂಬರ್ ೦೧-ಐಶ್ವರ್ಯ ರೈ ಹಾಗು ಶಾರುಖ್ ಖಾನ್, ಅತ್ಯುತ್ತಮ ಹಿನ್ನೆಲೆ ಗಾಯಕ-ಉದಿತ್ ನಾರಾಯಣ್(ಹಾಡು-ವೋ ಚಂದ್ ಜೈಸಿ ಲಡ್ಕಿ).
ಐಐಎಫ್ಎ ಪ್ರಶಸ್ತಿ(IIFA)
ಬದಲಾಯಿಸಿಅತ್ಯುತ್ತಮ ಚಿತ್ರ-ದೇವದಾಸ್-ಭರತ್ ಶಾಹ್,ಅತ್ಯುತ್ತಮ ನಿರ್ದೇಶಕ-ಸಂಜಯ್ ಲೀಲಾ ಬನ್ಸಾಲಿ,ಅತ್ಯುತ್ತಮ ನಟ-ಶಾರುಖ್ ಖಾನ್ ಅತ್ಯುತ್ತಮ ನಟಿ-ಐಶ್ವರ್ಯ ರೈ ಬಚ್ಚನ್,ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ - ಕಿರಣ್ ಖೇರ್,ಅತ್ಯುತ್ತಮ ಹಿನ್ನೆಲೆ ಗಾಯಕಿ -ಶ್ರೇಯಾ ಘೋಷಾಲ್ ಮತ್ತು ಕವಿತಾ ಕೃಷ್ಣಮೂರ್ತಿ(ಹಾಡು-ಡೋಲರೆ ಡೋಲ),ಅತ್ಯುತ್ತಮ ಸಂಭಾಷಣೆ-ಪ್ರಕಾಶ್ ಕಪಾಡಿಯಾ.
ಝೀ ಸಿನಿ ಪ್ರಶಸ್ತಿ
ಬದಲಾಯಿಸಿಅತ್ಯುತ್ತಮ ಚಲನಚಿತ್ರ-ಭರತ್ ಶಾಹ್,ಅತ್ಯುತ್ತಮ ನಟ-ಪುರುಷ-ಶಾರುಖ್ ಖಾನ್,ಅತ್ಯುತ್ತಮ ನಟ-ಸ್ತ್ರೀ-ಐಶ್ವರ್ಯ ರೈ ಬಚ್ಚನ್,ಅತ್ಯುತ್ತಮ ನಿರ್ದೇಶಕ-ಸಂಜಯ್ ಲೀಲಾ ಬನ್ಸಾಲಿ,ಅತ್ಯುತ್ತಮ ಹಿನ್ನೆಲೆ ಗಾಯಕ-ಸ್ತ್ರೀ-"ಡೋಲಾರೆ ಡೋಲಾ"ಗಾಗಿ ಶ್ರೇಯಾ ಘೋಷಾಲ್ ಮತ್ತು ಕವಿತಾ ಕೃಷ್ಣಮೂರ್ತಿ,ಟ್ರೂ ಭಾರತೀಯ ಬ್ಯೂಟಿ - ಐಶ್ವರ್ಯ ರೈ ಬಚ್ಚನ್.
ಸ್ಟಾರ್ಡಸ್ಟ್ ಪ್ರಶಸ್ತಿಗಳು
ಬದಲಾಯಿಸಿಹೊಸ ಸಂಗೀತ ಸೆನ್ಸೇಷನ್-ಸ್ತ್ರೀ-ಶ್ರೇಯಾ ಘೋಷಾಲ್(ಹಾಡು-ಡೋಲಾರೆ ಡೋಲ).
ಎಮ್‍ಟೀವಿ(MTV) ಏಶಿಯಾ ಪ್ರಶಸ್ತಿ
ಬದಲಾಯಿಸಿಅತ್ಯುತ್ತಮ ಚಲನಚಿತ್ರ-ದೇವ್‍ದಾಸ್.
ಬ್ರಿಟಿಷ್ ಅಕಾಡೆಮಿ ಚಲನಚಿತ್ರ ಪ್ರಶಸ್ತಿಗಳು
ಬದಲಾಯಿಸಿದೇವದಾಸ್ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರಕ್ಕಾಗಿ,೨೦೦೩ರ BAFTA ಪ್ರಶಸ್ತಿ ನಾಮಕರಣ ಮಾಡಲಾಯಿತು.
ಗಲ್ಲಾ ಪೆಟ್ಟಿಗೆ
ಬದಲಾಯಿಸಿದೇವದಾಸ್ ಭಾರತದಲ್ಲಿ ಒಟ್ಟು ೬೮.೧೯ ಕೋಟಿ ಗಳಿಸಿ,ಇತರೆ ರಾಷ್ಟ್ರಗಳಲ್ಲಿ ೩೧.೬೮ ಕೋಟಿ ಗಳಿಸಿ ಜಗತ್ತಿನಾದ್ಯಂತ ಒಟ್ಟು ೯೯.೮೭ ಕೋಟಿಗಳಿಸಿತು.
ಉಲ್ಲೇಖನಗಳು
ಬದಲಾಯಿಸಿ